ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಹಂಚಿಕೊಳ್ಳಿ

ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಪರಿಶಿಷ್ಟ ಜಾತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ಪರಿಶಿಷ್ಟ ಜಾತಿಯ 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಮುಂದುವರೆಸುವಂತೆ, ಪ್ರೋತ್ಸಾಹಿಸಲು ಹಾಗೂ ವಿದ್ಯಾಭ್ಯಾಸದ ನಡುವೆ ಶಾಲೆ ಬಿಡುವುದನ್ನು ತಪ್ಪಿಸಲು ಮತ್ತು ಪಾಲಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಉತ್ತೇಜಿಸಲು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಲಾಗುತ್ತಿದೆ. ಈ ವಿದ್ಯಾರ್ಥಿವೇತನಕ್ಕೆ ಪೋಷಕರ ವರಮಾನ    ರೂ. 2.00 ಲಕ್ಷಗಳನ್ನು ಮೀರಿರಬಾರದು. ಈ ವಿದ್ಯಾರ್ಥಿವೇತನ ಅರ್ಹತೆಗೆ ಈ ಕೆಳಕಂಡ ಷರತ್ತುಗಳಿವೆ.
1.     ವಿದ್ಯಾರ್ಥಿನಿಲಯಗಳಲ್ಲಿ ವಾಸವಿರಬಾರದು.
2.    ಪ್ರತಿಭಾ ವಿದ್ಯಾರ್ಥಿವೇತನ ಬಿಟ್ಟು ಬೇರೆ ಯಾವುದೇ ವಿದ್ಯಾರ್ಥಿವೇತನ ಪಡೆಯುತ್ತಿರಬಾರದು.
3.    ವಿದ್ಯಾರ್ಥಿಗಳು ಒಂದು ಬಾರಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಸಹ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
4.    ಮಾನ್ಯತೆ ಪಡೆದ ಸರ್ಕಾರಿ/ಅನುದನಿತ/ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರಬೇಕು.
ಶಾಲಾ ವರ್ಷಗಳು ಪ್ರಾರಂಭವಾದ ನಂತರ ಜಿಲ್ಲೆ/ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಪ್ರಕಟಣೆಯ ಮೂಲಕ ಸಂಬಂಧಿಸಿದ ಶಾಲೆಗಳಿಂದ ಆಹ್ವಾನಿಸಿ, ಜುಲೈ 15 ರೊಳಗೆ ಅರ್ಜಿಗಳನ್ನು ಸ್ವೀಕರಿಸುವರು. ಹೀಗೆ ಬಂದ ಅರ್ಜಿಯನ್ನು ಪರಿಶೀಲಿಸಿ ಸೆಪ್ಟೆಂಬರ್ 15ರೊಳಗೆ ಅರ್ಹರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಈ ಕೆಳಕಂಡ ದರದಲ್ಲಿ ಮಂಜೂರು ಮಾಡಲಾಗುವುದು.

ಕ್ರ.ಸಂ

ತರಗತಿ

ಬಾಲಕರು

ಬಾಲಕಿಯರು

1

1 ರಿಂದ 5

750.00

850.00

2

6 ರಿಂದ 7

900.00

1000.00

3

8 ನೇ ತರಗತಿ

1000.00

1100.00

9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರದ ವಿದ್ಯಾರ್ಥಿ ವೇತನವನ್ನು ಕೆಳಗಿನ ದರಗಳಲ್ಲಿ ನೀಡಲಾಗುತ್ತಿದೆ.

ವಿವರ

ಡೇ ಸ್ಕಾಲರ್ಸ್

ಹಾಸ್ಟೆಲರ್ಸ್

ನಿರ್ವಹಣಾ ವೆಚ್ಚ

ಮಾಹೆಯಾನ ರೂ. 150 ರಂತೆ 10 ತಿಂಗಳಿಗೆ

ಮಾಹೆಯಾನ ರೂ. 350 ರಂತೆ 10 ತಿಂಗಳಿಗೆ

ಅಡಾಕ್ ಅನುದಾನ

ವಾರ್ಷಿಕ ರೂ. 750

ವಾರ್ಷಿಕ ರೂ. 1000

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

3.09259259259
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top