অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪಿಜಿಎಸ್‌ ಆಚೆ– ಈಚೆ

ಪಿಜಿಎಸ್‌ ಆಚೆ– ಈಚೆ

* ಪಿಜಿಎಸ್‌ ಎಂದರೇನು?
ಪ್ರಿ ಇಂಪ್ಲಾಂಟೇಶನ್‌ ಜೆನೆಟಿಕ್‌ ಸ್ಕ್ರೀನಿಂಗ್‌ ಎಂದು ಇದರರ್ಥ. ಇದರರ್ಥ ಭ್ರೂಣಗಳಲ್ಲಿ ಇರಬಹುದಾದ ದೋಷಪೂರಿತ ವರ್ಣತಂತುಗಳ ಜೋಡಿಯನ್ನು ಮೊದಲೇ ಕಂಡು ಹಿಡಿಯಬಹುದಾದ ತಂತ್ರಜ್ಞಾನ. ಇದರಿಂದ ಆನುವಂಶಿಕವಾಗಿ ಸೂಕ್ತವಾಗಿರುವ ಭ್ರೂಣವನ್ನು ಆಯ್ಕೆ ಮಾಡಿ ಕಸಿ ಮಾಡಲು ಸುಲಭವಾಗುತ್ತದೆ.

* ಪಿಜಿಎಸ್‌ನಿಂದ ನನಗೆ ಲಾಭವಾಗುತ್ತದೆಯೇ?
ಒಂದು ವೇಳೆ ನೀವು 35 ವರ್ಷ ಮೇಲ್ಪಟ್ಟವ ರಾಗಿದ್ದರೆ, ನಿಮ್ಮ ಜೈವಿಕ ಗಡಿಯಾರವು ಅಂಡಾಣುಗಳ ಸಂಖ್ಯೆಯನ್ನು ಕಡಿತಗೊಳಿಸುತ್ತದೆ. ಜೊತೆಗೆ ಏರುಗತಿಯಲ್ಲಿರುವ ವಯಸ್ಸಿನಿಂದಾಗಿ ಗುಣಮಟ್ಟದಲ್ಲಿಯೂ ಇಳಿಕೆ ಕಂಡು ಬರುತ್ತದೆ. ಅಂಡಾಣುವಿನಲ್ಲಿ ಆಗುವ ಅಸಹಜತೆಗಳು ಹೆಚ್ಚಾದಷ್ಟೂ ಭ್ರೂಣ ಫಲಿತಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಯುವತಿಯರಲ್ಲಿಯೂ ಐವಿಎಫ್‌ ಮೂಲಕ ಸ್ಥಾಪಿತವಾಗುವ ಭ್ರೂಣಗಳಲ್ಲಿ ಶೇ 40ರಿಂದ 60ರಷ್ಟು ಭ್ರೂಣಗಳಲ್ಲಿ ಅಸಹಜತೆಗಳು ಕಂಡು ಬರುತ್ತವೆ.

* ಎರಡಕ್ಕಿಂತ ಹೆಚ್ಚು ಗರ್ಭಪಾತ, ಗರ್ಭಸ್ರಾವವಾಗಿದ್ದರೆ
ಎರಡು ಅಥವಾ ಎರಡಕ್ಕಿಂತ ಹೆಚ್ಚು ಐವಿಎಫ್‌ಗಳು ವಿಫಲವಾಗಿದ್ದರೆ... ವಿಶೇಷವಾಗಿ ಉಳಿದೆಲ್ಲ ಸನ್ನಿವೇಶಗಳೂ ಸಾಮಾನ್ಯ ಮತ್ತು ಸಹಜವಾಗಿದ್ದಾಗಲೂ ವೈಫಲ್ಯ ಕಂಡು ಬಂದಿದ್ದಲ್ಲಿ ಗರ್ಭದಲ್ಲಿರುವ ಮಗುವಿನಲ್ಲಿ ಅಸಹಜತೆಗಳು ಕಂಡು ಬಂದಿದ್ದಲ್ಲಿ ಪುರುಷರ ಫಲವಂತಿಕೆಯ ಸಮಸ್ಯೆ ಇದ್ದಲ್ಲಿ, ವೀರ್ಯಾಣುವಿನ ಚಲನೆ ನಿಧಾನಗತಿಯದ್ದಾಗಿದ್ದರೆ, ದೋಷಪೂರ್ಣ ವೀರ್ಯಾಣುವಾಗಿದ್ದರೆ, ವೀರ್ಯಾಣುವಿನ ಆನುವಂಶಿಕ ಗುಣ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

* ಪಿಜಿಎಸ್‌ನಿಂದ ನಿಜವಾಗಿಯೂ ಲಾಭವಿದೆಯೇ? ಲಾಭವಾಗುತ್ತದೆಯೇ?
ಸಾಮಾನ್ಯವಾಗಿ ದೋಷಪೂರಿತ ಅಥವಾ ಆನುವಂಶಿಕವಾಗಿ ಸಾಮಾನ್ಯವಾಗಿಯೇ ಕಾಣಿಸುವ ಭ್ರೂಣಗಳನ್ನು ಗರ್ಭದೊಳಗೆ ಸ್ಥಾಪಿಸುವ ಸಾಧ್ಯತೆ ತಪ್ಪುತ್ತದೆ. ಸೂಕ್ತವಾದ ಭ್ರೂಣವನ್ನೇ ಸ್ಥಾಪಿಸುವುದರಿಂದ ಐವಿಎಫ್‌ ವೈಫಲವ್ಯವಾಗುವ ಸಾಧ್ಯತೆಗಳನ್ನೂ ಕಡಿಮೆ ಮಾಡಿದಂತಾಗುತ್ತದೆ. ಬಸಿರು ಕಟ್ಟುವುದರ ಬಗ್ಗೆ ಖಚಿತವಾಗಿ ಹೇಳಬಹುದು. ಆರೋಗ್ಯವಂತ ಮಗುವನ್ನು ಪಡೆಯಬಹುದು.

* ಪಿಜಿಎಸ್‌ ಮಾಡುವುದು ಹೇಗೆ?
ಪ್ರಿ ಇಂಪ್ಲಾಂಟೇಶನ್‌ ಜೆನೆಟಿಕ್‌ ಸ್ಕ್ರೀನಿಂಗ್‌ ಮಾಡಲು ಮಹಿಳೆಯು ತನ್ನ ಐವಿಎಫ್‌ ಅಥವಾ ಐಸಿಎಸ್‌ಐ ಚಕ್ರಕ್ಕೆ ಒಳಪಡಬೇಕಾಗುತ್ತದೆ. ಪ್ರಯೋಗಾಲಯದಲ್ಲಿ ಫಲಿತಗೊಂಡ ಭ್ರೂಣವನ್ನು ವಿಶೇಷ ಲೇಸರ್‌ ಅಲೆಗಳಿಗೆ ಒಳಪಡಿಸಿ, ಭ್ರೂಣದ ಕೇವಲ ಒಂದೇ ಒಂದು ಜೀವಕೋಶವನ್ನು ತಪಾಸಣೆಗೆ ತೆಗೆಯಲಾಗುತ್ತದೆ. ಈ ಜೀವಕೋಶಗಳ ವರ್ಣತಂತು ಸಹಜವಾಗಿವೆಯೇ ಎನ್ನುವುದನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ.

* ಈ ಬಯಾಪ್ಸಿಗೆ ಒಳಪಡಿಸುವುದರಿಂದ ಮುಂದೆ ಆಗುವ ಮಗುವಿಗೆ ಏನಾದರೂ ತೊಂದರೆಯಾಗಬಹುದೇ?
ಈ ಬಯಾಪ್ಸಿಯಿಂದ ಭ್ರೂಣದ ಬೆಳವಣಿಗೆಗೆ ಅಥವಾ ಭ್ರೂಣಕ್ಕೆ ಯಾವುದೇ ಹಾನಿಯಾಗದು. ಆದರೆ ಸೂಕ್ತ ಸಾಧನ ಪರಿಕರಗಳೂ ಹಾಗೂ ಪರಿಣತ ತಜ್ಞರ ಮೂಲಕವೇ ಈ ತಪಾಸಣೆಯಾಗಬೇಕು.ಈ ಅತ್ಯಾಧುನಿಕ ತಂತ್ರಜ್ಞಾನವು ಐವಿಎಫ್‌ ವೈಫಲ್ಯದಿಂದ ಕಂಗೆಟ್ಟ ದಂಪತಿಗೆ ವರದಾನವಾಗಿದೆ. ಈ ತಂತ್ರಜ್ಞಾನದ ಬಗ್ಗೆ ಯಾವುದೇ ಸಂಶಯಗಳಿದ್ದರೆ ಮಣಿಪಾಲ್‌ ಅಂಕುರ ಸಂಸ್ಥೆಯ ತಂಡವು ಉತ್ತರಿಸಲು ಸದಾ ಸಿದ್ಧವಾಗಿರುತ್ತದೆ.

ಮಾಹಿತಿಗೆ: 1800 208 4444,

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 5/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate