অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರಾಷ್ಟ್ರೀಯ ರೂರ್ಬನ್ ಮಿಷನ್


ದೇಶದ ದೊಡ್ಡ ಭಾಗಗಳಾದ ಗ್ರಾಮೀಣ ಪ್ರದೇಶಗಳು ನಮ್ಮ ಸಮೂಹದ ಒಂದು ಮುಖ್ಯ ಭಾಗವಾಗಿದೆ. ದೇಶದ ಪ್ರಾಥಮಿಕ ಆರ್ಥಿಕ ವಲಯದಲ್ಲಿ  ಎಂದರೆ ವ್ಯವಸಾಯ ಮತ್ತು ಅದರ ಪೂರಕ ಸೇವೆಗಳಲ್ಲಿ, ಸುಮಾರು 50 ಶೇಕಡಷ್ಟು ಜನರು ಇದ್ದಾರೆ. ೨೦೧೧ನೆಯ ಜನಗಣತಿಯ ಪ್ರಕಾರ ಶೇಕಡ ೬೯ ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದು, ಶೇಕಡ ೩೧ರಷ್ಟು ಜನ ನಗರಗಳಲ್ಲಿ ವಾಸವಾಗಿದ್ದಾರೆ. ಆರ್ಥಿಕ ಚಾಲನೆ ಮತ್ತು ಸ್ಪರ್ಧಾತ್ಮಕ ಅನುಕೂಲಗಳನ್ನು ಪಡೆದ ಈ ಸಮೂಹಗಳು ಸಾಮಾನ್ಯವಾಗಿ ಬೆಳವಣಿಗೆಯ ಸಾಮರ್ಥ್ಯವನ್ನು ವಿವರಿಸುತ್ತದೆ. ಒಮ್ಮೆ ಅಭಿವೃದ್ಧಿಹೊಂದಿದ ನಂತರ ಈ ಸಮೂಹಗಳನ್ನು ರೂರ್ಬನ್ ಎಂದು ವರ್ಗೀಕರಿಸಬಹುದು. ಈ ವಿಚಾರಗಳನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ಶ್ಯಾಮ ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್(SPMRM) ಅನ್ನು ಬಿಡುಗಡೆ ಮಾಡಿದೆ. ಗ್ರಾಮೀಣ ಪ್ರದೇಶಗಳನ್ನು ಆರ್ಥಿಕ, ಸಾಮಾಜಿಕ ಮತ್ತು ಭೌತಿಕ ಮೂಲಭೂತ ಸೌಕರ್ಯಗಳಮೂಲಕ ಬೆಳೆಸುವ ಉದ್ದೇಶ ಹೊಂದಿದೆ. ಈ ಮಿಷನ್ ಅನ್ನು ಫೆಬ್ರವರಿ 21, 2016 ರಂದು ಬಿಡುಗಡೆ ಮಾಡಲಾಯಿತು

ಮಿಷನ್ ಮುಂದಿನ ಐದು ವರ್ಷಗಳಲ್ಲಿ  ೩೦೦ ರೂರ್ಬನ್ ಸಮೂಹಗಳ ಅಭಿವೃದ್ಧಿ ಗುರಿಯನ್ನು ಹೊಂದಿದೆ. ಈ ಸಮೂಹಗಳನ್ನು ಅಗತ್ಯವಿರುವ ಸೌಲಭ್ಯಗಳಿಂದ ಬಲಗೊಳಿಸಲಾಗುವುದು, ಇದಕ್ಕಾಗಿ,  ಸರ್ಕಾರದ ವಿವಿಧ ಯೋಜನೆಗಳ ಸಂಪನ್ಮೂಲಗಳನ್ನು ಒಂದೆಡೆ ಸಜ್ಜುಗೊಳಿಸಬೇಕು ಎಂದು ಪ್ರಸ್ತಾಪಿಸಲಾಗಿದೆ. ಇದರ ಮೇಲೆ ಈ ಸಮೂಹಗಳ ಅಭಿವೃದ್ಧಿಗೆ ನಿರ್ಣಾಯಕ ಅಂತರದ ಅನುದಾನ (CGF) , ಈ ಅಭಿಯಾನದ ಅಡಿಯಲ್ಲಿ ಒದಗಿಸಲಾಗುವುದು

ದೂರದೃಷ್ಟಿ


ರಾಷ್ಟ್ರೀಯ ರೂರ್ಬನ್ ಮಿಷನ್ (NRuM) ಅನುಸರಿಸುವ ದೃಷ್ಟಿಎಂದರೆ  ಗ್ರಾಮದ ಸೊಗಡಿಗೆ ಸೋಂಕು ಬಾರದಂತೆ, ಗ್ರಾಮಗಳಿಗೂ ಸಹ ನಗರದ ಸೌಕರ್ಯಗಳನ್ನು ನೀಡುವುದು ಇದರಿಂದ ರೂರ್ಬನ್ ಹಳ್ಳಿಗಳ ನಿರ್ಮಾಣ

ಉದ್ದೇಶ

ರಾಷ್ಟ್ರೀಯ ರೂರ್ಬನ್ ಮಿಷನ್ (NRuM) ಉದ್ದೇಶ ಸ್ಥಳೀಯ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವುದು,ಮೂಲಭೂತ ಸೇವೆಗಳನ್ನು ಹೆಚ್ಚಿಸುವುದು, ಮತ್ತು ಯೋಜಿತ ರೂರ್ಬನ್ ಸಮೂಹಗಳನ್ನುರಚಿಸುವುದು.

ಫಲಿತಾಂಶಗಳು

  • ಈ ಮಿಷನ್ ಅಡಿಯಲ್ಲಿ ನಿರೀಕ್ಷಿಸಿರುವ ಫಲಿತಾಂಶಗಳು
  • ಗ್ರಾಮೀಣ ಮತ್ತು ನಗರ ತಾರತಮ್ಯದ ನಿವಾರಣೆ ಉದಾಹಣೆಗೆ : ಆರ್ಥಿಕ, ತಾಂತ್ರಿಕ ಮತ್ತು ಸೌಲಭ್ಯಗಳು ಮತ್ತು ಸೇವೆಗಳು ಸಂಬಂಧಿಸಿದಂತೆ
  • ಗ್ರಾಮಾಂತರ ಪ್ರದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಮೂಲಕ ಬಡತನ ಮತ್ತು ನಿರುದ್ಯೋಗ ನಿವಾರಣೆ
  • ಪ್ರದೇಶಗಳ ಅಭಿವೃದ್ಧಿ ಹೆಚ್ಚಿಸುವುದು
  • ಗ್ರಾಮೀಣ ಪ್ರದೇಶಗಳಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸುವುದು

ರೂರ್ಬನ್ ಸಮೂಹ

ರೂರ್ಬನ್ ಸಮೂಹ ಎಂದರೆ ೨೫೦೦೦ ದಿಂದ ೫೦೦೦೦ ವರೆಗೆ ಜನಸಂಖ್ಯೆಯನ್ನು ಒಳಗೊಂಡ ಭೌಗೋಳಿಕವಾಗಿ ಸಮೀಪವಾಗಿರುವ ಹಳ್ಳಿಗಳ ಸಮೂಹ. ಕರಾವಳಿ ಪ್ರದೇಶ,ಮರುಭೂಮಿಯಲ್ಲಿ,ಗುಡ್ಡಗಾಡು ಅಥವಾ ಬುಡಕಟ್ಟು ಪ್ರದೇಶಗಳಲ್ಲಿ.೫೦೦೦ ದಿಂದ ೧೫೦೦೦ ದ ವರಿಗೆ ಜನಸಂಖ್ಯೆ ಹೊಂದಿರುವ ಪ್ರದೇಶ. ಸಾಧ್ಯವಾದಷ್ಟು ಹಳ್ಳಿಗಳ ಸಮೂಹಗಳು ಆಡಳಿತಾತ್ಮಕ ಅನುಕೂಲಕ್ಕಾಗಿ ಒಂದೇ ತಾಲೂಕು ಗ್ರಾಮ ಪಂಚಾಯತಿ ಅಡಿಯಲ್ಲಿದ್ದರೆ ಉತ್ತಮ. ಅನುಮೋದನೆ ಪಡೆದ ಸಮೂಹಗಳ ಪಟ್ಟಿಯನ್ನು ಪಡೆಯಲು ಇಲ್ಲಿ ಕ್ಲಿಕ್ಕಿಸಿ click here.

ಆಯ್ಕೆಯ ವಿಧಿವಿಧಾನ

NRuM ಅಡಿಯಲ್ಲಿ ಸಮೂಹಗಳ ಎರಡು ವಿಭಾಗಗಳು ಇರುತ್ತದೆ: ಬುಡಕಟ್ಟು ಮತ್ತು ಬುಡಕಟ್ಟುಅಲ್ಲದ ಎಂದು. ಆಯ್ಕೆ ಪ್ರಕ್ರಿಯೆ ಈ ವರ್ಗಗಳಗಳಿಗೆ ಅನುಸಾರವಾಗಿ ಬದಲಾಗುತ್ತದೆ. ರೂರ್ಬನ್ ಸಮೂಹ ಆಯ್ಕೆ ಮಾಡುವಾಗ ರಾಜ್ಯವು ದೊಡ್ಡ ಗ್ರಾಮವನ್ನು ಗುರುತಿಸಬಹುದು.  ಇದರಿಂದ ಸಂಭಾವ್ಯ ಪ್ರದೇಶದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬೆಳವಣಿಗೆಯಾಗಿ ಆರ್ಥಿಕ ರೂಪಾಂತರಕ್ಕೆ ಕಾರಣವಾಗಬಹುದು. ಈ ಬೆಳವಣಿಗೆ ಹತ್ತಿರದ ಕೇಂದ್ರಗಳು ಹಳ್ಳಿಗಳ ಅಥವಾ ಗಣತಿ ನಗರಗಳಿಗೆ ಮಾದರಿಯಾಗಬಹುದು. ಸಮೂಹಗಳನ್ನು ಭೌಗೋಳಿಕವಾಗಿ  ೫ ರಿಂದ ೧೦ ಕಿಮೀ ತ್ರಿಜ್ಯ ವ್ಯಾಪ್ತಿ ಯಲ್ಲಿರುವ ಸಮೀಪದ ಹಳ್ಳಿಗಳು / ಗ್ರಾಮ ಪಂಚಾಯತ್ ಗಳನ್ನು(ಭೌಗೋಳಿಕ ಪ್ರದೇಶದ ಜನಸಂಖ್ಯಾ ಸಾಂದ್ರತೆ ಅನುಸರಿಸಿ) ಗಮನದಲ್ಲಿರಿಸಿಕೊಂಡು ಗುರುತಿಸಲಾಗುವುದು.

ಬುಡಕಟ್ಟು ಅಲ್ಲದ

  • ಬುಡಕಟ್ಟುಅಲ್ಲದ ಸಮೂಹಗಳ ಆಯ್ಕೆಗೆ, ಸಚಿವಾಲಯವು ಪ್ರತಿ ರಾಜ್ಯದ ಉಪ ಜಿಲ್ಲೆಗಳ ಗುಂಪುಗಳನ್ನು ಗುರುತಿಸಿ
  • ಪಟ್ಟಿಯನ್ನು ಒದಗಿಸುವುದು. ಸಚಿವಾಲಯ ಈ ಉಪ ಜಿಲ್ಲೆಗಳು ಆಯ್ಕೆ ಯನ್ನು ನಿಯತಾಂಕಗಳನ್ನು ಆಧರಿಸಿ ಮಾಡುವುದು ಉದಾಹರಣೆಗೆ
  • ದಶಕದ ಗ್ರಾಮೀಣ ಜನಸಂಖ್ಯೆ ಬೆಳವಣಿಗೆ
  • ದಶಕದ ಕೃಷಿಯೇತರ ಕೆಲಸದ ಭಾಗವಹಿಸುವಿಕೆ ಬೆಳವಣಿಗೆ
  • ·ಆರ್ಥಿಕ ಸಮೂಹಗಳ ಉಪಸ್ಥಿತಿ
  • ಪ್ರವಾಸೋದ್ಯಮ ಮತ್ತು  ಮಹತ್ವದ ಯಾತ್ರಾ ಸ್ಥಳಗಳ ಉಪಸ್ಥಿತಿ
  • ಸೂಕ್ತ ಸರಕು ಸಾಗಾಣಿಕೆ ವ್ಯವಸ್ಥೆ

ಸೂಕ್ತ ಮಾನ್ಯತೆಯನ್ನು ಪ್ರತಿ ನಿಯತಾಂಕಕ್ಕೆ  ನೀಡಲಾಗಿದೆ.ಸಚಿವಾಲಯುವು ಗುರುತಿಸಿದ ಈ ಉಪ ಜಿಲ್ಲೆಗಳನ್ನು  ರಾಜ್ಯ ಸರ್ಕಾರಗಳು ಸಮೂಹಗಳ ಆಯ್ಕೆ  ಮಾಡುವಾಗ, ಕೆಳಗಿನ ನಿರ್ವಹಣಾ ಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡು  ಒಳಪಡಿಸಬಹುದು

  • ದಶಕದ ಗ್ರಾಮೀಣ ಜನಸಂಖ್ಯೆ ಬೆಳವಣಿಗೆ
  • ಜಮೀನಿನ ಮೌಲ್ಯಗಳ ಹೆಚ್ಚಳ
  • ದಶಕದ ಕೃಷಿಯೇತರ ಕೆಲಸದ ಭಾಗವಹಿಸುವಿಕೆ ಬೆಳವಣಿಗೆ
  • ಮಾಧ್ಯಮಿಕ ಶಾಲೆಗಳಲ್ಲಿ ಹುಡುಗಿಯರ ಶೇಕಡಾವಾರು ನೋಂದಣಿ.
  • ಪ್ರಧಾನ ಮಂತ್ರಿ ಜಾನ್ ಧನ್ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆಗಳನ್ನು ಹೊಂದಿರುವು ಶೇಕಡಾವಾರು ಮನೆಗಳು.
  • ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ನಲ್ಲಿ ಮಾಡಿದ ಸಾಧನೆ
  • ಗ್ರಾಮ ಪಂಚಾಯತ್ನ  ಉತ್ತಮ ಆಡಳಿತ ಉಪಕ್ರಮಗಳು.

 

ರಾಜ್ಯವು ಬೇರೆ ಯಾವುದೇ  ಸಂಬಂಧಿತ ಅಂಶ ಪರಿಗಣಿಸಿ ಸೇರಿಸಿಕೊಳ್ಳಬಹುದು. ಆದಾಗ್ಯೂ, ಶೇಕಡಾ ೮೦ ರ  ಒಟ್ಟು ಪ್ರಾಮುಖ್ಯತೆಯನ್ನು ಮೊದಲ 4 ನಿಯತಾಂಕಗಳಿಗೆ  ನೀಡಲಾಗುವುದು ಮತ್ತು ರಾಜ್ಯಗಳು ಶೇಕಡಾ ೨೦ ಒಟ್ಟು ಪ್ರಾಮುಖ್ಯತೆಗೆ  ಒಳಪಟ್ಟಿರುತ್ತದೆ ಲಭ್ಯ  ಮೂರು ನಿಯತಾಂಕಗಳ, ಆಯ್ಕೆ ನಮ್ಯತೆಯನ್ನು ಹೊಂದಿರುತ್ತದೆ.

ಬುಡಕಟ್ಟು

ಬುಡಕಟ್ಟು ಸಮೂಹಗಳನ್ನು  ಗುರುತಿಸಲು  ಸಚಿವಾಲಯವು ದೇಶದ ಪ್ರಮುಖ ೧೦೦ ಬುಡಕಟ್ಟು ಪ್ರಾಂತಗಳನ್ನು ಪರಿಶಿಷ್ಟ ಜನಸಂಖ್ಯೆಯ ಆಧಾರದ ಮೇಲೆ ಆಯ್ಕೆಮಾಡುತ್ತದೆ. ಈ ಉಪ ಜಿಲ್ಲೆಗಳ ಆಯ್ಕೆ ಕೆಳಕಂಡ ನಿಯತಾಂಕಗಳನ್ನು ಆಧರಿಸಿರುತ್ತದೆ

  • ಬುಡಕಟ್ಟು ಜನಸಂಖ್ಯೆಯ  ದಶಕದ ಬೆಳವಣಿಗೆ
  • ಪ್ರಸ್ತುತ ಬುಡಕಟ್ಟು ಸಾಕ್ಷರತಾ ಪ್ರಮಾಣ
  • ದಶಕದ ಕೃಷಿಯೇತರ ಕೆಲಸದ ಭಾಗವಹಿಸುವಿಕೆ ಬೆಳವಣಿಗೆ
  • ಗ್ರಾಮೀಣ ಜನಸಂಖ್ಯೆಯಲ್ಲಿ ದಶಕದ ಬೆಳವಣಿಗೆ
  • ಆರ್ಥಿಕ ಸಮೂಹಗಳ ಉಪಸ್ಥಿತಿ

ಉಪ ಜಿಲ್ಲೆಗಳ ಆಯ್ಕೆ ಮಾಡುವಾಗ ಸೂಕ್ತ ಮಾನ್ಯತೆ ಯುನ್ನು  ಈ ನಿಯತಾಂಕಗಳನ್ನು ಪ್ರತಿಯೊಂದಕ್ಕೆ ನೀಡಲಾಗುವುದು.

ನಂತರ,  ಸಚಿವಾಲಯುವು ಗುರುತಿಸಿದ ಈ ಉಪ ಜಿಲ್ಲೆಗಳನ್ನು  ರಾಜ್ಯ ಸರ್ಕಾರಗಳು ಸಮೂಹಗಳ ಆಯ್ಕೆ  ಮಾಡುವಾಗ, ಕೆಳಗಿನ ನಿರ್ವಹಣಾ ಲಕ್ಷಣಗಳನ್ನು ಗಮನದಲ್ಲಿರಿಸಿಕೊಂಡು  ಒಳಪಡಿಸಬಹುದು

  • ಬುಡಕಟ್ಟು ಜನಸಂಖ್ಯೆಯ  ದಶಕದ ಬೆಳವಣಿಗೆ
  • ಬುಡಕಟ್ಟು ಸಾಕ್ಷರತೆಯ ಪ್ರಮಾಣದಲ್ಲಿ ಬೆಳವಣಿಗೆ.
  • ದಶಕದ ಕೃಷಿಯೇತರ ಕೆಲಸದ ಭಾಗವಹಿಸುವಿಕೆ ಬೆಳವಣಿಗೆ

ಮೇಲಿನ ಮೂರು ನಿಯತಾಂಕ ವಲ್ಲದೆ ರಾಜ್ಯವು ಬೇರೆ ಯಾವುದೇ  ಸಂಬಂಧಿತ ಅಂಶ ಪರಿಗಣಿಸಿ ಸೇರಿಸಿಕೊಳ್ಳಬಹುದು. ಒದಗಿಸಿದ ನಿಯತಾಂಕದಿಂದ ಮೇಲಿನ ಮೂವರು ನಿಯತಾಂಕಗಳ ಪ್ರಾಮುಖ್ಯತೆ ಶೇಕಡಾ ೮೦ ಕ್ಕಿಂತ ಕಡಿಮೆ ಆಗಬಾರದು.

ಸಂಭಂದಿತ ಕೊಂಡಿಗಳು

  • ರಾಷ್ಟ್ರೀಯ ರೂರ್ಬನ್ ಮಿಷನ್ ಸಂಬಂಧಿಸಿದ ಪದೇ ಪದೇ ಕೇಳಲಾಗುವ ಪ್ರಶ್ನೆಗಳು
  • ಅನುಷ್ಠಾನ ಚೌಕಟ್ಟುಗಳು
  •  

    ಮೂಲ: ರಾಷ್ಟ್ರೀಯ ರೂರ್ಬನ್ ಮಿಷನ್

    ಕೊನೆಯ ಮಾರ್ಪಾಟು : 7/17/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate