অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕಾಪರ್ - ಟಿ

ಕಾಪರ್ - ಟಿ

ಇದೊಂದು ಚಿಕ್ಕ ಟಿ-ಆಕಾರದ ಗರ್ಭಕೋಶದೊಳಗೆ ಅಳವಡಿಸುವ ಸಾಧನ (ಇಂಟ್ರಾ-ಯೂಟೆರೈನ್ ಡಿವೈಸ್ - ಐಯುಡಿ). ಇದನ್ನು ಮಣಿಯುವಂತಹ ಪ್ಲಾಸ್ಟಿಕ್‍ನಿಂದ ಮಾಡಿ ಅದರ ಕಾಂಡದ ಸುತ್ತ ಸೂಕ್ಷ್ಮವಾದ ತಾಮ್ರದ ತಂತಿಯನ್ನು ಸುತ್ತಲಾಗಿರುತ್ತದೆ. ಕಾಂಡದಿಂದ ಎರಡು ಪ್ಲಾಸ್ಟಿಕ್ ದಾರಗಳು ಇಳಿಬಿದ್ದಿರುತ್ತವೆ. ಗರ್ಭಕೋಶದೊಳಗೆ ಅಳವಡಿಸುವ ಅನಂತರ ಕಾಪರ್-ಟಿ ಸ್ವಸ್ಥಾನದಲ್ಲಿ ಇರುತ್ತದೆ ಮತ್ತು ಗರಿಷ್ಠ ಹತ್ತು ವರ್ಷಗಳ ಕಾಲ ಪರಿಣಾಮಕರಿಯಾಗಿ ಕೆಲಸ ಮಾಡುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಕಾಪರ್-ಟಿಗಳು ಇದಕ್ಕಿಂತ ಕಡಮೆ ಅವಧಿಗೂ ಕೆಲಸ ಮಾಡುತ್ತವೆ.

 

ಕಾಪರ್-ಟಿ ಹೇಗೆ ಕೆಲಸ ಮಾಡುತ್ತದೆ ?

ವೀರ್ಯಾಣುಗಳು ಮತ್ತು ಅಂಡಾಣು ಪರಸ್ಪರ ಸಂಧಿಸದಂತೆ ತಡೆಯುವ ಮೂಲಕ ಕಾಪರ್-ಟಿ ಮುಖ್ಯವಾಗಿ ಕೆಲಸ ಮಾಡುತ್ತದೆ. ವೀರ್ಯಾಣು ಮಹಿಳೆಯ  ಸಂತಾನೋತ್ಪತ್ತಿಯ ದ್ವಾರದಲ್ಲಿ ಚಲಿಸುವುದು ದುಸ್ತರವಾಗುವಂಗೆ ಐಯುಡಿ ಮಾಡುತ್ತದೆ ಮತ್ತು ಅಂಡಾಣುವನ್ನು ಫಲವಂತವಾಗಿಸುವ ವೀರ್ಯಾಣುವಿನ ಸಾಮಥ್ರ್ಯವನ್ನು ಕುಗ್ಗಿಸುತ್ತದೆ ಪ್ರಾಯಃ ಅಂಡಾಣುವು ಗರ್ಭಕೋಶದ ಗೋಡೆಗೆ ಅಂಟಿಕೊಳ್ಳುವುದನ್ನೂ ಅದು ತಡೆಯುತ್ತದೆ.

 

ಕಾಪರ್-ಟಿಯನ್ನು ಕೆಳಕಂಡ ಸಂದರ್ಭಗಳಲ್ಲಿ ಬಳಸಬಹುದು :

ಹಿಂದಿನ ಬಾರಿ ಮುಟ್ಟಾದ ಅನಂತರ ಏಳು ದಿನಳಗ ಒಳಗೆ

ಹೆರಿಗೆಯಾದ ಆರು ವಾರಗಳು ಆದ ಮೇಲೆ - ಇದು ಅತ್ಯುತ್ತಮ ಸಮಯ

ತರಬೇತಿ ಪಡೆದ ದಾದಿಯರು ಮತ್ತು ವೈದ್ಯರು ಮಾತ್ರ ಕಾಪರ್ - ಟಿಯನ್ನು ಅಳವಡಿಸಬೇಕು.

ಕಾಪರ್-ಟಿಯನ್ನು ಆರೋಗ್ಯ ಕೇಂದ್ರಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಮಾತ್ರ ಅಳವಡಿಸಬೇಕು.

ಮಹಿಳೆಯರು ಯಾವಾಗ ಬೇಕೆಂದರೂ ಕಾಪರ್-ಟಿಯನ್ನು ತೆಗೆಸಿಕೊಳ್ಳಬಹುದು.

ಸಾಮಾನ್ಯವಾಗಿ ಕಾಪರ್-ಟೊ ಬಳಸಲು ಸುರಕ್ಷಿತವಾದದ್ದು, ಆದರೆ ಸೂಕ್ತವಾದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾದದ್ದು, ಮೊದಲು ಒಂದು ತಿಂಗಳಿನ ನಂತರ, ಆಮೇಲೆ ಮೂರು ತಿಂಗಳುಗಳ ನಂತರ, ಆಮೇಲೆ ಒಂದು ವರ್ಷದ ನಂತರ ಪರೀಕ್ಷೆ ಮಾಡಿಸಿಕೊಳ್ಳಲು ಮಹಿಳೆಯರಿಗೆ ತಿಳಿಸಿ.

ಕಾಪರ್-ಟಿಯನ್ನು ಮನೆಯಲ್ಲಿಯೇ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕಾಪರ್-ಟಿಯನ್ನು ಅಳವಡಿಸುವಗ ಕಟ್ಟುನಿಟ್ಟಾಗಿ ಶುಚಿತ್ವವನ್ನು ಅನುಸರಿಸುವುದು ಅಗತ್ಯ. ಕಾಪರ್-ಟಿಯನ್ನು ಅಳವಡಿಸಿಕೊಂಡ ಕೂಡಲೇ ಆ ಮಹಿಳೆಯು ಮನೆಗೆ ಹೋಗಬಹುದು.

ಕಾಪರ್-ಟಿಯ ಅಸ್ತಿತ್ವವನ್ನು ಪರೀಕ್ಷಿಸಿಕೊಳ್ಳುವುದು ಹೇಗೆ ಎಂದು ಮಹಿಳೆಯರು ಕಲಿತುಕೊಳ್ಳಬೇಕು. ಕೆಲವು ಸಲ ಅದು ಗರ್ಭಕೋಶದಿಂದ ಹೊರನೂಕಲ್ಪಡುತ್ತದೆ. ಯೋನಿಯಲ್ಲಿ ನೈಲಾನ್ ದಾರಗಳನ್ನು ನೋಡಿಕೊಳ್ಳುವುದನ್ನು ಕಲಿಯುವುದು ಸುಲಭ ಕಾಪರ್-ಟಿ ಗರ್ಭಕೋಶದಿಂದ ಜಾರಿ ಮೇಲೇರುವುದು ಸಾಧ್ಯವಿಲ್ಲ. ಒಬ್ಬರು ದಾದಿ ಮೆಲ್ಲನೆ ಎಳೆಯುವುದರ ಮೂಲಕ ಅದನ್ನು ಸುಲಭವಾಗಿ ಹೊರತೆಗೆಯಬಹುದು. ಕೆಲವು ಮಹಿಳೆಯರಿಗೆ ಕಾಪರ್-ಟಿಯನ್ನು ಅಳವಡಿಸಿಕೊಂಡ ಮೇಲೆ ನೋವು ಮತ್ತು ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಕೆಲವು ಆವರ್ತಗಳ ಅನಂತರ ಅದು ನಿಲ್ಲುತ್ತದೆ. ದೇಹದ ಪರಿಸ್ಥಿತಿಯು ಸುಧಾರಿಸದಿದ್ದರೆ ಕಾಪರ್-ಟಿಯನ್ನು ತೆಗೆಯಬಹುದು. ಹೆರಿಗೆಯಾದ ಆರು ವಾರಗಳ ಅನಂತರ ಕಾಪರ್-ಟಿಯನ್ನು ಅಳವಡಿಸಿದರೆ ಯಾವ ಬಗೆಯ ಅಡ್ಡ ಪರಿಣಾಮಗಳೂ ಇರುವುದಿಲ್ಲ.

ತೆಗೆಯುವುದು

ಹತ್ತು ವರ್ಷಗಳ ನಂತರ ಅಥವಾ ಒಬ್ಬಳು ಮಹಿಳೆ ಮಗುವನ್ನು ಪಡೆಯಲು ಬಯಸಿದರೆ ಅಥವಾ ಅತಿಯಾದ ರಕ್ತಸ್ರಾವ, ಕೆಳಕಿಬ್ಬೊಟ್ಟೆಯ ನೋವು ಅಥವಾ ತೀವ್ರವಾದ ಬೆನ್ನು ನೋವು ಕಾಣಿಸಿಕೊಂಡರೆ ಕಾಪರ್-ಟಿಯನ್ನು ತೆಗೆಯಬೇಕು. ಸೂಕ್ತವಾದ ಸೌಕರ್ಯವಿರುವ ಸ್ಥಳದಲ್ಲಿ ಕಾಪರ್-ಟಿಯನ್ನು ತೆಗೆಸಲು ನೀವು ಆ ಮಹಿಳೆಯರಿಗೆ ಸಹಾಯ ಮಾಡಬೇಕು.

ಮೂಲ: ಕುಟುಂಬ ಯೋಜನೆ ತರಬೇತಿದಾರರ ಕೈಪಿಡಿ

ಕೊನೆಯ ಮಾರ್ಪಾಟು : 7/2/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate