ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೃಷಿ ಮತ್ತು ತೋಟಗಾರಿಕೆ ಇಲಾಖೆ

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ದೊರೆಯುವ ಸೌಲಭ್ಯಗಳು

ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿಯ ರೈತರಿಗೆ ದೊರೆಯುವ ಸೌಲಭ್ಯಗಳು:-

ಶೇಕಡ 90 ರಷ್ಟು ಸಹಾಯಧನದ ಅಡಿ ಕೆಳಕಣಿಸಿದ ಗರಿಷ್ಠ ಮೀತಿಯಲ್ಲಿ :-

 1. ಆಧುನಿಕ ಕೃಷಿ ಉಪಕರಣಗಳ (ಬಹುಬೆಳೆ ಒಕ್ಕಣಿ ಯಂತ್ರ, ಕಳೆ ತೆಗೆಯುವ ಯಂತ್ರ ಇತ್ಯಾಧಿ) ಪೂರೈಕೆಗೆ ರೂ. 1.00,000 ಗಳು
 2. ಪವರ್ ಟೀಲ್ ಗಳ ಪೂರೈಕೆಗೆ ರೂ. 1,00,000 ಗಳು
 3. ಹನಿ ನೀರಾವರಿ ಘಟಕಕ್ಕಾಗಿ ರೂ. 98,550=00 ಗಳು
 4. ವ್ಯಯಕ್ತಿಕ ಒಕ್ಕಣಿ ಕಣಕ್ಕೆ ರೂ. 45,000 ಗಳು, ಸಮುದಾಯ ಒಕ್ಕಣಿ ಕಣಕ್ಕಾಗಿ ರೂ. 90,000 ಗಳು
 5. ಸಬ್‍ಮರ್ಸಿಬಲ್ (ಜಲಾಂತರಗಮಿ) ಪಂಪ್‍ಸೆಟ್‍ಗಳ ಪೂರೈಕೆಗೆ ರೂ. 58,500=00 ಗಳು
 6. ಲಘು ನೀರಾವರಿ ಘಟಕಗಳ ವಿತರಣೆ ರೂ. 24,550=00 ಗಳು
 7. ಡೀಸೆಲ್/ಸೀಮೆಎಣ್ಣೆ ಪಂಪ್‍ಸೆಟ್ ಪೂರೈಕೆಗೆ ರೂ. 20.000=00 ಗಳು
 8. ನೀರು ದೊರೆಯುವ ಸ್ಥಳದಿಂದ ಕ್ಷೇತ್ರಕ್ಕೆ ನೀರು ಹರಿಸುವ ಪೈಪುಗಳ ಪೂರೈಕೆಗೆ ರೂ. 15,000
 9. ಧಾನ್ಯ ಸಂಗ್ರಹಣ ಕಣಜಗಳ ಪೂರೈಕೆಗೆ ರೂ.2500, ಕೈಚಾಲಿತ ಸಸ್ಯ ಸಂರಕ್ಷಣ ಉಪಕರಣಗಳಿಗೆ ರೂ. 3000, ಹಾಗೆಯೇ ಟಾರ್ಪಾಲಿನ್‍ಗಳ ಪೂರೈಕೆಗೆ ರೂ. 250 ಸಹಯಧನ ನೀಡಲಾಗುತ್ತದೆ.
 10. ಶೇಕಡ 100 ರಷ್ಟು ಸಹಾಯಧನದ ಅಡಿಯಲ್ಲಿ, ಗುಣಮಟ್ಟದ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಸಸ್ಯ ಸಂರಕ್ಷಣ ಔಷಧಿಗಳ ಪೂರೈಕೆಗೆÀ ಪ್ರತಿ ಹೇಕ್ಟರ್‍ಗೆ ರೂ. 4.000 ಗಳು. ವಿಶೇಷವಾಗಿ ಮುಸುಕಿನ ಜೊಳ

 

ರೈತರಿಗಾಗಿ ಪರಿಹಾರಗಳು ಯೋಜನೆಗಳು:-

 • ಪ್ರಕೃತಿ ವಿಕೋಪ ಮತ್ತು ಕೃಷಿ ಉತ್ಪನ್ನಗಳಿಗೆ ಸರಿಯಾದ ಬೆಲೆ ದೊರೆಯದೆ ನಷ್ಟ ಅನುಭವಿಸಿ ಸರ್ಕಾರಿ ಸ್ವಾಮ್ಯದ ಅಥವಾ ಮಾನ್ಯತೆ ಪಡೆದ ಸಾಲ ನೀಡಿದ ಸಂಸ್ಥೆಗಳಿಂದ ಪಡೆದ ಸಾಲವನ್ನು ತಿರಿಸಲಾಗದೆ ರೈತ ಆತ್ಮಹತ್ಯೆ ಮಾಡಿಕೊಂಡರೆ ಮೃತನ ಕುಟುಂಬಕ್ಕೆ ರೂ. 1,00,000 ಸಹಯ ಧನ ಒದಗಿಸಲಾಗುವುದು.
 • ಕೃಷಿ ಸಂಬಂಧಿತ ಕೆಲಸ ಮಾಡುವಾಗ ಆಕಸ್ಮಿಕಗಳಿಂದ ಮರಣ ಹೊಂದಿದ ರೈತರು ಹಾಗೂ ಕೃಷಿ ಕಾರ್ಮಿಕರ ಕುಟುಂಬಕ್ಕೆ ರೂ. 1,00,000
 • ಬೆಂಕಿ ಆಕಸ್ಮಿಕಗಳಿಂದ ಹುಲ್ಲು ಮೆದೆ/ಬಣವೆಗಳ ನಷ್ಠವದಲ್ಲಿ ರೂ.10,000
  • ಇತರೆ ಸೌಲಭ್ಯಗಳು:-
  • ಬಡ್ಡಿರಹಿತ ಬೆಳೆ ಸಾಲ ಯೋಜನೆ
  • ರಾಷ್ಟ್ರೀಯ ಕೃಷಿ ವಿಮಾ ಯೋಜನೆ
  • ಜಿಲ್ಲಾ ವಲಯ ಸಾವಯವ ಗೊಬ್ಬರಗಳ ಯೋಜನೆ.
  • ಜಿಲ್ಲಾ ಕೃಷಿ ತರಬೇತಿ ಕೆಂದ್ರಗಳು
  • ಕೃಷಿ ಪ್ರಶಸ್ತಿ ಯೋಜನೆ: ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದ ಯೋಜನೆಗಳು
  • ಭೂ ಚೇತನ ಯೋಜನೆ ಅಡಿ ಮಣ್ಣು ಪರೀಕ್ಷೆ ಮತ್ತು ಪೋಷಕಾಂಶ, ಮಳೆ ನೀರು ನಿರ್ವಹಣೆ, ಸುಧಾರಿತ ತಳಿಗಳು, ತಾಂತ್ರೀಕತೆ ಇತ್ಯಾದಿಗಳ ಮಾಹಿತಿ ಮತ್ತು ತರಬೇತಿ
  • ತೋಟಗಾರಿಕೆ ಬೆಳೆಗಳಿಗೆ ಪ್ರೋತ್ಸಾಹ ಧನ
  • ರೈತರ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ

  ಹೆಚ್ಚಿನ ಸಂಪರ್ಕಕ್ಕಾಗಿ ಕೃಷಿ ಇಲಾಖೆಯ ತಾಲ್ಲೂಕು ಮತ್ತು ಜಿಲ್ಲಾ ಕಛೇರಿಗಳಿಗೆ ಸಂಪರ್ಕಿಸುವುದು

  ಮೂಲ : ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

3.02898550725
ಸುರೇಶ್ Sep 03, 2019 05:16 PM

ಎಸ್ಸಿ ಎಸ್ಟಿ ಗೆ ತೋಟಗಾರಿಕೆ ಇಲಾಖೆಯಿಂದ ಮತ್ತು ಕೃಷಿ ಇಲಾಖೆಯಿಂದ ಯೋಜನೆಗಳು ಯಾವುದಿದೆ

ಚಂದ್ರಶೇಖರ ಎಸ್ ಎನ್ Aug 28, 2019 10:42 PM

ಮಾವಿನ ಗಿಡಗಳನ್ನು ನೆಡುವುದಕ್ಕೆ ಏನಾದರು ಸೌಲಭ್ಯ ಗಳು ಇವೆನಾ

ಈರಪ್ಪ ತಿರಕಪ್ಪ ಪಲ್ಲದ Jul 29, 2019 05:44 PM

ಹೊಲದಲ್ಲಿ ಕಲ್ಲು ಒಡ್ಡು ಕಟ್ಟಿಸಬೇಕು ದಯಮಾಡಿ ಅನುಕೂಲಗಳನ್ನು ತಿಳಿಸಿ

ಪ್ರಶಾಂತ್ Jul 27, 2019 07:43 PM

ಹೊಲ ಸುತ್ತಲೂ ತಂತಿ ಬೇಲಿ ನಿರ್ಮಿಸಲು
ಸಹಾಯಧನ ಸಿಗುತ್ತಾ.

ಚನ್ನಬಸವರಾಜ 9901751947 Jun 22, 2019 07:53 AM

ಮಾವಿನ ತೋಟಕ್ಕೆ ಸುತ್ತಲೂ ತಂತಿಬೇಲಿ ನಿರ್ಮಿಸಲು ಸಹಾಯಧನ ಸಿಗುತ್ತಾ
ಮಾವಿನ ತೋಟಕ್ಕೆ ಡ್ರಿಪ್ ಅಳವಡಿಸಲು ಸಬ್ಸಿಡಿ ಸಿಗುತ್ತಾ.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top