অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವ್ಯಾಪ್ತಿ ಗುರಿ ಮತ್ತು ಫಲಾನುಭವಿಗಳು

ಯೋಜನೆಯ ನಿರ್ದಿಷ್ಠ ಗುರಿ:

 

•             ಉದ್ಯೋಗ ಬಯಸುವ ನಿರುದ್ಯೋಗಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡಬಲ್ಲ ಕೌಶಲ್ಯ ತರಬೇತಿಯನ್ನು ಸೂಕ್ತ ತರಬೇತಿ ಸಂಸ್ಥೆಗಳಿಂದ ಒದಗಿಸಿ 1 ಲಕ್ಷ ಯುವಜನರಿಗೆ ಉದ್ಯೋಗ ದೊರಕಿಸುವುದು.

•             ಸ್ವ-ಉದ್ಯೋಗ ಕೈಗೊಳ್ಳಬಯಸುವ ನಿರುದ್ಯೋಗಿ ಯುವಜನರಿಗೆ, ಪ್ರತಿ ಜಿಲ್ಲೆಯಲ್ಲೂ ಸರ್ಕಾರ ಅಥವಾ ಪ್ರತಿಷ್ಠಿತ ಸರ್ಕಾರೇತರ ಬೆಂಬಲ ಸಂಸ್ಥೆಗಳ ಮೂಲಕ ತರಬೇತಿ ನೀಡಿ, ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ, ಅನುಸರಣೆ ಮತ್ತು ಬೆಂಬಲ ನೀಡಿ, 1 ಲಕ್ಷ ಯುವಜನರಿಗೆ ಸ್ವ-ಉದ್ಯೋಗ ದೊರಕಿಸುವುದು.

ಯೋಜನೆಯ ವ್ಯಾಪ್ತಿ:


•             ರಾಜ್ಯದಲ್ಲಿನ ಒಟ್ಟು 5627 ಗ್ರಾಮಪಂಚಾಯತ್‍ಗಳಿಂದ, ಅಂದರೆ ಪ್ರತಿ ಗ್ರಾಮಪಂಚಾಯತ್‍ನಿಂದ 40 ಯುವಜನರನ್ನು ಯೋಜನೆಯ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ.

•             ಇದರಿಂದ ರಾಜ್ಯದಲ್ಲಿ ಪ್ರತಿ ವರ್ಷ ಎರಡು ಲಕ್ಷ ಯುವಜನರು ಯೋಜನೆಯ ಪ್ರಯೋಜನ ಪಡೆಯುವರು.

ಯೋಜನೆಯ ಫಲಾನುಭವಿಗಳು:

•             ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿರುದ್ಯೋಗಿ ಯುವಜನರು ಹಾಗೂ ಇದುವರೆಗೂ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದೆ, ಸ್ವ-ಉದ್ಯೋಗ/ ವೃತ್ತಿಪರ ಕೌಶಲ್ಯದೊಂದಿಗೆ ಉದ್ಯೋಗವನ್ನು ಕೈಗೊಳ್ಳಲು ಆಸಕ್ತರು.

•             18 ರಿಂದ 35 ವರ್ಷ ವಯೋಮಾನದ ಯುವಜನರು ಪ್ರಸ್ತುತ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಮೂಲ: ಅರ್.ಜಿ.ಸಿ.ವೈ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate