অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪರಿಶಿಷ್ಟ ಜಾತಿ ಕಲ್ಯಾಣ

ಪರಿಶಿಷ್ಟ ಜಾತಿ ಕಲ್ಯಾಣ

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪರಿಶಿಷ್ಟ ಜಾತಿಯವರ ಹಿತಾಸಕ್ತಿಗಳನ್ನು ಉಸ್ತುವಾರಿ ಮಾಡುವ ನೋಡಲ್ ಏಜೆನ್ಸಿಯಾಗಿದೆ. ಪರಿಶಿಷ್ಟ ಜಾತಿಯವರ ಹಿತವನ್ನು ಪ್ರಾಯೋಜಿಸುವ ಮೂಲ ಹೊಣೆಯು ಚಟುವಟಿಕೆಗಳ ರಂಗದಲ್ಲಿ ಎಲ್ಲಾ ಕೇಂದ್ರ ಸಚಿನವಾಲಯಗಳ ಮತ್ತು ಮಧ್ಯವರ್ತನೆಯಿಂದ ನಿರ್ಧಿಷ್ಟವಾಗಿ ಸಿದ್ದ ಪಡಿಸಿದ ಯೋಜನೆಗಳ ಮೂಲಕ ಪೂರಕವಾಗುವುದು.

ರಾಜ್ಯ ಸರ್ಕಾರಗಳ ಮತ್ತು ಕೇಂದ್ರ ಸಚಿವಾಲಯಗಳ ಪರಿಶಿಷ್ಟ ಜಾತಿಯ ಹಿತ ಕಾಯುವ ಮತ್ತು ಉತ್ತೇಜಿಸುವ ಪ್ರಯತ್ನಗಳನ್ನು ಪರಿವೀಕ್ಷಿಸಿವುದು.

ಪರಿಶಿಷ್ಟ ಜಾತಿ ಅಭಿವ್ರದ್ದಿ ಬ್ಯೂರೊ ಅಡಿಯಲ್ಲಿ, ಸಚಿವಾಲಯವು ಪರಿಶಿಷ್ಟ ಜಾತಿ ಉಪಯೋಜನೆ ( SCSP) ಅನುಷ್ಠಾನಗೊಳಿಸಿದೆ. ಅದು ಒಂದು ಆಶ್ರಯ ತಂತ್ರವಾಗಿದೆ. ಪರಿಶಿಷ್ಟ ಜಾತಿಯವರ ಸೌಲಭ್ಯಗಳ ಅಭಿವ್ರುದ್ದಿಗಾಗಿ, ಉದ್ದೇಶಿತ ಹಣಕಾಸಿನ ಮತ್ತು ಭೌತಿಕ ಸೌಲಭ್ಯಗಳು ಎಲ್ಲಾ ವಲಯಗಳಿಂದ ಸುಗಮವಾಗಿ ಹರಿದುಬರುವುದನ್ನು ಖಾತರಿಗೊಳಿಸುವ ತಂತ್ರವಾಗಿದೆ. ಈ ತಂತ್ರದಡಿಯಲ್ಲಿ, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಪರಿಶಿಷ್ಟ ಜಾತಿಯವರಿಗೆ ವಿಶೇಷ ಕಾಂಪೋನೆಂಟ್ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಿದೆ. . ಇದು ಅವರ ವಾರ್ಷಿಕ ಯೋಜನೆಯ ಅಂಗವಾಗಿದ್ದು, ಅದಕ್ಕಾಗಿ ಸಂಪನ್ಮೂಲವನ್ನು ಈಗ ಸಾಕಷ್ಟು ಪ್ರಮಾಣದ ಪರಿಶಿಷ್ಟ ಜಾತಿಯ ಜನರು ಇರುವ 27 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಉಪಯೋಜನೆಯನ್ನು ಅನುಷ್ಠಾನ ಗೊಳಿಸುತ್ತದೆ.

ಪರಿಶಿಷ್ಟ ಪರಿಶಿಷ್ಟ ಅಭಿವ್ರುದ್ದಿಗಾಗಿ ಇರುವ ಇನ್ನೊಂದು ಕಾರ್ಯ ನೀತಿ ವಿಶೇಷ ಘಟಕ ಯೋಜನೆಗೆ ವಿಶೇಷ ಕೇಂದ್ರ ಬೆಂಬಲ ನೀಡುವುದು. ಅದರಲ್ಲಿ ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಪರಿಶಿಷ್ಟ ಜಾತಿ ಉಪಯೋಜನೆಗೆ ಕೆಲವು ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚುವರಿಯಾದ ಶೇಕಡಾ ನೂರಷ್ಟು ಸಹಾಯ ದೊರೆಯುವುದು. ಅವು ಯಾವೆಂದರೆ ರಾಜ್ಯ/ ಕೇಂದ್ರಾಡಳಿತದಲ್ಲಿ  ರಾಜ್ಯದ ಯೋಜನೆಯ ಅಡಿಯಲ್ಲಿ ಬಡತನ ರೇಖೆಯನ್ನು ದಾಟಲು ಸಾಧ್ಯವಾಗಿಸುವ, ಸಂಯುಕ್ತ ಪರಿಶಿಷ್ಟ ಜಾತಿ ಕಾರ್ಯಕ್ರಮಗಳ ಹೊರತಾಗಿಯೂ ಪರಿಶಿಷ್ಟ ಜಾತಿಯವರ ಜನಸಂಖ್ಯೆಯನ್ನು, ರಾಜ್ಯ/ ಕೇಂದ್ರಾಡಳಿತ ಪ್ರದೇಶದ ಎಸ್ ಸಿ ಕುಟುಂಬಗಳ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಎಸ್ಸಿ ಶೇಕಡಾ ಜನಸಂಖ್ಯೆಗೆ ಹಿಂದುಳಿದಿರುವಿಕೆ,

ರಾಷ್ಟ್ರೀಯ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ನಿಗಮವು (NSFDC) ಸಚಿವಾಲಯದ ಅಡಿಯಲ್ಲಿ ಸ್ಥಾಪಿತವಾಗಿದೆ. ಅದು ಪರಿಶಿಷ್ಟ ಜಾತಿಗೆ ಸೇರಿದ ಜನರಿಗೆ ಸಾಲ ಸೌಲಭ್ಯವನ್ನು ಒದಗಿಸುವುದು. ಬಡತನ ರೇಖೆಯ ಮಿತಿಯ ಎರಡು ಪಟ್ಟು ಆದಾಯದಲ್ಲಿ ಜೀವನ ಮಾಡುವರು ( ಗ್ರಾಮಾಂತರ ಪ್ರದೇಶಗಳಲ್ಲಿ ರೂ,, 40,000/- ಒಂದು ವರ್ಷಕ್ಕೆ, ನಗರ ಪ್ರದೇಶದಲ್ಲಿ ರೂ.. ವರ್ಷ ಒಂದಕ್ಕೆ 55,000/- ), ಆದಾಯ ಉತ್ಪನ್ನ ಚಟುವಟಿಕೆಗಳು.

ಸಚಿವಾಲಯದ ಅಡಿಯಲ್ಲಿ ಇನ್ನೊಂದು ನಿಗಮವು viz. ರಾಷ್ಟ್ರೀಯ ಕರ್ಮಚಾರಿ ಹಣಕಾಸು ಮತ್ತು ಅಭಿವ್ರುದ್ದಿ ನಿಗಮ (NSKFDC) ವು ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ಕೊಡುವುದು viz.ಸಫಾಯಿ ಕರ್ಮಚಾರಿಗಳು ಮತ್ತು ಭಂಗಿಗಳು ಮತ್ತು ಅವರ ಅವಲಂಭಿತರ ಆದಾಯ ಉತ್ಪನ್ನ ಮಾಡುವ ಚಟುವಟಿಕೆಗಳಿಗಾಗಿ ಸಾಮಾಜಿಕ ಆರ್ಥಿಕ ಅಭಿವ್ರುದ್ದಿಯನ್ನು ರಾಜಯ ಮಾರ್ಗದರ್ಶಿ ಏಜೆನ್ಸಿಗಳ ಮೂಲಕ ಮಾಡುವುದು

ಪರಿಶಿಷ್ಟ ಜಾತಿ ಯವರ ನಾಗರೀಕ ಹಕ್ಕುಗಳನ್ನು ರಕ್ಷಿಸಲು ಸಚಿವಾಲಯವು ಎರಡು ಅಧಿನಿಯಮಗಳನ್ನು ಅನುಷ್ಠಾನ ಗೊಳಿಸಿದೆ

  1. Viz. ನಾಗರೀಕ ಹಕ್ಕು ರಕ್ಷಣಾ ಅಧಿನಿಯಮ, 1955 ಮತ್ತು
  2. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ( ದೌರ್ಜನ್ಯ ತಡೆ ಅಧಿನಿಯಮ, 1989).
  3. ಸಚಿವಾಲಯವು ಪರಿಶಿಷ್ಟ ಜಾತಿ ಅಭಿವ್ರುದ್ದಿಗಾಗಿ ಕೆಳಕಂಡ ವಿಷಯಗಳಲ್ಲಿ ವ್ಯವಹಾರಿಸುತ್ತದೆ.
  4. ಮೇಲುಸ್ತುವಾರಿ ಅಂಶಗಳಾದ 11 ) ಯಾ 20 ಅಂಶಗಳ ಕಾರ್ಯಕ್ರಮ-ಪರಿಶಿಷ್ಟ ಜಾತಿಯವರಿಗೆ ನ್ಯಾಯ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಖಾಸಗಿ ವಲಯದಲ್ಲಿ ಮೀಸಲಾತಿ ನೀಡಲು  ಇತ್ಯಾತ್ಮಕ ಕ್ರಮ

ಎನ್ ಎಸ್ ಕೆ ಎಫ್ ಡಿಸಿ ಕಾರ್ಯಗಳು

ಪರಿಶಿಷ್ಟ ಜಾತಿ ಕಲ್ಯಾಣ ಸಂಸ್ಥೆಗಳು

ಭಾರತದಲ್ಲಿ ಅಧ್ಯಯನ ಮಾಡಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ನಾಗರೀಕ ಹಕ್ಕುಗಳ ರಕ್ಷಣೆ (ಪಿಸಿ ಆರ್‌) ಅಧಿನಿಯಮ , 1955 ( 19955 ರ ಅಧಿನಿಯಮ ಸಂಖ್ಯೆ 22, [8ನೆ ಮೇ, 1955]

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ( ದೌರ್ಜನ್ಯಗಳತಡೆ )ಅಧಿನಿಯಮ

ಮೂಲ :ಪೋರ್ಟಲ್  ತಂಡ

ಕೊನೆಯ ಮಾರ್ಪಾಟು : 4/8/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate