অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಕಾಸಂ

ವಿಕಾಸಂ

ವಿಕಾಸಂ ಪರಿಚಯ

ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸರ್ಕಾರವು 2007 ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು -2002 ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸೇವೆಗಳು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ 4ನೇ ಪ್ರಕರಣದ ಉಪಬಂಧಗಳ ಮೇರೆಗಿನ ವಿತ್ತೀಯ ನಿರ್ವಹಣೆಯ ಹದಿನೇಳು ತತ್ವಗಳ ಆಶಯವನ್ನು ಅಳವಡಿಸಿಕೊಳ್ಳುವುದನ್ನು ಅಪೇಕ್ಷಿ¸ಸುತ್ತದೆ. ಇವುಗಳನ್ನು ಕೆಳಗಿನ ನಾಲ್ಕು ವಿಧಾನಗಳ ಮೂಲಕ ಸಾಧಿಸಲಾಗುವುದು.

  • ಅಗತ್ಯಕ್ಕೆ ತಕ್ಕಂತೆ ತರಬೇತಿ ಮತ್ತು ಹಾಗೆ ತರಬೇತಿ ಪಡೆದುಕೊಂಡವರಿಗೆ ನಿರಂತರವಾಗಿ ನೆರವು ನೀಡುವುದು.
  • ಸಾರ್ವಜನಿಕ ಖಾಸಗಿ ಸಹಭಾಗಿತ್ವಗಳು (PPPs) ಸರಕು ಮತ್ತು ಸೇವಾ ತೆರಿಗೆಗಳು (GST), ಪರಿಸರ ಅರ್ಥಶಾಸ್ತ್ರ, ಆರೋಗ್ಯ ಅರ್ಥಶಾಸ್ತ್ರ ಮೊದಲಾದ ನೂತನ ಮತ್ತು ಸವಾಲಿನ ಕ್ಷೇತ್ರಗಳ ಜೊತೆಗೆ ಸಾಂಪ್ರದಾಯಕ ಕ್ಷೇತ್ರಗಳಿಗೆ ಸಮಾಲೋಚನಾ ಸೇವೆ ಮತ್ತು ತರಬೇತಿಯನ್ನು ನೀಡುವುದು.
  • ದತ್ತಾಂಶ ಬ್ಯಾಂಕನ್ನು ಸೃಜಿಸುವುದು ಮತ್ತು ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಇಲಾಖೆಗಳಿಗೆ ನೆರವು ನೀಡುವುದೂ ಸೇರಿದಂತೆ ದತ್ತಾಂಶ ಕೋಶದ ನಿರ್ವಹಣೆ ಮಾಡುವುದು, ಮತ್ತು
  • ವಿತ್ತೀಯ ನಿರ್ವಹಣೆ ತತ್ವಗಳು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಲಹೆ ಮತ್ತು ನೆರವು ನೀಡುವುದು.

ಉಗಮ

ಕರ್ನಾಟಕ ರಾಜ್ಯವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಜಾರಿಗೊಳಿಸಿದ ಭಾರತದ ಮೊಟ್ಟಮೊದಲ (2002 ರಲ್ಲಿ) ರಾಜ್ಯವಾಗಿದೆ. ಭಾರತದ ವಿತ್ತೀಯ ಸುಧಾರಣಾ ಯೋಜನೆ-ಯುಎಸ್‍ಎಐಡಿ ಯಲ್ಲಿ ಪಡೆದ ಅನುಭವದ ಹಿನ್ನಲೆಯಲ್ಲಿ, ರಾಜ್ಯವು ವಿತ್ತೀಯ ಕಾರ್ಯನೀತಿ ಸಂಸ್ಥೆಯ ಅಗತ್ಯತೆಯನ್ನು ಮನಗಂಡಿತು. ಭಾರತ ಸರ್ಕಾರದಿಂದ ಆರಂಭಿಕ ಯೋಜನಾ ಅನುದಾನವನ್ನು ಪಡೆದು 2007 ರಲ್ಲಿ ಕರ್ನಾಟಕ ಸರ್ಕಾರ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ನು ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ಅದರಂತೆ ಪ್ರಾರಂಭವಾದ ವಿತ್ತೀಯ ಕಾರ್ಯನೀತಿ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಈ ಕೆಳಕಂಡ ವಿಷಯಗಳಲ್ಲಿ ತನ್ನ ಸಹಾಯವನ್ನು ನೀಡಲಿದೆ:

  • ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನಿರ್ಣಯಗಳನ್ನು ಕೈಗೊಳ್ಳಲು ಮಾಹಿತಿಯ ಲಭ್ಯತೆಯನ್ನು ಹೆಚ್ಚಿಸುವುದು.
  • ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯು ಏಕರೂಪ ಮತ್ತು ಪಾರದರ್ಶಕ ತತ್ವವನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆರ್ಥಿಕ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು.
  • ಸಂಬಂಧಪಟ್ಟ ಸಂಸ್ಥೆಗಳ ಸಾಮಥ್ರ್ಯವನ್ನು ನಿರಂತರವಾಗಿ ಉನ್ನತೀಕರಿಸಲು ವಿತ್ತೀಯ ಸುಧಾರಣಾ ಪಥವನ್ನು ಸುಸ್ಥಿರಗೊಳಿಸುವುದು.

ದೃಷ್ಟಿಕೋನ

ವಿತ್ತೀಯ ಕಾರ್ಯನೀತಿ ಸಂಸ್ಥೆಯ ಮೂಲಕ ಹೂಡಿಕೆಯಾಗುವ ಸಂಪನ್ಮೂಲಗಳು ಸಾರ್ವಜನಿಕ ಸೇವಾ ನೀಡಿಕೆಯಲ್ಲಿ ತೊಡಗಿಸಲಾಗುವ ಮಾನವ ಬಂಡವಾಳದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ಇದರ ಪ್ರತಿಫಲವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ, ಸಮಗ್ರ ವಿವೇಕಯುತ ವಿತ್ತೀಯ ಮಾದರಿ ಸೂತ್ರಗಳನ್ನು ಅನುಸರಿಸುವ ಹವ್ಯಾಸಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಮತ್ತು ಎಲ್ಲಾ ಸಮಯದಲ್ಲೂ ನಾಗರೀಕರ ಹಣಕ್ಕೆ ಮೌಲ್ಯವನ್ನು ಖಚಿತಪಡಿಸುತ್ತದೆ.

