অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವ್ಯವಸ್ಥೆ ಯ ತತ್ವ,ಸಹಭಾಗಿತ್ವ , ಹೊಣೆಗಾರಿಕೆ

ವ್ಯವಸ್ಥೆ ಯ ತತ್ವ,ಸಹಭಾಗಿತ್ವ , ಹೊಣೆಗಾರಿಕೆ

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಯಾವ ಮುಖ್ಯ ತತ್ವಗಳ ಮೇಲೆ ಅವಲಂಬಿಸಿದೆ?

1.            ನಮ್ಮೂರಿನ ಪ್ರತಿಯೊಬ್ಬರಿಗೂ ಆರೋಗ್ಯ ಸೇವೆಯನ್ನು ಪಡೆಯುವ ಹಕ್ಕು ಇದೆ. ಈ ಹಕ್ಕು ಪಡೆಯಲು ಯಾರೂ ಕೂಡ ಯಾವುದೇ ಜಾತಿ ಅಂತಸ್ತುಗಳ ಭೇದ ಭಾವ ಇಲ್ಲದೆ ಪಡೆಯಬೇಕು

2.            ಈ ಎಲ್ಲ ಸೇವೆಗಳು ನಮ್ಮ ಹಳ್ಳಿಯಲ್ಲಿ ನಾವಿರುವ ಸ್ಥಳಕ್ಕೆ ಆದಷ್ಟು ಹತ್ತಿರವಿರಬೇಕು.

3.            ಸಾರ್ವಜನಿಕ ಆರೋಗ್ಯ ಸೇವೆಯ ಯೋಜನೆ, ಸಂಘಟನೆ ಮತ್ತು ನಿರ್ವಹಣೆನ್ನು ಗ್ರಾಮದ ಜನರು ತಮ್ಮದೇ ಎಂದು ತಿಳಿದು ಸಕ್ರಿಯಪಾತ್ರವಹಿಸಬೇಕು.

4.            ಆರೋಗ್ಯ ಸೇವೆಗಳು ಉತ್ತಮ ಗುಣಮಟ್ಟದ್ದಾಗಿರಬೇಕು ಹಾಗೂ ಜನರ ಅಗತ್ಯತೆಗಳನ್ನು ಪೂರೈಸುವಂತಿರಬೇಕು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಗ್ರಾಮಸ್ಥರ ಸಹಭಾಗಿತ್ವ ಯಾಕಿರಬೇಕು?

ನಮ್ಮ ಆರೋಗ್ಯ ಚೆನ್ನಾಗಿರಬೇಕಾದರೆ ನಮ್ಮ ಊರಿನ ಒಟ್ಟು ಆರೋಗ್ಯ ವ್ಯವಸ್ಥೆ ಉತ್ತಮವಾಗಿರಬೇಕು. ಅದಕ್ಕಾಗಿ  ಸರಕಾರ ಸಮುದಾಯ ಆರೋಗ್ಯ ಸೇವೆಗಳನ್ನು ಜಾರಿಗೊಳಿಸಿದೆ. ಆದರೆ ಇದು ಕೇವಲ ಸರಕಾರದ ಕೆಲಸ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಎರಡು ಕೈ ಸೇರದೆ ಚಪ್ಪಾಳೆಯಾಗದು. ಅದೇ ರೀತಿ ಗ್ರಾಮಸ್ಥರ ಸಹಕಾರವಿಲ್ಲದೆ ಆರೋಗ್ಯ ಸೇವೆಗಳಲ್ಲಿ ಹೆಚ್ಚಿನ ಯಶಸ್ಸು ನಿರೀಕ್ಷಿಸಲಾಗದು. ತಮ್ಮ ಗ್ರಾಮದ ಅಗತ್ಯತೆಗಳಿಗೆ  ಪೂರಕವಾಗಿ ಕ್ರಿಯಾಯೋಜನೆ ತಯಾರಿಸಲು ಮತ್ತು ಅದರ ಸಮರ್ಪಕ ಅನುಷ್ಠಾನದ ಬಗ್ಗೆ ನಿಗಾ ವಹಿಸಲು ನಮ್ಮ ಗ್ರಾಮದ  ಆರೋಗ್ಯ ಸಿಬ್ಬಂದಿಯೊಡನೆ ಹೆಗಲಿಗೆ ಹೆಗಲು ಕೊಟ್ಟು ನಾವು ಸಹಕರಿಸಬೇಕಾಗುತ್ತದೆ. ಕೆಲವೋಮ್ಮೆ ಯೋಜನೆಯನ್ನು ಚೆನ್ನಾಗಿ ತಯಾರಿಸಲಾಗುತ್ತದೆ. ಆದರೆ ಸರಿಯಾದ ರೀತಿ ಜಾರಿಗೊಳಿಸಲಾಗಿರುವುದಲ್ಲ. ಇದರ ಸಾಧಕ ಬಾಧಕಗಳ ಉಸ್ತುವಾರಿಯಲ್ಲಿಯೂ ನಾವು ಸಕ್ರಿಯ ಪಾತ್ರವಹಿಸಬೇಕು. ಇದರಿಂದ ನಮ್ಮ ಗ್ರಾಮ ಮತ್ತು ಗ್ರಾಮದ ಆರೋಗ್ಯ ವ್ಯವಸ್ಥೆ ಬಗ್ಗೆ ಸರಿಯಾದ ಮಾಹಿತಿ ದೊರಕಿ ತಪ್ಪು ಕಲ್ಪನೆಗಳು ಕಡಿಮೆಯಾಗಲು ದಾರಿಯಾಗುತ್ತದೆ.

