অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನಾಥ ಮತ್ತು ದಾರಿಹೋಕ ಮಕ್ಕಳು

ಪಟ್ಟಣಗಳಲ್ಲಿ ಬೀದಿ ಬದಿಯಲ್ಲಿ ವಾಸಿಸುವ ಮಕ್ಕಳನ್ನು ಬೀದಿ/ದಾರಿಹೋಕ ಮಕ್ಕಳು ಎಂದು ಕರೆಯಲಾಗುತ್ತದೆ. ಈ ಮಕ್ಕಳು ಕುಟುಂಬ ಮತ್ತು ರಕ್ಷಣೆಯಿಂದ ವಂಚಿತರಾಗುತ್ತಾರೆ. ಬೀದಿ/ದಾರಿಹೋಕ ಮಕ್ಕಳಲ್ಲಿ ೫ ರಿಂದ ೧೭ ವಯಸ್ಸಿನವರಾಗಿದ್ದು ಮತ್ತು ಈ ಮಕ್ಕಳ ಜನತೆಯ ಸ್ಥಿತಿಯು ಒಂದು ಪಟ್ಟಣದಿಂದ ಮತ್ತೊಂದು ಪಟ್ಟಣಕ್ಕೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ. ಬೀದಿ/ಹಾದಿ ಹೋಕ ಮಕ್ಕಳು ತಿರಸ್ಕೃತ ಕಟ್ಟಡಗಳಲ್ಲಿ, ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ, ಉದ್ಯಾನವನಗಳಲ್ಲಿ, ಅಥವಾ ಬೀದಿಯಲ್ಲಿಯೇ ವಾಸಿಸುತ್ತಾರೆ. ಬೀದೆ/ಹಾದಿಹೋಕ ಮಕ್ಕಳ ಕುರಿತು ವಿವರವಾಗಿ ಬಹಳಷ್ಟು ಬರೆದಿದ್ದಾರೆ. ಆದರೆ ಇವರ ಬಗ್ಗೆ ಯಾವುದೇ ಖಚಿತವಾದ/ವಿವರಣೆ ವಿಭಾಗಗಳಿಲ್ಲ. ಆದರೆ ಈ ಮಕ್ಕಳಲ್ಲಿ ಹೆಚ್ಚಿನವರು ಬೀದಿಯಲ್ಲಿಯೇ ಸಮಯ ಕಳೆಯುವ, ಹಾಗೂ ಅಷ್ಟೇನೂ ಪೂರ್ವಭಾವಿ ತಯಾರಿ ಹೊಂದದೆ ಪೋಷಕ/ವಯಸ್ಕರೊಂದಿಗೆ ಇರುವವರು ಇನ್ನೂ ಕೆಲವು ಮಕ್ಕಳು ಸಂಪೂರ್ಣವಾಗಿ ಬೀದಿಯಲ್ಲಿಯೇ ವಾಸಿಸುವಂತಹವರು ಹಾಗೂ ಇವರನ್ನು ವಿಚಾರಿಸಲು ಯಾವುದೇ ವಯಸ್ಕರಿರುವುದಿಲ್ಲ ಆದರೆ ಈಗ ಯೂನಿಸೆಫ್ (Uಟಿiಛಿeಜಿ) ವತಿಯಿಂದ ಲಭ್ಯವಿರುವ ವಿವರಣೆಯ ಪ್ರಕಾರ ಎರಡು ವಿಭಾಗಗಳಾಗಿ ವಿಂಗಡಿಸಬಹುದಾಗಿದ್ದು ಅವು ಯಾವುವೆಂದರೆ;

  • ೧) ಬೀದಿ ಮಕ್ಕಳು - ಬೇಡುವುದರಿಂದ ಹಿಡಿದು ವಸ್ತುಗಳನ್ನು ಮಾರಾಟ ಮಾಡುವಂತಹ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಹುಪಾಲು ಮಕ್ಕಳು ದಿನದ ಕಡೆಯ ಹೊತ್ತಿಗೆ ಮನೆಗೆ ಹಿಂತಿರುಗಿ ತಮ್ಮ ಸಂಪಾದನೆಯನ್ನು ಕುಟುಂಬಕ್ಕೆ ಕೊಡುತ್ತಾರೆ. ಇವರು ಶಾಲೆಗೂ ಹೋಗುವವರಾಗಿರಬಹುದಾಗಿದ್ದು - ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಆದರೆ ಕುಟುಂಬದ ಸೂಕ್ಷ್ಮ/ನಾಜೂಕು ಆರ್ಥಿಕ ಸ್ಥಿತಿಯಿಂದಾಗಿ ಕಡೆಗೆ ಇವರು ಖಾಯಂ ಆಗಿ ಬೀದಿಗಳಲ್ಲಿಯೇ ವಾಸಿಸುತ್ತಾರೆ.
  • ೨) ಬೀದಿ ಮಕ್ಕಳು - ಖಚಿತವಾಗಿಯೂ ಬೀದಿಯಲ್ಲಿಯೇ ವಾಸಿಸುತ್ತಾರೆ. (ಅಥವಾ ಮನೆ ವಾತಾವರಣದಿಂದ ಹೊರಗೆ) ಕುಟುಂಬದೊಂದಿಗೆ ಸಂಬಂಧ ಇದ್ದರೂ ಇದು ಅಷ್ಟಾಗಿ ಗಟ್ಟಿಯಾಗಿಲ್ಲದೆ ಇವರು ದಿನಃಪ್ರತಿ ಅಥವಾ ಅಪರೂಪಕ್ಕೊಮ್ಮೆ ಕುಟುಂಬವನ್ನು ಭೇಟಿ ಮಾಡುತ್ತಿರುತ್ತಾರೆ.

ಭಾರತದಲ್ಲಿ ಅನಾಥ/ಬೀದಿ/ದಾರಿಹೋಕ ಮಕ್ಕಳ ಸ್ಥಾನಮಾನ.

  • ಭಾರತ ದೇಶವು ವಿಶ್ವದಲ್ಲಿಯೇ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ೪೦ ಲಕ್ಷ ಮಕ್ಕಳ ಸಂಖ್ಯೆಯನ್ನು ಹೊಂದಿದೆೆ
  • ಭಾರತವು ವಿವಿಧ ಜನಾಂಗೀಯ, ವಿವಿಧ ಭಾಷೆಗಳು ವಿವಿಧ ಧರ್ಮಗಳ ಹಿನ್ನೆಲೆಯನ್ನು ಹೊಂದಿದೆ. ಇದು ೩೬ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿದ್ದು, ೧೫ ಅಂಗೀಕೃತವಾದ ಭಾಷೆಗಳನ್ನು ಹೊಂದಿದೆ.
  • ಭಾರತದಲ್ಲಿ ಅಂದಾಜು ೬೭.೩ ಲಕ್ಷ ಹಿಂದೂಗಳು ೯.೫ ಲಕ್ಷ ಮುಸ್ಲಿಮರು, ೧.೯ ಲಕ್ಷ ಕ್ರಿಶ್ಚಿಯನ್ಸ್, ೧.೬ ಲಕ್ಷ ಸಿಖ್ಖರು, ೦.೬ ಲಕ್ಷ ಬೌದ್ಧರು ಮತ್ತು ೦.೩ ಲಕ್ಷ ಜನ ಜೈನರಿದ್ದಾರೆ.
  • ಭಾರತದಲ್ಲಿ ಅಂದಾಜಾಗಿ ಶೇ ೨೬% ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದು, ಶೇ ೭೨% ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಾರೆ.
  • ಭಾರತದ ಒಟ್ಟು ಜನಸಂಖ್ಯೆಯ ಶೇ ೦.೯% ಜನರು ಹೆಚ್.ಐ.ವಿ./ಏಡ್ಸ್‌ನಿಂದ ಪೀಡಿತರಾಗಿದ್ದು, ಮೊದಲ ಸ್ಥಾನದಲ್ಲಿರುವ ಆಫ್ರಿಕ ದೇಶವನ್ನು ಬಿಟ್ಟರೆ, ಹೆಚ್.ಐ.ವಿ./ಏಡ್ಸ್ ಪೀಡಿತ ಹೆಚ್ಚಿನ ಜನಸಂಖ್ಯೆಯು ಭಾರತದಲ್ಲಿ ಇದ್ದಾರೆ.
  • ಬೇರೆ ವಿಷಯಗಳಲ್ಲಿ ಭಾರತವನ್ನು ಉನ್ನತಿಯನ್ನು ಸಾಧಿಸಿದ್ದರೂ, ಲಿಂಗತಾರತಮ್ಯತೆ, ಬಡತನ, ಅನಕ್ಷರತೆ, ಮೂಲಭೂತ ಸೌಕರ್ಯಗಳ ಕೊರತೆ, ಹೆಚ್.ಐ.ವಿ./ಏಡ್ಸ್‌ನ್ನು ತಡೆಗಟ್ಟುವುದರಲ್ಲಿ ಮತ್ತು ವಿಕಿತ್ಸಾ ಯೋಜನೆಯನ್ನು ಕೈಗೊಳ್ಳುವಲ್ಲಿ ಬಹು ಮುಖ್ಯವಾಗಿ ಹಿನ್ನಡೆಯನ್ನು ತರುವ ಕಾರಣಗಳಾಗಿವೆ. ಭಾರತದಲ್ಲಿ ಏಡ್ಸ್‌ನಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಇನ್ನೂ ಸಂಪೂರ್ಣವಾಗಿ ಗೋಚರಕ್ಕೆ ಬಂದಿರುವುದಿಲ್ಲ. ಹಾಗೂ ಏಡ್ಸ್‌ನಿಂದುಂಟಾಗುವ ಅನಾಥ ಸ್ಥಿತಿಯನ್ನು ದಾಖಲಿಸಿರುವುದಿಲ್ಲ.
  • ಆದರೂ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಏಡ್ಸ್‌ರೋಗದ ಪರಿಣಾಮವಾಗಿ ಅನಾಥರಾಗಿರುವವರ ಸಂಖ್ಯೆ ಹೆಚ್ಚಾಗಿದ್ದು - ಈ ಸಂಖ್ಯೆಯು ಇನ್ನು ೫ ವರ್ಷಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ.
  • ಭಾರತದಲ್ಲಿ ಒಟ್ಟು ಏಡ್ಸ್‌ಗೆ ತುತ್ತಾದ ೫೫,೭೬೪ ಜನರಲ್ಲಿ ಮಕ್ಕಳ ಸಂಖ್ಯೆಯು ೨,೧೧೨ ಆಗಿದೆ.
  • ೪.೨ ಮಿಲಿಯನ್ ಹೆಚ್.ಐ.ವಿ. ಕೇಸುಗಳಲ್ಲಿ ಶೇ ೧೪% ರಷ್ಟು ಮಕ್ಕಳು ೧೪ ವಯಸ್ಸಿಗಿಂತ ಕೆಳಗಿರುತ್ತಾರೆ ಎಂದು ಅಂದಾಜಿಸಲಾಗಿದೆ.
  • ಐ.ಎಲ್.ಓ. (Iಐಔ) ಮಾಡಿದ ಒಂದು ಅಧ್ಯಯನದಿಂದ ಕಂಡುಬಂದ ಅಂಶವೇನೆಂದರೆ; ಈ ಸೋಂಕು ರೋಗವನ್ನು ತಗುಲಿಸಿಕೊಂಡ ತಂದೆ ತಾಯಿಗಳು ಮಕ್ಕಳನ್ನು ಬಹಳ ತಾರತಮ್ಯದಿಂದ ನೋಡಲಾಗುತ್ತದೆ. ಶೇ ೩೫% ರಷ್ಟು ಜನರಿಗೆ ಮೂಲಭೂತ ಸೌಕರ್ಯಗಳನ್ನೂ ಕೊಡದೆ, ಶೇ ೧೭% ಮಕ್ಕಳನ್ನು ಆದಾಯಕ್ಕಾಗಿ ಬಲವಂತಕ್ಕಾಗಿ ಕ್ಷುಲ್ಲಕ ಕೆಲಸ ತೆಗೆದುಕೊಳ್ಳಲು ಒತ್ತಾಯ ಮಾಡಲಾಗಿದೆ.
  • ಭಾರತದಲ್ಲಿ ಬಾಲಕಾರ್ಮಿಕತೆ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು ಇದು ಬಡತನದಲ್ಲಿ ಬೇರೂರಿದೆ.
  • ಭಾರತದ ೧೯೯೧ರ ಜನಗಣತಿಯು ೧೧.೨೮ ಮಿಲಿಯನ್ ಬಾಲಕಾರ್ಮಿಕರು ಇದ್ದಾರೆಂಬುದನ್ನು ಸೂಚಿಸುತ್ತದೆ.
  • ದೇಶದಲ್ಲಿ ಶೇ ೮೫.೧% ಬಾಲಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿದ್ದು ಈ ಸಂಖ್ಯೆಯು ಕಳೆದ ದಶಕದಿಂದ ಹೆಚ್ಚಳವಾಗಿದೆ.
  • ಸುಧಾರಣೆಯ ರಕ್ಷಣಾಲಯಗಳ ಪ್ರಕಾರ ೩ ಲಕ್ಷ ಮಕ್ಕಳು ಲೈಂಗಿದ ವ್ಯವಹಾರದಲ್ಲಿ ತೊಡಗಿದ್ದಾರೆಂದು ಹೇಳಲಾಗುತ್ತಿದೆ. ಭಾರತದ ಕೆಲವು ಬಾಗಗಳಲ್ಲಿ ದೇವದಾಸಿ ಪದ್ಧತಿಯಿಂದಾಗಿ ಬಾಲ್ಯ ವೇಶ್ಯಾವೃತ್ತಿಯು ಸಾಮಾಜಿಕವಾಗಿ ಒಪ್ಪಿಗೆಯಿದೆ. ಪ್ರತಿಕೂಲ/ಹಿಂದುಳಿದ ಸಮುದಾಯಗಳಲ್ಲಿ ಚಿಕ್ಕ ಹೆಣ್ಣು ಮಕ್ಕಳನ್ನು *ದೇವರಿಗೆ* ಅರ್ಪಿಸಿ ಅವರನ್ನು *ಧಾರ್ಮಿಕ ವೇಶ್ಯೆ* ಎಂದು ಕರೆದು ಬಳಸಿಕೊಳ್ಳಲಾಗುತ್ತಿದೆ. ದೇವದಾಸಿ ಪದ್ಧತಿಯನ್ನು *ಅರ್ಪಣಾ ನಿಷೇಧ ಕಾಯ್ದೆ-೧೯೮೨* ಯ ಮೂಲಕ ಹತ್ತಿಕ್ಕಲಾಗಿದೆ. ದೇವದಾಸಿ ಪದ್ಧತಿಯು ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಒರಿಸ್ಸಾ, ಉತ್ತರ ಪ್ರದೇಶ, ಮತ್ತು ಅಸ್ಸಾಂ ರಾಜ್ಯಗಳಲ್ಲಿ ಚಾಲ್ತಿಯಲ್ಲಿದೆ.
  • ಶೇ ೫೦% ಹೆಚ್ಚು ದೇವದಾಸಿಯರು ವೇಶ್ಯೆಯರಾಗುತ್ತಾರೆ. ಇವರಲ್ಲಿ ಶೇ ೪೦% ವೇಶ್ಯೆಯರು ಪಟ್ಟಣದ ವೇಶ್ಯಾಗೃಹಗಳಲ್ಲಿ, ಉಳಿದವರು ತಮ್ಮ ಹಳ್ಳಿಗಳಲ್ಲಿಯೇ ವೇಶ್ಯಾವೃತ್ತಿಯಲಿ ತೊಡಗಿರುತ್ತಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಪ್ರಕಾರ ಮಹಾರಾಷ್ಟ್ರ ಕರ್ನಾಟಕ ಗಡಿ ಪ್ರಾಂತ್ಯದಲ್ಲಿ ೨,೫೦,೦೦೦ ಲಕ್ಷ ಮಹಿಳೆಯರು ದೇವದಾಸಿಯಾಗಿ ಅರ್ಪಣೆಯಾಗಿದ್ದಾರೆ. ೧೯೯೩ರಲ್ಲಿ ನಡೆಸಿದ ಅಧ್ಯಯನದ ವರದಿ ಪ್ರಕಾರ ಕರ್ನಾಟಕದ ಬೆಳಗಾಂ ಜಿಲ್ಲೆಯಲ್ಲಿ ಶೇ ೯% ದೇವದಾಸಿಗಳು ಹೆಚ್.ಐ.ವಿ. ಪಾಸಿಟಿವ್ ಆಗಿದ್ದಾರೆ.
  • ದಾರಿಹೋಕ/ಬೀದಿಹೋಕ ಮಕ್ಕಳಿಗೆ ತಮ್ಮ ಕುಟುಂಬಗಳಿಂದ ಬೀದಿಯೇ ಒಂದು ವಾಸ್ತವದ ಮನೆಯಾಗಿ ಪರಿಗಣಿಸಲ್ಪಟ್ಟು, ಇಲ್ಲಿ ಜವಾಬ್ದಾರಿಯುತ ವಯಸ್ಕರಿಂದ ರಕ್ಷಣೆ, ಮೇಲ್ವಿಚಾರಣೆ, ಅಥವಾ ನಿರ್ದೇಶನ ಲಭಿಸುವ ಅವಕಾಶವಿರುವುದಿಲ್ಲ. ಮಾನವ ಹಕ್ಕು ಜಾಗರೂಕ ಪಡೆಯ ಪ್ರಕಾರ ಭಾರತದಲ್ಲಿ ಅಂದಾಜು ೧.೮ ಲಕ್ಷ ಮಕ್ಕಳು ಬೀದಿಯ ಮೇಲೆ ಕೆಲಸ ಮಾಡುತ್ತಾರೆ ಹಾಗೂ ಜೀವಿಸುತ್ತಾರೆ. ಬಹುಪಾಲು ಮಕ್ಕಳು ಕ್ರೌರ್ಯ, ವೇಶ್ಯಾವೃತ್ತಿ, ಧೌರ್ಜನ್ಯ ಮತ್ತು ಮಾದಕದ್ರವ್ಯ ಸಾಗಣಿಕೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate