অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿನ್ನೆಲೆ

ಹಿನ್ನೆಲೆ

ಉತ್ತಮಗೊಂಡ ನೈರ್ಮಲ್ಯ, ಚುಚ್ಚುಮದ್ದು, ಮತ್ತು ಪ್ತಿಜೀವಕಗಳು ಹಾಗೂ ವೈದ್ಯಕೀಯ ಗಮನದ ಮೂಲಕ ಹಲವು ಸಾಂಕ್ರಾಮಿಕ ರೋಗಗಳಿಂದ ಸಾವಿನ ಆತಂಕವನ್ನು ಆಧುನಿಕ ವಿಜ್ಞಾನವು ಹೋಗಲಾಡಿಸಿದೆ. ಇದೆಂದರೆ ಜೀವನಶೈಲಿ ಆಧಾರಿತ ರೋಗಗಳಾದ ಹೃದಯ ರೋಗ ಮತ್ತು ಕ್ಯಾಂಸರ್ ನಿಂದ ಸಂಭವಿಸುವ ಸಾವುಗಳು ಸಾವಿನ ಪ್ರಮುಖ ಕಾರಣಗಳಾಗಿವೆ. ಪ್ರತಿಯೊಬ್ಬರು ನೈಸರ್ಗಿಕವಾಗಿ ಒಂದಲ್ಲ ಒಂದು ಕಾರಣದಿಂದ ಸಾಯುವುದು ಖಚಿತ, ಆದರೆ ಜೀವನಶೈಲಿ ಆಧಾರಿತ ರೋಗಗಳು ಜನರಿಗೆ ಅವರ ಸಮಯದ ಮುಂಚಿತವಾಗಿಯೇ ಕೊಂಡಯ್ಯುವುದು. ಆಧುನಿಕ ಸಮಯದಲ್ಲಿ ಹಲವಾರು ಜನಗಳು ಹೃದಯ ರೋಗ ಮತ್ತು ಕ್ಯಾಂಸರ್ ಹಾಗೂ ಇತರೆ ಜೀವನಶೈಲಿ ಸಂಬಂಧಿತ ಖಾಯಿಲೆಗಳಿಂದ ಅವರ ಯೌವನದಲ್ಲಿಯೇ ಸಾಯುತ್ತಿರುವರು.

ಭಾರತದಲ್ಲಿ ಪರಿಸ್ಥಿತಿಯು ಗಂಭೀರವಾಗಿದೆ. ರೋಗದ ಲಕ್ಷಣಗಳು ಅತಿ ವೇಗದಲ್ಲಿ ಬದಲಾಗುತ್ತಿವೆ. ಮುಂಬರುವ ಭವಿಷ್ಯದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಜೀವನಶೈಲಿ ಆಧಾರಿತ ರೋಗಗಳು ಉಂಟಾಗುವ ದೇಶವೆಂದು ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಗುರುತಿಸಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ಜೀವನಶೈಲಿ ಆಧಾರಿತ ರೋಗಗಳು ಅತಿ ಸಾಮಾನ್ಯ ವಾಗುತ್ತಿರುವುದಲ್ಲದೇ, ಇವುಗಳು ಯುವ ಜನತೆಯ ಮೇಲೆ ಕೂಡ ಪರಿಣಾಮ ಬೀರುತ್ತಿವೆ. ಹಾಗಾಗಿ, ಅಪಾಯದ ಹಂಚಿನಲ್ಲಿರುವ ಜನತೆಯ ವರ್ಗೀಕರಣ 40+ ನಿಂದ 30+ ಅಥವ ಇನ್ನೂ ಯುವಾವಸ್ಥೆಗೆ ಇಳಿದಿದೆ. ವಿಶ್ವದ ಮಧುಮೇಹದ ರಾಜಧಾನಿ ಎಂದು ಈಗಾಗಲೆ ಪರಿಗಣಿಸಲಾಗಿರುವ ಭಾರತ ಈಗ ಮತ್ತೊಂದು ಅಸ್ಪಷ್ಟ ವೈಶಿಷ್ಟ್ಯ ಪಡೆಯಲು ಮುಂದಾಗುತ್ತಿದೆ - ಜೀವನಶೈಲಿ ಸಂಬಂಧಿತ ಖಾಯಿಲೆಗಳ ರಾಜಧಾನಿಯಾಗುವುದು. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸೆಸ್ ಮತ್ತು ಮ್ಯಾಕ್ಸ್ ಆಸ್ಪತ್ರೆ ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ ಅತಿಒತ್ತಡ, ಬೊಜ್ಜುಮೈ ಮತ್ತು ಹೃದಯ ರೋಗಗಳು ಅತಿ ವೇಗದಲ್ಲಿ ಹೆಚ್ಚುತ್ತಿರುವವು, ಪ್ರಮುಖವಾಗಿ ಯುವ, ನಗರ ಪ್ರದೇಶದ ಜನತೆಯಲ್ಲಿ. ವೈದ್ಯರ ಹೇಳಿಕೆಗಳ ಪ್ರಕಾರ, ಹೆಚ್ಚಾಗುತ್ತಿರುವ ಚರ್ಬಿವುಳ್ಳ ಆಹಾರ ಮತ್ತು ಮದ್ಯ ಸೇವನೆಯಿಂದ ಕೂಡಿರುವ ಚಟುವಟಿಕೆ ವಿಲ್ಲದ ಜೀವನ ಶೈಲಿಯು ಬೊಜ್ಜುಮೈ, ಮಧುಮೇಹ, ಅತಿಒತ್ತಡ, ಇತ್ಯಾದಿಗಳ ಪ್ರಕರಣಗಳಿಗೆ ಪ್ರಮುಖ ಕಾರಣವಾಗಿದೆ.

  • ಕೊಬ್ಬುಗಳು & ಕೊಲೆಸ್ಟ್ರಾಲ್
  • ಹೃದಯ ರೋಗ ತಡೆಗಟ್ಟುವಿಕೆ
  • ಜೀವನ ಶೈಲಿ ಆಧಾರಿತ ಪ್ರಮುಖ ರೋಗಗಳು
  • ಕ್ಯಾನ್ಸರ್, ಮಧುಮೇಹ, ಹೃದಯ ರೋಗಗಳು ಮತ್ತು ಆಘಾತ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಗಾಗಿ ರಾಷ್ಟ್ರೀಯ ಕಾರ್ಯಕ್ರಮ

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 12/5/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate