অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೋಜನಾ ಬೆಂಬಲ ಸಂಸ್ಥೆಯ ಚಟುವಟಿಕೆಗಳು

ಯೋಜನಾ ಬೆಂಬಲ ಸಂಸ್ಥೆಯ ಚಟುವಟಿಕೆಗಳು

ರಾಜೀವ್ ಗಾಂಧಿ ಚೈತನ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಯೋಜನಾ ಬೆಂಬಲ ಸಂಸ್ಥೆಯು ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಯೋಜನೆ ಕುರಿತು ವಿವರವಾದ ಮಾಹಿತಿಯನ್ನು ನೀಡುವುದು.

          ಆಯ್ಕೆಯಾದ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಅಗತ್ಯತೆಗನುಗುಣವಾಗಿ ತರಬೇತಿ ನೀಡುವುದು.

          ಯೋಜನೆಯ ಅನುಷ್ಠಾನದಲ್ಲಿ ಅವರ ಪಾತ್ರ ಮತ್ತು ಹೊಣೆಗಾರಿಕೆಯನ್ನು ಮನದಟ್ಟು ಮಾಡುವುದು.

          ಯೋಜನೆಯ ಸೌಲಭ್ಯ ಪಡೆಯುವ ಯುವಜನರನ್ನು ಗುರುತಿಸಲು ಗ್ರಾಮ ಪಂಚಾಯಿತಿಗೆ ನೆರವಾಗುವುದು.

          ಯುವಜನರ ಗುಂಪುಗಳನ್ನು ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳನ್ನು ರಚಿಸಿಕೊಳ್ಳಲು ನೆರವು ನೀಡುವುದು.

          ಸಮಾನ ಮನಸ್ಕರ ಯುವಜನರ ಸಭೆಗಳನ್ನು ಆಯೋಜಿಸಿ ಜಂಟಿ ಹೊಣೆಗಾರಿಕಾ ಗುಂಪುಗಳನ್ನು ರಚಿಸಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡುವುದು.

          ಸೌಲಭ್ಯವನ್ನು ಪಡೆಯಲು ಗುರುತಿಸಿರುವ ಯುವಜನರಿಗೆ ಸ್ವ ಉದ್ಯೋಗ ಕೈಗೊಳ್ಳಲು ಅವಶ್ಯಕತೆ ಇರುವ ತರಬೇತಿ ಕಾರ್ಯಕ್ರಮಗಳನ್ನು ಅಯೋಜಿಸಲು ಗ್ರಾಮ ಪಂಚಾಯಿತಿ, ಹಣಕಾಸು ಸಂಸ್ಥೆ ಮತ್ತು ರೂಡ್‍ಸೆಟ್ /ಕೃಷಿ ವಿಜ್ಞಾನ ಕೇಂದ್ರಗಳು / ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಗುರುತಿಸುವ ತರಬೇತಿ ಕೇಂದ್ರಗಳ ಜೊತೆ ಸಮನ್ವಯ ಸಾಧಿಸುವುದು.

          ಯುವ ಜನರಿಗೆ ಬ್ಯಾಂಕ್ ಮತ್ತು ಜಿಲ್ಲಾ ಪಂಚಾಯತ್‍ಗಳ ಮೂಲಕ ಸಾಲ ಮತ್ತು ಸಹಾಯಧನ ಸಿಗುವಂತೆ ಸಂಪರ್ಕ ಕಲ್ಪಿಸಿ ಅನುಸರಣಿ ಮಾಡುವುದು.

          ಯೋಜನೆಗೆ ಸಂಬಂದಿಸಿದÀ ಗ್ರಾಮ ಸಭೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತ್ ಮಟ್ಟದ ಸಭೆಯಲ್ಲಿ ಭಾಗವಹಿಸುವುದು.

          ಯೋಜನೆಯ ಅನುಷ್ಠಾನದ ಪ್ರಗತಿಯ ವರದಿಯನ್ನು ದಾಖಲಿಸಿ ಸಂಬಂಧಿಸಿದ ಪ್ರಾಧಿಕಾರಗಳಿಗೆ ಸಲ್ಲಿಸುವುದು.

          ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳು ರಾಜೀವ್‍ಗಾಂಧಿ ಚೈತನ್ಯ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಜೊತೆಗೂಡಿ ಕಾರ್ಯ ನಿರ್ವಹಿಸುವುದು.

          ಚುನಾಯಿತ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು.

          ತಜ್ಞರ ಸಮಿತಿ ನೀಡುವ ಮಾರ್ಗಸೂಚಿಯನ್ನು ಪಾಲಿಸುವುದು.

          ತಿಂಗಳಿಗೊಮ್ಮೆ ಸಭೆ ಸೇರಿ ಪರಸ್ಪರ ಕಲಿಕೆಯ ಬಗ್ಗೆ ಪ್ರಗತಿ ಪರಿಶೀಲನೆ ಮಾಡುವುದು.

          ಮಾರುಕಟ್ಟೆ ಸಂಶೋಧನೆ ಮತ್ತು ಜಂಟಿ ಬಾಧ್ಯತಾ ಗುಂಪಿನ ಯುವಜನರ ಉತ್ಪನ್ನಗಳಿಗೆ ಮಾರುಕಟ್ಟೆ ಲಿಂಕೇಜ್ ಒದಗಿಸುವುದು.

          ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳೊಂದಿಗೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು ಮತ್ತು ಯುವಜನರಿಗೆ ಲಿಂಕೇಜ್ ಕಲ್ಪಿಸುವುದು.

          ಯುವಜನರ ಮೇಳ ಸಂಘಟನೆ ಹಾಗೂ ಯುವಜನರು ಉತ್ಪಾದಿಸಿದ ಪದಾರ್ಥಗಳ ಪ್ರಚಾರ ಮತ್ತು ಮಾರಾಟಕ್ಕಾಗಿ ವಸ್ತು ಪ್ರದರ್ಶನ ಏರ್ಪಡಿಸುವುದು.

          ಉದ್ಯಮಶೀಲತೆಗೆ ಪೂರಕವಾದ ಯಶಸ್ವಿ ಉದ್ದಿಮೆದಾರರ ಯಶೋಗಾಥೆಗಳನ್ನು ಹೊರತರುವುದು.

          ಉದ್ಯಮ ಸುಗಮವಾಗಿ ನಡೆಸಿಕೊಂಡು ಹೋಗಲು ಅಡ್ಡಿ ಆತಂಕಗಳಿದ್ದಲ್ಲಿ ಬಗೆಹರಿಸುವುದು ಹಾಗೂ ಕಾನೂನಿನ ನೆರವು ಅವಶ್ಯಕತೆಯಿದ್ದಲ್ಲಿ ಸಹಾಯ ಮಾಡತಕ್ಕದ್ದು.

          ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಚಟುವಟಿಕೆಗಳ ಪ್ರಕರಣಗಳನ್ನು (ಕೇಸ್ ಸ್ಟಡಿ) ದಾಖಲೀಕರಣ ಮಾಡಿ ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಿಕೊಡುವುದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 6/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate