অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜನರ ಹಕ್ಕಾಗಿ ಆರೋಗ್ಯ

ಜನರ ಹಕ್ಕಾಗಿ ಆರೋಗ್ಯ

ಸಮತೆ

ಆರೋಗ್ಯವನ್ನು ಎಲ್ಲರ ಹಕ್ಕಾಗಿಸುವ ನಿಟ್ಟಿನಲ್ಲಿ ಎಲ್ಲ ಕಡೆ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯ ರಚನೆಯಾಗುತ್ತಿದೆ. ಈ ಸಮಿತಿಯು ಗ್ರಾಮದ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಲಭ್ಯವಾಗಿಸುದಕ್ಕಲ್ಲದೆ ಜನರ ಮನೋಭಾವನೆಗಳನ್ನು ಬದಲಾಯಿಸುವ ಕರ್ತವ್ಯವನ್ನು ಹೊಂದಿದೆ

 

ಜನರ ಹಕ್ಕಾಗಿ ಆರೋಗ್ಯ

ನಾವು ಆರೋಗ್ಯವನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ?

ಆರೋಗ್ಯ ಎಂದರೆ ಔಷಧಗಳೆ? ಆಸ್ಪತ್ರೆÀಗಳನ್ನು ಹೊಂದಿರುವುದೆಂದು ಅರ್ಥವೆ? ಅಥವಾ ಖಾಯಿಲೆ ಇಲ್ಲ ಇರುವುದೆಂದೇ? ಇಲ್ಲಾ ಇದು ವೈದ್ಯರು ಅಥವಾ ನರ್ಸುಗಳಿಂದ ಕೆಲವೇ ವ್ಯಕ್ತಿಗಳಿಗೆ ಸಂಬಂಧಪಟ್ಟಿರುವುದೇ?

 

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ: ಅಲ್ಲ, ಅದು ಹಾಗಲ್ಲ

ಆರೋಗ್ಯ ದಾನವಲ್ಲ. ಜನರ ಅವಶ್ಯಕತೆಗಳನ್ನು ಪೂರೈಸುವುದು.ಆದರೆ ಆರೋಗ್ಯ, ಜನರು ತಮ್ಮ ಹಕ್ಕು ಎಂದು ಒತ್ತಾಯಿಸಬೇಕಾದ ವಿಷಯ.

 

ಭಾರತೀಯ ಸಂವಿಧಾನವು ತನ್ನೆಲ್ಲಾ ಪ್ರಜೆಗಳಿಗೆ ಜೀವನ ನಡೆಸುವ ಹಕ್ಕನ್ನು ಕೊಟ್ಟಿದೆ. ವ್ಯಕ್ತಿಯೊಬ್ಬ ಆರೋಗ್ಯವಾಗಿದ್ದಾಗ ಮಾತ್ರ ಅರ್ಥಪೂರ್ಣ ಜೀವನ ನಡೆಸಬಲ್ಲ. ಆದ್ದರಿಂದ ಜೀವಿಸುವ ಹಕ್ಕು ಎಂಬುದು ಆರೋಗ್ಯದ ಹಕ್ಕನ್ನೂ ಒಳಗೊಂಡಿದೆ.

 

ಯಾವುದೇ ತಾರತಮ್ಯವಿಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗಾಗಿ ಆರೋಗ್ಯ ಒಂದು ಹಕ್ಕಾಗಬೇಕು. ಅಂತಹ ಹಕ್ಕುಗಳಿಗಾಗಿ, ಹಕ್ಕನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ ಒತ್ತಾಯಿಸಬೇಕಾದ ಪರಿಸ್ಥಿತಿ ಇಂದು ನಮ್ಮ ಮುಂದಿದೆ.

 

ಆರೋಗ್ಯಕರ ಸಮಾಜ:

ಆರೋಗ್ಯಕರ ಸಮಾಜದ ಬಗ್ಗೆ ನಾವು ಯೋಚಿಸಬಹುದೇ? ಅದು ಹೇಗಿರುತ್ತದೆ?

             ಲಿಂಗತ್ವ, ಜಾತಿ ವರ್ಗ ಅಥವ ಧರ್ಮ ಯಾವುದೇ ರೀತಿಯ ತಾರತಮ್ಯವಿರುವುದಿಲ್ಲ.

             ತಮ್ಮ ಸಾಮಧ್ರ್ಯವನ್ನು ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸರಿಸಮಾನವಾದ ಅವಕಾಶಗಳಿರುತ್ತದೆ.

             ಸಂಪನ್ಮೂಲಗಳಿಗೆ ಎಲ್ಲರಿಗೂ ಸಮಾನ ಅವಕಾಶವಿರುತ್ತದೆ.

             ತಮ್ಮದೇ ಆದ ನಂಬಿಕೆಗಳನ್ನು ಆಚರಿಸಲು ಎಲ್ಲರಿUಗೂ ಸಮಾನ ಸ್ವಾತಂತ್ರ್ಯವಿರುತ್ತದೆ.

 

ನಿಮಗೆ ಇಂತಹ ಸಮಾಜ ಬೇಡವೇ?

             ಇಂತಹ ಸಮಾಜವನ್ನು ನಮ್ಮ ಹಳ್ಳಿಗಳಲ್ಲಿಯೂ ನಿರ್ಮಿಸಲು ಸಾಧ್ಯವಿದೆ. ಇಂತಹ ಸಮಾಜ ನಿರ್ಮಾಣಕ್ಕೆ, ಎಲ್ಲರಿಗೂ ತಮ್ಮ ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಳ್ಳಲು ಸಮಾನ ಅವಕಾಶವಿದೆಯೆಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಆರೋಗ್ಯದಲ್ಲಿ ಸಮತೆ (ಇquiಣಥಿ)

ಇಲ್ಲಿ ಅತಿ ಮುಝ್ಯವಾದ ಪದ ಸಮತೆ ಸಮತೆಯ ಅರ್ಥವೇನು? ಸಮತೆ ಎಂದರೆ ಅವಕಾಶಗಳು/ ಸೌಲಭ್ಯಗಳು ಮತ್ತು ಸೇವೆಗಳು

             ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು

             ಯಾವುದೇ ಅಡೆತಡೆಯಿಲ್ಲದೆ ಎಲ್ಲರಿಗೂ ಅವಕಾಶವಿರಬೇಕು.

             ಯಾವುದೇ ಅಪವಾದದ ಆಧಾರದಲ್ಲಿ ನಿರಾಕರಣೆಯಾಗಬಾರದು.

ಉದಾಹರಣೆ

ಮುಂದುವರಿದಂತೆ ಕೆಲವು ಸಮುದಾಯದ ವಿಶೇಷ ಅವಶ್ಯಕತೆಗಳನ್ನು ಪೂರೈಸಬೇಕು. ಉದಾಹರಣೆಗೆ ಭೌತಿಕವಾಗಿ ವಿಕಲಾಂಗರಿಗೆ ಅರ್ಥಪೂರ್ಣ ಜೀವನವನ್ನು ನಡೆಸಲು ಕೆಲವು ಸಾಧನ ಸಲಕರಣೆಗಳ ಅವಶ್ಯಕತೆಯಿರುತ್ತದೆ. ಸೇವೆಗಳು ಲಭ್ಯವಾಗಲಾರದಂತಹ ತೀರಾ ಒಳಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಸೇವೆಗಳು ಲಭ್ಯವಾಗುವಂತೆ ಮಾಡಲು ಪರಿಶ್ರಮ ಬೇಕಾಗುತ್ತದೆ.

ಆರೋಗ್ಯದಲ್ಲಿ ಸಮತೆಯನ್ನು ಖಚಿತಪಡಿಸಿಕೊಳ್ಳಲು ಅಸಮಾನತೆಯಿದ್ದು ಕ್ಷೇತ್ರಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ.

             ಅಸಮಾನತೆಯಿರುವಲ್ಲಿ- ಅನಾರೋಗ್ಯ, ಖಾಯಿಲೆ, ಅಹಿಂಸೆ ಮತ್ತು ಸಾವು

             ಅಸಮಾನತೆಯು ಜನರನ್ನು ಆರೋಗ್ಯ ಸೇವೆ ಮತ್ತು ಸೌಲಭ್ಯವಗಳನ್ನು ಬಳಸಿಕೊಳ್ಳಲು ತಡೆಯೊಡ್ಡುತ್ತದೆ.

             ಅಸಮಾನತೆಯು ಆರೋಗ್ಯ ಮತ್ತು ಜೀವನಕ್ಕಾಗಿ ಜನ ತಮ್ಮ ಹಕ್ಕನ್ನು ಸಾಧಿಸಲು ತಡೆಯೊಡ್ಡುತ್ತದೆ.

ಭಾರತ ಸಮಾಜ : ಭಾರತ ವೈವಿಧ್ಯಮಯ ದೇಶ

             ಇಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿಗೆ ಸೇರಿದ ಜನರಿದ್ದಾರೆ.

             ಭೌಗೋಳಿಕವಾಗಿ ಬೇರೆ ಬೇರೆ ಭಾಗದಲ್ಲಿ ವಾಸಿಸುವ ಜನ ಬೇರೆ ಬೇರೆ ಭಾಷೆಗಳನ್ನಾಡುತ್ತಾರೆ.

             ಅವರು ಬೇರೆ ಬೇರೆ ಸಂಪ್ರದಾಯ ಮತ್ತು ಪದ್ಧತಿಗಳನ್ನು ಆಚರಿಸುತ್ತಾರೆ. ಇದೇ ಭಾರತದ ವೈವಿದ್ಯತೆಯ ನಿಜವಾದ ಶಕ್ತಿ. ಆದರೆ ಭಾರತದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆಗಳಿವೆ. ಸಾಮಾಜಿಕ ಸಬಲರಾಗಿಲ್ಲದಿರುವ ಕಾರಣಗಳಿಂದ ತಾರತಮ್ಯತೆ ಮತ್ತು ಆರ್ಥಿಕ ಕಾರಣಗಳಿಂದಾಗಿ ಸಮಾಜದಲ್ಲಿ ಕೆಲವು ಗುಂಪಿನ ಜನ ತೊಂದರೆ ಅನುಭವಿಸುವಂತಾಗಿದೆ ಅವರುಗಳೆಂದರೆ :

             ಮಹಿಳೆಯರು

             ದಲಿತರು

             ಬುಡಕಟ್ಟು ಜನಾಂಗ

             ವಿಶೇಷ ಅಗತ್ಯವುಳ್ಳವರು

             ಧಾರ್ಮಿಕ ಅಲ್ಪಸಂಖ್ಯಾತರು

ಇವು ನಮಗೆ ನಾವೇ ಕೇಲವು ಪ್ರಶ್ನೆಗಳನ್ನು ಹಾಕಿಕೊಂಡು, ಅಸಮಾನತೆಗಳನ್ನು ಕಡಿಮೆ ಮಾಡಲು ಪ್ರತಿಕ್ರಿಯಿಸುವಂತೆ ಮಾಡಿವೆ.

             ನಾವು ಈ ಗುಂಪುಗಳನ್ನು ಕೆಟ್ಟದಾಗಿ ಏಕೆ ನಡೆಸಿಕೊಂಡಿದ್ದೇವೆ?

             ಇದರಿಂದಾಗುವ ಪರಿಣಾಮಗಳು/ ಅನಾಹುತಗಳೇನು?

             ಈ ಸಮಾನತೆಗಳನ್ನು ಸರಿಪಡಿಸಿಕೊಳ್ಳಲು ನಾವೇನು ಮಾಡಬೇಕು?

ಕೊನೆಯ ಮಾರ್ಪಾಟು : 10/15/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate