ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( ಎನ್.ಸಿ.ಪಿ.ಸಿ.ಆರ್)ವು ಮಕ್ಕಳ ಹಕ್ಕುಗಳ ಸಾರ್ವತ್ರೀಕರಣ ಮತ್ತು ಅಭಗ್ನತೆಯ ತತ್ವಗಳಿಗೆ ಒಟ್ಟು ನೀಡುತ್ತದೆ. ಅಲ್ಲದೆ ಮಕ್ಕಳಿಗೆ ಸಂಬಂಧಿಸಿದ ದೇಶದ ಎಲ್ಲಾ ನೀತಿಗಳಲ್ಲಿ ತ್ವರಿತ ಗತಿಯನ್ನು ಗುರುತಿಸುತ್ತದೆ. ೦ ಯಿಂದ 18 ವರ್ಷ ವಯಸ್ಸಿನ ಎಲ್ಲಾ ಮಕ್ಕಳ ಹಕ್ಕುಗಳ ಸಂರಕ್ಷಣೆಯೇ ಆಯೋಗದ ಪ್ರಾಮುಖ್ಯತೆಯಾಗಿದೆ. ಹಾಗಾಗಿ ಎಲ್ಲಾ ನೀತಿಗಳು ಅತ್ಯಂತ ಭೇದನಿಯ ಮಕ್ಕಳಿಗೆ ಪ್ರಾಶಸ್ತ್ಯ ನೀಡುತ್ತದೆ. ಈ ನಿಟ್ಟಿನಲ್ಲಿ ಅತ್ಯಂತ ಹಿಂದುಳಿದ ಪ್ರದೇಶದ ಅಥವಾ ಕೆಲವು ಸನ್ನಿವೇಶಗಳಲ್ಲಿ ಮಕ್ಕಳು ಇತ್ಯಾದಿಗಳಿಗೆ ಆಯೋಗ ಕೇಂದ್ರೀಕರಿಸುತ್ತದೆ. ಆಯೋಗದ ನಂಬಿಕೆಯೆಂದರೆ ಕೇವಲ ಸನ್ನಿವೇಶಗಳಲ್ಲಿ ಮಕ್ಕಳ ಸಮಸ್ಯೆಗಳತ್ತ ಗಮನಹರಿಸಿದ್ದಲ್ಲಿ ಕೇಂದ್ರೀಕರಿಸಲಾಗಿರದ ಹಲವಾರು ಭೇದನೀಯ ಮಕ್ಕಳನ್ನು ಕೈಬಿಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೀತಿಗಳನ್ನು ಜಾರಿಗೆ ತರುವಾಗ ಎಲ್ಲಾ ಮಕ್ಕಳಿಗೆ ತಲುಪುವ ಕಾರ್ಯ ರಾಜಿಯಾಗಿ ಸಮಾಜದಲ್ಲಿನ ಮಕ್ಕಳ ಹಕ್ಕುಗಳ ಉಲ್ಲಂಘನೆಯು ಮುಂದುವರಿಯುತ್ತದೆ. ಇದರಿಂದ ಗುರಿಯಾಗಿಸಿರುವ ಜನಸಮುದಾಯದ ಕಾರ್ಯಕ್ರಮದ ಮೇಲೂ ಪರಿಣಾಮ ಬೀರುತ್ತದೆ. ಆದುದರಿಂದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸುಸಜ್ಜಿತ ವಾತಾವರಣ ನಿರ್ಮಿಸಿದಲ್ಲಿ ಮಾತ್ರ ಕೇಂದ್ರೀಕರಿಸಲಾಗಿರುವ ಮಕ್ಕಳನ್ನು ಗುರುತಿಸಿ ಅವರಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವ ಆತ್ಮವಿಶ್ವಾಸವನ್ನು ಮೂಡಿಸಬಹುದಾಗಿದೆ.
ಅದೇ ರೀತಿ ಪ್ರತಿ ಮಗು ಚಲಾಯಿಸುವ ಹಕ್ಕು ಪರಸ್ವರ ಬೆಂಬಲ ನೀಡುವುದು ಮತ್ತು ಅವಲಂಬಿತವಾಗಿವೆ. ಎಂದು ಆಯೋಗ ಪರಿಗಣಿಸುತ್ತದೆ. ಹಾಗಾಗಿ ಹಕ್ಕುಗಳಲ್ಲಿ ಶ್ರೇಣಿಕರಿಸುವ ಪ್ರಶ್ನೆಯೇ ಬರುವುದಿಲ್ಲ. ಒಂದು ಮಗುವು ತನ್ನ 18 ನೇ ವರ್ಷದಲ್ಲಿ ಅನುಭವಿಸುತ್ತಿರುವ ಹಕ್ಕು ಆಕೆ ಹುಟ್ಟಿದಾಗಿನಿಂದ ಆಕೆಗಿರುವ ಎಲ್ಲಾ ಅಧಿಕಾರಿಗಳ ಮೇಲೆ ಅವಲಂಬಿಸಿದೆ. ಹಾಗಾಗಿ ನೀತಿಗಳ ಮಧ್ಯವರ್ತನೆ ಎಲ್ಲಾ ಹಂತಗಳಲ್ಲಿ ಪ್ರಾಮುಖ್ಯತೆ ಹೊಂದುತ್ತದೆ. ಆಯೋಗಕ್ಕೆ ಮಕ್ಕಳ ಎಲ್ಲಾ ಹಕ್ಕುಗಳು ಸಮಾನ ಮಹತ್ವದಾಗಿರುತ್ತದೆ.
ಆಯೋಗದ ಜವಾಬ್ದಾರಿಗಳು
ಸಂಸತ್ತಿನ (ಡಿಸೆಂಬರ್ 2005) ಕಾಯ್ದೆಯಾದ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗಗಳು ಕಾಯ್ದೆ, 2005(2006 ರ 4) ಅ ಅಡಿಯಲ್ಲಿ ಮಕ್ಕಳು ಹಕ್ಕುಗಳ ರಕ್ಷಣೇಗಾಗಿ ರಾಷ್ಟ್ರೀಯ ಆಯೋಗ (ಎನ್.ಸಿ.ಪಿ.ಸಿ.ಆರ್)ನ್ನು ಕಾನೂನುಬದ್ಧ ಅಂಗವಾಗಿ ಮಾರ್ಚ್ ೨೦೦೭ ರಲ್ಲಿ ಸ್ಥಾಪಿಸಲಾಯಿತು. ದೇಶದಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ, ಪ್ರೋತ್ಸಾಹಿಸಿ ಅವುಗಳನ್ನು ಕಾಪಾಡುವ ಉದ್ದೇಶದಿಂದ ಆಯೋಗವನ್ನು ಸ್ಥಾಪಿಸಲಾಗಿದೆ.
ಕಾಯ್ದೆಯ ಪ್ರಕಾರ ಗೊತ್ತು ಮಾಡಿರುವ ಆಯೋಗದ ಕಾರ್ಯಚಟುವಟಿಕೆಗಳು ಈ ಕೆಳಕಂಡಿತಿವೆ;
ಆಯೋಗವು ಈ ಕೆಳಕಂಡ ಎಲ್ಲಾ ಅಥವಾ ಯಾವುದಾದರೂ ಕಾರ್ಯಗಳನ್ನು ಮಾಡಬಹುದಾಗಿದೆ.
- ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಕಾಯ್ದೆ ಅಥವಾ ಇತರೆ ಕಾನೂನಿನ ಪ್ರಕಾರ ಜಾರಿಯಲ್ಲಿರುವ ಭದ್ರತೆಗಳನ್ನು ಪರಿಶೀಲಿಸಿ, ಪರೀಕ್ಷಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸಲಹೆ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವುದು.
- ಈ ಭದ್ರತೆಗಳ ಅನುಷ್ಠಾನ ಕುರಿತು ವಾರ್ಷಿಕ ಅಥವಾ ಆಯೋಗ ಸೂಕ್ತವೆನ್ನುವ ಕಾಲಕಾಲಕ್ಕೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತುತ ಪಡಿಸುವುದು.
- ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತನಿಖೆ ಮಾಡಿ ಅಂತಹ ಪ್ರಕರಣಗಳಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಲು ಶಿಫಾರಸ್ಸು ಮಾಡುವುದು
- ಭಯೋತ್ಪಾದನೆ, ಕೋಮು ಗಲಬೆ, ದೊಂಬಿ, ನೈಸರ್ಗಿಕ ವಿಕೋಪ, ಕೌಟುಂಬಿಕ ದೌರ್ಜನ್ಯ, ಹೆಚ್ ಐ ವಿ/ಏಡ್ಸ್ ಮಾನವ ಸಾಗಾಣಿಕೆಗೆ, ಕ್ರೂರತನ, ಪೀಡೆ ಮತ್ತು ದುರುಪಯೋಗ, ಅಶ್ಲೀಲ ಚಿತ್ರೀಕರಣ ಹಾಗೂ ವೇಶ್ಯವಾಟಿಕೆ ಪೀಡಿತ ಮಕ್ಕಳಿಗೆ ತಮ್ಮ ಹಕ್ಕುಗಳನ್ನು ಚಲಾಯಿಸುವಲ್ಲಿ ಉಂಟಾಗುವ ಬಾದೆಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಶಿಫಾರಸ್ಸು ಮಾಡುವುದು.
- ಸಂಕಷ್ಟದಲ್ಲಿರುವ ಮಕ್ಕಳು, ಬಾಲಾಪರಾಧಿಗಳು ಅಪಾಯದ ಅಂಚಿನಲ್ಲಿರುವ ಮಕ್ಕಳು, ಕುಟುಂಬ ವಂಚಿತ ಮಕ್ಕಳು ಮತ್ತು ಖೈದಿಗಳ ಮಕ್ಕಳು ಸೇರಿದಂತೆ ವಿಶೇಷ ಆರೈಕೆ ಮತ್ತು ರಕ್ಷಣೆಯ ಅವಶ್ಯಕತೆಯಿರುವ ಮಕ್ಕಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಿ ಸೂಕ್ತ ಕ್ರಮಗಳನ್ನು ಸೂಚಿಸುವುದು.
- ಒಪ್ಪಂದಗಳನ್ನು ಮತ್ತು ಅಂತರಾಷ್ಟ್ರೀಯ ಸಾಧನಗಳನ್ನು ಪರಿವೀಕ್ಷಿಸುವುದು, ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ನೀತಿಗಳನ್ನು, ಕಾರ್ಯಕ್ರಮಗಳನ್ನು ಮತ್ತು ಇತರೆ ಚಟುವಟಿಕೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಿ ಮಕ್ಕಳ ಒಳಿತಿಗಾಗಿ ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡುವುದು.
- ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳುವುದು ಮತ್ತು ಅವುಗಳನ್ನು ಪ್ರೋತ್ಸಾಹಿಸುವುದು.
ಮೂಲ: ಪೋರ್ಟಲ್ ತಂಡ