অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೆಣ್ಣುಶಿಶುವಿನ ಹತ್ಯೆ

ಹೆಣ್ಣು ಮಗುವನ್ನು ಗಂಡುಮಗುವಿಗೆ ಹೋಲಿಸಿದಾಗ ಗಂಡು ಮಗುವಿಗೆ ಆದ್ಯತೆ ಮತ್ತು ಹೆಣ್ಣು ಮಗುವಿನ ಜನನದ ಬಗ್ಗೆ ಕಡಿಮೆಮಹತ್ವಗಳಿಂದಾಗಿ ಹೆಣ್ಣು ಶಿಶುವಿನ ಹತ್ಯೆಯನ್ನು ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತಿದೆ. ಗಂಡುಮಕ್ಕಳಿಗೆ ಹೋಲಿಸಿದಾಗ, ಹೆಣ್ಣುಮಕ್ಕಳಿಗೆ ಸಾಂಸ್ಕೃತಿಕವಾಗಿ ಕಡಿಮೆ ಪ್ರಮಾಣದ ಮಹತ್ವವಿದೆಯೋ ಅಂತಹ ಪ್ರದೇಶಗಳಲ್ಲಿ ಹೆಣ್ಣು ಶಿಶು ಹತ್ಯೆಯಂತಹ ಪದ್ಧತಿ ಆಚರಣೆಯಲ್ಲಿದೆ.

ಹೆಣ್ಣು ಶಿಶು ಹತ್ಯೆಯ ಬಗ್ಗೆ ಸತ್ಯಾಂಶಗಳು

  • ಇತ್ತೀಚಿಗಿನ ಸಂಯುಕ್ತ ರಾಷ್ಟ್ರಗಳ ಮಕ್ಕಳ ನಿಧಿ (ಯೂನಿಸೆಫ್)ನ ವರದಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೫೦ ಮಿಲಿಯನ್‌ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ವ್ಯವಸ್ಥಿತವಾದ ಲಿಂಗ ತಾರತಮ್ಯದಿಂದಾಗಿ ಕಾಣೆಯಾಗುತ್ತಿದ್ದಾರೆ.
  • ಬಹುಪಾಲು ದೇಶಗಳಲ್ಲಿ ಪ್ರತಿ ೧೦೦ ಗಂಡು ಮಕ್ಕಳ ಜನನಕ್ಕೆ ಸರಿಸುಮಾರು ೧೦೫ ಹೆಣ್ಣು ಮಕ್ಕಳು ಜನಿಸುತ್ತಾರೆ.
  • ಭಾರತ ದೇಶದಲ್ಲಿ ೧೦೦ ಪುರುಷರ ಸಂಖ್ಯೆಗೆ ೯೩ಕ್ಕೂ ಕಡಿಮೆ ಮಹಿಳೆಯರ ಸಂಖ್ಯೆ ಇದೆ.
  • ಸಂಯುಕ್ತ ರಾಷ್ಟ್ರದ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು ೨೦೦೦ ಹೆಣ್ಣುಮಕ್ಕಳು ಹುಟ್ಟುವುದಕ್ಕೂ ಮುನ್ನವೇ ಗರ್ಭಪಾತದಿಂದ ಭ್ರೂಣಹತ್ಯೆಗೆ ಒಳಗಾಗುತ್ತಾರೆ.

ಅಡಗಿದ ಅಪಾಯ

ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಯು ಭಾರತದ ಜನಸಂಖ್ಯೆಯ ಮೇಲೆ ವಿಷಮ ಪರಿಸ್ಥಿತಿಯನ್ನು ಬೀರಬಹುದು. ಹೇಗೆಂದರೆ; ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುವುದರಿಂದ ಲೈಂಗಿಕ ದೌರ್ಜನ್ಯ, ಹೆಂಡತಿಯನ್ನು ಪರ ಪುರುಷನೊಂದಿಗೆ ಹಂಚಿಕೊಳ್ಳುವುದು, ಮಕ್ಕಳ ಮೇಲೆ ದೌರ್ಜನ್ಯ ಇತ್ಯಾದಿಗಳು ಹೆಚ್ಚ ಬಹುದೆಂದು ಸಂಯುಕ್ತ ರಾಷ್ಟ್ರ ಎಚ್ಚರಿಸಿದೆ. ಇದು ದೇಶದ ಸಾಮಾಜಿಕ ಮೌಲ್ಯಗಳನ್ನು ಅಧೋಗತಿಗಿಳಿಸಿ ಸಂಧಿಗ್ಧ ಪರಿಸ್ಥಿತಿಯನ್ನು ಉಂಟುಮಾಡುತ್ತದೆ.

ಕಾರಣಗಳು

  • ಆದರೂ ಮಹಿಳೆಯರ ಬಗೆಗಿನ ಪಕ್ಷಪಾತವು ಬರೇ ಬಡ ಕುಟುಂಬಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೆಚ್ಚಿನ ತಾರತಮ್ಯಗಳು ಸಾಮಾಜಿಕ ನಿಯಮಗಳು ಮತ್ತು ಸಾಂಸ್ಕೃತಿಕ ನಂಬಿಕೆಯ ಮೇಲೆ ಆಧಾರಿತವಾಗಿವೆ. ಮಹಿಳೆಯರ ಮೇಲಿನ ತಾರತಮ್ಯವನ್ನು ನಿಲ್ಲಿಸಬೇಕಾದರೆ, ಇಂತಹ ಪದ್ಧತಿಗಳ ವಿರುದ್ಧ ಸವಾಲನ್ನು ಹಾಕಬೇಕಾಗುತ್ತದೆ.
  • ಭಾರತದೇಶದಲ್ಲಿ ಹೆಣ್ಣುಮಕ್ಕಳಿಗೆ ಮಹತ್ವ ಕೊಡದಿರಲು ಮೂರು ಕಾರಣಗಳಿವೆ. ಭಾರತದಲ್ಲಿ ನಡೆಸಿರುವ ಅಧ್ಯಯನದ ಪ್ರಕಾರ ಮಹಿಳೆಯರ ಆರ್ಥಿಕ ಉಪಯುಕ್ತತೆ, ಸಾಮಾಜಿಕ ಮತ್ತು ಸಾಂಸ್ಕೃತಿಕ ಉಪಯುಕ್ತತೆ ಮತ್ತು ಧಾರ್ಮಿಕ ಸಮಾರಂಭಗಳು.
  • ಅಧ್ಯಯನದ ಪ್ರಕಾರ ಆರ್ಥಿಕ ಉಪಯುಕ್ತತೆ ಎಂದರೆ; ಕುಟುಂಬದ ಕೃಷಿ ಕೆಲಸಕ್ಕಾಗಿ ಅಥವಾ ಕುಟುಂಬದ ವ್ಯವಹಾರ, ಕೂಲಿ ಸಂಪಾದನೆ, ವೃದ್ಧ ತಂದೆ ತಾಯಿಗಳ ಪೋಷಣೆ ಮುಂತಾದ ಕಾರಣಗಳಿಗಾಗಿ ಹೆಣ್ಣು ಮಕ್ಕಳಿಗೆ ಹೋಲಿಸಿದರೆ. ಗಂಡುಮಕ್ಕಳನ್ನು ಹೆಚ್ಚು ಉಪಯುಕ್ತರಾಗುವರು ಎಂಬ ನಂಬಿಕೆ.
  • ಗಂಡು ಮಕ್ಕಳು ಮದುವೆಯಾಗಿ ಸೊಸೆಯನ್ನು ಕುಟುಂಬಕ್ಕೆ ಕರೆತರುವುದರಿಂದ ಅವನನ್ನು ಒಂದು ಆಸ್ತಿಯಾಗುವರು. ಅವಳೂ ಕೂಡ ಕುಟುಂಬದ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವಳು ಮತ್ತು ಬರುವಾಗ ವರದಕ್ಷಿಣೆಯನ್ನು ತರುವುದರಿಂದ ಪ್ರತಿಫಲ ಗಂಡನ ಮನೆಯವರಿಗೆ ಆರ್ಥಿಕ ಪ್ರತಿಫಲ ಲಭಿಸುವುದು . ಆದರೆ ಹೆಣ್ಣುಮಕ್ಕಳ ಮದುವೆ ಮಾಡಬೇಕು. ಆಗ ವರದಕ್ಷಿಣೆ ನೀಡಬೇಕಾಗಿರುವುದರಿಂದ ಹೆಣ್ಣು ಮಕ್ಕಳನ್ನು ಆರ್ಥಿಕ ಹೊರೆ ಎಂದು ಭಾವಿಸಲಾಗುತ್ತದೆ.
  • ಚೀನಾದೇಶದಲ್ಲಿಯಂತೆಯೇ ಭಾರತ ದೇಶದಲ್ಲಿ ಪಿತೃ ಪ್ರಧಾನ ಪದ್ಧತಿ ಇರುವುದರಿಂದ ವಂಶವನ್ನು ಮುಂದುವರೆಸಲು ಕಡಿಮೆ ಎಂದರೆ ಒಬ್ಬ ಗಂಡು ಮಗುವನ್ನು ಪಡೆಯುವುದು ಕಡ್ಡಾಯವಾಗುತ್ತದೆ. ಹಾಗೂ ಹಲವು ಗಂಡು ಮಕ್ಕಳನ್ನು ಪಡೆಯುವುದರಿಂದ ಒಂದು ಕುಟುಂಬದ ಅಂತಸ್ತು ಅಧಿಕವಾಗುತ್ತದೆ ಎಂದು ಭಾವಿಸಲಾಗುತ್ತದೆ.
  • ಹಿಂದೂ ಸಂಪ್ರದಾಯದ ಪ್ರಕಾರ ಧಾರ್ಮಿಕ ಸಮಾರಂಭಗಳಲ್ಲಿ ಗಂಡು ಮಕ್ಕಳಿಗೆ ಮಾತ್ರ ಕಾರ್ಯ ನಿರ್ವಹಿಸುವುದಕ್ಕೆ ಅವಕಾಶವಿರುತ್ತದೆ. ಮರಣ ಹೊಂದಿದ ತಂದೆ ತಾಯಿಗಳಿಗೆ ಮೋಕ್ಷ ಸಿಗಬೇಕಾದಲ್ಲಿ ಗಂಡು ಮಗನೇ ಅವರ ಚಿತೆಗೆ ಬೆಂಕಿಯನ್ನಿಡುವುದು ಕಡ್ಡಾಯ ಸಂಪ್ರದಾಯವಾಗಿರುತ್ತದೆ.

ಸರ್ಕಾರ ಕೈಗೊಂಡಿರುವ ಕ್ರಮಗಳು

ಈ ಸಾಮಾಜಿಕ ಪಿಡುಗನ್ನು ನಿವಾರಿಸುವುದಕ್ಕಾಗಿ ಮತ್ತು ಸಮಾಜದಲ್ಲಿ ಜನರ ವರ್ತನೆಯನ್ನು ಬದಲಾಯಿಸುವುದಕ್ಕಾಗಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ವಿವಿಧ ಕಾನೂನುಗಳು, ಕಾಯ್ದೆಗಳು ಮತ್ತು ಯೋಜನೆಗಳನ್ನು ರೂಪಿಸಲಾಗಿದೆ.

  • ಹೆಣ್ಣು ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಕಾನೂನುಗಳು.
  • ಹೆಣ್ಣು ಮಕ್ಕಳ ಹಕ್ಕನ್ನು ಒದಗಿಸುಲು ಅನುಕೂಲಕರವಾದ ಕಾನೂನುಗಳು.
  • ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮ ಪಾಲು ಕಾನೂನುಗಳು.
  • ಹೆಣ್ಣು ಮಕ್ಕಳಿಗೆ ಇತರೆ ಯೋಜನೆಗಳು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 7/2/2020

© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate