ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ

ಆದರ್ಶ ವಿವಾಹ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ

ಆದರ್ಶ ವಿವಾಹ ಯೋಜನೆರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹಗಳನ್ನು ಜನಪ್ರಿಯ ಗೊಳಿಸಲು ಕನಿಷ್ಠ 25 ವಿವಾಹಗಳು ನಡೆದ ಕಾರ್ಯಕ್ರಮಕ್ಕೆ ಪ್ರತಿ ವಿವಾಹಕ್ಕೆ 2 ವರ್ಷದ ಠೇವಣಿ ರೂಪದಲ್ಲಿ ರೂ.10.000/- ಪ್ರೋತ್ಸಾಹ ಧನ ನೀಡಲು ದಿನಾಂಕ:-02-02-2007 ರಿಂದ ಯೋಜನೆಯನ್ನು ರೂಪಿಸಲಾಗಿದೆ.

ನಿಬಂಧನೆಗಳು :
 • ಇಂತಹಾ ಕಾರ್ಯಕ್ರಮದಲ್ಲಿ ವಿವಾಹವಾಗುವ ಜೋಡಿಯಲ್ಲಿ ವಧುವಿನ ಹೆಸರಲ್ಲಿ ರೂ.10,000/- ಗಳನ್ನು 2 ವರ್ಷಗಳ ನಿಶ್ಚಿತ ಠೇವನಿಯಲ್ಲಿ ಇಡಲಾಗುವುದು.
 • ಅಂತರ್ ಜಾತಿ ವಿವಾಹಗಳಿಗೆ ಈ ಯೋಜನೆಯಲ್ಲಿ ಅವಕಾಶವಿದ್ದು ಎರಡು ಪ್ರೋತ್ಸಾಹ ಧನಗಳನ್ನು ಒಟ್ಟಿಗೆ ನೀಡಲಾಗುವುದು.
 • ಸಾಮೂಹಿಕ ವಿವಾಹಗಳು ಸಂಘಟನಾಕಾರರಿಗೆ ಪ್ರತಿ ಜೋಡಿಗೆ ರೂ.100/- ರಂತೆ ಪ್ರೋತ್ಸಾಹ ಧನ ನೀಡಲಾಗುವುದು
 • ವಿವಾಹಕ್ಕೆ ಅರ್ಹವಾದ ವಯಸ್ಸಿನವರಗಿದ್ದು(ಕನಿಷ್ಠ ವಯೋಮಿತಿ) ಈ ಮೊದಲೇ ಮದುವೆಯಾಗಿ ಜೀವಂತ ಪತಿ ಅಥವಾ ಪತ್ನಿ ಇರಬಾರದು.
 • ಪ್ರೋತ್ಸಾಹ ಧನ ಪಡೆಯಲು ವಿವಾಹವನ್ನು ನೋಂದಣಿ ಮಾಡಿಸುವುದು ಕಡ್ಡಾಯವಾಗಿ
 • ಪ್ರತಿ ಅರ್ಜಿಯ ಜೊತೆಯಲ್ಲಿ ಅಗತ್ಯವಿರುವ ಪ್ರಮಾಣ ಪತ್ರಗಳು, ವಿವಾಹದ ಭಾವ ಚಿತ್ರದ ಪಾಸಿಟಿವ್ ಮತ್ತು ನೆಗೆಟಿವ್ ಮುಂತಾದವುಗಳನ್ನು ಲಗತ್ತಿಸಬೇಕು.
 • ವಿವಾಹ ಮುಗಿದ ಒಂದು ವಾರದಲ್ಲಿ ಹಣವನ್ನು ವಧುವಿಗೆ ಅನುಕೂಲಕರವಾದ ಬ್ಯಾಂಕ್ ಶಾಖೆಯಲ್ಲಿ ನಿಶ್ಚಿತ ಠೇವಣಿಯಲ್ಲಿ ವಧುವಿನ ಹೆಸರಿನಲ್ಲಿ ಇಟ್ಟು ವಧುವಿಗೆ ರಶಿದಿಯನ್ನು ನೀಡಲಾಗುವುದು.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

 • ವಯಸ್ಸಿನ ಪ್ರಮಾಣ ಪತ್ರ
 • ವಿವಾಹ ಪ್ರಮಾಣ ಪತ್ರ
 • ಸಾಮೂಹಿಕ ವಿವಾಹವಾದ ಬಗ್ಗೆ ಸಂಘಟನಕಾರರಿಂದ ದೃಢೀಕರಿಸಲಾದ ವಿವಾಹವಾದ ಜೋಡಿಗಳ ಪಟ್ಟಿ

ರಾಷ್ಟ್ರೀಯ ಕುಟುಂಬ ನೆರವು ಯೋಜನೆ


ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ(NSAP) ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಕೇಂದ್ರ ಸಹಾಯಧನ ಲಭ್ಯವಿದ್ದು ಇದರ ಅನ್ವಯ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಮುಖ್ಯಸ್ಥನ ಮರಣವಾದಲ್ಲಿ ಒಂದು ಬಾರಿಯ ಸಹಾಯದನವನ್ನು ನೀಡಲಾಗುವುದು.

ನಿಬಂಧನೆಗಳು

 • ಕುಟುಂಬ ಮುಖ್ಯಸ್ಥನ ದುಡಿಮೆಯ ಗಣನೀಯ ಪ್ರಮಾಣದ್ದಾಗಿರಬೇಕು.
 • ಮರಣದ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥನ ವಯಸ್ಸು 18ಕ್ಕಿಂತ ಹೆಚ್ಚಿಗೆ ಮತ್ತು 59 ಕ್ಕಿಂತ ಕಡಿಮೆ ಇರಬೇಕು.
 • ಈ ಯೋಜನೆಯಡಿ ಒಂದು ಬಾರಿ ರೂ.20.000/-ದ ನೆರವು ಲಭ್ಯವಾಗಿಲಿದೆ.
 • ಅರ್ಜಿಯನ್ನು ಬಿಪಿಎಲ್ ಕುಟುಂಬದ ಜೀವಂತವಿರುವ ಸದಸ್ಯರ ಮುಖ್ಯಸ್ಥನ ಸಲ್ಲಿಸಬೇಕು.

ಈ ಯೋಜನೆಗೆ ಸಲ್ಲಿಸಬೇಕಾದ ದಾಖಲಾತಿಯ ವಿವರ ಕೆಳಕಂಡಂತಿದೆ.

 • ವಾಸಸ್ಥಳ ಪ್ರಮಾಣ ಪತ್ರ
 • ಮರಣ ಪ್ರಮಾಣ ಪತ್ರ
 • ಪಡಿತರ ಚೀಟಿ

ಮೂಲ : ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

3.08888888889
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top