ಗುರಿಗಳು

ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ 2003 ಹಾಗೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ , 2002 ರಲ್ಲಿನ ಶಾಸನಾತ್ಮಕ ಉದ್ದೇಶಗಳಿಗೆ ಸಂಬಂಧಿಸಿದಂತೆ ವಿತ್ತೀಯ ಹೊಣೆಗಾರಿಕೆ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳುವ ಮತ್ತು ಅದಕ್ಕೆ ಸರಿಹೊಂದುವಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಲ್ಲಾ ಸಾರ್ವಜನಿಕ ವಲಯದ ಆಡಳಿತ ಘಟಕಗಳಿಗೆ ಸಮಾಲೋಚಕ ಹಾಗೂ ಕೈ ಆಸರೆಯಾಗುವ ಪ್ರಥಮ ಉಲ್ಲೇಖಾರ್ಹ ಸಂಸ್ಥೆಯಾಗಿ ನಿಲ್ಲುವ, ಅಲ್ಲದೆ, ಅದರಲ್ಲೂ ನಿರ್ದಿಷ್ಟವಾಗಿ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಅನುಚ್ಛೇದ 4ರ ಅಡಿಯಲ್ಲಿ ಪ್ರತಿಪಾದಿಸಿರುವ ವಿತ್ತೀಯ ನಿರ್ವಹಣಾ ತತ್ವಗಳಿಗನುಸಾರವಾಗಿ 2015ರ ವೇಳೆಗೆ ಸಂಸ್ಥೆಯ ಗುರಿಯನ್ನು ತಾಲ್ಲೂಕು ಕೇಂದ್ರಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ. ನಂತರ ಸಂಸ್ಥೆಯು ದಕ್ಷತೆಯಿಂದ ಕಾರ್ಯಗಳನ್ನು ಮುಂದುವರೆಸಿ, ಬಳಕೆದಾರರಿಗೆ ಮತ್ತು ಸರ್ಕಾರಕ್ಕೆ ಯೋಗ್ಯ ಮತ್ತು ಕೈಗೆಟುಕುವ ದರದಲ್ಲಿ ಸೇವೆಗಳನ್ನು ಒದಗಿಸಿ, 2016ರೊಳಗೆ ಸ್ವಯಂ ಲಾಭದಾಯಕ ಸಂಸ್ಥೆಯಾಗುವ ಗುರಿಯನ್ನು ಹೊಂದಿದೆ.

ಧ್ಯೇಯೋದ್ದೇಶ

ವಿ.ಕಾ.ಸಂ. ಯ ಪ್ರಮುಖ ಉದ್ದೇಶಗಳೆಂದರೆ:

  • ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳ/ಸಿಬ್ಬಂದಿ ವರ್ಗದ ಅಗತ್ಯಕ್ಕೆ ಅನುಗುಣವಾಗಿ ವಿತ್ತೀಯ ವಿಷಯಗಳಲ್ಲಿ ತರಬೇತಿ ನೀಡುವುದು ಮತ್ತು ವಿತ್ತೀಯ ವಿವೇಚನೆ ಕುರಿತು ಒತ್ತು ನೀಡುವುದರೊಂದಿಗೆ ಹಣಕಾಸು ಯೋಜನೆ, ಕಾರ್ಯಕ್ರಮ ಅನುಷ್ಠಾನ, ಸಾರ್ವಜನಿಕ ವೆಚ್ಚ ಹಾಗೂ ಸ್ವತ್ತು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಸಮರ್ಪಕವಾದ ಸಂಶೋಧನಾ ವರದಿ ತಯಾರಿಸುವುದು.
  • ಬೇಡಿಕೆಗೆ ಅನುಗುಣವಾಗಿ, ಮತ್ತು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸಂಬಂಧಿಸಿದ ಜರೂರಾದ ಮತ್ತು ದೀರ್ಘಕಾಲ ಪ್ರಸ್ತುತವಾದ ವಿಶೇಷ ಸಂಶೋಧನೆ ಮತ್ತು ಅಧ್ಯಯನವನ್ನು ಕೈಗೊಳ್ಳುವುದು.
  • ಕಾರ್ಯನೀತಿ ವಿಶ್ಲೇಷಣೆ, ಹೂಡಿಕೆಯ ಮೌಲ್ಯಮಾಪನ, ಸಂಭವನೀಯ ಅಪಾಯ ನಿರ್ಧಾರಣೆ ಮತ್ತು ಸಾಧನೆಯ ಮೇಲ್ವಿಚಾರಣೆಯ ವಿಧಾನಗಳಿಗೆ ಉಪಯೋಗ ಸ್ನೇಹಿ ಆಕರ ಕೈಪಿಡಿಗಳು, ನಮೂನೆಗಳು, ಸಾಧನ-ಸಲಕರಣೆಗಳು ಮತ್ತು ಮಾನದಂಡಗಳನ್ನು ತಯಾರಿಸುವುದು ಹಾಗೂ ಅವುಗಳನ್ನು ಸಾಂಸ್ಥೀಕರಿಸುವುದು.
  • ಸರ್ಕಾರದ ಕಾರ್ಯಚರಣೆಗಳಲ್ಲಿ ಉತ್ತಮ ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ಅತ್ಯುತ್ತಮ ಆಚರಣೆಗಳನ್ನು ಗ್ರಹಿಸಿ, ದಾಖಲಿಸಿ ಪ್ರಚುರ ಪಡಿಸುವುದು ಮತ್ತು ವೆಚ್ಚಮಾಡಿದ ಹಣದ ಮೌಲ್ಯವನ್ನು ಖಾತ್ರಿಪಡಿಸಲು ಇಲಾಖೆಗೆ ನೆರವಾಗುವುದು.
  • ತರಬೇತಿ ಮತ್ತು ಸಂಶೋಧನೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಭೌತಿಕ ಮೂಲಸೌಕರ್ಯಗಳು ಮತ್ತು ನಿರ್ವಹಣಾ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುವುದು ಮತ್ತು ನಿರ್ವಹಿಸುವುದು.

ಸಂಸ್ಥೆಯ ಆವರಣದಲ್ಲಿನ ಮೂಲಸೌಕರ್ಯಗಳು

ವಿಕಾಸಂ ಆವರಣ

ವಿಕಾಸಂ 5.30 ಎಕರೆ ವಿಸ್ತೀರ್ಣದಲ್ಲಿದ್ದು, ಬೆಂಗಳೂರಿನ ದಕ್ಷಿಣ ಭಾಗದ ಬೆಂಗಳೂರು ಮೈಸೂರು ರಸ್ತೆಯ ಕೆಂಗೇರಿ ಸಮೀಪದಲ್ಲಿದೆ. ನಗರದ ಮುಖ್ಯ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ವಿಕಾಸಂ ಕಲಿಕೆ ಮತ್ತು ವಸತಿ ಸೌಕರ್ಯಗಳನ್ನು ಒಳಗೊಂಡಿರುವ 7 ಕಟ್ಟಡಗಳನ್ನು ಹೊಂದಿದೆ.

ಸಂಸ್ಥೆ ಹೊಂದಿರುವ ಕಲಿಕಾ ಸೌಲಭ್ಯಗಳು;

ಚರ್ಚಾ ಕೊಠಡಿಗಳು

ಕಲಿಕಾರ್ಥಿಗಳಿಗೆ ಅನುಕೂಲವಾಗುವ ಕಲಿಕಾ ಪರಿಸರವನ್ನು ಸೃಷ್ಟಿಸುವ ರೀತಿಯಲ್ಲಿ ಎಲ್ಲಾ 7 ಕೊಠಡಿಗಳನ್ನು ವಿನ್ಯಾಸಗೊಳಿಸಿದ್ದು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಹೊಂದಿಕೊಳ್ಳುವ ಆಸನ ವ್ಯವಸ್ಥೆ, ಲ್ಯಾನ್, ಎಲ್‍ಸಿಡಿ ಪ್ರೊಜೆಕ್ಟರ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

ಗ್ರಂಥಾಲಯ

ಸಾಂಪ್ರದಾಯಿಕ ಮತ್ತು ಡಿಜಿಟಲ್ ವ್ಯವಸ್ಥೆ ಎರಡನ್ನೂ ಒಳಗೊಂಡ ವಿಶಿಷ್ಟವಾದ ಜ್ಞಾನ ಕೇಂದ್ರ ಇದಾಗಿದೆ. ಚರ್ಚಾಕೊಠಡಿ, ವಸತಿನಿಲಯ ಮತ್ತು ಅತಿಥಿಗೃಹದಲ್ಲಿರುವ ಲ್ಯಾನ್ ವ್ಯವಸ್ಥೆಯಿಂದಾಗಿ ದಿನದ ಎಲ್ಲಾ ಸಮಯದಲ್ಲೂ ಗ್ರಂಥಾಲಯದ ಸೌಲಭ್ಯ ಪಡೆಯಬಹುದಾಗಿದೆ.

ಅಂತರ್ಜಾಲ ಸೌಲಭ್ಯ

ದಿನದ 24 ಗಂಟೆಗಳ ಕಾಲ ಲಭ್ಯವಿರುವ ಅಂರ್ತಜಾಲ ವ್ಯವಸ್ಥೆ, ಕೆಎಸ್‍ಡಬ್ಲ್ಯೂಎಎನ್ನ ಮೂಲಕ ಆಂತರಿಕ ಮತ್ತು ಅಂತರ್ ಸಂಸ್ಥೆ ಜಾಲಗಳನ್ನು ಸಂಪರ್ಕಿಸುವ ಸಾಮಥ್ರ್ಯ ಮತ್ತು ಇತರೆ ಕಂಪ್ಯೂಟರ್ ಉಪಕರಣಗಳು ತರಬೇತಿಗೆ ಸಹಾಯಕವಾಗಿದೆ.

ಸ್ಟುಡಿಯೋ

ಕಲಿಕಾ ಸಾಮಗ್ರಿಗಳನ್ನು ಆಂತರಿಕವಾಗಿ ನಿರ್ಮಿಸಲು ಹಾಗೂ ದೂರಶಿಕ್ಷಣಕ್ಕೆ ನೆರವಾಗಲು ಸಹಕಾರಿಯಾಗುವಂತೆ ಧ್ವನಿಗ್ರಹಣ ಸಾಮಥ್ರ್ಯವುಳ್ಳ ಪೂರ್ಣಪ್ರಮಾಣದ ಸ್ಟುಡಿಯೋ ಹೊಂದಿದೆ.

ಸಮ್ಮೇಳನ ಕೊಠಡಿ ಮತ್ತು ಸಭಾಂಗಣ

ತಲಾ 40 ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ಎರಡು ಸಮ್ಮೇಳನ ಕೊಠಡಿಗಳಿವೆ ಮತ್ತು 170 ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ಒಂದು ಸಭಾಂಗಣವಿದೆ.

ಅತಿಥಿ ಗೃಹ

ಅತಿಥಿ ಗೃಹದಲ್ಲಿ ಒಟ್ಟು ಹನ್ನೆರಡು ಕೊಠಡಿಗಳಿವೆ. ಇವುಗಳಲ್ಲಿ ಮೂರು ಕೊಠಡಿಗಳು ಅಡುಗೆ ಕೋಣೆಯ ಸೌಲಭ್ಯ ಹೊಂದಿವೆ. ಅಲ್ಲದೆ ಸಾಮಾನ್ಯ ಊಟದ ಕೋಣೆಯ ಸೌಲಭ್ಯ ಹೊಂದಿರುವ ಎರಡು ಹಾಸಿಗೆಗಳುಳ್ಳ ಒಂಬತ್ತು ಕೋಣೆಗಳು ಲಭ್ಯವಿವೆ.

ವಸತಿನಿಲಯ

ಕಲಿಕಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ವಿಕಾಸಂನಲ್ಲಿ ಎರಡು ಹಾಸಿಗೆಯ ಕೊಠಡಿಗಳನ್ನು ಹೊಂದಿರುವ ವಸತಿನಿಲಯದ ವ್ಯವಸ್ಥೆ ಇದೆ. ಈ ವಸತಿನಿಲಯವು ಸಾಮಾನ್ಯ ಊಟದ ಕೋಣೆ ಸೌಲಭ್ಯವನ್ನು ಒಳಗೊಂಡಿದೆ.

ಆಡಳಿತ ಮಂಡಳಿ

1. ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಅಧ್ಯಕ್ಷರು
2. ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಕರ್ನಾಟಕ ಸರ್ಕಾರ ಸದಸ್ಯರು
3. ಡಾ. ಕೆ.ಪಿ.ಕೃಷ್ಣನ್, ಅಪರ ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಇಲಾಖೆ, ನವದೆಹಲಿ ಸದಸ್ಯರು
4. ಮಹಾನಿರ್ದೇಶಕರು, ಆತಸಂ, ಮೈಸೂರು ಸದಸ್ಯರು
5. ಪ್ರಧಾನ ಕಾರ್ಯದರ್ಶಿ, ಯೋಜನಾ ಇಲಾಖೆ, ಕರ್ನಾಟಕ ಸರ್ಕಾರ ಸದಸ್ಯರು
6. ಪ್ರಧಾನ ಕಾರ್ಯದರ್ಶಿ (ಆ&ಸಂ), ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಸದಸ್ಯರು
7. ಆಯುಕ್ತರು, ವಾಣಿಜ್ಯ ತೆರಿಗೆ, ಕರ್ನಾಟಕ ಸರ್ಕಾರ ಸದಸ್ಯರು
8. ಆಯುಕ್ತರು, ಅಬಕಾರಿ ಇಲಾಖೆ, ಕರ್ನಾಟಕ ಸರ್ಕಾರ ಸದಸ್ಯರು
9. ಪ್ರಧಾನ ಕಾರ್ಯದರ್ಶಿ, ಸಿಆಸುಇ, ಕರ್ನಾಟಕ ಸರ್ಕಾರ ಸದಸ್ಯರು
10. ನಿರ್ದೇಶಕರು, ವಿತ್ತೀಯ ಕಾರ್ಯನೀತಿ ಸಂಸ್ಥೆ, ಬೆಂಗಳೂರು ಸದಸ್ಯ ಕಾರ್ಯದರ್ಶಿ

ಆಡಳಿತ ಮಂಡಳಿಗೆ ಈ ಕೆಳಕಂಡ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಆಧಿಕಾರವಿದೆ:

  • ಸೂಕ್ತ ತರಬೇತಿ ಸೌಲಭ್ಯ ನೀಡಲು ಅವಶ್ಯಕವಾದ ಎಲ್ಲಾ ಸಾಧನ-ಸಾಮಗ್ರಿಗಳ ಖರೀದಿಗೆ ಮಂಜೂರಾತಿ ನೀಡುವುದು.
  • ಮಂಜೂರಾದ ಹುದ್ದೆಗಳಿಗೆ ಗುತ್ತಿಗೆ/ ಸಮಾಲೋಚನೆ ಆಧಾರದ ಮೇಲೆ ಸೂಕ್ತ ಅಧಿಕಾರಿಗಳು/ ಬೋಧಕವರ್ಗದ ನೇಮಕಾತಿಯೂ ಸೇರಿದಂತೆ ಎಲ್ಲಾ ಆಡಳಿತಾತ್ಮಕ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವುದು.
  • ಸಂಸ್ಥೆಯ ಅಭಿವೃದ್ಧಿ ಮತ್ತು ವಿಸ್ತರಣಾ ಯೋಜನೆಗಳಿಗೆ ಅನುಮೋದನೆ ನೀಡುವುದು
  • ತರಬೇತಿಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಉಪ ಸಮಿತಿಗಳು, ತಜ್ಞರ ತಂಡ, ಅಧ್ಯಯನ ತಂಡಗಳನ್ನು ರಚಿಸುವುದು.
  • ವಸತಿ ನಿಲಯ, ಸಿಬ್ಬಂದಿ ವಸತಿಗೃಹ ಮತ್ತು ಸಂಸ್ಥೆಯಿಂದ ನೀಡಿರುವ ಇತರೆ ಸೌಲಭ್ಯಗಳ ನಿರ್ವಹಣೆ.
  • ಸಂಸ್ಥೆಯನ್ನು ಸ್ಥಾಪಿಸಿರುವ ಧ್ಯೇಯೋದ್ದೇಶಗಳ ಈಡೇರಿಕೆಗೆ ಸಂಬಂಧಿಸಿದ ವಿಷಯಗಳಲ್ಲಿ ವಿಶ್ವವಿದ್ಯಾನಿಲಯಗಳು, ಸಮಾಜ ವಿಜ್ಞಾನ ಸಂಸ್ಥೆಗಳು, ಸಂಶೋಧನೆ ಮತ್ತು ಇತರೆ ಸ್ವಾಯತ್ತ ಸಂಸ್ಥೆಗಳೊಂದಿಗೆ ಸಹಯೋಗ ಹೊಂದಲು ಸಂಸ್ಥೆಗೆ ಅನುಮತಿ ನೀಡುವುದು.
  • ಸಂಸ್ಥೆಯ ವಾರ್ಷಿಕ ತರಬೇತಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವುದು.
  • ತರಬೇತಿ ಪಠ್ಯಕ್ರಮ ಮತ್ತು ತರಬೇತಿಯ ಸಾಮಗ್ರಿ ಇತ್ಯಾದಿಗಳಿಗೆ ಆನುಮೋದನೆ ನೀಡುವುದು
  • ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಮುನ್ನಡೆಸಿಕೊಂಡು ಹೋಗಲು ಸಮಯೋಚಿತ ಮತ್ತು ಪ್ರಾಸಂಗಿಕವಾದ ಪ್ರಸ್ತಾವನೆಗಳನ್ನು ಅನುಮೋದಿಸುವುದು.

ವಿಕಾಸಂನ ಲಾಂಛನ ಕುರಿತು

 

ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿಶೇಷವಾದ ಜ್ಞಾನ ಕೇಂದ್ರವಾಗಿದ್ದು ವಿತ್ತೀಯ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಅರ್ಥೈಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆಗಳು ತಲುಪುವ ಪರಿಣಾಮಕಾರಿತ್ವವನ್ನು ವೃದ್ಧಿಸುವ ಕಾರ್ಯ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಇತರೆ ರಾಜ್ಯದ ಇಲಾಖೆಗಳ ವಿತ್ತೀಯ ನಿರ್ವಹಣೆಯ ನೀತಿ ನಿರೂಪಣೆ ಮತ್ತು ಕಾರ್ಯಾಚರಣೆಯ ಕ್ಷೇತ್ರಗಳೆರಡರಲ್ಲೂ ವಿಶಿಷ್ಟವಾದ ಮತ್ತು ಶಾಶ್ವತವಾದ ಕೊಡುಗೆಯನ್ನು ನೀಡುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹೊಂದಾಣಿಕೆಯಾಗುವ ಜ್ಞಾನ, ಪರಿಣಿತಿ, ಅನುಭವ, ಕಾರ್ಯಚರಣೆಯ ಕೌಶಲ್ಯ ಮತ್ತು ಸರಿಹೊಂದುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದನ್ನು ಪ್ರಚುರ ಪಡಿಸುವ ಸಾಮಥ್ರ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಹೊಂದುವುದು ಸಂಸ್ಥೆಯ ಆತಂರಿಕ ಉದ್ದೇಶ.

ಸಂಸ್ಥೆಯ ಲಾಂಛನವು ಸರಳ ಹಾಗೂ ವಿಶಿಷ್ಟ ಭಾರತೀಯ ತತ್ವಗಳನ್ನು ಒಳಗೊಂಡ ಕಲಾತ್ಮಕ ವಿನ್ಯಾಸವನ್ನು ಹೊಂದಿದ್ದು, ಸಂಸ್ಥೆಯ ಗುರಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅದರ ಜೊತೆಗೆ ಲಾಂಛನವು ಸಂಸ್ಥೆ ಮತ್ತು ಅದರ ಸಿಬ್ಬಂದಿಗಳಿಗೆ ವಿತ್ತೀಯ ಹೊಣೆಗಾರಿಕೆಯೆಡೆಗೆ ತಮ್ಮ ಸರ್ವ ಪ್ರಯತ್ನವನ್ನು ಕೇಂದ್ರೀಕರಿಸಲು ನೆನಪಿಸುತ್ತದೆ.

ಲಾಂಛನದ ವಿವಿಧ ಆಯಾಮಗಳ ಸಂಕ್ಷೀಪ್ತ ವಿವರಣೆ :

  • ಲಾಂಛನದ ವಿನ್ಯಾಸವು ಸಿಂಧೂ ನಾಗರೀಕತೆಯ ಸಮಯದಲ್ಲಿ ಬಳಸುತ್ತಿದ್ದ ಟೆರ್ರಕೋಟಾ ಮುದ್ರೆಗಳ ಸಾಂಕೇತಿಕ ಪ್ರತಿನಿಧಿತ್ವ ಹೊಂದಿದೆ.
  • ಲಾಂಛನದಲ್ಲಿರುವ ತಾಮ್ರ ಮತ್ತು ಚಿನ್ನಮಿಶ್ರಿತ ಹಳದಿ ಬಣ್ಣ ಪ್ರಾಚೀನ ಭಾರತದ ನಾಣ್ಯಯುಗವನ್ನು ಪ್ರತಿನಿಧಿಸುತ್ತದೆ
  • ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ, 2002ರ 4(1)ನೇ ಪ್ರಕರಣದಲ್ಲಿರುವ 17 ವಿತ್ತೀಯ ನಿರ್ವಹಣಾ ತತ್ವಗಳನ್ನು 17 ‘ಎಫ್’ ಗಳು ಪ್ರತಿನಿಧಿಸುತ್ತವೆ
  • ಲಾಂಛನದ ಪರಿಕಲ್ಪನೆಯೇ ನಿರಂತರ ಚಲನೆ ಮತ್ತು ತನ್ನೊಳಗಿನ ಸ್ಥಿರತೆಯನ್ನು ಬಿಂಬಿಸುತ್ತದೆ.

ವಿತ್ತೀಯ ಕಾರ್ಯನೀತಿ ವಿಶ್ಲೇಷಣಾ ಕೋಶ (ವಿಕಾವಿಕೋ)

ವಿಕಾವಿಕೋವು ರಾಜ್ಯ ಸರ್ಕಾರದಲ್ಲಿ ಮಾಹಿತಿಯಾಧಾರಿತ ನಿರ್ಣಯ ಕೈಗೊಳ್ಳುವಿಕೆಗೆ ಉತ್ತೇಜಿಸಲು ಇರುವ ಪ್ರಮುಖ ಸಾಂಸ್ಥಿಕ ರಚನೆಯಾಗಿದೆ. ವಿತ್ತೀಯ ನೀತಿಯ ತತ್ಕ್ಷಣದ ಮತ್ತು ದೀರ್ಘಕಾಲೀನ ಪರಿಣಾಮಗಳು, ಯೋಜನೆಯ ಅವಧಿಯಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಕ್ರೋಢೀಕರಣ, ಹಂಚಿಕೆ ಮತ್ತು ಬಳಕೆ ಕುರಿತ ಕಾರ್ಯವಿಧಾನ ಮತ್ತು ನಿಯಂತ್ರಕ ನಿರ್ಧಾರಗಳ ಬಗೆಗೆ ನಿರಂತರವಾಗಿ ಮೌಲ್ಯಮಾಪನ ಕೈಗೊಳ್ಳುವುದು ಇದರ ಪ್ರಥಮ ಆದ್ಯತೆಯಾಗಿದೆ. ಈ ಘಟಕ ವಿಶ್ಲೇಷಣಾತ್ಮಕ ಮೆದುಳಿನ ರೀತಿ ಕಾರ್ಯನಿರ್ವಹಿಸುತ್ತಿದ್ದು, ಚಾಲ್ತಿಯಲ್ಲಿರುವ ಸುಧಾರಣಾ ಕಾರ್ಯಕ್ರಮಗಳಿಗೆ ಮಾಹಿತಿ ಮತ್ತು ವಿಶ್ಲೇಷಣಾತ್ಮಕ ಬೆಂಬಲ ನೀಡುತ್ತದೆ. ಯುಎಸ್ಎಐಡಿ ನೆರವಿನ ರಾಜ್ಯದ ವಿತ್ತೀಯ ಸುಧಾರಣಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದಕ್ಕೆ ವಿಕಾವಿಕೋ ಕೇಂದ್ರಬಿಂದುವಾಗಿದೆ.

ಯುಎಸ್ಎಐಡಿ/ ಭಾರತದ ಸುಧಾರಣಾ ಯೋಜನೆಯ 5 ಸಂಪುಟಗಳು:

ಸಂಪುಟ I ಸುಧಾರಣಾ ಯೋಜನೆ: ಸ್ಥೂಲ ಪರಿಚಯ
ಸಂಪುಟ II ವೆಚ್ಚ ಯೋಜನೆ ಮತ್ತು ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ – ಭಾರತೀಯ ರಾಜ್ಯಮಟ್ಟದ ಕಾರ್ಯಕ್ರಮ ಮತ್ತು ಸಾಧನಾ ಆಯವ್ಯಯದ ಪರಿಚಯ
ಸಂಪುಟ III ಕಂದಾಯ ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ
ಸಂಪುಟ IV ಸಾಲ ಮತ್ತು ಹೂಡಿಕೆ ನಿರ್ವಹಣಾ ವೃತ್ತಿಪರರ ಮಾರ್ಗದರ್ಶಿ
ಸಂಪುಟ V ಯೋಜನಾ ಮೌಲ್ಯನಿರ್ಣಯ ವೃತ್ತಿಪರರ ಮಾರ್ಗದರ್ಶಿ

ವಿತ್ತೀಯ ಕಾರ್ಯನೀತಿ ಸಂಸ್ಥೆ

ವಿತ್ತೀಯ ಕಾರ್ಯನೀತಿ ಸಂಸ್ಥೆಯಲ್ಲಿ 5 ಕೇಂದ್ರಗಳಿವೆ:

  • ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ
  • ಯೋಜನೆ, ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರ
  • ಯೋಜನಾ ನಿರ್ವಹಣೆ
  • ಸಾರ್ವಜನಿಕ ವೆಚ್ಚ ನಿರ್ವಹಣೆ
  • ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಬೋಧಕವರ್ಗವಾಗಿ ತೆಗೆದುಕೊಳ್ಳಲಾಗುತ್ತಿದ್ದು, ಅವರು ಸಮಗ್ರ ಭಾರತದ ದೃಷ್ಟಿಕೋನ, ತಮ್ಮ ಕ್ಷೇತ್ರದ ಸೂಕ್ಷ್ಮ ಕಾರ್ಯಾಚರಣೆಗಳ ಒಳನೋಟವನ್ನು ಪ್ರದರ್ಶಿಸುವ ಸಾಮಥ್ರ್ಯ ಮತ್ತು ಸಾಂಸ್ಥಿಕ ಜ್ಞಾನವನ್ನು ಹೊಂದಿದವರಾಗಿರುತ್ತಾರೆ. ಅವರನ್ನು ಸರ್ಕಾರದ ವ್ಯವಸ್ಥೆಯ ಹೊರಗಿನಿಂದ ತೆಗೆದುಕೊಂಡ ಸಂಶೋಧಕರು ಮತ್ತು ವೃತ್ತಿಪರ ತರಬೇತಿದಾರರುಗಳನ್ನೊಳಗೊಂಡ ಅನಿಶ್ಚಿತ ತಂಡಗಳನ್ನಾಗಿ (fluid teams) ರಚಿಸಲಾಗುತ್ತದೆ. ಈ ತಂಡಗಳು ಶೈಕ್ಷಣಿಕ ಮತ್ತು ವಿಶ್ಲೇಷಣಾತ್ಮಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರೊಂದಿಗೆ ಪರಿಹಾರೋಪಾಯ, ಕಾರ್ಯಕ್ರಮ, ಯೋಜನೆ ಮತ್ತು ನೀತಿಗಳನ್ನು ಆಂತರೀಕರಣಗೊಳಿಸುವಲ್ಲಿ ಬಳಕೆದಾರ ಇಲಾಖೆಗಳು ಮತ್ತು ಗ್ರಾಹಕರಿಗೆ ಸಹಾಯ ನೀಡುತ್ತವೆ. ನಿರ್ದೇಶಕರ ನೇತೃತ್ವದಲ್ಲಿ ಬೋಧಕವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕರು ಉತ್ಕøಷ್ಟವಾದ ಶೈಕ್ಷಣಿಕ ಹಿನ್ನಲೆ ಹೊಂದಿರುವ ವ್ಯಕ್ತಿಯಾಗಿದ್ದು, ಸಮಗ್ರ ಅರ್ಥಶಾಸ್ತ್ರ ಮತ್ತು ವಿತ್ತೀಯ ಸಮಸ್ಯೆಗೆ ಸಂಬಂಧಿಸಿದ ಆಯವ್ಯಯ ನಿರ್ವಹಣೆಯಲ್ಲಿ ವಿಸ್ತøತ ಅನುಭವ ಉಳ್ಳವರಾಗಿರುತ್ತಾರೆ.

ವಿಕಾಸಂನಲ್ಲಿ ಒಟ್ಟು 15 ಬೋಧಕ ವರ್ಗದ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳನ್ನು ನಿಯೋಜನೆ ಅಥವಾ ಗುತ್ತಿಗೆ ಆಧಾರದಲ್ಲಿ ತುಂಬಲಾಗುತ್ತದೆ. ಈ ಬೋಧಕ ವರ್ಗದ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿಯಾಗಿದ್ದು, ಪಿಜಿ. ಡಿಪ್ಲೊಮಾ ಎಂ.ಫಿಲ್, ಪಿಎಚ್‍ಡಿ ಅಥವಾ ಡಾಕ್ಟರೇಟ್ ಪದವಿ ಆನಂತರದ ವಿದ್ಯಾರ್ಹತೆಗಳನ್ನು ಹೊಂದಿದವರಿಗೆ ಅಥವಾ ವೃತ್ತಿಪರ ವಿದ್ಯಾರ್ಹತೆಗಳಾದ ಎಲ್‍ಎಲ್‍ಬಿ, ಎಂಬಿಎ, ಬಿ.ಟೆಕ್, ಸಿ.ಎ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಬೋಧಕ ವರ್ಗದವರು ತರಬೇತಿ ಅಥವಾ ಸಂಶೋಧನೆ ಅಥವಾ ಪ್ರಕಾಶನ ಅಥವಾ ಯೋಜನಾ ನಿರ್ವಹಣೆಯ ಸಿದ್ಧ ದಾಖಲೆಯಲ್ಲಿ ಅನುಭವ ಹೊಂದಿದ್ದಾರೆ.

ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ

ಈ ಕೇಂದ್ರವು ಒಳಗೊಂಡಿರುವ ಪ್ರಮುಖ ವಿತ್ತೀಯ ಕ್ಷೇತ್ರಗಳೆಂದರೆ ಸರ್ಕಾರದ ಆದಾಯ (ತೆರಿಗೆ, ತೆರಿಗೆಯೇತರ ಮತ್ತು ಅನುದಾನ) ಸಂಪನ್ಮೂಲ ಮುನಾಂ್ನದಾಜು, ಖಾತರಿಗಳು, ಸಾದಿಲ್ವಾರು ಹೊಣೆಗಾರಿಕೆಗಳು, ಎರವಲುಗಳನ್ನು ಒಳಗೊಂಡ ಸಾಲ ಮತ್ತು ಹೊಣೆಗಾರಿಕೆ ನಿರ್ವಹಣೆ, ಗಂಡಾಂತರ ನಿರ್ವಹಣೆ ಮತ್ತು ಆಸ್ತಿ ನಿರ್ವಹಣೆ.

ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ

ಈ ಕೇಂದ್ರವು ಒಳಗೊಂಡಿರುವ ಪ್ರಮುಖ ವಿತ್ತೀಯ ಕ್ಷೇತ್ರಗಳೆಂದರೆ ಖಜಾನೆ ನಿರ್ವಹಣೆ, ವಿತ್ತೀಯ ವಿಕೇಂದ್ರೀಕರಣ, ಸರ್ಕಾರದ ಹಣಕಾಸು/ ಲೆಕ್ಕಗಳು, ಆಂತರಿಕ ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಹಣಕಾಸು ನಿರ್ವಹಣೆ.

ಯೋಜನಾ ನಿರ್ವಹಣೆ

ಈ ಕೇಂದ್ರವು ಒಳಗೊಂಡಿರುವ ಪ್ರಮುಖ ಕ್ಷೇತ್ರಗಳೆಂದರೆ ಯೋಜನಾ ನಿರ್ವಹಣೆ, ಯೋಜನಾ ಮೌಲ್ಯಮಾಪನ, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ, ಒಪ್ಪಂದದ ವಿನ್ಯಾಸ ಮತ್ತು ಒಪ್ಪಂದದ ನಿರ್ವಹಣೆ.

ಸಾರ್ವಜನಿಕ ವೆಚ್ಚ ನಿರ್ವಹಣೆ

ಈ ಕೇಂದ್ರದ ವ್ಯಾಪ್ತಿಗೆ ಬರುವ ಪ್ರಮುಖ ವಿತ್ತೀಯ ಕ್ಷೇತ್ರಗಳೆಂದರೆ ಸಾರ್ವಜನಿಕ ನೀತಿ ಮತ್ತು ಸಾರ್ವಜನಿಕ ವೆಚ್ಚ ನಿರ್ವಹಣೆ, ಮಧ್ಯಮಾವಧಿ ವಿತ್ತೀಯ ನೀತಿ, ಕೇಂದ್ರೀಯ ಹಣಕಾಸು ಆಯೋಗ, ಮಹಿಳಾ ಉದ್ದೇಶಿತ ಆಯವ್ಯಯ, ಮತ್ತು ಪ್ರಾದೇಶಿಕ ಅಸಮತೋಲನ.

