অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅನುಷ್ಠಾನ,ಆಯ್ಕೆ

ಅನುಷ್ಠಾನ,ಆಯ್ಕೆ

ಯೋಜನಾ ಅನುಷ್ಠಾನ:

          2013-14ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು ಮೊದಲ ವರ್ಷದ ಅವಧಿಯಲ್ಲಿ 1 ಲಕ್ಷ ಗ್ರಾಮೀಣ ನಿರುದ್ಯೋಗಿ ಯುವಜನತೆಗೆ ಸ್ವ-ಉದ್ಯೋಗ ಹಾಗೂ 1 ಲಕ್ಷ ನಿರುದ್ಯೋಗಿ ಯುವಜನತೆಗೆ ವೃತ್ತಿಪರ ಕೌಶಲ್ಯದೊಂದಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಿದೆ.

          ಪ್ರತಿ ವರ್ಷಕ್ಕೆ ಒಟ್ಟು ಎರಡು ಲಕ್ಷ ಯುವಜನರಿಗೆ ಸೌಲಭ್ಯವನ್ನು ತಲುಪಿಸುವ ಗುರಿ ಹೊಂದಿದೆ.

          ಹಣಕಾಸು ಸಂಸ್ಥೆಗಳು ಯುವಜನÀರಿಗೆ ಸಾಲವನ್ನು ನೀಡುತ್ತವೆ, ಜಿಲ್ಲಾ ಪಂಚಾಯತ್‍ನಿಂದ ಒಂದು ಜಂಟಿ ಹೊಣೆಗಾರಿಕೆ ಗುಂಪಿಗೆ ರೂ.50,000/- ಅಥವಾ ಜಂಟಿ ಹೊಣೆಗಾರಿಕೆ ಗುಂಪಿನ ಒಬ್ಬ ಸದಸ್ಯರಿಗೆ 10,000/- ರೂಪಾಯಿಗಳನ್ನು ಸಹಾಯಧನದ ರೀತಿಯಲ್ಲಿ ನೀಡಲಾಗುವುದು.

          ಸಹಾಯಧನದ ಮೊತ್ತವನ್ನು ಹಣಕಾಸು ಸಂಸ್ಥೆಗೆ ನೀಡಲಾಗುವುದು.

          ಸಹಾಯಧನ ಮತ್ತು ಸಾಲ ಕನಿಷ್ಠ 1:3 ಅನುಪಾತದಲ್ಲಿರಬೇಕು.

          ಬ್ಯಾಂಕುಗಳಿಗೆ ನೀಡುವ ಮಾರ್ಗದರ್ಶಿ ಅನುಬಂಧ-1 ರಲ್ಲಿ ತೋರಿಸಲಾಗಿದೆ. ಜಂಟಿ ಹೊಣೆಗಾರಿಕೆ ಗುಂಪು (ಜೆಎಲ್‍ಜಿ) ಮತ್ತು ವೈಯಕ್ತಿಕ ಫಲಾನುಭವಿಗಳು ಸಲ್ಲಿಸಬೇಕಾದ ಅರ್ಜಿ ನಮೂನೆಗಳನ್ನು ಪ್ರತ್ಯೇಕವಾಗಿ ಅನುಬಂಧ-2 ಮತ್ತು 3 ರಲ್ಲಿ ಅನುಕ್ರಮವಾಗಿ ತೋರಿಸಲಾಗಿದೆ.

ಫಲಾನುಭವಿಗಳ ಆಯ್ಕೆಯ ಮಾನದಂಡಗಳು:

•             18 ರಿಂದ 35 ವರ್ಷದವರೆಗಿನ ವಯೋಮಾನದ ಯುವಜನರಿಗಷ್ಟೇ ಮೀಸಲಾಗಿರುತ್ತದೆ.

•             ಕನಿಷ್ಠ ವಿದ್ಯಾರ್ಹತೆ 8ನೇ ತರಗತಿ ಉತ್ತೀರ್ಣರಾಗಿರಬೇಕು. (ಶಾಲೆಯ ಮುಖ್ಯಸ್ಥರಿಂದ ಸೂಕ್ತ ದಾಖಲಾತಿ ಒದಗಿಸುವುದು.)

•             ಗ್ರಾಮಪಂಚಾಯತ್‍ನ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.

•             ಮಹಿಳೆಯರಿಗೆ ಆಧ್ಯತೆ ನೀಡಲಾಗುವುದು.

•             ಅಭ್ಯರ್ಥಿಗಳ ಆಯ್ಕೆಯಲ್ಲಿ ಸರ್ಕಾರದ ಮೀಸಲಾತಿ ನಿಯಮಾವಳಿಗಳಂತೆ ಕನಿಷ್ಠ ಶೇ20% ಪರಿಶಿಷ್ಠ ಜಾತಿ ಹಾಗು ಶೇ9% ಪರಿಶಿಷ್ಠ ಪಂಗಡದ ಯುವಜನರನ್ನು ಆಯ್ಕೆ ಮಾಡಿಕೊಳ್ಳುವುದು.

•             ಅಲ್ಪ ಸಂಖ್ಯಾತರಿಗೆ ಆದ್ಯತೆ ನೀಡುವುದು.

ಈ ಕೆಳಕಂಡ ಫಲಾನುಭವಿಗಳು ಸ್ವಯಂ ಸೇರ್ಪಡೆ ಹೊಂದುವರು. ಇವರಿಗೆ ಗ್ರಾಮ ಸಭೆಯ ಆಯ್ಕೆ ಕಡ್ಡಾಯವಾಗಿರುವುದಿಲ್ಲ.

1.        ವಿಕಲಚೇತನರು.

2.       ಬುಡಕಟ್ಟು ಜನಾಂಗದ ಯುವಜನರು.

3.       ಲೈಂಗಿಕ ಶೋಷಣೆಗೊಳಗಾದ ಮಹಿಳೆಯರು.

4.       ವಿಧವೆಯರು,

5.       ಪರಿತ್ಯಕ್ತ ಮಹಿಳೆಯರು.

6.       ಮಂಗಳಮುಖಿಯರು (ಟ್ರಾನ್ಸ್‍ಜೆಂಡರ್).

7.        ಬಿಡುಗಡೆಗೊಂಡ ಎಲ್ಲಾ ಜೀತ ವಿಮುಕ್ತರು.

8.       ಎಂಜಿಎನ್‍ಆರ್‍ಇಜಿಎ ಯಡಿ 100 ದಿನ ಉದ್ಯೋಗ ಪೂರೈಸಿದ ಯುವಜನರು.

 

ವಿ.ಸೂ : ಜೀತವಿಮುಕ್ತರು ವಯೋಮಿತಿ ಮೀರಿದ್ದಲ್ಲಿ ಅವರ ಅರ್ಹ ಮಕ್ಕಳು

 

•             ಆಯ್ಕೆಯಾದ ಯುವಜನರು ತಂಡದಲ್ಲಿ ಕಾರ್ಯನಿರ್ವಹಿಸುವ ಮನೋಭಾವ ಹೊಂದಿರುವವರಾಗಿರಬೇಕು.

•             ಸ್ವ-ಉದ್ಯೋಗ ಕೈಗೊಳ್ಳಲು ಆಸಕ್ತಿ, ಅಪೇಕ್ಷೆ ಮತ್ತು ಉದ್ಯಮಶೀಲರಾಗುವ ಲಕ್ಷಣಗಳನ್ನು ಹೊಂದಿರುವ ಯುವಜನರಿಗೆ ಸ್ವ-ಉದ್ಯೋಗ ಕಲ್ಪಿಸಬೇಕು.

•             ವೃತ್ತಿ ತರಬೇತಿಯೊಂದಿಗೆ ಉದ್ಯೋಗ ಮಾಡಬಯಸುವ ಯುವಜನರಿಗೆ ಅದರಂತೆ ಕಲ್ಪಿಸುವುದು.

•             ಆಯ್ಕೆಯಾದ ಯುವಜನರು ತರಬೇತಿಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು.

•             ಅರ್ಹ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಗಳಲ್ಲಿ ಅಂತಿಮಗೊಳಿಸಲಾಗುವುದು.

•             ಆಯ್ಕೆಯಾದ ಯುವಜನರು ರಾಜೀವ್ ಗಾಂಧಿ ಚೈತನ್ಯ ಯೋಜನೆಯ ನಿಯಮ ನಿಬಂಧನೆಗಳಿಗೆ ಬದ್ದರಾಗಿರಬೇಕು.

ಈ ಮೇಲ್ಕಂಡ ಅರ್ಹತೆಗಳ ಪ್ರಕಾರ ಯುವಜನರು ಅರ್ಜಿ ನಮೂನೆಯನ್ನು ಗ್ರಾಮಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿಗಳಿಂದ ಪಡೆದು ನಿಗದಿತ ಅವಧಿಯೊಳಗೆ ತಾವು ವಾಸಿಸುತ್ತಿರುವ ಗ್ರಾಮಪಂಚಾಯತ್‍ಗೆ ಸಲ್ಲಿಸುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 10/17/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate