অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-3

ಭಾಗ-3

ನೈರ್ಮಲ್ಯ
ಆದಾಗ್ಯೂ "ಅಪಾಯ"ದ ಗುಂಪಿನಲ್ಲಿರುವ ಪ್ರಭೇದಗಳು ಹೆಚ್ಚು ಬೆದರಿಕೆಯಾಗಿವೆ. ರೋಗಾಣುಗಳು (ಸಂಭಾವ್ಯವಾಗಿ ಸೋಂಕುಕಾರಕ ಬ್ಯಾಕ್ಟೀರಿಯ, ವೈರಸ್ ಮುಂತಾದವು) ಸತತವಾಗಿ ಮ್ಯೂಕಸ್, (ಲೋಳೆ ತುಂಬಿರುವ) ಫೀಸಸ್(ಅಮೇಧ್ಯ), ವಾಂತಿ, ಚರ್ಮದ ಪದರಗಳ ಮೂಲಕ ಈ ಮೂಲಗಳಿಂದ ಪಸರಿಸುತ್ತವೆ.
ಈ ರೀತಿಯಾಗಿ, ಇಂತಹ ಪರಿಸ್ಥಿತಿಗಳು ಒಟ್ಟುಗೂಡಿದರೆ, ಜನರು ಇದಕ್ಕೆ ನೇರವಾಗಿ ಅಥವಾ ಆಹಾರ ಅಥವಾ ನೀರಿನ ಮೂಲಕವಾಗಿ ಒಡ್ಡಿಕೊಂಡಾಗ, ಸೋಂಕು ಬೆಳವಣಿಗೆಯಾಗಬಹುದು.
ಮನೆಯಲ್ಲಿ ರೋಗಾಣುಗಳು ಹರಡುವ "ಪ್ರಮುಖ ಮಾರ್ಗಗಳೆಂದರೆ" ಕೈಗಳು, ಕೈ ಹಾಗು ಆಹಾರವನ್ನು ಸ್ಪರ್ಶಿಸುವ ಮೇಲ್ಮೈಗಳು ಹಾಗು ಒಗೆಯುವ ಬಟ್ಟೆಗಳು ಹಾಗು ಪಾತ್ರೆಗಳು. ರೋಗಾಣುಗಳು ಬಟ್ಟೆ ಹಾಗು ಮನೆಬಳಕೆಯ ಲಿನಿನ್‍ಗಳಾದ ಟವಲ್‍ಗಳ ಮೂಲಕವೂ ಸಹ ಹರಡಬಹುದು.
ಉದಾಹರಣೆಗೆ, ಶೌಚಾಲಯಗಳು ಹಾಗು ವಾಶ್ ಬೇಸಿನ್‍ಗಳಂತಹ ಉಪಯುಕ್ತತೆಗಳನ್ನು ಮಾನವ ತ್ಯಾಜ್ಯದ ಸುರಕ್ಷಿತ ವಿಲೇವಾರಿಗಾಗಿ ಸಂಶೋಧಿಸಲಾಯಿತು. ಆದರೆ ಇವುಗಳು ಇನ್ನೂ ತಮ್ಮೊಂದಿಗೆ ಅಪಾಯಗಳನ್ನು ಹೊಂದಿವೆ, ಇದು ಕೆಲವೊಂದು ಸಮಯದಲ್ಲಿ ತೀವ್ರತರ ಸಮಸ್ಯೆಯಾಗಿ ಪರಿಣಮಿಸಬಹುದು.
ಉದಾಹರಣೆಗೆ, ಒಬ್ಬ ವ್ಯಕ್ತಿಯು ಅಸ್ವಸ್ಥನಾಗಿದ್ದರೆ ಅಥವಾ ಅತಿಸಾರದಿಂದ ಬಳಲುತ್ತಿದ್ದಾಗ, ಗಂಭೀರವಾಗಿ ಪರಿಣಮಿಸಬಹುದು. ಮಾನವ ತ್ಯಾಜ್ಯದ ಸುರಕ್ಷಿತ ವಿಲೇವಾರಿಯು ಒಂದು ಮೂಲಭೂತ ಅಗತ್ಯವಾಗಿದೆ; ಕಡಿಮೆ ಆದಾಯವನ್ನು ಹೊಂದಿರುವ ಸಮುದಾಯಗಳಲ್ಲಿ ಕಳಪೆ ನೈರ್ಮಲ್ಯದಿಂದ ಅತಿಸಾರದಂತಹ ಕಾಯಿಲೆಗಳು ಉಂಟಾಗಲು ಮುಖ್ಯ ಕಾರಣವಾಗಿದೆ. ಉಸಿರಾಟದ ಮೂಲಕ ಹರಡುವ ವೈರಸ್ ಗಳು ಹಾಗು ಶಿಲೀಂಧ್ರದ ಬೀಜಕಣಗಳು ಸಹ ಗಾಳಿಯ ಮೂಲಕ ಹರಡುತ್ತದೆ.

ಮೂಲ : ಜಿ ನ್ಯೂಸ್ ೫

ಕೊನೆಯ ಮಾರ್ಪಾಟು : 4/25/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate