অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಿರಿಯನಾಗರಿಕರಿಗಾಗಿ ಇರುವ ಯೋಜನೆಗಳು

ಹಿರಿಯನಾಗರಿಕರಿಗಾಗಿ ಇರುವ ಯೋಜನೆಗಳು

ರಾಜ್ಯ ಹಿರಿಯ ನಾಗರಿಕರ ನೀತಿ

ಕರ್ನಾಟಕ ರಾಜ್ಯದಲ್ಲಿ ಹಿರಿಯ ನಾಗರಿಕರಿಗಾಗಿ ರಾಜ್ಯ ನೀತಿಯನ್ನು ಜಾರಿಗೆತರಲಾಗಿದ್ದು ಮಾನ್ಯ ಮುಖ್ಯಮಂತ್ರಿಗಳವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗಿದೆ. ಹಗಲು ಯೋಗಕ್ಷೇಮ ಕೇಂದ್ಯಗಳನ್ನು ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಮತ್ತು ಬೆಳಗಾವಿ ನಗರಗಳಲ್ಲಿ ರಚಿಸಲಾಗಿದೆ. ಹಾಗೂ ಸಹಾಯವಾಣಿ ಕೇಂದ್ರಗಳನ್ನು ಪೋಲೀಸ್ ಕಛೇರಿಯಲ್ಲಿ ಸ್ಥಾಪಿಸಲಾಗಿದೆ, ಸಹಾಯವಾಣಿ ಸಂಖ್ಯೆ:1090

ವೃದ್ದಾಶ್ರಮಗಳು

ಆಸರೆ ಇಲ್ಲದೆ ಹಿರಿಯ ನಾಗರಿಕರಿಗೆ ಸ್ವಯಂ ಸೇವಾ ಸಂಸ್ಥೆಗಳು ನಡಸುತ್ತಿರುವ ವೃದ್ದಾಶ್ರಮಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ನೀಡುತ್ತಿದೆ.ಇಲ್ಲಿ ವೃದ್ಧರಿಗೆ ಉಚಿತ ಊಟ ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ 27ವೃದ್ಧಾಶ್ರಮಗಳು ರಾಜ್ಯ ಅನುದಾನದಿಂದ ನಡೆಯುತ್ತಿವೆ( ಉಡುಪಿ ಜಿಲ್ಲೆಯನ್ನು ಹೊರತುಪಡಿಸಿ)ರಾಜ್ಯ ಅನುದಾನದಿಂದ ನಡೆಯುತ್ತಿರುವ ವೃದ್ಧಾಶ್ರಮಗಳ ಪಟ್ಟಿಯನ್ನುಅನುಬಂಧ 2ರಲ್ಲಿ ನೀಡಲಾಗಿದೆ. ಈಗಾಗಲೇ 26 ಜಿಲ್ಲೆಗಳಲ್ಲಿ 27 ವೃದ್ಧಾಶ್ರಮಗಳು ಜಿಲ್ಲಾವಲಯವಾರು ಇರುವುದು.

ಹಿರಿಯ ನಾಗರಿಕರಿಕರಿಗಾಗಿ ಹಗಲು ಯೋಗಕ್ಷೇಮ ಕೇಂದ್ರಗಳು

ರಾಜ್ಯದ 4 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರಿಗಾಗಿ 4 ಹಗಲು ಯೋಗಕ್ಷೇಮ ಕೇಂದ್ರಗಳನ್ನು ನಡೆಸಲಾಗುತ್ತಿದೆ.ಬೆಂಗಳೂರು, ಹುಬ್ಬಳ್ಳಿ,ಧಾರವಾಡ,ಗುಲ್ಬರ್ಗ,ಬೆಳಗಾಂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಡೆಸುತ್ತಿದೆ.ಇಲ್ಲಿ ಹಿರಿಯ ಪ್ರಜೆಗಳ ಕ್ಷೇಮಾಭಿವೃದ್ಧಿಗಾಗಿ ಮತ್ತು ಸಮಾಜಿಕ ಮತ್ತು ಮಾನಸಿಕ ಒತ್ತಡಗಳ ನಿವಾರಣೆಗಾಗಿ ಮನೊರಂಜನೆ,ಆರೋಗ್ಯ ಕಾರ್ಯಕ್ರಮಗಳೊಂದಿಗೆ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡಲಾಗುತ್ತಿದೆ.

ಹಿರಿಯ ನಾಗರಿಕರ ಸಹಾಯವಾಣಿ-1090

ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ತುರ್ತು ಸೇವೆಯನ್ನು ನೀಡುವ ಸಲುವಾಗಿ ಬೆಂಗಳೂರು, ಮೈಸೂರು,ಹುಬ್ಬಳಿ, ಧಾರವಾಡ, ಗುಲ್ಬರ್ಗಾ, ಬೆಳಗಾಂ, ಮಂಗಳೂರು,ಬಳ್ಳಾರಿ,ಚಿತ್ರದುರ್ಗ,ಶಿವಮೊಗ್ಗ, ಬಾಗಲಕೋಟೆ, ಕೋಲಾರ, ತುಮಕೂರು,ಬೀದರ್,ಬಿಜಾಪುರಗಳಲ್ಲಿ ಹಿರಿಯ ನಾಗರಿಕರ ಸಹಾಯವಾಣಿಯನ್ನು ಜಿಲ್ಲಾ ಪೋಲಿಸ್ ಆಯುಕ್ತರು/ಆರಕ್ಷಕ ಅಧೀಕ್ಷಕರ ಸಹಯೋಗದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.

ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿ

ಜಿಲ್ಲೆಗಳಲ್ಲಿ ಆಯ್ಕೆಗೊಂಡ ಸ್ವಯಂ ಸೇವಾ ಸಂಸ್ಥೆಗಳು ಹಿರಿಯ ನಾಗರಿಕರಿಗಾಗಿ ಗುರುತಿನ ಚೀಟಿಗಳನ್ನು ಪಡೆದು ವಿತರಿಸಬಹುದಾಗಿದೆ. ಸ್ವಯಂ ಸೇವಾ ಸಂಸ್ಥೆಯು ಗುರುತಿನ ಚೀಟಿಯನ್ನು ವಿತರಿಸುವ ಪ್ರಕ್ರಿಯೆಗಾಗಿ ಹಿರಿಯನಾಗರಿಕರಿಂದರೂ.25ನ್ನು ಮಾತ್ರಪಡೆಯತಕ್ಕದ್ದು. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಗುರುತಿನ ಚೀಟಿಯನ್ನು ಪಡೆಯಬಹುದಾಗಿದೆ. ಮಾಹಿತಿಗೆ 1090 ಹಿರಿಯರ ಸಹಾಯವಾಣಿಯನ್ನು ಸಂಪರ್ಕಿಸುವುದು ಜಿಲ್ಲೆಗಳಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು ಸಂಪರ್ಕಿಸಬಹುದು.

ರಿಯಾಯಿತಿ ದರದಬಸ್ ಪಾಸ್

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸರ್ಕಾರದ ಆದೇಶ ಸಂಖ್ಯೆ :ಸಾರಿಗೆ:45:ನಾಸಾಇ:2008 ದಿನಾಂಕ 8.9.2008 ರ ಪ್ರಕಾರ 65 ವರ್ಷಕ್ಕಿಂತ ಮೇಲ್ಪಟ್ಟ ವಯೋಮಿತಿಯ ಹಿರಿಯ ನಾಗರಿಕರಿಗೆ ಬಸ್ ಪ್ರಯಾಣದಲ್ಲಿ ಶೇ.25 ರಷ್ಟು ರಿಯಾಯಿತಿಯನ್ನು ನೀಡಲಾಗುವುದು

ಈ ಸೌಲಭ್ಯವನ್ನು ಪಡೆಯಬಯಸುವವರು ಇಲಾಖೆಯ ವತಿಯಿಂದ ನೀಡಲಾಗುವ ಹಿರಿಯ ನಾಗರಿಕರ ಗುರುತಿನ ಚೀಟಿ/ ಚುನಾವಣಾ ಗುರುತಿನ ಚೀಟಿ) ತೋರಿಸತಕ್ಕದ್ದು.

ವೃದ್ಧಾಪ್ಯ ವೇತನ

ತಮ್ಮ ಜೀವನವನ್ನು ನಿರ್ವಹಿಸಲು ಕಷ್ಟವಾಗಿರುವ ಹಿರಿಯ ನಾಗರಿಕರಿಗೆ ಸರ್ಕಾರದ ವತಿಯಿಂದ ತಿಂಗಳಿಗೆ ರೂ.400 ಗಳ ವೃದ್ದಾಪ್ಯ ವೇತನವನ್ನು ನೀಡಲಾಗುತ್ತಿದೆ. ಈ ಯೋಜನೆಯನ್ನು ಕಂದಾಯ ಇಲಾಖೆಯ ಮೂಲಕ ಅನುಷ್ಟಾನಗೊಳಿಸುತ್ತಿದ್ದು ಸಂಬಂಧಪಟ್ಟವರು ಅಗತ್ಯ ದಾಖಲಾತಿಗಳೊಂದಿಗೆ ತಾಲ್ಲೂಕು ತಹಶೀಲ್ದಾರರಿಗೆ ಸಲ್ಲಿಸತಕ್ಕದ್ದು.

ಅಗತ್ಯದಾಖಲೆಗಳು

  1. ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
  2. ಆದಾಯ ಪ್ರಮಾಣ ಪತ್ರ
  3. ಕರ್ನಾಟಕದಲ್ಲಿ ವಾಸವಾಗಿರುವ ಬಗ್ಗೆ ದೃಢೀಕರಣ ಪತ್ರ

ಸಂಧ್ಯಾ ಸುರಕ್ಷ ಯೋಜನೆ

ಕಂದಾಯ ಇಲಾಖೆಯಿಂದ ಸರ್ಕಾರದ ಆದೇಶ ಸಂಖ್ಯೆ:ಆರ್.ಡಿ.97.ಎಂ.ಎಸ್,ಟಿ.2007 ದಿನಾಂಕ: 2-7-2007 ಈ ಯೋಜನೆಯಡಿಯಲ್ಲಿ ಸಾಮಾಜಿಕ ಭದ್ರತಾ ರೂಪದಲ್ಲಿ ವಯೋವೃದ್ಧರಿಗೆ ರೂ.400ಗಳ ಆರ್ಥಿಕ ಸಹಾಯಧನವನ್ನು ಮಾಸಿಕವಾಗಿ ನೀಡಲಾಗುತ್ತಿದೆ.

ಅರ್ಹತೆಗಳು

  1. ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
  2. ಸ್ಥಳೀಯ ಕಂದಾಯ ಅಧಿಕಾರಿಗಳ ದೃಢೀಕರಣದಂತೆ ಮನವಿದಾರರ ಮತ್ತು ಅವರ ಪತಿ ಅಥವಾ ಪತ್ನಿಯವ ವಾರ್ಷಿಕ ಆದಾಯವು ರೂ.20000 ಕ್ಕಿಂತ ಹೆಚ್ಚಾರಿರಬಾರದು.
  3. ಮಕ್ಕಳ ಆದಾಯವು ತಂದೆ ತಾಯಿಯವರ ವಾರ್ಷಿಕ ಆದಾಯಕ್ಕೆ ಪರಿಗಣಿಸಲ್ಪಡುವುದಿಲ್ಲ.
  4. ಪತಿ ಅಥವಾ ಪತ್ನಿಯ ಜಂಟಿ ಖಾತೆಯಲ್ಲಿರುವ ರೂ.110000ಕ್ಕಿಂತ ಹೆಚ್ಚಿನ ಠೇವಣೆ ಇರಬಾರದು.
  5. ಯಾವುದೇ ರೀತಿಯ ಇತ್ರ ಮಾಸಾಶನ/ಪಿಂಚಣಿಯನ್ನು ಪಡೆಯುವವರು ಈ ವೇತನಕ್ಕೆ ಅರ್ಹರಾಗಿರುವುದಿಲ್ಲ.
  6. ಈ ಕೆಳಗಿನ ವಲಯಗಳಲ್ಲಿ ಇರುವ ಅಭ್ಯರ್ಥಿಗಳ ಈ ಯೋಜನೆಯಡಿ ಸೌಲಭ್ಯ ಪಡೆಯ ಬಹುದಾಗಿದೆ
    1. ಅತಿ ಸಣ್ಣ ರೈತರು
    2. ಸಣ್ಣ ರೈತರು
    3. ಕೃಷಿ ಕಾರ್ಮಿಕರು
    4. ಮೀನುಗಾರರು
    5. ಅಸಂಘಿಟಿತ ವಲಯಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಆದರೆ ಕಟ್ಟಡ ಕಾಮಗಾರಗಳಲ್ಲಿ ಕೆಲಸ ಮಾಡುವ ಕಾರ್ಮಿಕರೆಂದರೆ (Regulation of Employment & condition of services) Act 1996 ಇದರ ಪ್ರಕಾರ ಅರ್ಹರಿರುವುದಿಲ್ಲ.ಈ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಪಡೆಯಬೇಕಾದ್ದಲ್ಲಿ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರರನ್ನು ಸಂಪರ್ಕಿಸಬಹುದು

ಮೆಂಟೆನೆನ್ಸ್ ಅಂಡ್ ವೆಲ್ ಫೇರ್ ಆಫ್ ಸೀನಿಯರ್ ಸಿಟಿಜನ್ಸ್ ಆಕ್ಟ್-2007

ಅಧಿಸೂಚನೆ ಸಂಖ್ಯೆ:ಡಬ್ಲೂಸಿ.ಡಿ:479:ಪಿ.ಹೆಚ್.ಪಿ:2007 ದಿನಾಂಕ 27.3.2008 ರನ್ವಯ ಈ ಕಾಯಿದೆಯುದಿನಾಂಕ 1.4.2008ರಿಂದ ಜಾರಿಗೆ ಬಂದಿರುತ್ತದೆ. ಈ ಅಧಿನಿಯಮದ ಪ್ರಕಾರ ಸಮಸಂಖ್ಯೆ ಆದೇಶ ದಿನಾಂಕ 19.2.2009 ರನ್ವಯ ಅಪೆಲೇಟ್ ಟ್ರಿಬ್ಯುನಲ್ಸ್ ಮತ್ತು ಮೆಂಟೆನನ್ಸ್ ಟ್ರಿಬ್ಯೂನಲ್ಸ್ ಗಳು ರಚಿತವಾಗಿರುತ್ತವೆ.

ಮೂಲ  : ವಿಕಲ ಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣಇಲಾಖೆ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate