ಪ್ರತಿ ಕಛೇರಿ , ಕಾರ್ಖಾನೆ, ಮನೆ ,ಶಾಲೆಯಲ್ಲಿ ಸುಲಭವಾಗಿ ಸಿಗುವಂತೆ ಪ್ರಥಮ ಚಿಕೆತ್ಸೆ ಕಿಟ್ ಇಟ್ಟಿರಬೇಕು. ಇದು ಎಲ್ಲ ಅಂಗಡಿಗಳಲ್ಲಿ ದೊರೆಯುತ್ತದೆ. ಆದರೆ ನೀವೇ ಮನೆಯಲ್ಲಿನ ಒಂದು ರಟ್ಟಿನ ಪೆಟ್ಟಿಗೆಯನ್ನು ಪ್ರಥಮ ಚಿಕೆತ್ಸೆ ಕಿಟ್ ಆಗಿ ತಯಾರಿಸಿಕೊಳ್ಳ ಬಹುದು. ಅದರಲ್ಲಿ ಕೆಳ ಕಂಡ ವಸ್ತುಗಳನ್ನು ಸಾಮಾನ್ಯವಾಗಿ ಇಡಬೇಕಾಗುವುದು. ಶುದ್ಧೀಕರಿಸಿದ ವಿವಿಧ ಅಳತೆಯ ಅಂಟುವ ಬ್ಯಾಂಡೇಜುಗಳು ಹೀರುವ ಹತ್ತಿಯ ಸುರಳಿ ಮತ್ತು ಬೇರೆ ಬೇರೆ ಅಳತೆಯ ಹತ್ತಿಯ ಪ್ಯಾಡಗಳು ಅಂಟುವ ಟೇಪು ತ್ರಿಕೋನಾಕಾರದ ಮತ್ತು ಸುತ್ತುವ ಬ್ಯಾಂಡೇಜುಗಳು ಹತ್ತಿ ( ಒಂದು ರೋಲ್) ಬ್ಯಾಂಡ್ ಎಡ್ಸ್ ( ಪ್ಲಾಸ್ಟರುಗಳು) ಕತ್ತರಿಗಳು ಪೆನ್ ಟಾರ್ಚ ಲೆಟೆಕ್ಸ ಕೈಗವಸಗಳು (೨ ಜತೆ) ಸಣ್ಣ ಚಿಮುಟ (ಟ್ವೀಜರ್ಸ್) ಸೂಜಿ ಒದ್ದೆಯಾದ ಟವೆಲ್ ಮತ್ತು ಶುದ್ಧವಾದ ಒಣ ಬಟ್ಟೆಯ ತುಂಡುಗಳು ಪೂತಿನಾಶಕ (ಸ್ಯಾವ್ಲಾನ್ ಅಥವ ಡೆಟಾಲ್) ಥರ್ಮಾ ಮೀಟರ್ ಪೆಟ್ರೋಲಿಯಂ ಜೆಲ್ಲಿಯ ಟ್ಯೂಬು ಅಥವಾ ಇನ್ನಾವುದೆ ಕೀಲೆಣ್ಣೆ (ಲ್ಯುಬ್ರಿಕೆಂಟ್) ವಿವಿಧ ಅಳತೆಯ ಸೇಫ್ಟಿ ಪಿನ್ನುಗಳು ಶುಧ್ಧಿಕಾರಕ ಅಥವ ಸೋಪು ಸಲಹೆ ಅಥವ ಸೂಚನೆ (ಪ್ರಿಸ್ಕ್ರಿಪ್ಷನ್) ರಹಿತ ಔಷಧಿಗಳು ಆಸ್ಪಿರಿನ್,ಆಥವಾ ಪ್ಯಾರಸೀಟಮಾಲ್ , ನೋವು ಉಪಶಮನ ಕಾರಕಗಳು. ಭೇದಿ ತೆಡೆಯಲು ಔಷಧಿ ಜೇನು ನೊಣ ಕಡಿತಕ್ಕೆ ಆಂಟಿಹಿಸ್ಟಾಮೈನ್ ಕ್ರೀಮು ಆಂಟಾಸಿಡ್ಸ( ಹೊಟ್ಟೆಯ ಗಡಿಬಿಡಿಗೆ) ಪ್ರಥಮ ಚಿಕೆತ್ಸೆಯ ಕಿಟ್ ಅನ್ನು ಸುಲಭವಾಗಿ ಸಿಗುವಂತೆ ಇಡಬೇಕು. ಅವಧಿ ಮುಕ್ತಾಯ ದಿನಾಂಕ ಮೀರಿದ ಔಷಧಿಗಳನ್ನು ಆಗಿಂದಾಗ ತೆಗೆದು ಹೊಸದನ್ನು ಇಡಬೇಕು. ಮೂಲ: ಪೋರ್ಟಲ್ ತಂಡ