ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಹಂಚಿಕೊಳ್ಳಿ

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಆ) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ (ಕೇಂ.ಯೋ): ಸರ್ಕಾ ರದಿಂದ ಮಾನ್ಯತೆ ಪಡೆದ ಕಾಲೇಜು ವಿಶ್ವ ವಿದ್ಯಾನಿಲಯಗಳಲ್ಲಿ ಮೆಟ್ರಿಕ್ ನಂತರದ ವಿವಿಧ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ ಅರ್ಹ  ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ವಿದ್ಯಾರ್ಥಿವೇತನವನ್ನು ಭಾರತ ಸರ್ಕಾರದ ಮಾಗಸೂಚಿಯನ್ವಯ ನಿಗಧಿಪಡಿಸಿದ ದರದಂತೆ ಮಂಜೂರು ಮಾಡಲಾಗುತ್ತಿದೆ.

ಸದರಿ ವಿದ್ಯಾರ್ಥಿವೇತನಕ್ಕೆ ಪೋಷಕರ ವಾರ್ಷಿಕ  ವರಮಾನವು ರೂ.2.50 ಲಕ್ಷಕ್ಕೆ ಮೀರದಿದ್ದಲ್ಲಿ, ಸಂಪೂಣವಾಗಿ ಪೂಣ ನಿರ್ವಹಣಾ  ವೆಚ್ಚ ಹಾಗೂ ಕಡ್ಡಾಯ ಶುಲ್ಕ ಪಾವತಿಯನ್ನು ನೀಡಲಾಗುವುದು. ವಿದ್ಯಾರ್ಥಿಯು ಒಂದು ವೃತ್ತಿಪರ ಕೋರ್ಸ್ ನಲ್ಲಿ ವ್ಯಾಸಂಗ ಮುಗಿಸಿ ಮತ್ತೊಂದು ವೃತ್ತಿಪರ ಕೋರ್ಸಿಗೆ ಸೇರಿದ್ದಲ್ಲಿ ಅರ್ಹರಾಗುವುದಿಲ್ಲ. ಪ್ರಸ್ತುತ ಮೆಟ್ರಿಕ್ ನಂತರದ  ವಿದ್ಯಾರ್ಥಿವೇತನ ಮಂಜೂರಾತಿ ಯೋಜನೆಯನ್ನು ಗಣಕೀಕರಣಗೊಳಿಸಲಾಗಿದ್ದು, ಅರ್ಹ  ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.ವಿವಿಧ ಕೋರ್ಸ್ ಗಳಿಗೆ ಭಾರತ ಸರ್ಕಾರದ ವಿದ್ಯಾರ್ಥಿವೇತನವನ್ನು ಈ ಕೆಳಕಂಡ ದರದಲ್ಲಿ ಮಂಜೂರು ಮಾಡಲಾಗುತ್ತದೆ.

ವಿದ್ಯಾರ್ಥಿವೇತನದ ದರಗಳು ತಿಂಗಳಿಗೆ

ಗ್ರೂಪ್

ಕೋರ್ಸ್

ವಿ.ನಿಲಯಗಳಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ (ಮಾಹೆಯಾನ)

ವಿ.ನಿಲಯಗಳಲ್ಲಿ ವಾಸಿಸದೇ ಇರುವ ವಿದ್ಯಾರ್ಥಿಗಳಿಗೆ (ಮಾಹೆಯಾನ)

ಗ್ರೂಪ್-I

i)ಎಂ.ಫಿಲ್.ಪಿ.ಹೆಚ್.ಡಿ, ಪೋಸ್ಟ್ ರಿಸಚ್ ಇನ್ ಮೆಡಿಸಿನ್, ಇಂಜಿನಿಯರಿಂಗ್, ಟೆಕ್ನಾಲಜಿ, ಪ್ಲ್ಯಾನಿಂಗ್, ಆಕಿಟೆಕ್ಟರ್, ಡಿಸೈನ್, ಫ್ಯಾಷನ್ ಟೆಕ್ನಾಲಜಿ, ಅಗ್ರಿಕಲ್ಚರ್, ವೆಟನರಿ ಮತ್ತು ಅಲೈಡ್ ಸೈನ್ಸೆಸ್, ಮ್ಯಾನೇಜ್ಮೆಂಟ್, ಬಿಸಿನೆಸ್, ಫೈನಾನ್ಸ್/ ಅಡ್ಮಿನಿಷ್ಟ್ರೇಷನ್, ಕಂಪ್ಯೂಟರ್, ಸೈನ್ಸ್/ಅಪ್ಲಿಕೇಷನ್ಸ್ ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಹಂತದ ಕೋರ್ಸ್  ಗಳು.

ii)ಕಮಷಿಯಲ್ ಪೈಲಟ್ ಲೈಸನ್ಸ್ (ಹೆಲಿಕಾಪ್ಟರ್ ಪೈಲಟ್ ಮತ್ತು ಮಲ್ಟಿ ಇಂಜಿನ್ ರೇಟಿಂಗ್) ಕೋರ್ಸ್  ಗಳು ಸೇರಿದಂತೆ.

iii)ಮ್ಯಾನೇಜ್ಮೆಂಟ್ ಮತ್ತು ಮೆಡಿಸಿನ್ ನ ಇನ್ನಿತರೆ ವಿಭಾಗಗಳಲ್ಲಿನ ಸ್ನಾತಕೋತ್ತರ ಡಿಪ್ಲೋಮ ಕೋರ್ಸ್  ಗಳು

iv) C.A/I.CW.A/C.S/I.C.F.A ಇತರೆ.

v)ಎಂ.ಫಿಲ್.ಪಿ.ಹೆಚ್.ಡಿ ಪೋಸ್ಟ್ ಡಾಕ್ಟರಲ್ ಪ್ರೋಗ್ರಾಮ್ಸ್ (D.Litt., D.Sc.) ಇತರೆ.

vi) ಎಲ್.ಎಲ್.ಎಂ.

ರೂ.1200

ರೂ.550

ಗ್ರೂಪ್-II

i)ಪದವಿ ಮತ್ತು ಸ್ನಾತಕೋತ್ತರ ಪದವಿಮಟ್ಟದ ಕೋರ್ಸ್  ಗಳು, ಡಿಪ್ಲೋಮ ಕೋರ್ಸ್  ಗಳಾದ ಫಾರ್ಮಸಿ (ಬಿ ಫಾರ್ಮಾ), ನಸಿಂಗ್ (ಬಿ ನಸಿಂಗ್)ಎಲ್.ಎಲ್.ಬಿ, ಬಿ.ಎಫ್.ಸಿ, ಇತರ ಪ್ಯಾರಾ ಮೆಡಿಕಲ್ ಕೋರ್ಸ್  ಗಳು ಇತ್ಯಾದಿ ಮಾಸ್ ಕಮ್ಯೂನಿಕೇಷನ್, ಹೋಟೆಲ್ ಮ್ಯಾನೇಜ್ಮೆಂಟ್ ಮತ್ತು ಕ್ಯಾಟೆರಿಂಗ್, ಟ್ರಾವೆಲ್/ಟೂರಿಸಮ್/ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್, ಇಂಟೀರಿಯರ್ ಡೆಕೊರೇಷನ್, ನ್ಯೂಟ್ರೀಷನ್ ಮತ್ತು ಡಯೆಟೇಟಿಕ್ಸ್, ಕಮಷಿಯಲ್ ಆಟ್ , ಪೈನಾನ್ಸಿಯಲ್ ಸವಿಸಸ್ (ಉದಾ: ಬ್ಯಾಂಕಿಂಗ್, ಇನ್ಸುರೆನ್, ಟ್ಯಾಕ್ಸೇಷನ್ ಇತ್ಯಾದಿ ) ಯಾವುದೇ ಕೋರ್ಸ್  ಗಳಿಗೆ ಪದವಿ ಪೂವಮಟ್ಟದ (10+2) ಪೂಣಗೊಳಿಸಿ ಪ್ರವೇಶಾವಕಾಶಕ್ಕೆ ಅರ್ಹ ತೆ ಹೊಂದಿರತಕ್ಕದ್ದು. ii)ಗುಂಪು-(1)ರಲ್ಲಿ ಸೇರದ

ಸ್ನಾತಕೋತ್ತರಪದವಿಗಳು/ಉದಾ:ಎಂ.ಎ/ಎಂ.ಎಸ್.ಸಿ/ಎಂ.ಕಾಂ/ಎಂ.ಎಡ್/ಎಂ.ಫಾಮ್ ಇತ್ಯಾದಿ.

ರೂ.820

ರೂ.530

ಗ್ರೂಪ್-III

ಎಲ್ಲಾ ಪದವಿ ಕೋರ್ಸ್  ಗಳು (ಗುಂಪು-(I) ಮತ್ತು ಗುಂಪು – (II)ರಲ್ಲಿ ಸೇರದಿರುವ ಕೋರ್ಸ್ ಗಳು)

ರೂ.570

ರೂ.300

ಗ್ರೂಪ್-IV

ಕನಿಷ್ಠ ಹೈಸ್ಕೂಲ್ (10ನೇ ತರಗತಿ) ವಿದ್ಯಾರ್ಹತೆಯನ್ನು ಹೊಂದಿ  ಮೆಟ್ರಿಕ್ಯೂಲೇಷನ್ ನಂತರದ ಪದವಿಯೇತರ ಕೋರ್ಸ್ ಗಳು, (ಉದಾ:11 ಮತ್ತು 12ನೇ ತರಗತಿ); ಸಾಮಾನ್ಯ ಪದವಿ, ವೃತ್ತಿಪರ ಕೋರ್ಸ್  ಗಳು, ಐಟಿಐ ಕೋರ್ಸ್  ಗಳು, ಪಾಲಿಟೆಕ್ ನಿಕ್ ಗಳಲ್ಲಿನ 3ವರ್ಷದ ಡಿಪ್ಲೊಮಾ ಕೋರ್ಸ್  ಗಳು ಇತ್ಯಾದಿ.

ರೂ.380

ರೂ.230

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

2.875
ಮಲ್ಲಪ್ಪ ಕಳ್ಳಿಮಣಿ Jan 25, 2017 10:10 AM

ಸರ್ ನಮ್ಮ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಯವರು ವಿದ್ಯಾರ್ಥಿ ವೇತನ ತಾರತಮ್ಯ ಮಾಡುತ್ತಿದ್ದಾರೆ ಹೇಗೆಂದರೆ ಬೇರೆ ಜಿಲ್ಲೆಯಲ್ಲಿ ನನ್ನ ಸ್ನೇಹಿತರು ಸ್ನಾತಕೋತ್ತರ ಪದವಿಯಲ್ಲಿ ೨೦೦೦೦ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ ಆದರೆ ನಮ್ಮ ಸಮಾಜ ಕಲ್ಯಾಣ ಇಲಾಖೆ ಯವರು ನಮಗೆ ೯೦೦೦ ಮಾತ್ರ ನೀಡುತ್ತಿದ್ದಾರೆ ..ದಯವಿಟ್ಟು ನಮಗೆ ನ್ಯಾಯ ಕೊಡಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top