অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೃತ್ತಿ ತರಬೇತಿಗಳುಮತ್ತು ಪ್ರಸ್ತಾವನೆ

ವೃತ್ತಿ ತರಬೇತಿಗಳುಮತ್ತು ಪ್ರಸ್ತಾವನೆ

ವೃತ್ತಿ ತರಬೇತಿಗಳು:

•             ಚಟುವಟಿಕೆಗೆ ಸಾಲ ಮಂಜೂರಾತಿ ನಂತರ ಯೋಜನಾ ಬೆಂಬಲ ಸಂಸ್ಥೆಗಳು 3 ದಿನಗಳ ಉದ್ಯಮಶೀಲತಾ ತರಬೇತಿಯನ್ನು / 6 ದಿನಗಳ ಕೌಶಲ್ಯಧಾರಿತ ಉದ್ಯಮಶೀಲತಾ ತರಬೇತಿಯನ್ನು ರೂಡ್‍ಸೆಟಿ / ಆರ್‍ಸೆಟಿ / ಸಿಡಾಕ್ ಜನಶಿಕ್ಷಣ ಸಂಸ್ಥೆ / ಸಮುದಾಯ ಪಾಲಿಟೆಕ್ನಿಕ್ / ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತರಬೇತಿ ವ್ಯವಸ್ಥೆ ಮಾಡುವುದು.

•             ರೂಡ್‍ಸೆಟಿ / ಆರ್‍ಸೆಟಿ ತರಬೇತಿ ಸಂಸ್ಥೆಗಳಿಗೆ ಅಭ್ಯರ್ಥಿಗಳನ್ನು ನಿಯೋಜಿಸಿದಾಗ ತರಬೇತಿಯ ಅವಧಿಯು 6 ದಿನಗಳು ಮತ್ತು 6 ದಿನಗಳಿಗಿಂತ ಹೆಚ್ಚಾಗಿದ್ದಲ್ಲಿ ಅದರ ವೆಚ್ಚವನ್ನು ಜಿಲ್ಲೆಗೆ ನೀಡಲಾಗಿರುವ ಆರ್‍ಸೆಟಿ ಅನುದಾನದಲ್ಲಿ ಭರಿಸುವುದು.

ಯೋಜನಾ ಪ್ರಸ್ತಾವನೆಗಳ ತಯಾರಿಕೆ:

•             ಯುವಜನರು ತಾವು ಕೈಗೊಳ್ಳಲು ತೀರ್ಮಾನಿಸಿರುವ ಚಟುವಟಿಕೆಗಳ ಬಗ್ಗೆ ಯೋಜನಾ ವರದಿಯನ್ನು ತಯಾರಿಸುವುದು.

•             ಯೋಜನಾ ಬೆಂಬಲ ಸಂಸ್ಥೆಯು ಜಂಟಿ ಹೊಣೆಗಾರಿಕೆ ಗುಂಪುಗಳಿಲ್ಲಿನ ಯುವಜನರು ಆಯ್ಕೆ ಮಾಡಿದ ಉದ್ಯಮಕ್ಕೆ ಯೋಜನಾ ಪ್ರಸ್ತಾವನೆಯನ್ನು 2 ವಾರಗಳೊಳಗೆÉ ತಯಾರಿಸಲು ನೆರವು ನೀಡುವುದು.

•             ಯೋಜನಾ ಪ್ರಸ್ತಾವನೆಗಳ ಆಧಾರದ ಮೇಲೆ ಬ್ಯಾಂಕ್ / ಹಣಕಾಸು ಸಂಸ್ಥೆಗಳು ಹಣಕಾಸಿನ ನೆರವನ್ನು ಒದಿಗಿಸುತ್ತವೆ. ಈ ಎಲ್ಲಾ ಹಂತದ ಪ್ರಕ್ರಿಯೆಯಲ್ಲಿ ಯೋಜನಾ ಬೆಂಬಲ ಸಂಸ್ಥೆಗಳು ಸಕಲ ಸಹಕಾರವನ್ನು ನೀಡತಕ್ಕದ್ದು.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 10/17/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate