অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಥ್ಯಾಹಾರದ ಕೊಬ್ಬುಗಳು

ಪಥ್ಯಾಹಾರದ ಕೊಬ್ಬುಗಳು

ಈ ಮೊದಲೆ ತಿಳಿಸಿದಂತೆ , ನಾವು ಸೇವಿಸುವ ಆಹಾರದಲ್ಲಿನ ಕೊಬ್ಬು ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಮಟ್ಟ ಹೆಚ್ಚಿಸುವವು.ಸರಿಯಲ್ಲದ ಕೊಬ್ಬಿನ ಪ್ರಮಾಣವನ್ನು ಹೆಚ್ಚಾಗಿ ಸೇವಿಸಿದರೆ ಅವುಗಳ ಮಟ್ಟ ಹೆಚ್ಚಾಗುವುದು.ಇಲ್ಲಿ ಆಹಾರದಲ್ಲಿನ ಕೊಬ್ಬಿನ ನಿಯಂತ್ರಣ ಕುರಿತು ಕೆಲ ಸಲಹೆಗಳನ್ನು ನೀಡಿದೆ.

  • ಒಳ್ಳೆಯ ಕೊಬ್ಬನ್ನು ಸೇವಿಸಿ: ಕೊಬ್ಬಿನ ಆಹಾರವನ್ನೇ ಸೇವಿಸ ಬೇಡಿ ಎನ್ನುವುದು ಅವಾಸ್ತವ. ಆದ್ದರಿಂದ ಸರಿಯಾದ ಪ್ರಮಾಣದಲ್ಲಿ ವಿಭಿನ್ನ ಕೊಬ್ಬುಗಳ ಸೇವನೆಯಿಂದ ಕೊಲೆಸ್ಟ್ರಲ್ , ಟ್ರೈ ಗ್ಲಿಜರೈಡ್ ಮಟ್ಟದಮೇಲೆ ನಿಯಂತ್ರಣ ಸಾಧಿಸಬಹುದು.ಸಾಧ್ಯವಾದಷ್ಟು ಅಸಂತೃಪ್ತ ಕೊಬ್ಬುಗಳನ್ನೆ ಸೇವಿಸಿ. ಅವು ಸಸ್ಯ ಮೂಲದಿಂದ ಬರುತ್ತವೆ. ಈ ಕೊಬ್ಬುಗಳು ನಿಮ್ಮ HDL ಅನ್ನು ಹೆಚ್ಚಿಸಿ ಮತ್ತು LDLಅನ್ನು ಕಡಿಮೆ ಮಾಡುತ್ತವೆ. ಹೃದಯದ ರೋಗದ ಅಪಾಯವು ಅದರಿಂದ ಕಡಿಮೆಯಾಗುವುದು. ಆಹಾರದಲ್ಲಿನ ಪ್ರಾಣಿ ಜನ್ಯವಾದ ಸಂತೃಪ್ತ ಕೊಬ್ಬುಗಳು HDL ಕಡಿಮೆ ಮಾಡಿ ಮತ್ತು LDL ಹೆಚ್ಚು ಮಾಡುವುದರಿಂದ , ಹೃದಯ ರೋಗದ ಆತಂಕವು ಹೆಚ್ಚುವುದು..
  • ಸರಿಯಾದ ಪ್ರಮಾಣದ ಕೊಬ್ಬು ಸೇವಿಸಿ: ಆರೋಗ್ಯವಂತ ವಯಸ್ಕರು ತಮ್ಮ ಅಗತ್ಯದ ಕ್ಯಾಲರಿಗಳಲ್ಲಿ ಶೆಕಡಾ 30 ಕ್ಕಿಂತ ಹೆಚ್ಚಿನ ಭಾಗವನ್ನು ಕೊಬ್ಬಿನಿಂದ ಪಡೆಯಬಾರದು. ಅದರಲ್ಲಿ. (ಶೇಕಡಾ 7 ರಿಂದ 10ರ ವರೆಗೆಗಿನ ಕ್ಯಾಲೊರಿಗಳು ಸಂತೃಪ್ತ ಕೊಬ್ಬಿನಿಂದ ; ಶೇಕಡಾ10 ರಿಂದ 15 ಭಾಗ ಏಕಸಂತೃಪ್ತ ಕೊಬ್ಬುಗಳಿಂದ ; ಶೇಕಡಾ 10 ಬಹು ಅಸಂತೃಪ್ತ ಕೊಬ್ಬುಗಳಿಂದ ಪಡೆದಿರಬೇಕು.)

ಸಮತೋಲನ ಆಹಾರಸೇವಿಸಿ: ರೋಗ್ಯಕರ ಆಹಾರದಲ್ಲಿ , ಅಹಾರದಲ್ಲಿ 5 ಸೌಟು ಅಥವ ಅದಕ್ಕಿಂತ ಹೆಚ್ಚು ಹಣ್ಣುತರಕಾರಿ ಪ್ರತಿದಿನ ಇರಬೇಕು; ಕಾಳುಗಳು ದ್ವಿದಳಧಾನ್ಯ ಮತ್ತು ಬೀನ್ಸ ಹೆಚ್ಚಾಗಿರಲಿ. ಸಿಹಿತಿಂಡಿ ಮತ್ತು ಅಧಿಕ ಕೊಬ್ಬಿರುವ ಆಹಾರವನ್ನು ಮಿತಿಯಾಗಿ ಸೇವಿಸಿ.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate