ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆ್ಯಸಿಡ್ ಬಳಕೆ ಅಪಾಯಕಾರಿ

ವಾರಕ್ಕೊಮ್ಮೆ ರಜೆ ಎಂದರೆ ಅಂದು ಹೆಂಗಸರಿಗೆ ದಿನಕ್ಕಿಂತ ಹೆಚ್ಚೇ ಕೆಲಸ. ಏಕೆಂದರೆ ಭಾನುವಾರವೆಂದರೆ ಶ್ರಮದಾನದ ದಿನ! ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಬೆಳಗ್ಗಿನಿಂದಲೇ ಶುರುವಾಗುತ್ತದೆ.

ವಾರಕ್ಕೊಮ್ಮೆ ರಜೆ ಎಂದರೆ ಅಂದು ಹೆಂಗಸರಿಗೆ ದಿನಕ್ಕಿಂತ ಹೆಚ್ಚೇ ಕೆಲಸ. ಏಕೆಂದರೆ ಭಾನುವಾರವೆಂದರೆ ಶ್ರಮದಾನದ ದಿನ! ಮನೆಯನ್ನು ಸ್ವಚ್ಛಗೊಳಿಸುವ ಕೆಲಸ ಬೆಳಗ್ಗಿನಿಂದಲೇ ಶುರುವಾಗುತ್ತದೆ. ಈಗಂತೂ ಪಟ್ಟಣಗಳಲ್ಲಿ ಎಲ್ಲ ಮನೆಗಳಲ್ಲೂ ಎರಡೆರಡು ಬಾತ್‌ರೂಮ್, ಶೌಚಾಲಯ ಕಡ್ಡಾಯವಾಗಿಬಿಟ್ಟಿದೆ. ಎಲ್ಲರಿಗೂ ಅವಸರ ನೋಡಿ…! ಇವುಗಳ ಶುಚಿಕಾರ್ಯಕ್ಕೆ ಭಾನುವಾರ ಮೀಸಲು. ಮನೆ ಜನರಿಗೆಲ್ಲ ಬೈದುಕೊಂಡು, ಎಲ್ಲ ಕೆಲಸವನ್ನೂ ತಾನೊಬ್ಬಳೇ ಮಾಡಬೇಕೆನ್ನುತ್ತ ಮನೆಯೊಡತಿ ಭಾನುವಾರ ಸ್ವಚ್ಛತೆಯ ಕಾರ್ಯ ಆರಂಭಿಸಿದರೆ, ಕೆಲಸದೊಟ್ಟಿಗೆ ಬೈಗುಳವೂ ಸೇರಿ ಜುಗಲ್‌ಬಂದಿ ಏರ್ಪಟ್ಟಿರುತ್ತದೆ! ಶೌಚಾಲಯ ಸ್ವಚ್ಛಗೊಳಿಸಲು ಹೊರಟಾಗಲಂತೂ ಮನೆಯೊಡತಿಯ ಕೈಯಲ್ಲೊಂದು ಆ್ಯಸಿಡ್ ಬಾಟಲ್ ಇರಲೇಬೇಕು!

ಬಹುಪಾಲು ಎಲ್ಲ ಮನೆಗಳಲ್ಲೂ ಶೌಚಾಲಯ ಶುಚಿಗೊಳಿಸುವ ಉಪಯೋಗಿಸುವುದು ಆ್ಯಸಿಡ್‌ಅನ್ನೇ. ಆದರೆ ಆ್ಯಸಿಡ್ ಉಪಯೋಗಿಸುವುದರಿಂದ ಹಲವು ರೀತಿಯ ಆರೋಗ್ಯ ಸಂಬಂಧಿಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಭಾರತೀಯ ವೈದ್ಯಕೀಯ ಸಂಸ್ಥೆ (ಐಎಂಎ) ನಡೆಸಿದ ಈ ಸಂಶೋಧನೆಯಿಂದಾಗಿ ಆ್ಯಸಿಡ್ ಬಳಕೆಯ ಅಪಾಯಗಳು ಗಮನಕ್ಕೆ ಬಂದಿವೆ.

ಈಗಂತೂ ಮಲಗುವ ಕೋಣೆಗೆ ಹೊಂದಿಕೊಂಡೇ ಒಂದು ಶೌಚಾಲಯವಿರುತ್ತದೆ. ಇದನ್ನು ಸ್ವಚ್ಛಗೊಳಿಸುವುದಕ್ಕಾಗಿ ಬಳಸಿದ ಆ್ಯಸಿಡ್ ಇಲ್ಲಿನ ಜನರ ಆರೋಗ್ಯದ ಮೇಲೆ ಅತೀ ಹೆಚ್ಚು ಪರಿಣಾಮ ಬೀರುತ್ತದೆಯಂತೆ. ಉಸಿರಾಟದ ಸಮಸ್ಯೆ, ಅಲರ್ಜಿ, ಕಣ್ಣಿನಲ್ಲಿ ತುರಿಕೆ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಅತಿಯಾದ ಆ್ಯಸಿಡ್ ಬಳಕೆಯ ಕಾರಣ ಎಂಬುದು ಸಂಶೋಧನೆ ದೃಢಪಡಿಸಿದ ವಿಚಾರ.

ಅದರಲ್ಲೂ ಪುಟ್ಟ ಮಕ್ಕಳ ಆರೋಗ್ಯದ ಮೇಲೆ ಇದು ಇನ್ನೂ ಹೆಚ್ಚಿನ ಪರಿಣಾಮ ಬೀರುತ್ತದೆಯಂತೆ. ಇದರ ದುಷ್ಪರಿಣಾಮ ಮೊದಲು ಅರ್ಥವಾಗದಿದ್ದರೂ ಕ್ರಮೇಣ ಇದು ಆರೋಗ್ಯದ ಮೇಲೆ ಬೀರುವ ಪರಿಣಾಮ ಗೋಚರವಾಗುತ್ತದೆ. ಮನುಷ್ಯನನ್ನು ಬಹುಕಾಲದವರೆಗೆ ಕಾಡುವ ಕ್ಷಯ ಮುಂತಾದ ಸಮಸ್ಯೆಗಳೂ ಇದರಿಂದ ಆರಂಭವಾಗಬಹುದು. ಆದ್ದರಿಂದ ಆ್ಯಸಿಡ್ ಬಳಕೆಯನ್ನು ನಿಷೇಧಿಸಿ ಎಂಬುದು ತಜ್ಞರ ಎಚ್ಚರಿಕೆಯ ಮಾತು. ಮನೆ ಸ್ವಚ್ಛವಾಗಿರಬೇಕು ನಿಜ. ಆದರೆ ಸುಲಭವಾಗಿ ಸ್ವಚ್ಛಗೊಳಿಸಬಹುದೆಂಬ ಕಾರಣಕ್ಕೆ ಆ್ಯಸಿಡ್‌ನಂಥ ಅಪಾಯಕಾರಿ ವಸ್ತುಗಳನ್ನು ಬಳಸುವುದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಅಲ್ಲದೆ, ಈ ಆ್ಯಸಿಡ್ ಬಾಟಲ್ ಮಕ್ಕಳ ಕೈಗೆ ಸಿಕ್ಕರೆ, ಅಥವಾ ಅಚಾನಕ್ಕಾಗಿ ದೇಹದ ಮೇಲೆ ಬಿದ್ದರೆ ಮತ್ತಷ್ಟು ಅಪಾಯವಾಗಬಹುದು. ಈ ಎಲ್ಲಾ ಕಾರಣಗಳಿಂದ ಆ್ಯಸಿಡ್ ಅನ್ನು ಉಪಯೋಗಿಸದಿರುವುದು ಒಳಿತು ಎಂಬುದು ಪರಿಣಿತರ ಅಭಿಪ್ರಾಯ.

ಮೂಲ: ವಿಕ್ರಮ

2.91588785047
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top