অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗರ್ಭಿಣಿಯರಲ್ಲಿ ಸಮಸ್ಯೆಗಳು

ಗರ್ಭಿಣಿಯರಲ್ಲಿ ಸಮಸ್ಯೆಗಳು

  • ಒಲಿಗೋ ಹೈಡ್ರಾಮ್ನಿಯಾಸ್‌
  • ಆಮ್ನಿಯಾಟಿಕ್‌ ದ್ರವವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಅತಿ ಮುಖ್ಯ ಪಾತ್ರವಹಿಸುತ್ತದೆ. ಈ ವರ್ಣರಹಿತ ದ್ರವವು ಮಗುವನ್ನು ರಕ್ಷಿಸುವುದು ಮತ್ತು ಅದಕ್ಕೆ ದ್ರವವನ್ನು ಒದಗಿಸುವುದು. ಮಗುವು ದ್ರವವನ್ನು ಸೇವಿಸುವ ಮೂಲಕವೇ ಉಸಿರಾಟ ನಡೆಸುವುದು. ಇದು ಮಗುವಿನ ಶ್ವಾಸಕೋಶ ಜೀರ್ಣಾಂಗಗಳನ್ನು ಬಲವಾಗಿಸುವುದು. ಇದು ಮಗುವು ಸರಾಗವಾಗಿ ಚಲಿಸಲು ಮತ್ತು ಅದರ ಸ್ನಾಯು ಮತ್ತು ಮೂಳೆಗಳ ಅಭಿವೃದ್ಧಿಗೆ ಕಾರಣವಾಗಿದೆ.

  • ಮೋಲಾರ್‌ ಗರ್ಭಧಾರಣೆ
  • ಮೋಲಾರ್‌ ಗರ್ಭಧಾರಣೆಯೆ ಮಹಿಳೆಯರಲ್ಲಿ ವಿರಳವಾದ ಸಮಸ್ಯೆ . ಗರ್ಭ ಫಲಿತಗೊಳ್ಳುವ ಸಮಯದಲ್ಲಿ ಏನಾದರೂ ದೋಷವಾದಾಗ ಈ ಸಮಸ್ಯೆ ತಲೆದೋರುತ್ತದೆ. ಮಾಸವನ್ನು ಸೃಜಿಸುವ ಜೀವಕೋಶಗಳ ಅಸಹಜ ಬೆಳವಣಿಗೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ಮೋಲಾರ್‌ ಗರ್ಭವನ್ನು ಕೆಲಬಾರಿ ಹೈಡಾಟಿಡಿ ಫಾರ್ಮ್‌ ಎನ್ನುವರು. ಈ ಬೆಳವಣಿಗೆಯನ್ನು ಗೆಸ್ಟೇಶನಲ್‌ ಟ್ರೊಫೊಬ್ಲಾಸ್ಟಿಕ್‌ ಟ್ಯೂಮರ್ಸ್‌ ಎಂದೂ ಕರೆಯುತ್ತಾರೆ. ಅವು ಕ್ಯಾನ್ಸರ್‌ಕಾರಿಯಲ್ಲ. ಅವು ಅಂಡಾಶಯದಿಂದ ಹೊರೆಗೆ ಹರಡುವ ಸಾಧ್ಯತೆಯಿದ್ದರೂ ಅವುಗಳನ್ನು ಗುಣ ಪಡಿಸಬಹುದು.

  • ಸರ್ವೆಕಲ್‌
  • ಕೆಲವು ಸಲ ಸರ್ವಿಕಲ್‌ನ ಯೋನಿ ಭಾಗದ ಸಂಕೋಚನವು (ಯೋನಿಯ ಸಂಕುಚನ ಮತ್ತು ಭಿತ್ತಿ ತೆಳುವಾಗುವುದು) ವಿಸ್ತರಿಸಲು ಎಷ್ಟೋಸಲ ಅದಕ್ಕೆ ಹೆರಿಗೆ ನೋವು ಕಾರಣವಾಗುವುದಿಲ್ಲ. ಆದರೆ ಸರ್ವೆಕ್ಸ್‌ನ ರಚನಾ ದೌರ್ಬಲ್ಯದಿಂದ ಉಂಟಾಗುತ್ತದೆ. ಇದನ್ನು ಸರ್ವೆಕಲ್‌ ಅಸಮರ್ಥತೆ ಎನ್ನುವರು. ಈ ದೌರ್ಬಲ್ಯವು ಅನೇಕ ಕಾರಣಗಳಿಂದ ಉಂಟಾಗಬಹುದು. ಹೆಚ್ಚಾಗಿ ಸರ್ವೆಕ್ಸ್ ಗೆ ಆದ ಹಳೆಯ ಗಾಯ ಅಥವಾ ವಂಶಪಾರಂಪರ್ಯವಾಗಿ ಬಂದ ಸರ್ವೆಕ್ಸ್‌ನ ಆಕೃತಿ ಆಗಿರಬಹುದು.ಎರಡನೇ ತ್ರೈಮಾಸಿಕದಲ್ಲಿ ಆಗುವ ಒಟ್ಟಾರೆ ಗರ್ಭಪಾತಗಳಲ್ಲಿ ಶೇ. ೧೫-೨೦ ವರೆಗಿನ ಗರ್ಭನಾಶಕ್ಕೆ ಸರ್ವಿಕಲ್‌ ಅಸಮರ್ಥತೆಯು ಕಾರಣ.

  • ಸೋಂಕುರೋಗಗಳು
  • ಗರ್ಭಿಣಿಯಲ್ಲಿ ಸೋಂಕುರೋಗಗಳು ಹರಡುವ ಬಗೆ,ಮಗುವಿಗಿರುವ ಅಪಾಯ?,ತಡೆಯುವುದು ಹೇಗೆ/ಚಿಕಿತ್ಸೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

  • ಹುಸಿಗರ್ಭ
  • ಫಲಿತವಾದ ಅಂಡಾಣುವು ಗರ್ಭಾಶಯದ ಗೋಡೆಗೆ ಅಂಟಿಕೊಂಡಾಗ ಹುಸಿ ಗರ್ಭವು ಉಂಟಾಗುತ್ತದೆ. ಭ್ರೂಣವು ಬೆಳೆಯುವುದಿಲ್ಲ. ಜೀವಕೋಶಗಳು ಭ್ರೂಣವನ್ನು ಹೊಂದಿರುವ ಚೀಲವನ್ನು ರಚಿಸುತ್ತವೆಯೇ ವಿನಃ ಭ್ರೂಣವನ್ನಲ್ಲ. ಇದು ಸಾಧಾರಣವಾಗಿ ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಆಗುತ್ತದೆ. ಮಹಿಳೆಗೆ ತಾನು ಗರ್ಭವತಿ ಎಂಬುದೇ ತಿಳಿದಿರುವುದಿಲ್ಲ. ಹೆಚ್ಚಿನ ಮಟ್ಟದ ವರ್ಣತಂತುಗಳ ಅಸಹಜತೆಯು ಕಂಡುಬಂದರೆ ನೈಸರ್ಗಿಕವಾಗಿ ಗರ್ಭಸ್ರಾವವಾಗುವುದು.

  • ಹೈಡ್ರಾಮ್ನಿಯಾಸ್‌
  • ಹೈಡ್ರಾಮ್ನಿಯಾಸ್‌ ಎಂಬುದು ಗರ್ಭಿಣಿಯಾಗಿದ್ದಾಗ ಅತಿ ಹೆಚ್ಚು ಅಮ್ನಿಯಾಟಿಕ್‌ ದ್ರವಸಂಗ್ರಹವಾಗುವ ಸ್ಥಿತಿ. ಇದನ್ನು ಅಮ್ನಿಯೋಟಿಕ್‌ ದ್ರವದ ಏರುಪೇರು ಪಾಲಿ ಹೈಡ್ರಾಮ್ನಿಯಾಸ್‌ ಎಂದೂ ಕರೆಯುವರು.

    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate