অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಾಮಾನ್ಯ ಸಮಸ್ಯೆ

ಹೆರಿಗೆ ಬಳಿಕ ಕಂಡುಬರುವ ಸಾಮಾನ್ಯ ಸಮಸ್ಯೆಗಳು

ಗರ್ಭಧಾರಣೆ ಎನ್ನುವುದು ಮಹಿಳೆಯ ಜೀವನದಲ್ಲೂ ಮಹತ್ವದ ಬದಲಾವಣೆ ತರುವ ಸಮಯವಾಗಿದೆ. ನೀವು ಹೊಸ ಜೀವನಕ್ಕೆ ತಯಾರಾದಾಗ ಭಾವನಾತ್ಮಕ ಹಾಗೂ ದೈಹಿಕ ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. 9 ತಿಂಗಳ ಗರ್ಭಧಾರಣೆ ವೇಳೆ ನೀವು ಸರಿಯಾಗಿ ತಿನ್ನಬೇಕು ಮತ್ತು ಚೆನ್ನಾಗಿ ನಿದ್ರೆ ಮಾಡಬೇಕು. ನಿಮ್ಮೊಳಗೆ ನೀವು ತಾಯಿಯನ್ನು ರೂಪಿಸಬೇಕು.

ನಿಮ್ಮ ಸಾಮಾನ್ಯ ಹೆರಿಗೆ ಎಷ್ಟು ಕಠಿಣವೆನ್ನುವುದು ವಿಷಯವಲ್ಲ. ನಿಮ್ಮ ಪುಟ್ಟ ಮಗುವಿನ ಮುಖವನ್ನು ನೋಡಿದ ತಕ್ಷಣ ಎಲ್ಲಾ ನೋವು ಕಷ್ಟಗಳು ನಿವಾರಣೆಯಾಗುತ್ತದೆ. ಆದರೆ ಕೆಲವೊಂದು ಸಲ ಸಾಮಾನ್ಯ ಹೆರಿಗೆಯೂ ತನ್ನದೇ ಆದ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಾಮಾನ್ಯ ಹೆರಿಗೆಯ ಬಳಿಕ ಹೆಚ್ಚಿನ ಕಾಳಜಿಯಿಂದ ನೀವಿರುವುದು ತುಂಬಾ ಮುಖ್ಯ. ಸಾಮಾನ್ಯ ಹೆರಿಗೆಯು ತನ್ನದೇ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ಹೊಂದಿದೆ. ಸಾಮಾನ್ಯ ಹೆರಿಗೆಯ ಬಳಿಕ ಆಗುವಂತಹ ಕೆಲವೊಂದು ಸಮಸ್ಯೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಆದರೆ ಇದು ನಿಮಗೆ ಭೀತಿ ಹುಟ್ಟಿಸಲು ಅಥವಾ ದುಸ್ವಪ್ನವಾಗಿ ಕಾಡಲು ಬರೆದಿರುವ ಲೇಖನವಲ್ಲ.

ಯೋನಿ ನೋವು

ಸಾಮಾನ್ಯ ಹೆರಿಗೆಯ ವೇಳೆ ಯೋನಿಯ ಅಂಗಾಂಶಗಳು ಹರಿದುಹೋಗಬಹುದು ಅಥವಾ ತರಚಿಹೋಗಬಹುದು. ಇದರಿಂದ ಈ ಪ್ರದೇಶದಲ್ಲಿ ತುಂಬಾ ನೋವು ಕಾಣಿಸಿಕೊಂಡು ಕೆಲವು ಸಮಯ ಹಾಗೆ ಇರಬಹುದು. ಈ ಗಾಯವನ್ನು ತುಂಬಾ ಸ್ವಚ್ಛವಾಗಿಡಬೇಕು. ಇದು ಸಾಮಾನ್ಯ ಹೆರಿಗೆ ಬಳಿಕ ಉಂಟಾಗುವ ಸಮಸ್ಯೆಗಳಲ್ಲಿ ಒಂದಾಗಿದೆ.

ಸೋಂಕು

ಸಾಮಾನ್ಯ ಹೆರಿಗೆ ಬಳಿಕ ಆಗುವ ಸಮಸ್ಯೆಯೆಂದರೆ ಅದು ಸೋಂಕು. ಮಗುವಿನ ಜನನದ ವೇಳೆ ಯೋನಿ ಪ್ರದೇಶದಲ್ಲಿ ಸೀಳಿದ ಅಥವಾ ತರುಚಿದ ಗಾಯವಾಗಬಹುದು. ಇದು ಸೋಂಕಿಗೆ ಕಾರಣವಾಗಬಹುದು. ಈ ಸೋಂಕನ್ನು ಆ್ಯಂಟಿಬಯೋಟಿಕ್ಸ್ ನಿಂದ ನಿವಾರಿಸಬಹುದು.

ರಕ್ತಸ್ರಾವ

ಸಾಮಾನ್ಯ ಹೆರಿಗೆಯ ಬಳಿಕ ರಕ್ತಸ್ರಾವ ಅಥವಾ ಅತಿಯಾದ ರಕ್ತ ಹೊರಹೋಗುವುದು ಪ್ರಮುಖ ಸಮಸ್ಯೆಗಳಲ್ಲಿ ಒಂದು. ಇದನ್ನು ಸರಿಯಾದ ರೀತಿಯಲ್ಲಿ ನಿಲ್ಲಿಸದಿದ್ದರೆ ಯೋನಿಯ ಹರಿದ ಜಾಗದಲ್ಲಿ ರಕ್ತ ಸಂಗ್ರಹಣೆಯಾಗಿ ಅದು ಹೆಮಟೋಮಾ ರಚನೆಗೆ ಕಾರಣವಾಗಬಹುದು.

ಮರು ಹೊಲಿಗೆ

ಇದು ಯೋನಿಯ ಹರಿದ ಭಾಗದ ಸಮಸ್ಯೆ. ಸಾಮಾನ್ಯ ಹೆರಿಗೆ ವೇಳೆ ಉಂಟಾಗುವ ಹೆಮಟೋಮಾ ರಚನೆ ಸಮಸ್ಯೆ ಕ್ಲಿಷ್ಟಗೊಳಿಸಬಹುದು. ಕೆಲವೊಂದು ಸಂದರ್ಭದಲ್ಲಿ ಆ ಪ್ರದೇಶವನ್ನು ಸೀಳುವಿಕೆಯನ್ನು ಮರುತೆರೆದು ರಕ್ತ ಒಣಗುವಂತೆ ಮಾಡಬೇಕು.

ಗರ್ಭಕಂಠದ ನ್ಯೂನತೆ

ಸಾಮಾನ್ಯ ಹೆರಿಗೆ ವೇಳೆ ಉಂಟಾಗುವ ಅತ್ಯಂತ ಸಾಮಾನ್ಯ ಸಮಸ್ಯೆ ಇದಾಗಿದೆ. ಹೆರಿಗೆ ವೇಳೆ ಗರ್ಭಕಂಠಕ್ಕೆ ಹಾನಿಯಾಗಬಹುದು ಅಥವಾ ದುರ್ಬಲವಾಗಬಹುದು. ಇದರಿಂದ ಗರ್ಭಕಂಠದ ನ್ಯೂನತೆ ಉಂಟಾಗಬಹುದು. ಇದು ಮುಂದಿನ ಹೆರಿಗೆ ವೇಳೆ ಸಮಸ್ಯೆಗೆ ಕಾರಣವಾಬಹುದು.

ಮೂತ್ರವಿಸರ್ಜನೆ ಸಮಸ್ಯೆ

ಸಾಮಾನ್ಯ ಹೆರಿಗೆ ಬಳಿಕ ಕಾಣಿಸಿಕೊಳ್ಳುವ ಈ ಸಾಮಾನ್ಯ ಸಮಸ್ಯೆ ತನ್ನಷ್ಟಕ್ಕೇ ಪರಿಹಾರವಾಗುತ್ತದೆ. ಹೆರಿಗೆಯಾದ ಕೂಡಲೇ ಮೂತ್ರವಿಸರ್ಜನೆ ತುಂಬಾ ಕಷ್ಟವಾಗುತ್ತದೆ. ಯಾಕೆಂದರೆ ಕೋಮಲ ಮೂಲಾಧಾರದ ತಳಭಾಗದ ಪ್ರದೇಶ ಹಾಗೂ ಬಾವುವಿಗೆ ಮೂತ್ರ ಚುಚ್ಚುವುದರಿಂದ ಅಥವಾ ಮೂತ್ರಕೋಶದ ಸುತ್ತಲಿನ ಅಂಗಾಂಶಗಳಿಗೆ ತಿಕ್ಕುವುದರಿಂದ.

ಮಷ್ಟಿನ ಅಸಂಯಮ

ಸಾಮಾನ್ಯ ಹೆರಿಗೆ ಬಳಿಕ ಉಂಟಾಗುವ ಮತ್ತೊಂದು ಸಮಸ್ಯೆಯೆಂದರೆ ಅದು ಮಷ್ಟಿನ ಅಸಂಯಮ. ಇದು ಕರುಳಿನ ಚಲನೆ ನಿಯಂತ್ರಿಸಲು ಅಸಮರ್ಥವಾಗುವುದು. ದೀರ್ಘ ಸಮಯದವರೆಗೆ ಹೆರಿಗೆ ನೋವು ಅನುಭವಿಸಿದ ಮಹಿಳೆಯರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಮಗುವಿಗೆ ಸಮಸ್ಯೆ

ಜನನದ ವೇಳೆ ಭ್ರೂಣದ ಸ್ಥಾನದಿಂದ ಈ ರೀತಿಯ ಸಮಸ್ಯೆ ಕಾಣಿಸುತ್ತದೆ. ಸಾಮಾನ್ಯವಾಗಿ ಮಗುವಿನ ತಲೆ ಕೆಳಗಿರಬೇಕು. ಮಗು ಇತರ ಯಾವುದೇ ಸ್ಥಿತಿಯಲ್ಲಿದ್ದರೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಯಾಂತ್ರಿಕ ಭ್ರೂಣದ ಗಾಯ

ಸಾಮಾನ್ಯ ಹೆರಿಗೆ ಬಳಿಕ ಕಾಣಿಸಿಕೊಳ್ಳುವ ಸಮಸ್ಯೆಯೆಂದರೆ ಭ್ರೂಣಕ್ಕೆ ಗಾಯವಾಗುವುದು. ಮಗು ತುಂಬಾ ದೊಡ್ಡದಿದ್ದರೆ ಅಥವಾ ತಾಯಿಗೆ ಬೊಜ್ಜಿದ್ದರೆ ಆಗ ಅಪಾಯದ ಸಾಧ್ಯತೆ ತುಂಬಾ ಹೆಚ್ಚು. ಆದರೆ ಈ ಸಮಸ್ಯೆಯನ್ನು ಬೇಗನೆ ನಿವಾರಿಸಬಹುದು.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate