ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಬಲೀಕರಣ ಯೋಜನೆ

ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಸಂಬಂದಿಸಿದಂತೆ ಒಂದು ಪ್ರಮುಖ ಅವದಿಯಾಗಿದೆ.

ರಾಜೀವ ಗಾಂದಿ ಪ್ರಾಯಪೂರ್ವ ಬಾಲಕಿಯರ ಸಬಲೀಕರಣ ಯೋಜನೆ - ಸಬಲಾ:

ಜೀವನದಲ್ಲಿ ಕಿಶೋರಾವಸ್ಥೆಯು ಮಾನಸಿಕ, ಬೌದ್ಧಿಕ, ಭಾವನಾತ್ಮಕ ಬೆಳವಣಿಗೆಗೆ ಸಂಬಂದಿಸಿದಂತೆ ಒಂದು ಪ್ರಮುಖ ಅವದಿಯಾಗಿದೆ.  ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಒದಗಿಸುವುದಕ್ಕಾಗಿ  ಹೊಸ ಚಿಂತನೆಯ ರೂಪದಲ್ಲಿ ಕಿಶೋರಿ ಶಕ್ತಿ ಯೋಜನೆ  ಹಾಗು ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಠಿಕ ಆಹಾರ ಕಾರ್ಯಕ್ರಮ   ಈ ಎರಡು ಯೋಜನೆಗಳನ್ನು ವಿಲೀನಗೊಳಿಸಿ ಕೇಂದ್ರ ಸಕರ್ಾರವು ಸಬಲ ಎಂಬ ಹೊಸ ಯೋಜನೆಯನ್ನು  ಜಾರಿಗೊಳಿಸಲು , ಕೇಂದ್ರ  ಹಾಗೂ ರಾಜ್ಯ ಸಕರ್ಾರದಿಂದ ಆದೇಶ ಹೊರಡಿಸಲಾಗಿದೆ. ಈ ಯೋಜನೆಯಡಿ  ರಾಜ್ಯದ  9 ಜಿಲ್ಲೆಗಳನ್ನು (ಗುಲ್ಬಗರ್ಾ, ಕೋಲಾರ, ಬೆಂಗಳೂರು, ಬಳ್ಳಾರಿ, ಬಿಜಾಪುರ, ಧಾರವಾಡ, ಚಿಕ್ಕಮಗಳೂರು, ಉತ್ತರ ಕನ್ನಡ, ಕೊಡಗು )   ಪ್ರಾಯೋಗಿಕವಾಗಿ ಆಯ್ಕೆ ಮಾಡಲಾಗಿದೆ.

ಸಬಲ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ   ಮತ್ತು ಪೌಷ್ಠಿಕೇತರ ಅಂಶ  ಗಳ ಸೇವೆಯನ್ನು ಕಿಶೋರಿಯರಿಗೆ ನೀಡಲಾಗುತ್ತಿದೆ. ಪೂರಕ ಪೌಷ್ಠಿಕ ಆಹಾರ (ಖಓಕ) ವನ್ನು 11-14 ವರ್ಷದ ಶಾಲೆ ಬಿಟ್ಟಿರುವ ಮತ್ತು 14-18 ವರ್ಷದ ಎಲ್ಲಾ ಕಿಶೋರಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಶಿಶು ಅಬಿವೃದ್ದಿ ಯೋಜನೆಯಡಿ ಒದಗಿಸಲು ಕೇಂದ್ರ ಸಕರ್ಾರದ ನಿದರ್ೇಶನವಿರುತ್ತದೆ.

ಪೌಷ್ಠಿಕೇತರ ಅಂಶದಡಿ   ಕಿಶೋರಿಯರಿಗೆ ಆರೋಗ್ಯ ತಪಾಸಣೆ,  ಪೌಷ್ಠಕತೆ ಮತ್ತು ಆರೋಗ್ಯ ಶಿಕ್ಷಣ ,ಕುಟುಂಬ ಕಲ್ಯಾಣ, ಮಕ್ಕಳ ಪಾಲನೆ, ಗೃಹ ನಿರ್ವಹಣೆ, ಸಂತಾನೋತ್ಪತಿ ಮತ್ತು ಲೈಂಗಿಕ ಆರೋಗ್ಯ, ಜೀವನ ಕೌಶಲ್ಯ ಶಿಕ್ಷಣ, ವೃತ್ತಿಪರ/ಕೌಶಲ್ಯ ಅಬಿವೃದ್ದಿ ತರಬೇತಿಯನ್ನು ನೀಡಲಾಗುತ್ತದೆ.2012-13 ನೇ ಸಾಲಿಗೆ ರೂ.290.55 ಲಕ್ಷಗಳು ಅನುದಾನವನ್ನು ಬಿಡುಗಡೆಗೊಳಿಸಿದ್ದು, ರೂ.290.55 ಲಕ್ಷಗಳ ವೆಚ್ಚ ಮಾಡಲಾಗಿದೆ.

 

2.8
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top