ಆರೋಗ್ಯ ವ್ಯವಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನಮಗೆ ತಿಳಿಸುವ ಹೊಣೆಗಾರಿಕೆ ಇದೆಯಾ?

 

ನಮ್ಮೂರಿನ ಆರೋಗ್ಯ ವ್ಯವಸ್ಥೆ ನಮ್ಮೂರಿನ ಸ್ವತ್ತು. ಇಲ್ಲಿ ನಡೆಯುವ ಎಲ್ಲಾ ಆಗು ಹೋಗುಗಳ ಬಗ್ಗೆ  ತಿಳಿಯುವ ಹಕ್ಕು ಗ್ರಾಮದ ಎಲ್ಲ ಜನರಿಗಿದೆ. ಇದು ನಮ್ಮ ಜವಾಬ್ದಾರಿಯೂ ಹೌದು. ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ತಮ್ಮ ಮೇಲಧಿಕಾರಿಗಳಿಗೆ ತಮ್ಮ ಕಾರ್ಯ ಚÀಟುವಟಿಕೆಗಳ ಬಗ್ಗೆ ಹೇಗೆ ಮಾಹಿತಿಯನ್ನು ತಿಳಿಸುತ್ತಾರೋ ಹಾಗೆಯೇ ಗ್ರಾಮಸ್ಥರಿಗೂ ತಿಳಿಸುವ ಹೊಣೆಗಾರಿಕೆ ಇದೆ. ಉದಾಹರಣೆಗೆ ನಿಮ್ಮೂರಿನ ಉಪಕೇಂದ್ರದ ನಿರ್ವಹಣೆಗೆ ಎಷ್ಟು ಹಣ ಬಂದಿದೆ? ಅದರಲ್ಲಿ ಎಷ್ಟು ಯಾವುದಕ್ಕೆ ಖರ್ಚಾಗಿದೆ ಅಥವಾ ಔಷಧಿಗಳನ್ನು ಯಾಕೆ ಈ ದಿನ ಕಡಿಮೆ ಪ್ರಮಾಣದಲ್ಲಿ ನೀಡಿದ್ದಿರಿ? ಹೀಗೆ ಬೇರೆ ಬೇರೆ ಬಗ್ಗೆ ಮಾಹಿತಿಯನ್ನು ಕೇಳಿದಾಗ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ನೀವು ಕೇಳಿದ ಮಾಹಿತಿಯನ್ನು ಕೊಡಲು ನಿರಾಕರಿಸುವಂತಿಲ್ಲ. ನಿಮಗೆ ಮಾಹಿತಿಯನ್ನು ನೀಡುವ ಹೊಣೆಗಾರಿಕೆ ಅವರಿಗೆ ಇದೆ. ಇದು ಅವರ ಕರ್ತವ್ಯವೂ ಹೌದು. ಅದೂ ಅಲ್ಲದೆ ಪ್ರತಿಯೊಂದು ಸಾರ್ವಜನಿಕ ವ್ಯವಸ್ಥೆಯಲ್ಲಿಯ ಮಾಹಿತಿಯನ್ನು ಪಡೆಯುವುದು ನಿಮ್ಮ ಹಕ್ಕಾಗಿದೆ. ಯಾರಾದರೂ ನೀವು ಕೇಳಿದ ಮಾಹಿತಿಯನ್ನು ಕೊಡದೆ ಇದ್ದಲ್ಲಿ ಮಾಹಿತಿ ಹಕ್ಕು ಕಾಯಿದೆ(2005) ಪ್ರಕಾರ ಅರ್ಜಿ ಹಾಕಿ ಪಡೆದುಕೊಳ್ಳಬಹುದು.

ಕೆಲವೊಂದು ಮಾಹಿತಿಯನ್ನು ನಾವು ಕೇಳದೆಯೇ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳು ಕಡ್ಡಾಯವಾಗಿ ಜನಸಾಮಾನ್ಯರ ಗಮನಕ್ಕೆ  ತರಬೇಕು. ಅವುಗಳೆಂದರೆ ನಾಗರಿಕ ಸನ್ನದ್ದು (ನಾಗರೀಕರಿಗೆ ಸರ್ಕಾರ ನೀಡುವ ಭರವಸೆ ಅಥವಾ ಪ್ರಮಾಣ ವಚನ), ಔಷಧಿಗಳ ಪಟ್ಟಿ (ಎಷ್ಟು ಔಷಧಿಗಳು ಬಂದಿದೆ ಅದರಲ್ಲಿ ಎಷ್ಟು ಖರ್ಚಾಗಿದೆ?ಎಷ್ಟು ಉಳಿದಿದೆ? ಇದರ ವಿವರಗಳಿರುವ ಪಟ್ಟಿ) ಸೇವಾ ಸೌಲಭ್ಯಗಳ ಪಟ್ಟಿ (ಕೇಂದ್ರದಲ್ಲಿ ಲಭ್ಯ ಇರುವ ಕಾರ್ಯಕ್ರಮಗಳ ವಿವರಣೆ), ಶುಲ್ಕ ಪಟ್ಟಿ (ಕೆಲವೊಂದು ಸೇವೆಗಳಿಗೆ ರಸೀದಿ ಪಡೆದು ನೀಡಬೇಕಾದ ಕನಿಷ್ಠ ಹಣದ ವಿವರ). ಈ ಎಲ್ಲಾ ವಿವರಗಳ ಪಟ್ಟಿಗಳನ್ನು ಕೇಂದ್ರದಲ್ಲಿ ಎಲ್ಲರಿಗೂ ಕಾಣುವಂತೆ ಸ್ಥಳೀಯ ಭಾಷೆಯಲ್ಲಿ ಹಾಕಿರಬೇಕು.

 

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate