অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮುನ್ನುಡಿ

ಮುನ್ನುಡಿ

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕ್ಯಾಂಸರ್, ಮಧುಮೇಹ, ಹೃದಯ ರಕ್ತನಾಳಿಯ ರೋಗಗಳು ಮತ್ತು ಆಘಾತ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ - ಎನ್.ಪಿ.ಸಿ.ಡಿ.ಸಿ.ಎಸ್, ವನ್ನು ದಿನಾಂಕ 08 ನೇ ಜುಲೈ 2010 ರಂದು ಅಂಗೀಕರಿಸಿದೆ. ಇದರಂತೆ ಈ ಕಾರ್ಯಕ್ರಮದ ಹಲವು ಅಂಶಗಳನ್ನು 11 ನೇ ವಾರ್ಷಿಕ ಯೋಜನೆಯ ಉಳಿದ ಅವಧಿಯಲ್ಲಿ (ಅಂದರೆ 2010-11 ಮತ್ತು 2011-12 ರಲ್ಲಿ)ಅನುಷ್ಠಾನಗೊಳಿಸಲಾಗುವುದು (ಅಂದರೆ 2010-11 ಮತ್ತು 2011-12 ರಲ್ಲಿ). ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಿಂದ ಆರೋಗ್ಯಕರ ಜೀವನಶೈಲಿಗಳನ್ನು ಅಳವಡಿಸಿಕೊಳ್ಳುವಂತೆ ಸಮುದಾಯದ ವರ್ತನೆಯಲ್ಲಿ ಬದಲಾವಣೆ ಹೊಂದಲು ನಿರೀಕ್ಷಿಸಲಾಗಿದೆ. ಆಹಾರ ಮಾದರಿಗಳು, ವರ್ಧಿತ ದೈಹಿಕ ಚಟುವಟಿಕೆ ಮತ್ತು ತಂಬಾಕು ಹಾಗೂ ಮದ್ಯದ ಕಡಿಮೆ ಸೇವನೆಯು ಆರೋಗ್ಯಕರ ಜೀವನಶೈಲಿ ಅಭ್ಯಾಸಗಳಾಗಿವೆ. ಇದರಿಂದ ಸಮುದಾಯದಲ್ಲಿ ಸಾಮಾನ್ಯ ಅಂಟುರೋಗವಲ್ಲದ ಖಾಯಿಲೆಗಳ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಅಪಾಯಕಾರಿ ಅಂಶಗಳ ಒಟ್ಟಾರೆ ಕಡಿತವಾಗುವುದು.

ಆಯಾವ್ಯಯ

  • ಹಣ ಹೂಡಿಕೆಯ ಒಟ್ಟು ಅಂದಾಜು ರೂ. 1230.90 ಕೋಟಿಗಳು.
  • ಮಧುಮೇಹ ಮತ್ತು ಹೃದಯ ರಕ್ತನಾಳಗಳ ರೋಗಗಳಿಗೆ ಹಾಗೂ ಆಘಾತಗಳ ಕುರಿತಾದ ಹಸ್ತಕ್ಷೇಪಗಳಿಗಾಗಿ ರೂ. 499.38 ಕೋಟಿಗಳು.
  • ಕ್ಯಾಂಸರ್ ನಿಯಂತ್ರಣಕ್ಕಾಗಿ ರೂ. 731.52 ಕೋಟಿಗಳು.
  • ವೆಚ್ಚದೆ ಹಂಚಿಕೆ: ಕೇಂದ್ರ – 80% ಮತ್ತು ರಾಜ್ಯ-20%.

 

ಅನುಷ್ಠಾನ ಯೋಜನೆ

ಈ ಕಾರ್ಯಕ್ರಮವನ್ನು 15 ರಾಜ್ಯ / ಕೇಂದ್ರ ಆಡಳಿತ ಪ್ರದೇಶಗಳ 100 ಜಿಲ್ಲೆಗಳ 20,000 ಉಪ-ಕೇಂದ್ರಗಳಲ್ಲಿ ಮತ್ತು 700 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನ ಮಾಡಲಾಗುವುದು.

 

ಮುಖ್ಯ ಚಟುವಟಿಕೆಗಳು

  • ಬೃಹತ್ ಆರೋಗ್ಯ ಶಿಕ್ಷಣ ಮತ್ತು ಸಮೂಹ ಮಾಧ್ಯಮದ ಪ್ರಯತ್ನಗಳ ಮೂಲಕ ದೇಶದ ಮಟ್ಟದಲ್ಲಿ ಆರೋಗ್ಯಕರ ಜೀವನಶೈಲಿಗಳನ್ನು ಪ್ರೋತ್ಸಾಹಿಸುವುದು. 30 ವರ್ಷ ವಯಸ್ಸಿನ ಮೇಲ್ಪಟ್ಟ ವ್ಯಕ್ತಿಗಳ ಅವಕಾಶವಾದಿ ತಪಾಸಣೆ (ಸ್ಕ್ರೀನಿಂಗ್).
  • ಅಂಟುರೋಗವಲ್ಲದ ಖಾಯಿಲೆಗಳ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಕ್ಲಿನಿಕ್ ಗಳನ್ನು ಸಮುದಾಯ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗುವುದು. ತರಬೇತಿ ಹೊಂದಿರುವ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ತೃತೀಯ ಮಟ್ಟದ ಆರೋಗ್ಯ ಸೌಲಭ್ಯಗಳ ಬಲವರ್ಧನೆ ಮಾಡಲಾಗುವುದು.
  • ಮಧುಮೇಹ ಮತ್ತು ಅತಿ ಒತ್ತಡಕ್ಕಾಗಿ ಏಳು ಕೋಟಿ ವಯಸ್ಕ ಜನಸಂಖ್ಯೆ (30 ವರ್ಷ ಮತ್ತು ಮೇಲ್ಪಟ್ಟ) ಯ ತಪಾಸಣೆ (ಸ್ಕ್ರೀನಿಂಗ್), ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳ ಮುಂಚಿತ ರೋಗ ನಿರೂಪಣೆ ಮತ್ತು ಮುಂಚಿತ ಹಂತಗಳಲ್ಲಿ ಚಿಕಿತ್ಸೆ.
  • ಆರೋಗ್ಯ ವಿತರಣಾ ವ್ಯವಸ್ಥೆಯಲ್ಲಿನ ಅಂತರವನ್ನು ತುಂಬಲು, ಅವಕಾಶವಾದಿ ಮತ್ತು ಉದ್ದೇಶಿತ ತಪಾಸಣೆ (ಸ್ಕ್ರೀನಿಂಗ್), ರೋಗ ನಿರೂಪಣೆ ಮತ್ತು ಅಂಟುರೋಗವಲ್ಲದ ಖಾಯಿಲೆ (ನಾನ್ ಕಮ್ಯೂನಿಕೇಬಲ್ ಡಿಸೀಜಸ್ – ಎನ್.ಸಿ.ಡಿ) ಗಳ ನಿರ್ವಹಣೆಗಾಗಿ ಸುಮಾರು 32,000 ಆರೋಗ್ಯ ಸಿಬ್ಬಂಧಿಗಳನ್ನು ವಿವಿಧ ಹಂತಗಳಲ್ಲಿ ತರಬೇತಿ ನೀಡಲಾಗುವುದು.
  • ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate