ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಆರ್ಥಿಕ ಸೇರ್ಪಡೆ / ಪ್ರಧಾನ ಮಂತ್ರಿ ಮುದ್ರಾ ಯೋಜನೆ
ಹಂಚಿಕೊಳ್ಳಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಪ್ರಧಾನ ಮಂತ್ರಿ ಮುದ್ರಾ ಯೋಜನೆ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಭಾರತ ಸರ್ಕಾರದ ಒಂದು ಪ್ರಮುಖ ಯೋಜನೆ ಯಾಗಿದೆ "ಅನಿಧಿತರಿಗೆ  ನಿಧಿ" ಒದಗಿಸುವುದರ ಮೂಲಕ ಉದ್ಯಮಗಳು, ಔಪಚಾರಿಕ ಆರ್ಥಿಕ ವ್ಯವಸ್ಥೆಗೆ ಉತ್ತಮ ಮುನ್ನುಡಿಯಾಗಿದೆ.ಇದು ಸಣ್ಣ ಮತ್ತು ಅತಿಸಣ್ಣ ಉದ್ಯಮದಾರರಿಗೆ ಕೃಷಿಯೇತರ ಆದಾಯದ ಚಟುವಟಿಕೆಗಳಿಗೆ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್,ವಿದೇಶಿ ಬ್ಯಾಂಕುಗಳು, ಕಿರು ಹಣಕಾಸು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC) ಇವುಗಳ ಮೂಲಕ ಹತ್ತು ಲಕ್ಷ ರೂಪಾಯಿ ವರಿಗೆ ಸಾಲಪಡೆಯಲು ಎಡೆಮಾಡಿಕೊಡುತ್ತದೆ. ಈ ಯೋಜನೆಯನ್ನು ಮಾನ್ಯ ಪ್ರಧಾನ ಮಂತ್ರಿಗಳು 8 ನೇ ಏಪ್ರಿಲ್, 2015 ರಂದು ಬಿಡುಗಡೆ ಮಾಡಿದರು

ಅರ್ಹತೆ

ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ 10 ಲಕ್ಷದ ವರೆಗೆ ಸಾಲಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.

ವಿವಿಧ ರೀತಿಯ ಸಾಲಗಳು

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ, ಈ ಕೆಳಗಿನ ಸಾಲ ಯೋಜನೆಗಳು ಲಭ್ಯವಿರುತ್ತದೆ

ಶಿಶು: ರೂ . 50,000/- ವರೆಗೆ ಒಳಗೊಂಡ ಸಾಲ

ಕಿಶೋರ್: - ರೂ 50,000 /- ದಿಂದ ರೂ 5 ಲಕ್ಷ ವರೆಗೆ ಸಾಲ

ತರುಣ್: ರೂ 5 ಲಕ್ಷ ದಿಂದ ರೂ. 10 ಲಕ್ಷ ವರೆಗೆ ಸಾಲ

ಉಲ್ಲೇಖಿತ  'ಶಿಶು', 'ಕಿಶೋರ್' ಮತ್ತು 'ತರುಣ್' ಹೆಸರುಗಳು  ಫಲಾನುಭವಿಗಳ / ವಾಣಿಜ್ಯೋದ್ಯಮಿ ಗಳ  ಬೆಳವಣಿಗೆ / ಅಭಿವೃದ್ಧಿ ಮತ್ತು ಹಣಕಾಸು ಅಗತ್ಯಗಳನ್ನು ಹಂತ ಹಂತ ವಾಗಿ ಪ್ರತಿನಿಧಿಸುತ್ತದೆ.

ಶೇಕಡ ಅರವತ್ತರಷ್ಟು ಆದ್ಯತೆಯು 'ಶಿಶು' ಫಲಾನುಭವಿಗಳಿಗೆ ಮತ್ತು ಒಳಿದ ವರ್ಗಗಳಿಗೆ ನಂತರದ  ಆದ್ಯತೆ ಯನ್ನು ನೀಡಲಾಗುವುದು. PMMY ಅಡಿಯಲ್ಲಿ ನೀಡಿದ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ, ಆದಾಗ್ಯೂ, ಸಾಲ ಪ್ರಸ್ತಾಪವು ಕೆಲವು ಸರ್ಕಾರಿ ಯೋಜನೆ ಲಿಂಕ್ ಆಗಿದ್ದ  ವೇಳೆ, ಅದರಲ್ಲಿ  ಸರ್ಕಾರದ ಬಂಡವಾಳ ಸಬ್ಸಿಡಿ ಒದಗಿಸುವ ಆಯ್ಕೆ ಇದ್ದರೆ ,  ಆ ಸಮಯದಲ್ಲಿ PMMY ಅಡಿಯಲ್ಲಿ ಅರ್ಹತೆಯನ್ನು  ಪಡೆದಿರುತ್ತದೆ

ಒಳಗೊಂಡಿರುವ ಕ್ಷೇತ್ರಗಳು

ನಿರ್ದಿಷ್ಟ ವ್ಯಾಪಾರ ಚಟುವಟಿಕೆಗಳು, ನಿರ್ಧಿಷ್ಟ ಕ್ಷೇತ್ರದಲ್ಲಿ ಚಟುವಟಿಕೆ ಅಗತ್ಯಗಳನ್ನು ಪೂರೈಸಲು ಫಲಾನುಭವಿಗಳಿಗೆ ಬೇಕಾದ ಅಗತ್ಯತೆ ಕಡೆಗೆ ಗಮನ ಹರಿಸಲಾಗುತ್ತದೆ. ಮೊದಲಿಗೆ ಹೆಚ್ಚಿನ ಸಾಂದ್ರತೆಯ ಆಧಾರದ ಮೇಲೆ ಕೆಲವು ಚಟುವಟಿಕೆಗಳು / ಕ್ಷೇತ್ರಗಳಲ್ಲಿ ವ್ಯವಹಾರಗಳಿಗೆ, ಯೋಜನೆಗಳನ್ನು ಸೂಚಿಸಲಾಗುತ್ತದೆ

ಸಾರಿಗೆ ವಲಯ / ಚಟುವಟಿಕೆ - ಇದು  ಆಟೋ ರಿಕ್ಷಾ, ಸಣ್ಣ ಸರಕುಗಳು ಸಾರಿಗೆ ವಾಹನ, 3 ಚಕ್ರ ವಾಹನ, ಇ-ರಿಕ್ಷಾ, ಕಾರು, ಟ್ಯಾಕ್ಸಿ, ಇತ್ಯಾದಿ ಸರಕು ಮತ್ತು  ಸಾರಿಗೆ ವಾಹನಗಳ ಖರೀದಿಯನ್ನು ಬೆಂಬಲಿಸುತ್ತದೆ

ಸಮುದಾಯ, ಸಾಮಾಜಿಕ ಮತ್ತು  ವೈಯಕ್ತಿಕ ಸೇವೆ ಚಟುವಟಿಕೆಗಳು:

ಸಲೂನ್, ಬ್ಯೂಟಿಪಾರ್ಲರ್ ಗಳು,ವ್ಯಾಯಾಮಶಾಲೆ, ಅಂಗಡಿಗಳು, ಹೊಲಿಗೆ ಅಂಗಡಿಗಳು, ಡ್ರೈ ಕ್ಲೀನಿಂಗ್, ಸೈಕಲ್ ಮತ್ತು ಮೋಟರ್ ರಿಪೇರಿ ಮಾಡುವ ಅಂಗಡಿ, DTP ಮತ್ತು  ಜೆರಾಕ್ಸ್ , ಮೆಡಿಸಿನ್ ಅಂಗಡಿಗಳು, ಕೊರಿಯರ್ ಏಜೆಂಟ್ಸ್, ಇತ್ಯಾದಿಗಳಿಗೆ

ಆಹಾರ ಉತ್ಪನ್ನಗಳ ವಲಯ

 

ಹಪ್ಪಳ ತಯಾರಿಕೆ, ಅಚಾರ್ ತಯಾರಿಕೆ, ಜಾಮ್ / ಜೆಲ್ಲಿ ತಯಾರಿಕೆ, ಗ್ರಾಮೀಣ ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಸಂರಕ್ಷಣೆ, ಸಿಹಿ ಅಂಗಡಿಗಳು, ಸಣ್ಣ ಸೇವೆ ಆಹಾರ ಮಳಿಗೆಗಳು ಮತ್ತು  ಅಡುಗೆ / ಕ್ಯಾಂಟೀನ್ ಸೇವೆಗಳು, ಶೀತಲ ಸರಪಳಿ ವಾಹನಗಳು ಶೀತ ಉಗ್ರಾಣಗಳ ಚಟುವಟಿಕೆ, ಐಸ್ ತಯಾರಿಕೆ ಘಟಕಗಳು, ಐಸ್ ಕ್ರೀಮ್ ಮಾಡುವ ಘಟಕಗಳು, ಬಿಸ್ಕತ್ತು, ಬ್ರೆಡ್ ಮತ್ತು ಬನ್ ತಯಾರಿಕೆ, ಇತ್ಯಾದಿ ಗಳಿಗೆ ಬೆಂಬಲ ಒದಗಿಸುವುದಾಗಿದೆ

ಜವಳಿ ಉತ್ಪನ್ನಗಳ ಕ್ಷೇತ್ರ

ಕೈಮಗ್ಗ, ಮಗ್ಗ, ಚಿಕನ್ ಕೆಲಸ, ಜರಿ ಮತ್ತು ಝರ್ದೋಝಿ ಕೆಲಸ, ಸಾಂಪ್ರದಾಯಿಕ ಕಸೂತಿ ಮತ್ತು ಕೈ ಕೆಲಸ, ಸಾಂಪ್ರದಾಯಿಕ ಬಣ್ಣ ಮತ್ತು ಮುದ್ರಣ, ಉಡುಪು ವಿನ್ಯಾಸ, ಹೆಣಿಗೆ, ಹತ್ತಿ ಬೆಸೆಯುವುದು, ಗಣಕೀಕೃತ ಕಸೂತಿ, ಹೊಲಿಗೆ ಮತ್ತು ಜವಳಿ ಉಡುಪು, ಮತ್ತು ಅದಕ್ಕೆ ಸಂಭದಪಟ್ಟ ಉತ್ಪನ್ನಗಳ ಚಟುವಟಿಕೆ, ಚೀಲಗಳು, ವಾಹನ ಭಾಗಗಳು, ಸಜ್ಜುಗೊಳಿಸುವ ಭಾಗಗಳು, ಇತ್ಯಾದಿ ಜವಾಬ್ದಾರಿ ಗಳನ್ನು ಬೆಂಬಲಿಸುತ್ತವೆ

ಅರ್ಜಿ ಸಲ್ಲಿಸುವುದು ಹೇಗೆ

ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ನೆರವು ಪಡೆಯಲು ಬಯಸುವವರು, ತಮ್ಮ ಪ್ರದೇಶದಲ್ಲಿರುವ ಪಿಎಸ್ಯು ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕ್ಗಳ ವಿದೇಶಿ ಬ್ಯಾಂಕುಗಳು, ಮೈಕ್ರೋ ಫೈನಾನ್ಸ್ -  ಹಣಕಾಸು ಸಂಸ್ಥೆಗಳು ಯಾವುದೇ ಸ್ಥಳೀಯ ಶಾಖೆಗೆ ಸಂಪರ್ಕಿಸಬೇಕು ಸಂಸ್ಥೆಗಳು (MFI) ಮತ್ತು ನಾನ್ ಬ್ಯಾಂಕಿಂಗ್ ಹಣಕಾಸು ಕಂಪನಿಗಳು (NBFC). ನೆರವು ಸ್ಯಾಂಕ್ಷನ್ ಆಯಾ ಸಾಲ ಸಂಸ್ಥೆಯಲ್ಲಿ ಅರ್ಹತಾ ರೂಢಿಗಳನ್ನು ಪ್ರಕಾರ ಗಳ ವಿವರಣೆ ಯನ್ನು ನೀಡಲಾಗುವದು

ಅರ್ಜಿ ಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು


 • ಗುರುತಿನ ಪ್ರಮಾಣ -  ಸ್ವಯಂ ದೃಢೀಕರಿಸಿದ  ಮತದಾರರ ಐಡಿ ಕಾರ್ಡ್ / ಚಾಲಕ ಪರವಾನಗಿಯ / ಪ್ಯಾನ್ ಕಾರ್ಡ್ / ಆಧಾರ್ r ಕಾರ್ಡ್ / ಪಾಸ್ಪೋರ್ಟ್ / ಫೋಟೋ ID ಗಳು
 • ನಿವಾಸ ಪುರಾವೆ : ಇತ್ತೀಚಿನ ದೂರವಾಣಿ ಬಿಲ್ / ವಿದ್ಯುತ್ ಬಿಲ್ / ಆಸ್ತಿ ತೆರಿಗೆ ಸ್ವೀಕೃತಿ (ಹಳೆಯ 2 ತಿಂಗಳ) / ಮತದಾರರ ಐಡಿ ಕಾರ್ಡ್ / ಆಧಾರ್ ಕಾರ್ಡ್ / ಬ್ಯಾಂಕ್ ಠೇವಣಿ ಪುಸ್ತಕ ಅಥವಾ ಇತ್ತೀಚಿನ ಖಾತೆ ಹೇಳಿಕೆಯ ಪಾಸ್ಪೋರ್ಟ್ ತಕ್ಕಂತೆ ಬ್ಯಾಂಕ್ ಅಧಿಕಾರಿಗಳು ದೃಢೀಕರಿಸಿದ / ವಸತಿ ಪ್ರಮಾಣಪತ್ರ / ಸರಕಾರ ಪ್ರಾಧಿಕಾರ / ಸ್ಥಳೀಯ ಪಂಚಾಯತ್ / ಪುರಸಭೆ ಬಿಡುಗಡೆಮಾಡಿದ ಪ್ರಮಾಣಪತ್ರ ಇತ್ಯಾದಿ
 • ಅರ್ಜಿದಾರರ ಇತ್ತೀಚಿನ ಛಾಯಾಚಿತ್ರ (2 ಪ್ರತಿಗಳು) 6 ತಿಂಗಳ ಒಳಗೆ ತೆಗೆಸಿರುವಂತಹದು
 • ಯಂತ್ರೋಪಕರಣಗಳನ್ನು ಮತ್ತು ಇತರ ವಸ್ತುಗಳನ್ನು    ಖರೀದಿಸುವ ಉದ್ಧರಣ (ಕೊಟೇಶನ್)
 • ಯಂತ್ರೋಪಕರಣಗಳು ಮತ್ತು ವಸ್ತು ಗಳ ಸರಬರಾಜುದಾರ ಹೆಸರು  ಮತ್ತು ವಿವರ
 • ಮಾಲೀಕತ್ವಕ್ಕೆ ಸಂಬಂಧಿಸಿದ  ನೋಂದಣಿ ಪ್ರಮಾಣಪತ್ರಗಳು / ಇತರೆ ದಾಖಲೆಗಳ ಪ್ರತಿ, ವ್ಯಾಪಾರದ ಘಟಕ ವಿಳಾಸದ ಗುರುತು, ಉದ್ಯಮ ಗುರುತು / ವಿಳಾಸ ಪುರಾವೆ
 • ಎಸ್ಸಿ / ಎಸ್ಟಿ / ಒಬಿಸಿ / ಹಿಂದುಳಿದ  ವರ್ಗದ ಬಗ್ಗೆ  ಪುರಾವೆ
 • ಗಮನಿಸಿ: ಎಲ್ಲಾ PMMY ಯೋಜನೆಗಳ  ಬಗ್ಗೆ  ಕೆಳಗಿನ  ಮುಖ್ಯ ವಿಷಯಗಳು :
 • ಯಾವುದೇ ಸಂಸ್ಕರಣಾ ಶುಲ್ಕ (ಪ್ರೊಸೆಸಿಂಗ್ ಫಿ ) ವಿರುವುದಿಲ್ಲ
 • ಯಾವುದೇ ಮೇಲಾಧಾರ ವಿರುವುದಿಲ್ಲ
 • ಸಾಲದ ಮರುಪಾವತಿಯ ಕಾಲ 5 ವರ್ಷಗಳ  ವರೆಗೆ ವಿಸ್ತರಿಸಲಾಗಿದೆ
 • ಅರ್ಜಿದಾರರ ಯಾವುದೇ ಬ್ಯಾಂಕ್ / ಆರ್ಥಿಕ ಸಂಸ್ಥೆಗೆ ಲೋಪ ಮಾಡಿರಬಾರದು  (ಡಿಫಾಲ್ಟ್ ಟರ್ ಆಗಿರಬಾರದು )


ಸಂಬಂಧಿತ  ಕೊಂಡಿಗಳು

 1. ಅಪ್ಲಿಕೇಶನ್ ಫಾರ್ಮ್ ಮತ್ತು PMMY ಸಾಲದ ಅಗತ್ಯವಿರುವ ದಾಖಲೆಗಳ ಪಟ್ಟಿ
 2. ಬ್ಯಾಂಕರ್ಸ್ ಕಿಟ್ - PMMY
3.27215189873
ನಾಗರಾಜ್ ಲಿಂಗಸ್ಗೂರು Jul 19, 2019 02:31 PM

ಪ್ರಧಾನ ಮಂತ್ರಿಗಳು ಈ ಯೋಜನೆಯನ್ನು ಜನಸಾಮಾನ್ಯರಿಗೆ ಅನುಕೂಲ ವಾಗುವ ರೀತಿಯಲ್ಲಿ ಯೋಜಿಸಬೇಕು ..... ಬ್ಯಾಂಕ್ ಈ ಯೋಜನೆಯ ಕುರಿತಾದ ಸರಿಯಾದ ಮಾಹಿತಿ ನೀಡುತ್ತಿಲ್ಲ .... ಅನಕ್ಷರಸ್ಥರಿಗೆ ಈ ಯೋಜನೆಯು ಮರಿಚಿಕೆಯಾಗಿದೆ ...

ಬಸವರಾಜ Jul 05, 2019 05:48 PM

ಅರ್ಜಿ ಸಲ್ಲಿಸಿದ ಬಳಿಕ ಎಷ್ಟು ದಿನಗಳ ನಂತರ ಲೋನ್ ಕೊಡ್ತಾರೆ

Mailarappa. Jun 24, 2019 05:16 PM

ಮುದರ ಲ್ಹಾನ್ ಅಪ್ಲೈ ಮೇ

Siddaraju Jun 15, 2019 08:30 AM

ಮೆನೆಜರ ಇದರ ಭಗೆ ಹೆಚಿನ ಮಾಹಿತಿಯ ಕೂಡುತಿಲ

ಲಕ್ಷ್ಮೀನಾರಾಯಣ May 24, 2019 06:19 PM

ಮುದ್ರ ಯೋಜನೆಯ ಅಡಿಯಲ್ಲಿ ಸಾಲವನ್ನು ಕೇಳಲು ಹೋದರೆ ಬ್ಯಾಂಕಿನಲ್ಲಿ ಐಟಿ ಇದೆಯಾ ಎಂದು ಕೇಳುತ್ತಾರೆ ನನಗೆ ಯಾವುದೇ ವಾರ್ಷಿಕ ಆದಾಯ ಜಾಸ್ತಿ ಇಲ್ಲ ನಾನು ಮುದ್ರಾ ಯೋಜನೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಸಾಲವನ್ನು ಪಡೆಯುವುದು ಹೇಗೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top