ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನು ನೀಡಲು ಜ್ಯೋತಿ ಸಂಜೀವಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯು ಒಳಗೊಳ್ಳುವ ಖಾಯಿಲೆಗಳ ವಿವರಗಳು

ಈ ಯೋಜನೆಯಡಿಯಲ್ಲಿ ೭ ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಆ ೭ ಗಂಭೀರ ಖಾಯಿಲೆಗಳೆಂದರೆ

ಹೃದ್ರೋಗ

ನರರೋಗ

ಕ್ಯಾನ್ಸರ್

ನವಜಾತ ಶಿಶು & ಚಿಕ್ಕ ಮಕ್ಕಳ ಚಿಕಿತ್ಸೆ

ಅಪಘಾತ( ಮರ ಅಥವಾ ಮನೆ ಮೇಲಿಂದ ಬಿದ್ದು ಮೂಳೆ ಮುರಿತಗೊಂಡಾಗ)

ಸುಟ್ಟ ಗಾಯ

ಮೂತ್ರ ಪಿಂಡದ ಸಮಸ್ಯೆ( ಮೂತ್ರ ಪಿಂಡದ ಕಲ್ಲಿನ ಶಸ್ತ್ರ ಚಿಕಿತ್ಸೆ)

ಈ ೭ ಖಾಯಿಲೆಗಳಿಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು,ಮತ್ತು ಯೋಜನೆಗೆ ನೋಂದಾವಣೆಗೊಂಡ ನೆಟ್ ವರ್ಕ್ ಆಸ್ಪತ್ರೆಗಳಲ್ಲಿ (ಖಾಸಗೀ ಆಸ್ಪತ್ರೆ/ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ) ಉಚಿತವಾಗಿ ಚಿಕಿತ್ಸೆ ನೀಡಲಾಗುವುದು.

ಒಟ್ಟಾರೆಯಾಗಿ ೭ ಖಾಯಿಲೆಗಳ ೫೭೨ಕ್ಕೂ ಹೆಚ್ಚು ವಿವಿದ ಬಗೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು.

ಅರ್ಹತೆ:- ೧)ರಾಜ್ಯ ಸರ್ಕಾರಿ ನೌಕರರಾಗಿರಬೇಕು ೨) ಹೆಚ್ ಆರ್ ಎಂ ಎಸ್ ನಲ್ಲಿ ನೌಕರರ ಹಾಗೂ ಅವರ ಕುಟುಂಬದ ಅವಲಂಬಿತರ ಆಧಾರ್ ಸಂಖ್ಯೆಯನ್ನು ನಮೂದಿಸಿರುವುದು ಕಡ್ಡಾಯ ೩) ನೌಕರರ ಕೆ ಜಿ ಐ ಡಿ ಸಂಖ್ಯೆ ಕಡ್ಡಾಯ

ಹೆಚ್ಚಿನ ಮಾಹಿತಿಗಾಗಿ:- ೧೮೦೦೪೨೫೮೩೩೦ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವುದು ಹಾಗೂ ಸಮೀಪದ ತಾಲ್ಲೂಕು ಆಸ್ಪತ್ರೆ/ಸಮುದಾಯ ಆರೋಗ್ಯ ಕೇಂದ್ರ/ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಆರೋಗ್ಯ ಮಿತ್ರರನ್ನು ಭೇಟಿ ಮಾಡುವುದು