অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೆಎಲ್ಜಿ

ಜೆಎಲ್ಜಿ

ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ (ಜೆಎಲ್‍ಜಿ) :

•             ತರಬೇತಿಯ ನಂತರ ಯುವಜನರು ತಮ್ಮ ಆಸಕ್ತಿಗೆ ಅನುಗುಣವಾಗಿ ಗುರುತಿಸಿಕೊಂಡ ಸ್ವ-ಉದ್ಯೋಗ ಚಟುವಟಿಕೆಯ ಆಧಾರದ ಮೇಲೆ, ಆಯ್ಕೆ ಮಾಡಿದ ಒಂದೇ ರೀತಿಯ ಚಟುವಟಿಕೆಯ ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಳ್ಳಲು ಪ್ರೇರಣೆ ನೀಡುವುದು.

•             ಒಂದೇ ರೀತಿಯ ಸ್ವ-ಉದ್ಯೋಗ ಚಟುವಟಿಕೆಯನ್ನು ಕೈಗೊಳ್ಳಲು ಸಿದ್ದರಿರುವ 5 ಯುವಜನರನ್ನೊಳಗೊಂಡ ಜಂಟಿ ಹೊಣೆಗಾರಿಕೆ ಗುಂಪನ್ನು ರಚಿಸುವುದು.

•             ಜಂಟಿ ಹೊಣೆಗಾರಿಕೆ ಗುಂಪು ರಚನೆ ಸಾಧ್ಯವಾಗದಿದ್ದಲ್ಲಿ ಮಾತ್ರ ವೈಯಕ್ತಿಕವಾಗಿಯೂ ಚಟುವಟಿಕೆಗಳ ಆಯ್ಕೆಗೂ ಅವಕಾಶವಿರುವುದು.

•             ಬ್ಯಾಂಕು / ಹಣಕಾಸು ಸಂಸ್ಥೆಗಳಲ್ಲಿ ಉಳಿತಾಯ ಖಾತೆ ತೆರೆಯುವುದು.

•             ನಿಗದಿತ ಸ್ಥಳದಲ್ಲಿ ವಾರಕ್ಕೊಮ್ಮೆ ಸಭೆ ಸೇರುವುದು.

•             ಮೇಲ್ಕಂಡ ಹಂತಗಳಲ್ಲಿ ಯೋಜನಾ ಬೆಂಬಲ ಸಂಸ್ಥೆಯು (ಪಿಎಸ್‍ಎ) ಮಾರ್ಗದರ್ಶನ ನೀಡುವುದು.

•             ಜಂಟಿ ಹೊಣೆಗಾರಿಕೆ ಗುಂಪಿನ 5 ಸದಸ್ಯರು ಒಂದೇ ಉದ್ಯಮದ ಆಯ್ಕೆ ಅಥವಾ 5 ಸದಸ್ಯರು ಪ್ರತ್ಯೇಕವಾದ ಉದ್ಯಮದ ಆಯ್ಕೆಗೆ ಬ್ಯಾಂಕ್ ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಉದ್ಯಮ ಆರಂಭಿಸಲು ಬೇಕಾದ ಸಾಲ ಸೌಲಭ್ಯವನ್ನು ಒದಗಿಸಲು ಸಹಾಯ ಮಾಡುವುದು.

•             ಜಂಟಿ ಹೊಣೆಗಾರಿಕೆ ಗುಂಪುಗಳ ರಚನೆ ಮತ್ತು ಉದ್ಯಮಗಳ ಆಯ್ಕೆಯಾದ ನಂತರ ಮಾಹಿತಿಯನ್ನು ಮೇಲ್ವಿಚಾರಣಾ ತಂತ್ರಾಂಶ (ಎಂ.ಐ.ಎಸ್) ಅಳವಡಿಸಲು ತಾಲ್ಲೂಕು / ಜಿಲ್ಲಾ ಪಂಚಾಯಿತಿಗೆ ಕಾರ್ಯಕ್ರಮ ಬೆಂಬಲ ಸಂಸ್ಥೆಯು (ಪಿ.ಎಸ್.ಎ) ಕಳುಹಿಸಿಕೊಡುವುದು.

•             ಬೆಂಬಲ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಕುರಿತು ಆಗಿಂದಾಗ್ಗೆ ಹೊರಡಿಸುವ ಆದೇಶದಲ್ಲಿನ ಷರತ್ತುಗಳನ್ವಯ ಬಿಡುಗಡೆ ಮಾಡಲಾಗುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate