অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತರಬೇತಿ ಮತ್ತು ಸಾಮಗ್ರಿಗಳ ತಯಾರಿಕೆ

ತರಬೇತಿ ಮತ್ತು ಸಾಮಗ್ರಿಗಳ ತಯಾರಿಕೆ

ಸ್ಯಾಟ್‍ಕಾಂ ಮೂಲಕ ತರಬೇತಿ

          ಪ್ರತಿ ಗ್ರಾಮ ಪಂಚಾಯತಿಗೆ 40 ಯುವಜನರಂತೆ 5,627 ಗ್ರಾಮಪಂಚಾಯತ್‍ಗಳಿಂದ 2,25,080 ಅಭ್ಯರ್ಥಿಗಳಿಗೆ ಉಪಗ್ರಹ ಆಧಾರಿತ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮವನ್ನು ಕೆಎಸ್‍ಆರ್‍ಎಲ್‍ಪಿಎಸ್- “ಸಂಜೀವಿನಿ” ಏರ್ಪಡಿಸುವುದು.

          ಒಟ್ಟು 175 ತಾಲ್ಲೂಕುಗಳಿಂದ ಪ್ರತಿ ತಾಲ್ಲೂಕಿಗೆ 1 ಪಂಚಾಯತಿಯಂತೆ, 34 ಪ್ರಸರಣಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

          175 ತಾಲ್ಲೂಕುಗಳಿಂದ ಪ್ರತಿ ಪ್ರಸರಣದಲ್ಲಿ 40 ಶಿಬಿರಾರ್ಥಿಗಳು ಆಯಾಯ ಪಂಚಾಯಿತಿಯನ್ನು ಪ್ರತಿನಿಧಿಸುವರು ಅದರಂತೆ 175*40 = 7,000 ಯುವಜನರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಹಾಗೂ ಸ್ವ-ಉದ್ಯೋಗ ಮತ್ತು ಕೌಶಲ್ಯ ತರಬೇತಿಯೊಂದಿಗೆ ಉದ್ಯೋಗ ಅವಕಾಶಗಳ ಬಗ್ಗೆ ಯಶೋಗಾಥೆಯ ಹಾಗೂ ಕಿರು ಚಿತ್ರಗಳ ಮೂಲಕ ಪ್ರೇರಣೆ ನೀಡಿ ಆಯ್ಕೆ ಪ್ರಕ್ರಿಯೆಯಲ್ಲಿ ಸಹಾಯ ಮಾಡುವುದು.

          ಕಾರ್ಯಕ್ರಮದಲ್ಲಿ ಚುನಾಯಿತ ಪ್ರತಿನಿಧಿಗಳು, ಯುವಜನರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಮತ್ತು ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಯೋಜನೆಯ ಬಗ್ಗೆ ಅರಿವು ಮೂಡಿಸುವುದು.

ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ:

          ಅಗತ್ಯವಿರುವ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳ ತಯಾರಿಕೆ ಕುರಿತಂತೆ “ಸಂಜೀವಿನಿ”- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು (ಕೆಎಸ್‍ಆರ್‍ಎಲ್‍ಪಿಎಸ್) ಕ್ರಮ ಕೈಗೊಳ್ಳುವುದು.

          ರಾಜ್ಯ ಮತ್ತು ಜಿಲ್ಲಾ ಮಟ್ಟಕ್ಕೆ ವಿವರಣಾತ್ಮಕ ಹಾಗೂ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.

          ಗ್ರಾಮ ಪಂಚಾಯತಿ ಮಟ್ಟಕ್ಕೆ ಚಿತ್ರಗಳ ಮೂಲಕ ಸುಲಭವಾಗಿ ಅರ್ಥವಾಗುವಂತಹ ಸಾಮಗ್ರಿಗಳನ್ನು ತಯಾರಿಸಲಾಗುವುದು.

          ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ರಾಜೀವ್ ಗಾಂಧಿ ಚೈತನ್ಯ ಯೋಜನೆ(ಆರ್.ಜಿ.ಸಿ.ವೈ.) ಬಗ್ಗೆ ವ್ಯಾಪಕ ಪ್ರಚಾರವನ್ನು ಕೈಗೊಳ್ಳಲಾಗುವುದು.

          ವ್ಯಾಪಕ ಪ್ರಚಾರದ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರÀ ಭಾಗವಹಿಸುವಿಕೆ ಖಾತ್ರಿಪಡಿಸಿಕೊಳ್ಳುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate