ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ರಾಜ್ಯ ಹಂತ

ರಾಜ್ಯದ ಹಂತದಲ್ಲಿ ರಾಜ್ಯ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಇದಕ್ಕೆ ಆಧಾರ ಜನಗಳಿಂದಲೇ ಅವರ ಆರೋಗ್ಯ ಅವಶ್ಯಕತೆ ಮತ್ತು ತೊಂದರೆಗಳ ಬಗ್ಗೆ ಸಂಶೋಧನೆ ಮೂಲಕ ಪಡೆದ ಮಾಹಿತಿ. ಈ ಸೇವೆಗಳಿಗೆ ಬೇಕಾದ ಸೌಲಭ್ಯ ಮತ್ತು ಮಾನವ ಸಂಪನ್ಮೂಲಗಳಿಗೆ ಸರಿಹೊಂದುವ ಆಯವ್ಯಯಗಳನ್ನು ಹೊಂದಿಸಲಾಗುವುದು

ರಾಜ್ಯದ ಹಂತದಲ್ಲಿ ರಾಜ್ಯ ನೀತಿ, ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಇದಕ್ಕೆ ಆಧಾರ ಜನಗಳಿಂದಲೇ ಅವರ ಆರೋಗ್ಯ ಅವಶ್ಯಕತೆ ಮತ್ತು ತೊಂದರೆಗಳ ಬಗ್ಗೆ ಸಂಶೋಧನೆ ಮೂಲಕ ಪಡೆದ ಮಾಹಿತಿ. ಈ ಸೇವೆಗಳಿಗೆ ಬೇಕಾದ ಸೌಲಭ್ಯ ಮತ್ತು ಮಾನವ ಸಂಪನ್ಮೂಲಗಳಿಗೆ ಸರಿಹೊಂದುವ ಆಯವ್ಯಯಗಳನ್ನು ಹೊಂದಿಸಲಾಗುವುದು.

ಆರೈಕೆಯ ಗುಣಮಟ್ಟ - ಆರೋಗ್ಯ ಸೇವೆಯು ವಿವಧ ಹಂತಗಳಲ್ಲಿ ಹೇಗೆ ದೊರಕುತ್ತದೆ ಎಂದು ಈವರೆಗೆ ಅರಿತುಕೊಂಡಿರುವಿರಿ. ಆಶಾ ಸದಸ್ಯರಾಗಿ ನೀವು ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿಗುವ ಸೇವೆಗಳ ಬಗ್ಗೆ ಚೆನ್ನಾಗಿ ತಿಳಿದಿರಬೇಕು. ಬರಿ ತಿಳಿದುಕೊಂಡಿದ್ದರೆ ಸಾಲದು. ಗ್ರಾಮಿಣ ಅಭಿಯಾನದ ಅಡಿಯಲ್ಲಿ ಹೆಚ್ಚಾಗಿ ಒತ್ತು ಕೊಟ್ಟಿರುವುದು ಗುಣಮಟ್ಟದ ಆರೈಕೆಯ ಮೇಲೆ. ಹೀಗಾಗಿ, ನೀವು ಕೂಡ, ನಿಮ್ಮ ಸಮುದಾಯದ ಜನಗಳಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯ ಸೇವೆ ಸಿಗುತ್ತದೆಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಆರೋಗ್ಯ ಸೇವಾ ಸಮಸ್ಯೆಗಳು ಮತ್ತು ಆರೋಗ್ಯ ಸೇವಾ  ಕಾರ್ಯಕರ್ತರಿಗೆ ಪಾಲಿಸಲು ಕೆಲವು ನಿಯಮಗಳಿವೆ. ಸಾಧಾರಣವಾಗಿ ರೋಗಿಗಳಿಗೆ ಇದು ತೊತ್ತಿರುವುದಿಲ್ಲ ಪರಿಣಾಮವಾಗಿ ಅವರಿಗೆ ಸಿಗುವುದು ಕಳಪೇ ಮಟ್ಟದ ಆರೋಗ್ಯ ಸೇವೆ.

ಒಳ್ಳೆಯ ಗುಣಮಟ್ಟದ ಆರೋಗ್ಯ ಆರೈಕೆ ಪಡೆಯುವುದು ಸಮುದಾಯದ ಹಕ್ಕು

ರೋಗಿ ಚರಿತ್ರೆ ತೆಗೆದಚುಕೊಳ್ಳುವುದು ಮತ್ತು ಅವರ ತಪಾಸಣೆಯನ್ನು ಶೈಕ್ಷಣಿಕ ತರಬೇತಿ ಮತ್ತು ಯೋಗ್ಯತಾ ಪತ್ರ ಹೊಂದಿರುವ ವ್ಯಕ್ತಿ ಮಾಡಬೇಕು.

ರೋಗಿಗೆ  ಅವನ ಖಾಯಿಲೆ, ಚಿಕಿತ್ಸಾಕ್ರಮ ಮತ್ತು ಕೊಡುವ ಔಷಧಿಗಳ ಬಗ್ಗೆ ಸರಿಯಾದ ಮತ್ತು ಸಆಕಷ್ಟು ಮಾಹಿತಿ ಕೊಡಬೇಕು ಹಾಗೂ ಯಾವುದೇ ರೀತಿಯ ಭಯವಾಗಲೀ ಅಥವಾ ಅನಪೇಕ್ಷಿತ ಆತಂಕವಾಗಲೀ ಇರಬಾರದು.

ರೋಗಿಗಿಎ ಅವನ ಆತಂಕಗಳನ್ನು ಹೇಳಿಕೊಳ್ಳಲು ಸಮಯ ನೀಡಬೇಕು. ಅದನ್ನು ಕೇಳಿದ ಮೇಲೆ, ಅವನ ಚಿಕಿತ್ಸೆ ಅಥವಾ ಯಾವುದೇ ಕ್ರಮಗಳ ಬಗ್ಗೆ ಉದ್ದೇಶಿತ ವಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯಕರಾಗಬೇಕು (ಗಂಡಾಂತರ ಮತ್ತು ಸುರಕ್ಷತೆಯ ಸಂಗತಿಗಳು)

ಸಂಸ್ಥೆಯಲ್ಲಿ ಬೇಕಾಗುವ ಉಪಕರಣಗಳು, ಪೂರೈಕೆ (Suಠಿಠಿಟies) ಮತ್ತು ತಾಂತ್ರಿಕ ಸಿಬ್ಬಂದಿ ಇರಬೇಕು. ರೋಗಿಗೆ ಬೇಕಾದ ಸೇವೆಯನ್ನು, ಔಷಧಿ ಇಲ್ಲ ಅಘವಾ ಉಪಕರಣಗಳು ಸರಿ ಇಲ್ಲ ಎನ್ನುವ ಕಾರಣಗಳಿಂದ ಕೊಡಲಾಗುವುದಿಲ್ಲ ಎಂದು ಹೇಳಬಾರದು ಅಥವಾ ಸೇವೆಯನ್ನು ನಿರಾಕರಿಸಬಾರದು.

ರೋಗಿಯ ಏಕಾಂತತೆ, ಸೌಕರ್ಯ, ಗೌಪ್ಯತೆ ಹಾಗೂ ಗೌರವವನ್ನು ಕಾಪಾಡಬೇಕು. ಪರೀಕ್ಷಾ ಕೊಠಡಿಯಲ್ಲಿ ಪರದೆಗಳಿರಬೇಕು ಮತ್ತ ರೋಗಿಗೆ ಬೇಕಾದರೆ, ಸಂಬಂಧಿಕರು ಹಾಗೂ ಕುಟುಂಬದವರನ್ನು ಜೊತೆಯಲ್ಲಿ ಇರಲು ಬಿಡಬೇಕು. ಸಂಬಂಧಿಸಿದ ದಾಖಲೆ ಪುಸ್ತಕಗಳನ್ನು ಕಪಾಟಿನಲ್ಲಿ ಸುರಕ್ಷಿತವಾಗಿ ಇಡಬೇಕು.

ಆರೋಗ್ಯ ಸೇವೆ ನೀಡುವವರ ನಡಗೆ ವಿನಯ ಪೂರ್ವಕವಾಗಿರಬೇಕು ಮತ್ತು ತಾರತಮ್ಯ ಭಾವನೆ ಇರದೆ ಭರವಸೆ ಕೊಡುವಂತಿರಬೇಕು.

ಆರೋಗ್ಯ  ಕಾರ್ಯಕರ್ತರು ಮತ್ತು ವ್ಯವಸ್ಥೆಯ ವತಿಯಿಂದ ರೋಗಿಯು ಮನವೊಲಿಸಿ ಚಿಕಿತ್ಸೆಯನ್ನು ಮುಂದುವರೆಸಿ ಪೂರ್ಣಗೊಳಿಸಲು ಮನವೊಲಿಸಬೇಕು.

ಸರಿಯಾದ ಮತ್ತು ಅವಶ್ಯಕವಾದ ಚಿಕಿತ್ಸೆ ನೀಡಬೇಕು

ನಿಮ್ಮ ಹತ್ತಿರ ಇರುವ ಉಪಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಸರಿಯಾಗಿ ಮೂಲ ಆರೋಗ್ಯ ಸೇವೆಗಳನ್ನು ಜನರಿಗೆ ಒದಗಿಸುತ್ತಿದ್ದಾರೆ ಎಂದು ನೋಡುವುದು ಬಹಳ ಮುಖ್ಯ. ಈ ಭೆಟಿಗಳು ಸರಿಯಾಗಿ ಯೋಜಿಸಿದ್ದಾತಿರಬೇಕು. ಅನುಬಂಧ-1ರಲ್ಲಿ ಗಾಳೆ ಪಟ್ಟಿಯನ್ನು ನಿರ್ಮಾಣ ಕೊಟ್ಟಿರುತ್ತದೆ. ಈ ಪಟ್ಟಿಯನ್ನು ನೀವು ಭೇಟಿ ನೀಡಿದಾಗ ತೆಗೆದುಕೊಂಡು ಹೋಗಬೇಕು. ಕೇಂದ್ರಗಳಲ್ಲಿ ಈ ಪಟ್ಟಿಗೆ ಆಶಾ ಪರವಾಗಿ ಸೇವೆಗಳನ್ನು ಕೊಡಲಾಗುತ್ತಿದೆಯೇ ಇಲ್ಲವೇ ಎಂದು ಗಮನಿಸಿ, ಕೊಡಲಾಗಿದೆ ಸೇವೆಯನ್ನು ಅಲ್ಲಿನ ವೈದ್ಯಾಧಿಕಾರಿಗಳ ಜೊತೆ ಮತ್ತು  ಜೊತೆ ಚರ್ಚಿಸಲು ನಿಮಗೆ ಹಕ್ಕಿದೆ. ಹೀಗೆ ಚರ್ಚೆ ಮಾಡಿದಾಗ ಅವರಿಂದ ಸರಿಯಾದ ಪ್ರತಿಕ್ರಿಯೆ ಬರದಿದ್ದಲ್ಲಿ ನೀವು ನಿಮ್ಮ ಅನಿಸಿಕೆಗಳನ್ನು ಕ್ಷೇತ್ರ ಆರೋಗ್ಯ ಅಧೀಕಾರಿ ಅಥವಾ ಮುಖ್ಯ ವೈದ್ಯಾಧಿಕಾರಿ ಅವರ ಗಮನಕ್ಕೆ ತÀರಬಹುದು. ನೀವು ಚರ್ಚಿಸಿದ ಎಲ್ಲಾ ವ್ಯಕ್ತಿಗಳು ಅಥವಾ ಅಧಿಕಾರಿಗಳ ಹೆಸರುಗಳನ್ನು ಬರೆದಿಟ್ಟುಕೊಳ್ಳಬೇಕು.

ಮೂಲ: ಆಶಾ ಕೈಪಿಡಿ

2.93333333333
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top