অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನೈರ್ಮಲ್ಯ ವಿಧಾನ ಮತ್ತು ಉಸಿರಾಟದ ನೈರ್ಮಲ್ಯ

ನೈರ್ಮಲ್ಯ ವಿಧಾನ ಮತ್ತು ಉಸಿರಾಟದ ನೈರ್ಮಲ್ಯ

ನೈರ್ಮಲ್ಯ ವಿಧಾನ
ಮನೆಯಲ್ಲಿನ ಉತ್ತಮ ನೈರ್ಮಲ್ಯವೆಂದರೆ ಗಂಭೀರ ಹಂತಗಳಲ್ಲಿ ನೈರ್ಮಲ್ಯ ವಿಧಾನಗಳ ಮೇಲೆ ಗುರಿಯಿರಿಸುವುದು. ಸೂಕ್ತ ಕಾಲಗಳಲ್ಲಿ ಸೋಂಕಿನ ಸರಪಣಿಯನ್ನು ಒಡೆಯುವುದು ಇದರ ಉದ್ದೇಶವಾಗಿದೆ.
ಅದೆಂದರೆ, ಸೂಕ್ಷ್ಮಜೀವಿಗಳು ಮತ್ತಷ್ಟು ಹರಡುವ ಮೊದಲು ಅದನ್ನು ನಿವಾರಿಸುವುದು. ಏಕೆಂದರೆ, ಕೆಲವು ರೋಗಕಾರಕಗಳಿಗೆ "ಸಾಂಕ್ರಾಮಿಕತೆಯ ಪ್ರಮಾಣವು" ಬಹಳ ಕಡಿಮೆಯಿರಬಹುದು (10-100 ಏಕಮಾನಗಳು, ಅಥವಾ ಕೆಲವು ವೈರಸ್‍ಗಳಿಗೆ ಇನ್ನೂ ಕಡಿಮೆ) ಹಾಗು ರೋಗಕಾರಕಗಳು ಕೈಗಳ ಮೂಲಕ ಅಥವಾ ಆಹಾರವನ್ನು ಬಾಯಿಗೆ ಹಾಕಿಕೊಂಡಾಗ, ಮೂಗಿನ ಲೋಳೆಪೆÇರೆ ಅಥವಾ ಕಣ್ಣಿಗೆ ಮೇಲ್ಮೈ ಮೂಲಕ ನೇರವಾಗಿ ವರ್ಗಾವಣೆಯಾಗುವುದರ ಪರಿಣಾಮವಾಗಿರುತ್ತದೆ.
ಗಂಭೀರ ಮೇಲ್ಮೈಗಳಿಂದ ರೋಗಕಾರಕಗಳನ್ನು ನಿವಾರಿಸಲು ನೈರ್ಮಲ್ಯಕಾರಿ ಶುಚಿತ್ವದ ವಿಧಾನಗಳು ಸಾಕಾಗುತ್ತವೆ. ನೈರ್ಮಲ್ಯ ಶುಚಿತ್ವವನ್ನು ಈ ಕೆಳಕಂಡ ವಿಧಾನದಲ್ಲಿ ಮಾಡಬಹುದು.
ಸಾಬೂನು ಅಥವಾ ಮಾರ್ಜಕವನ್ನು ಬಳಸಿಕೊಂಡು ಯಾಂತ್ರಿಕವಾಗಿ ಶುಚಿಗೊಳಿಸುವುದು. ನೈರ್ಮಲ್ಯದ ಕ್ರಮವು ಪರಿಣಾಮಕಾರಿಯಾಗಬೇಕಾದರೆ, ಮೇಲ್ಮೈಯಿಂದ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸುರಿಯುವ ನೀರಿನಿಂದ ಸಂಪೂರ್ಣವಾಗಿ ತೊಳೆಯುವ ಪ್ರಕ್ರಿಯೆಯನ್ನು ಅನುಸರಿಸಬೇಕು.
ಸ್ಥಳದಲ್ಲಿನ ರೋಗಕಾರಕಗಳನ್ನು ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಅಥವಾ ಉತ್ಪನ್ನವನ್ನು ಬಳಕೆಮಾಡಬೇಕು. ಸೂಕ್ಷ್ಮಜೀವಿಗಳನ್ನು "ಮೈಕ್ರೋ-ಬಯೋಸೈಡಲ್" ಉತ್ಪನ್ನವನ್ನು ಬಳಸಿ ಕೊಲ್ಲಬಹುದು ಉದಾಹರಣೆಗೆ, ಸೋಂಕು ನಿವಾರಕ ಅಥವಾ ಬ್ಯಾಕ್ಟೀರಿಯ ನಿರೋಧಕ ಉತ್ಪನ್ನ ಅಥವಾ ಜಲರಹಿತ ಹ್ಯಾಂಡ್ ಸ್ಯಾನಿಟೈಜರ್ (ಕೈಯನ್ನು ಶುದ್ಧಗೊಳಿಸುವ ಪದಾರ್ಥ) ಅಥವಾ ಶಾಖವನ್ನು ಬಳಸುವ ಮೂಲಕ ನಿಷ್ಕ್ರಿಯಗೊಳಿಸಲಾಗುತ್ತದೆ.
ಕೆಲವೊಂದು ಪರಿಸ್ಥಿತಿಗಳಲ್ಲಿ ಸೂಕ್ಷ್ಮಜೀವಿಯನ್ನು ತೊಲಗಿಸಲು ಅವುಗಳನ್ನು ನಾಶಮಾಡುವ ಪದಾರ್ಥಗಳನ್ನು ಬಳಸಲಾಗುತ್ತದೆ.
ಉದಾಹರಣೆಗೆ ಬಟ್ಟೆಗಳನ್ನು ಹಾಗು ಮನೆಗಳಲ್ಲಿ ಬಳಸಲಾಗುವ ಲಿನಿನ್‍ಗಳಾದ ಚೌಕಗಳು ಹಾಗು ಹಾಸುಹೊದಿಕೆಗಳು ಹಾಗು ದಿಂಬು ಚೀಲಗಳನ್ನು ತೊಳೆದು ಶುದ್ಧಗೊಳಿಸುವುದು.
ಕೈ ನೈರ್ಮಲ್ಯ
ಕೈಯನ್ನು ತೊಳೆಯುವುದು ಅಥವಾ ಸಾಬೂನು ಹಾಗು ನೀರು ಅಥವಾ ನೀರುರಹಿತ ಹ್ಯಾಂಡ್ ಸ್ಯಾನಿಟೈಜರ್ ನ್ನು ಬಳಸಿಕೊಂಡು ಕೈಗಳನ್ನು ತೊಳೆಯುವುದು ಎಂದು ಅರ್ಥನಿರೂಪಣೆ ನೀಡಲಾಗಿದೆ.
ಮನೆ ಹಾಗು ನಿತ್ಯಜೀವನದಲ್ಲಿ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಗಟ್ಟಲು ಕೈಯನ್ನು ಶುಚಿಯಾಗಿಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಕೆಲವೊಂದು ಪರಿಸ್ಥಿತಿಗಳಲ್ಲಿ ಸಾಬೂನಿನಿಂದ ಕೈಯನ್ನು ತೊಳೆಯುವುದು ಆಯ್ಕೆಯಾಗಿರುವುದಿಲ್ಲ (ಉದಾಹರಣೆಗೆ ಸಾರ್ವಜನಿಕ ಸ್ಥಳದಲ್ಲಿ ಕೈಯನ್ನು ತೊಳೆಯುವ ಸೌಲಭ್ಯಗಳಿಲ್ಲದಿರಬಹುದು), ಒಂದು ನೀರಿಲ್ಲದ ಹ್ಯಾಂಡ್ ಸ್ಯಾನಿಟೈಜರ್ ಉದಾಹರಣೆಗೆ ಆಲ್ಕೋಹಾಲ್ ಹ್ಯಾಂಡ್ ಜೆಲ್‍ನ್ನು ಬಳಸಬಹುದು.
ಕೈಯನ್ನು ತೊಳೆಯುವುದರ ಜೊತೆಗೆ ಇದನ್ನೂ ಸಹ ಬಳಸುವುದರಿಂದ "ಸೋಂಕಿಗೆ ಬೇಗನೆ ಈಡಾಗುವವರಲ್ಲಿ" ಅಪಾಯದ ಮಟ್ಟವನ್ನು ತಗ್ಗಿಸುತ್ತದೆ. ಹೆಚ್ಚು ಪರಿಣಾಮಕಾರಿಯಾಗಿರಲು, ಆಲ್ಕೋಹಾಲ್ ಹ್ಯಾಂಡ್ ಜೆಲ್‍ಗಳು 60%v/vಗಿಂತ ಕಡಿಮೆ ಆಲ್ಕೋಹಾಲ್‍ನ್ನು ಹೊಂದಿರಬಾರದು.
ಅಭಿವೃದ್ಧಿಹೊಂದುತ್ತಿರುವ ಹೆಚ್ಚಿನ ರಾಷ್ಟ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಗಳು ಆಯ್ಕೆರಾಹಿತ್ಯವಾಗಿದೆ; ನೀರಿನ ಲಭ್ಯತೆಯು ಒಂದು ಸಮಸ್ಯೆಯಾಗಿರುವ ಪರಿಸ್ಥಿತಿಗಳಲ್ಲಿ, ಸೂಕ್ತ ಪರಿಹಾರಗಳಾದ, ಕಡಿಮೆ ನೀರಿನ ಅಗತ್ಯದ ಟಿಪ್ಪಿ-ಟ್ಯಾಪ್ ಗಳನ್ನು ಬಳಸಬಹುದು, ಜೊತೆಗೆ ಸ್ಥಳೀಯವಾಗಿ ದೊರಕುವ ಪದಾರ್ಥಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ತಯಾರಿಸಬಹುದು. ಕಡಿಮೆ ವರಮಾನವಿರುವ ಸಮುದಾಯಗಳು ಮಣ್ಣು ಅಥವಾ ಬೂದಿಯನ್ನು ಕೆಲವೊಂದು ಬಾರಿ ಸಾಬೂನಿಗೆ ಬದಲಾಗಿ ಬಳಕೆ ಮಾಡಲಾಗುತ್ತದೆ.

ಉಸಿರಾಟದ ನೈರ್ಮಲ್ಯ


ಸರಿಯಾದ ಉಸಿರಾಟ ಹಾಗು ಕೆಮ್ಮುವಾಗ ಹಾಗು ಸೀನುವಾಗ ಕೈಗಳ ನೈರ್ಮಲ್ಯವು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಕುಂಠಿತಗೊಳಿಸುತ್ತದೆ. ಅದರಲ್ಲೂ ವಿಶೇಷವಾಗಿ ಚಳಿಗಾಲ ಹಾಗು ತೀವ್ರ ನೆಗಡಿಯ ಸಂದರ್ಭದಲ್ಲಿ
ನೆಗಡಿ ಹಾಗೂ ಸೀನುಗಳನ್ನು ತಡೆಯಲು ಮೃದುವಾದ ಕಾಗದಗಳನ್ನು ಬಳಸಬಹುದು
ಬಳಸಿದ ನಂತರ ತಕ್ಷಣವೇ ಕಾಗದಗಳನ್ನು ವಿಲೇವಾರಿ ಮಾಡುವುದು
ಕೈಯನ್ನು ತೊಳೆದುಕೊಳ್ಳುವ ಅಥವಾ ಆಲ್ಕೋಹಾಲ್ ಹ್ಯಾಂಡ್ ಸ್ಯಾನಿಟೈಜರ್‍ನ್ನು ಬಳಸುವ ಮೂಲಕ ಕೈಯನ್ನು ಶುದ್ಧಗೊಳಿಸಬೇಕು.

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate