ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಬಾಲ್ಯ ವಿವಾಹ

ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ.

ಭಾರತೀಯ ಸಮಾಜದಲ್ಲಿ ಬಾಲ್ಯವಿವಾಹ ಪದ್ಧತಿಯು ಒಂದು ಸಾಮಾಜಿಕ ಸಂಗತಿಯಾಗಿದೆ. ಈ ಪದ್ಧತಿಯಲ್ಲಿ ಚಿಕ್ಕವಯಸ್ಸಿನ ಹುಡುಗಿಯರಿಗೆ (ಸಾಮಾನ್ಯವಾಗಿ ೧೫ ವಯಸ್ಸಿಗಿಂತ ಕೆಳಗಿನ ಹೆಣ್ಣು ಮಕ್ಕಳು) ವಯಸ್ಸಾದ ಪುರುಷರೊಂದಿಗೆ ಮದುವೆ ಮಾಡುತ್ತಾರೆ. ಎರಡನೇ ವಿಧದ ಪದ್ಧತಿಯೇನೆಂದರೆ; ತಂದೆತಾಯಿಗಳು ಬಾಲ್ಯದಲ್ಲಿಯೇ ಗಂಡು ಮತ್ತು ಹೆಣ್ಣು ಶಿಶುವನ್ನು ಭವಿಷ್ಯದಲ್ಲಿ ಬಾಲ್ಯವಿವಾಹ ಮಾಡಿಸುವಂತೆ ಆಣೆಮಾಡಿರುತ್ತಾರೆ. ಈ ಪದ್ಧತಿಯಲ್ಲಿ ಗಂಡು ಮತ್ತು ಹೆಣ್ಣುಮಕ್ಕಳು ತಮಗೆ ಮದುವೆಯಾಗುವ ಪ್ರಾಪ್ತ ವಯಸ್ಸಾಗುವ ತನಕ ಹಾಗು ವಿವಾಹವನ್ನು ನೆರವೇರಿಸುವ ತನಕ ಒಬ್ಬರನ್ನೊಬ್ಬರು ಸಂಧಿಸುವಂತಿಲ್ಲ. ಕಾನೂನಿನ ಪ್ರಕಾರ ಪುರುಷರಿಗೆ ಮದುವೆಯಾಗುವ ಪ್ರಾಪ್ತ ವಯಸ್ಸು ೨೧ ಹಾಗು ಹೆಣ್ಣುಮಕ್ಕಳಿಗೆ ೧೮ ವರ್ಷಗಳು. ಯಾರೇ ತಂದೆ ತಾಯಿಗಳು ತಮ್ಮ ಮಕ್ಕಳ ಮದುವೆಯನ್ನು ಅಪ್ರಾಪ್ತ ವಯಸ್ಸಿನಲ್ಲಿ ನೆರವೇರಿಸಿದ್ದೇ ಆದರೆ ಅದನ್ನು ವರ್ಜ್ಯ/ರದ್ದುಗೊಳಿಸಬಹುದಾಗಿದೆ.


ಬಾಲ್ಯ ವಿವಾಹ

ಬಾಲ್ಯ ವಿವಾಹದ ದುಷ್ಪರಿಣಾಮಗಳು

 • ಅಪ್ರಾಪ್ತ ವಯಸ್ಸಿನಲ್ಲಿ ಅಥವಾ ಎಳೆ ವಯಸ್ಸಿನಲ್ಲಿ ಹುಡುಗಿಯರಿಗೆ ಮದುವೆಯಾಗಿ ಅವರು ಶೀಘ್ರ ಸಮಯದಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದರಿಂದ ಬಹುಬೇಗನೆ ಮಕ್ಕಳಾಗಿ ಅವರು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಉದಾ:- ಹೆಚ್.ಐ.ವಿ. (ಊIಗಿ) ಮತ್ತು ರೋಗಗಳಿಗೆ ತುತ್ತಾಗುವ ಸಂಭವವಿದೆ.
 • ಸ್ಥಾನಮಾನದ ಅರಿವಿರದ, ಸಬಲರಾಗಿಲ್ಲದ ಮತ್ತು ಇನ್ನೂ ಪ್ರೌಢಾವಸ್ಥೆಯನ್ನು ಹೊಂದದ ಚಿಕ್ಕ ಹುಡುಗಿಯರು ಮನೆಯಲ್ಲಿ ದೌರ್ಜನ್ಯ, ಲೈಂಗಿದ ಶೋಷಣೆ ಮತ್ತು ಸಾಮಾಜಿಕ ಪ್ರತ್ಯೇಕತೆಗೆಗುರಿಯಾಗುವರು.
 • ಬಾಲ್ಯದಲ್ಲಿ ಮದುವೆಯಾಗುವ ಕಾರಣದಿಂದ ಶಿಕ್ಷಣ ದ ಕೊರತೆಯುಂಟಾಗಿ, ಸಮರ್ಪಕ ಉದ್ಯೋಗ ಸಿಗದೆ ದೀರ್ಘಕಾಲದ ಬಡತನಕ್ಕೆ ತುತ್ತಾಗುತ್ತಾರೆ.
 • ಬಾಲ್ಯವಿವಾಹದಿಂದ ಹೆಣ್ಣುಮಕ್ಕಳು, ನಿಷ್ಕಾರಣವಾದ ಅಸಮಾನತೆ, ಖಾಯಿಲೆ ಮತ್ತು ಬಡತನದಂತಹ ಸಮಸ್ಯೆಗಳಿಗೆ ಸತತವಾಗಿ ಗುರಿಯಾಗುತ್ತಾರೆ.
 • ಎಳೆವಯಸ್ಸಿನಲ್ಲಿಯೇ ಮದುವೆಯಾಗಿರುವುದರಿಂದ ಹೆಣ್ಣುಮಕ್ಕಳಿಗೆ ಇನ್ನೂ ದೈಹಿಕವಾಗಿ ಬಲ ಹೊಂದಿಲ್ಲದೆ ಇರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಾಗುತ್ತದೆ.

ಬಾಲ್ಯ / ಚಿಕ್ಕ ವಯಸ್ಸಿನ ವಿವಾಹದ ಕಾರಣಗಳು ಮತ್ತು ಇದರ ವಿರುದ್ಧ ತೆಗೆದುಕೊಳ್ಳ ಬೇಕಾದ ಕ್ರಮಗಳು ಕಾರಣಗಳು.

 • ಬಡತನ
 • ಹೆಣ್ಣುಮಕ್ಕಳ ಕಡಿಮೆ ಶಿಕ್ಷಣ ಮಟ್ಟ
 • ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಹೊರೆ ಎಂದು ಭಾವಿಸುವುದರಿಂದ ಹೆಣ್ಣುಮಕ್ಕಳಿಗೆ ಕಡಿಮೆ ಸ್ಥಾನಮಾನ.
 • ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯಗಳು.

ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಕೈಗೊಂಡಿರುವ ಕ್ರಮಗಳು.

 • ಬಾಲ್ಯವಿವಾಹದ ವಿರುದ್ಧ ಕಾನೂನನ್ನು ರಚಿಸುವುದು.
 • ಹೆಣ್ಣುಮಕ್ಕಳಿಗೆ ಹೆಚ್ಚು ಶಿಕ್ಷಣ ದೊರಕುವಂತೆ ಮಾಡುವುದು.
 • ಹಾನಿಕಾರವಾದ ಸಾಂಸ್ಕೃತಿಕ ಪದ್ಧತಿಗಳನ್ನು ಬದಲಾಯಿಸುವುದು.
 • ಸಮುದಾಯ ಕಾರ್ಯಕ್ರಮಗಳನ್ನು ಬೆಂಬಲಿಸುವುದು.
 • ವಿದೇಶಿ ನೆರವನ್ನು ಗರಿಷ್ಠಗೊಳಿಸುವುದು.
 • ಬಾಲಿಕಾ ವಧುಗಳ ಅಗತ್ಯತೆಯನ್ನು ಪೂರೈಸುವುದು.
 • ಕಾರ್ಯಕ್ರಮಗಳ ಮೌಲ್ಯಮಾಪನ ಮಾಡಿ ಅವುಗಳ ಸಫಲತೆಯನ್ನು ತೀಳಿಯುವುದು.

ಸರ್ಕಾರದ ಕ್ರಮಗಳು

 • ಬಾಲ್ಯ ವಿವಾಹ ತಡೆ ಕಾಯ್ದೆ.
 • ಬಾಲ್ಯ ವಿವಾಹವನ್ನು ನಿಗ್ರಹಿಸಲು ಹಾಗೂ ಮದುವೆಯನ್ನು ಊರ್ಜಿತಗೊಳಿಸಲು ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮದುವೆಗಳನ್ನು ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲಾಗಿದೆ.
 • ಬಾಲ್ಯವಿವಾಹವನ್ನು ೨೦೧೦ರ ಒಳಗಾಗಿ ಸಂಪೂರ್ಣವಾಗಿ ನಿಲ್ಲಿಸಲು ಮಕ್ಕಳ ರಾಷ್ಟ್ರೀಯ ಯೋಜನೆ - ೨೦೦೫ ರಲ್ಲಿ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಭಾರತ ಸರ್ಕಾರ ಪ್ರಕಟಣೆ) ಗುರಿಯನ್ನಾಗಿಸಿದೆ.

ಮೂಲ: ಪೋರ್ಟಲ್ ತಂಡ

3.0
ಕಂಠಯ ಸ್ವಾಮಿ May 15, 2019 05:05 PM

ಪೀಠಿಕೆ,ವಿಷಯ ವಿವರಣೆ ಮತ್ತು ಮುಕ್ತಾಯ ಅಥವಾ ಉಪಸಂಹಾರ ಸಿಗಬಹುದೇ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top