ಯೋಜನೆ,ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ರ್ತ

ಈ ಕೇಂದ್ರದ ವ್ಯಾಪ್ತಿಗೆ ಬರುವ ಪ್ರಮುಖ ಕ್ಷೇತ್ರಗಳೆಂದರೆ ಇ-ಆಡಳಿತ, ದಸ್ತಾವೇಜೀಕರಣ, ದತ್ತಾಂಶ ನಿರ್ವಹಣೆ, ವಾಸ್ತವಿಕ ವಿಧಾನದಲ್ಲಿ ಮಾಹಿತಿ ಪ್ರಚಾರ, ಇ-ಕಲಿಕೆ, ಕೆಎಸ್‍ಡಬ್ಲ್ಯೂಎಎನ್, ಅಂತರ್ ಜಾಲ ನಿರ್ವಹಣೆ, ಸಂಖ್ಯಾಶಾಸ್ರ್ತ ಮತ್ತು ಮೌಲ್ಯಮಾಪನ.

ಗ್ರಂಥಾಲಯದ ಕುರಿತ ಮಾಹಿತಿ

ಸ್ಥೂಲ ಪರಿಚಯ

ವಿಕಾಸಂ ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಗ್ರಂಥಾಲಯವು ಪರಿಣಿತ ಸಿಬ್ಬಂದಿ ಮತ್ತು ಸ್ವಯಂಚಾಲಿತ ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ್ದು, ಇದು ಬಳಕೆದಾರರ ಜ್ಞಾನವನ್ನು ವೃದ್ಧಿಸಲು ವಿಶಾಲ ಶ್ರೇಣಿಯ ಶೈಕ್ಷಣಿಕ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಆನ್‍ಲೈನ್ ನಿಯತಕಾಲಿಕೆಗಳು, ದತ್ತಾಂಶ ಸಂಚಯಗಳು, ಹಳೆಯ ಸಂಪುಟಗಳು, ವರದಿಗಳು, ಸಿಡಿ/ಡಿವಿಡಿಗಳು ಮತ್ತು ಆಡಿಯೋ/ವಿಡಿಯೋ ಕ್ಯಾಸೆಟ್‍ಗಳನ್ನು ಹೊಂದಿದೆ. ತನ್ನ ಬಳಕೆದಾರರ ಮಾಹಿತಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಮಗ್ರ ಸಾಹಿತ್ಯದ ಸಂಗ್ರಹವನ್ನು ಪ್ರಧಾನವಾಗಿ ತೆರಿಗೆ, ಸಾರ್ವಜನಿಕ ವೆಚ್ಚ ನಿರ್ವಹಣೆ, ಹೂಡಿಕೆ ಮೌಲ್ಯ ಮಾಪನ, ಸಾರ್ವಜನಿಕ ಸಾಲ ಮತ್ತು ಸರ್ಕಾರದ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ.

ಅನುಕ್ರಮಣಿಕೆ ಮತ್ತು ವರ್ಗೀಕರಣ

ದಾಖಲೆಗಳ ಸಂಸ್ಕರಣೆಗೆ ಡಿವೀ ದಶಮಾಂಶ ವರ್ಗೀಕರಣ ವಿಧಾನವನ್ನು ಕೆಲವು ಮಾರ್ಪಾಡುಗಳೊಂದಿಗೆ ಅಳವಡಿಸಲಾಗಿದೆ. ಇ-ಗ್ರಂಥಾಲಯ ತಂತ್ರಾಂಶವನ್ನು ಬಳಸಿ ಎಲ್ಲಾ ದಾಖಲೆಗಳನ್ನು ಗಣಕೀಕೃತ ಗ್ರಂಥ ವಿವರಣ ಪಟ್ಟಿಯ ನಿಯಂತ್ರಣಕ್ಕೆ ತರಲಾಗಿದೆ. ಓದುಗರಿಗಾಗಿ ಆನ್‍ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್‍ನ್ನು ಒದಗಿಸಲಾಗಿದೆ. ಇದರ ಸಹಾಯದಿಂದ ಬೂಲಿಯನ್ ಶೋಧದ ಮೂಲಕ ಮತ್ತು ಲೇಖಕರು, ಶೀರ್ಷಿಕೆ, ವಿಷಯ, ವರ್ಗಸಂಖ್ಯೆ, ಪ್ರಕಾಶಕರು ಅಥವಾ ಶೀರ್ಷಿಕೆಯಲ್ಲಿನ ಪದಗಳ ಮೂಲಕ ಹುಡುಕಬಹುದು. ಪುಸ್ತಕಗಳು ಮತ್ತು ದಾಖಲೆಗಳ ವಿವರಗಳನ್ನು ಸಹ ಕಾರ್ಡ್‍ಅನುಕ್ರಮಣಿಕೆಯ ಮೂಲಕ ಪಡೆಯಲು ಸಾಧ್ಯ. ಹೊಸದಾಗಿ ಸೇರ್ಪಡೆಯಾದ ಪುಸ್ತಕ ಮತ್ತು ಪತ್ರಿಕೆಗಳನ್ನು ವಾರಕೊಮ್ಮ ಪ್ರದರ್ಶಿಸಲಾಗುತ್ತದೆ. ಪುಸ್ತಕ ಪ್ರದರ್ಶನದ ದಿನಾಂಕ ಮುಗಿದ ಬಳಿಕ ಎರವಲು ಪಡೆಯಬಹುದು.

ಕೆಲಸದ ಅವಧಿ

ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 9.00 ರಿಂದ ಸಂಜೆ 6.00ರ ವರೆಗೆ ಗ್ರಂಥಾಲಯ ತೆರೆದಿರುತ್ತದೆ. ಪುಸ್ತಕಗಳನ್ನು ನೀಡುವ-ಪಡೆಯುವ ಸಮಯ: ಬೆಳಗ್ಗೆ 10.00 ರಿಂದ ಸಂಜೆ 5.30ರ ವರೆಗೆ

ಮೂಲ : ವಿತ್ತೀಯ ಕಾರ್ಯನೀತಿ ಸಂಸ್ಥೆ

ಕೊನೆಯ ಮಾರ್ಪಾಟು : 6/19/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate