ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಸಾಮಾನ್ಯ ಆರೋಗ್ಯ / ತಂಬಾಕಿನ ಪರಿಣಾಮಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂಬಾಕಿನ ಪರಿಣಾಮಗಳು

ತಂಬಾಕಿಗೆ ಸಂಬಂಧಿಸಿದ ಕೆಲವು ಸತ್ಯಗಳು

ತಂಬಾಕಿಗೆ ಸಂಬಂಧಿಸಿದ ಕೆಲವು ಸತ್ಯಗಳು

  1. 1. ವಿಶ್ವಾದ್ಯಂತ ಪ್ರತೀ ವರ್ಷ 5.4 ಮಿಲಿಯನ್ ಜನರು  ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ.
  2. 2. ದುರಂತವೆಂದರೆ, ಇದರಲ್ಲಿ ಶೇಕಡ 80ರಷ್ಟು ಸಾವುಗಳು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುತ್ತಿವೆ
  3. 3. ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಎಂಟು ಪ್ರಮುಖ ಕಾರಣಗಳಲ್ಲಿ ತಂಬಾಕಿಗೆ ಆರನೇ ಸ್ಥಾನ.
  4. 4. ಪ್ರತೀ ವರ್ಷ 8 ರಿಂದ 9 ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳಿಂದ ಸಾಯುತ್ತಿದ್ದಾರೆ. ಇವೆಲ್ಲವೂ ತಡೆಗಟ್ಟಬಹುದಾದ ಸಾವುಗಳು.
  5. 5. ತಂಬಾಕು ಸೇವನೆಯಿಂದ ಬರುವ ರೋಗಗಳಿಂದಾಗಿ ಪ್ರತೀ ನಿತ್ಯ 2,200 ಮಂದಿ ಭಾರತೀಯರುಸಾವನ್ನಪ್ಪುತ್ತಿದ್ದಾರೆ.
  6. 6. ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಗೆ ತುತ್ತಾಗಿತ್ತಿರುವವರಲ್ಲಿ ಭಾರತೀಯರೇ ಹೆಚ್ಚು ಇದರಲ್ಲಿ ಶೇಕಡ 90ರಷ್ಟು ಬಾಯಿ ಕ್ಯಾನ್ಸರ್ ಗಳು ತಂಬಾಕಿನಿಂಹ ಬರುತ್ತಿವೆ.
  7. 7. ಭಾರತದಲ್ಲಿ ಸುಮಾರು ಶೇಕಡ 50ರಷ್ಟು ರೋಗಗಳು ತಂಬಾಕು ಸೇವನೆಯಿಂದ ಬರುತ್ತಿವೆ.

ಬೇರೆಯವರು ಸೇದಿ ಬಿಟ್ಟ ಸಿಗರೇಟು ಅಥವಾ ಬೀಡಿಯ ಹೊಗೆಯನ್ನು ಸೇವಿಸುವವರಿಗೂ ಮೊದಲು ಸೇದಿದವರಿಗೆ ಇರುವ ಅಪಾಯಗಳೇ ಇವೆ ಇದರಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ರೋಗಗಳು ಹಾಗೂ ಅಕಾಲಿಕ ಮರಣಗಳು ಸಂಭವಿಸುತ್ತವೆ.

ತಂಬಾಕು ಸೇವನೆಯಿಂದ ದೇಹದ ಪ್ರತಿಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀಋತ್ತದಾದರೂ ಪ್ರಮುಖವಾಗಿ ಹೃದಯ ಸಂಬಂಧಿ, ಶ್ವಾಸಕೋಶ ತೊಂದರೆ ಹಾಗೂ ಕ್ಯಾನ್ಸರ್ ಕಾಯಿಲೆಗಳು ಕಾಡುತ್ತದೆ. ಬಹಳ ಹಿಂದೆಯೇ ಅಂದರೆ 1999ರಲ್ಲಿ ರಥ್ ಮತ್ತು ಚೌದರಿ ಅವರು ನಡೆಸಿದ ಐ.ಸಿ.ಎಂ.ಆರ್. ಅಧ್ಯನದಲ್ಲಿ ಈ ಮೂರು ಕಾಯಿಲೆಗಳ ಚಿಕಿತ್ಸೆಗಳಿಗೆ ಅನುಕ್ರಮವಾಗಿ 3,50,000. 29,000 ಹಾಗೂ 23,300 ರೂಪಾಯಿ ವೆಚ್ಚವಾಗುತ್ತದೆ. ಎಂದು ತಿಳಿಸಿರುತ್ತಾರೆ. ಇದು ದೇಶದ ದೃಷ್ಟಿಯಿಂದ ತೀವ್ರ ಆತಂಕಕಾರಿ ಕಾರಣ ಭಾರತದಲ್ಲಿ ಶೇಕಡ 80ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ. ದೇಶದ ಪ್ರತಿಶತ 75ರಷ್ಟು ಜನತೆಗೆ ಪ್ರತಿ ದಿನ 100 ರೂಪಾಯಿ ಖರೀದಿ ಮಾಡುವ ಸಾಮರ್ಥ್ಯವೂ ಇಲ್ಲ ವಸ್ತುಸ್ಥಿತಿ ಹೀಗಿರುವಾಗ ಜನರು ಏಕೆ ಇಂಥ ಅನಗತ್ಯ ವೆಚ್ಚ ಭರಿಸಬೇಕು. ಶ್ರೀಸಾಮಾನ್ಯ ಏಕೆ ಸಂಕಷ್ಟಕ್ಕೆ ಒಳಗಾಗಬೇಕು. ಒಬ್ಬ ವೈದ್ಯನಾಗಿ ನಾನು ಗಮನಿಸಿದಂತೆ ಇದು ಕೇವಲ  ಚಿಕಿತ್ಸೆಗೆ ಒಳಪಡುವ ರೋಗಿಯ ಮೇಲೆ ಪರಿಣಾಮ ಬೀರುವುದಿಲ್ಲ.ಬದಲಾಗಿ ಅವನ ಇಡಿ ಕುಟುಂಬದ ಅರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. .

ಮೂಲ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

3.06976744186
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top