অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೊಬ್ಬುಗಳು

ಕೊಬ್ಬುಗಳು

ಕೊಬ್ಬುಗಳು & ಕೊಲೆಸ್ಟ್ರಾಲ್:

ಸಂತೃಪ್ತ ಕೊಬ್ಬುಗಳು ಪ್ರಾಣಿಗಳ ಉತ್ಪನ್ನಗಳಾದ ಮಾಂಸ, ಹೈನು ಪದಾರ್ಥಗಳು ಮತ್ತು ಚಿಪ್ಸ್ ಮೊದಲಾದ ಸಂಸ್ಕರಿಸಿದ ಅಹಾರಗಳಲ್ಲಿ ಇವೆ.ಸಂತೃಪ್ತ ಕೊಬ್ಬಿನ ರಚನೆಯಲ್ಲಿ ಅದು ಜಲಜನಕದ ಪರಮಾಣುಗಳಿಂದ ಪೂರ್ಣವಾಗಿ ತೃಪ್ತ ವಾಗಿರುವುದು.. ಅದರಲ್ಲಿ ಇಂಗಾಲದ ಅಣುಗಳೊಂದಿಗೆ ದ್ವಿಬಂಧ ಇರುವುದಿಲ್ಲ. ಸಂತೃಪ್ತ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.ಎಕೆಂದರೆ ಅವು ಕಡಿಮೆ ಸಾಂದ್ರತೆಯ ಲಿಪ್ಟೊ ಪ್ರೋಟೀನ್ (LDL) ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ. (“ಕೆಟ್ಟ” ಕೊಲೆಸ್ಟ್ರಾಲ್).

ಅಸಂತೃಪ್ತ ಕೊಬ್ಬುಗಳು , ಬೀಜಗಳಲ್ಲಿ ಅಂದರೆ , ಅವೊಕೊಡ್ಮತ್ತು ಆಲೀವ್ಗಳಲ್ಲಿ ಇರುತ್ತವೆ.ಅವು ಕೋಣೆಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುತ್ತವೆ. ಮತ್ತು ಅವು ಸಂತೃಪ್ತ ಕೊಬ್ಬುಗಳಿಗಿಂತ ಭಿನ್ನವಾಗಿರುತ್ತವೆ. ಅವುಗಳ ರಾಸಾಯನಿಕ ರಚನೆಯಲ್ಲಿ ದ್ವಿಬಂಧ ಹೊಂದಿರುವವು. ಮೇಲಾಗಿ ಅಧ್ಯಯಯನಗಳ ಪ್ರಕಾರ ಅಸಂತೃಪ್ತ ಕೊಬ್ಬುಗಳು ಹೃದಯದ ಆರೋಗ್ಯಕ್ಕೆ ಪೂರಕವಾಗಿದ್ದು ಅವುಗಳಿಗೆ LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮತ್ತು ಹೆಚ್ಚು ಸಾಂದ್ರತೆಯ ಲಿಪೊಪ್ರೋಟಿನ್ (HDL) ಕೊಲೆಸ್ಟ್ರಾಲ್.("ಒಳ್ಳೆಯ ಕೊಲೆಸ್ಟ್ರಾಲ್") ಅಧಿಕ ಗೊಳಿಸುವ ಸಾಮರ್ಥ್ಯವಿದೆ

ಸಂತೃಪ್ತ & ಅಸಂತೃಪ್ತ ಕೊಬ್ಬುಗಳ ನಡುವಿನ ವ್ಯತ್ಯಾಸ

ಆಹಾರದಲ್ಲಿರುವ ಎರಡು ರೀತಿಯ ಮುಖ್ಯ ಕೊಬ್ಬುಗಳಾದ ಸಂತೃಪ್ತ ಕೊಬ್ಬು ಮತ್ತು ಅಸಂತೃಪ್ತ ಕೊಬ್ಬುಗಳ ನಡುವಿನ ವ್ಯತ್ಯಾಸವನ್ನು ಅರಿಯುವುದರಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಲು ಅನುಕೂಲವಾಗುವುದು. ಸಂತೃಪ್ತ & ಅಸಂತೃಪ್ತ ಕೊಬ್ಬುಗಳು ವಿವಿಧ ರೀತಿಯ ಆಹಾರದಲ್ಲಿ ಇದ್ದರೂ ಅಧ್ಯಯನದಿಂದ ಅವು ಒಂದೆ ರೀತಿಯ ರಚನೆಯನ್ನು ಹೊಂದಿಲ್ಲ ಎಂದು ಕಂಡುಬಂದಿದೆ. ಅಸಂತೃಪ್ತ ಕೊಬ್ಬು ಹೃದಯಕ್ಕೆ ಒಳ್ಳೆಯದಾದರೆ , ಸಂತೃಪ್ತ ಕೊಬ್ಬು ಹೃದಯಕ್ಕೆ ಮತ್ತು ಕೊಲೆಸ್ಟ್ರಾಲ್ಗಳಿಗೆ ಆತಂಕಕಾರಿ.

ಆದ್ದರಿಂದ , ನೀವು ಕೊಲೆಸ್ಟ್ರಾಲ್ ಇಳಿಸುವ ಪಥ್ಯಾಹಾರವನ್ನು ಅನುಸರಿಸಬಯಸಿದರೆ, ಸೇವಿಸುವ ಅಸಂತೃಪ್ತ ಕೊಬ್ಬುಗಳು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಾರದು ಆದರೂ ನೀವು ಸಂತೃಪ್ತ ಕೊಬ್ಬು ಪದಾರ್ಥವಿರುವ ಆಹಾದ ಸೇವನೆ ಬಿಡಲು ಪ್ರಯತ್ನಿಸಿ.

ಏಕ ಅಸಂತೃಪ್ತ ಮತ್ತು ಬಹು ಅಸಂತೃಪ್ತ ಕೊಬ್ಬುಗಳ ನಡುವಿನ ವ್ಯತ್ಯಾಸವೇನು ?

ಅಸಂತೃಪ್ತ ಕೊಬ್ಬುಗಳು , ಹೃದಯದ ಆರೋಗ್ಯವನ್ನು ಉತ್ತಮ ಪಡಿಸಲು ಸಿದ್ಧವಾಗಿದೆ.ಅವನ್ನು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದು: ಏಕಅಸಂತೃಪ್ತಕೊಬ್ಬುಗಳು ಮತ್ತು ಬಹುಅಸಂತೃಪ್ತ ಕೊಬ್ಬುಗಳು.ಏಕಅಸಂತೃಪ್ತ ಕೊಬ್ಬು ಮತ್ತು ಬಹುಅಸಂತೃಪ್ತ ಕೊಬ್ಬುಗಳ ನಡುವಿನ ವ್ಯತ್ಯಾಸವು ಅವುಗಳ ರಚನನೆಯಲ್ಲಿ ಅಡಗಿದೆ. ಏಕಅಸಂತೃಪ್ತ ಕೊಬ್ಬುಗಳು ಅವುಗಳ ರಚನೆಯಲ್ಲಿ ಒಂದು ದ್ವಿಬಂಧವನ್ನು ಹೊಂದಿರುತ್ತವೆ.ಆದರೆ, ಬಹುಅಸಂತೃಪ್ತ ಕೊಬ್ಬುಗಳ ರಚನೆಯಲ್ಲಿ ಎರಡು ಅಥವ ಅದಕ್ಕಿಂತ ಹೆಚ್ಚು ದ್ವಿಬಂಧ ಇರಬಹುದು. ಏಕ ಅಸಂತೃಪ್ತ ಕೊಬ್ಬುಗಳನ್ನು ಮತ್ತು ಬಹುಅಸಂತೃಪ್ತ ಕೊಬ್ಬುಗಳನ್ನು ಸಂತೃಪ್ತ ಕೊಬ್ಬುಗಳು ಮತ್ತು ಟ್ರಾನ್ಸಸಂತೃಪ್ತ ಕೊಬ್ಬುಗಳ ಬದಲಾಗಿ ಬಳಸುವುದರಿಂದ ಹೃದಯ ರೋಗದ ವಿರುದ್ಧ ರಕ್ಷಣೆ ದೊರೆಯುಯಬಹುದು. ಬಹು ಅಸಂತೃಪ್ತ ಕೊಬ್ಬುಗಳ ಏಕಅಸಂತೃಪ್ತ ಕೊಬ್ಬುಗಳಿಗಿಂತ ಹೆಚ್ಚು ಪರಿಣಾಮಕಾರಿ ಎನ್ನಲು ಸಾಕಷ್ಟು ಪುರಾವೆ ಗಳಿವೆ..

ಬಹುಅಸಂತೃಪ್ತ ಕೊಬ್ಬುಗಳು ದೇಹಕ್ಕೆ ಅಗತ್ಯವಾದ ಕ್ಯಾಲೊರಿಪ್ರಮಾಣದ 10% ಅನ್ನು ಒದಗಿಸುವವು ಎಂದು ರಾಷ್ಟ್ರೀಯ ಕೊಲೆಸ್ಟ್ರಾಲ್ ಕಾರ್ಯಕ್ರಮವು ತಿಳಿಸಿದೆ. ಅ ಬಹುಅಸಂತೃಪ್ತ ಕೊಬ್ಬುಗಳನ್ನು ಕೆಳಗಿ ಆಹಾರ ಮೂಲಗಳಿಂದ ಪಡೆಯಬಹುದು :ನಟ್ಗಳು , ಸಸ್ಯಜನ್ಯ ಎಣ್ಣೆಗಳು (ದಾನ್ಯದ ಎಣ್ನೆ ಎಣ್ಣೆ,ಸೂರ್ಯ ಕಾಂತಿ ಎಣ್ಣೆ)

ಕೊನೆಯ ಮಾರ್ಪಾಟು : 5/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate