অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಮ್ ಆದ್ಮಿವಿಮಾ ಯೋಜನೆ

ವಿಮಾ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ದೊರಕುವ ಸೌಲಭ್ಯಗಳು

  • ಅರ್ಹತೆ : 18 ರಿಂದ 59 ವರ್ಷದೊಳಗಿನ ಗುರುತಿಸಲಾದ 72 ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿ
  • ವಿಮಾ ಕಂತು : ರೂ 200-00 ಪ್ರತಿ ಕುಟುಂಬದ ಮುಖ್ಯಸ್ಥರಿಗೆ ರೂ.100-00 ರಾಜ್ಯ ಸರ್ಕಾರದಿಂದ ಹಾಗೂ ರೂ.100-00 ಕೇಂದ್ರ ಸರ್ಕಾರದಿಂದ ಭರಿಸಲಾಗುತ್ತದೆ.
  • ಈ ಯೋಜನೆಯಿಂದ ದೊರೆಯುವ ಲಾಭಗಳು:

  • ನೈಸರ್ಗಿಕ ಸಾವು : ರೂ 30,000-00 ಪರಿಹಾರಧನ
  • ಆಕಸ್ಮಿಕ ಸಾವು : ರೂ. 75,000-00
  • ಶಾಶ್ವತ ಅಂಗವಿಕಲತೆ : ರೂ 75,000-00
  • ಭಾಗಾಂಶ ಅಂಗವಿಕಲತೆ : ರೂ 37,500-00
  • ವಿದ್ಯಾರ್ಥಿ ವೇತನ : 9 ರಿಂದ 12ನೇ ತರಗತಿಯವರೆಗೆ ಶಿಕ್ಷಣ ಪಡೆಯುತ್ತಿರುವ ಪ್ರತಿ ವಿದ್ಯಾರ್ಥಿಗಳಿಗೆ ಮಾತ್ರ ತಿಂಗಳಿಗೆ ರೂ. 100/- (ಎರಡು ಮಕ್ಕಳಿಗೆ ಸೀಮಿತ)

ಫಲಾನುಭವಿಗಳ ಆಯ್ಕೆ


ಗ್ರಾಮೀಣ ಭೂರಹಿತ ಕುಟುಂಬಗಳ ಜೊತೆಗೆ 72 ವಿವಿಧ ಕಸುಬುದಾರರ ಕುಟುಂಬಗಳಿಗೆ ಮರಣ/ ಅಂಗವಿಕಲತೆಯ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲು ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ಆಮ್ ಆದ್ಮಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿ ಕುಟುಂಬದ ಮುಖ್ಯಸ್ಥರಿಗೆ ರೂ.200/- ಗಳ ವಿಮಾ ಕಂತನ್ನು ಭಾರತೀಯ ಜೀವನ ಬೀಮಾ ನಿಗಮಕ್ಕೆ ನೀಡಲಾಗುವುದು. ಇದರಲ್ಲಿ ರೂ.100/- ಗಳನ್ನು ರಾಜ್ಯ ಸರ್ಕಾರ ಮತ್ತು ಉಳಿದ ರೂ.100/- ಗಳನ್ನು ಕೇಂದ್ರ ಸರ್ಕಾರ ಭರಿಸುತ್ತದೆ.

ಆಮ್ ಆದ್ಮಿ(ಜನಶ್ರೀ) ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸುವ ಕುರಿತು ಮಾರ್ಗ ಸೂಚಿಗಳು ರಾಜ್ಯ ಮಟ್ಟದ ಸಮಿತಿ 

ರಾಜ್ಯ ಮಟ್ಟದಲ್ಲಿ ಈ ಯೋಜನೆಯ ಉಸ್ತುವಾರಿಗೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕೆಳಕಂಡ ಸಮಿತಿ ರಚಿಸತಕ್ಕದ್ದು. 
  • ಎಲ್ಲಾ ಪ್ರಾದೇಶಿಕ ಆಯುಕ್ತರುಗಳು
  • ಜೀವನ್ ಬಿಮಾ ನಿಗಮದ ಕೇಂದ್ರ ಕಛೇರಿಯ ಪ್ರಧಾನ ವ್ಯವಸ್ಥಾಪಕರು
  • ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ-ಸದಸ್ಯ ಕಾರ್ಯದರ್ಶಿ
  • ಪ್ರತಿ ಆರು ತಿಂಗಳಿಗೊಮ್ಮೆ ಈ ಸಮಿತಿ ಸಭೆ ನಡೆಸುತ್ತದೆ.

ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯರವರ ಜವಾಬ್ದಾರಿ

  • ಗುರುತಿಸಲಾದ 72 ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳನ್ನು ತಹಶೀಲ್ದಾರರು / ವಿವಿಧ ಸಂಘ ಸಂಸ್ಥೆಗಳ ಮೂಲಕ ಗುರುತಿಸಿ ವಿಮಾ ಯೋಜನೆಯಡಿ ನೊಂದಾಯಿಸುವುದು
  • ನಿರ್ದೇಶಕರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯರವರು ತಾಲ್ಲೂಕುಗಳಿಗೆ ಗಣಕಯಂತ್ರ ನಿರ್ವಹಣೆ, ಕನ್ಸೂಮಬಲ್ಸ್ ಹಾಗೂ ಇನ್ನಿತರ ಸಾದಿಲ್ವಾರು ವೆಚ್ಚಗಳಿಗೆ ಹಣವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಬಿಡುಗಡೆ ಮಾಡುವುದು.
  • ಆಮ್ ಆದ್ಮಿ ಯೋಜನೆಯ ಅನುಷ್ಠಾನದ ಬಗ್ಗೆ ತಕ್ಷಣದಿಂದ ಪ್ರಾದೇಶಿಕವಾರು ತಹಶೀಲ್ದಾರರುಗಳ ಒಂದು ಕಾರ್ಯಾಗಾರವನ್ನು ಆಯಾ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಏರ್ಪಡಿಸಿ ತರಬೇತಿಯನ್ನು ನೀಡುವುದು.
  • ತಾಲ್ಲೂಕು ಕಛೇರಿಯಲ್ಲಿ ಸ್ಥಾಪಿಸುವ ಸಹಾಯವಾಣಿಗೆ ಬೇಕಾದ ಸೌಲಭ್ಯವನ್ನು ಹಾಗೂ ಆರ್ಥಿಕ ಸಹಾಯವನ್ನು ಒದಗಿಸುವುದು.
  • ಪ್ರತಿ ಮುರು ತಿಂಗಳಿಗೊಮ್ಮೆ ಈ ಯೋಜನೆಯಡಿ ಸೌಲಭ್ಯ ಪಡೆದವರ ಹೆಸರುಗಳ ವಿಳಾಸದೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿಯ ನೋಟಿಸ್ ಬೋರ್ಡ್ನಲ್ಲಿ ಹಾಗೂ ತಾಲ್ಲೂಕಿನಲ್ಲಿ ಪ್ರಕಟಿಸಲು ವ್ಯವಸ್ಥೆ ಮಾಡುವುದು.

ಜಿಲ್ಲಾ ಸಮಿತಿಯ ರಚನೆ ಹಾಗೂ ಜವಾಬ್ದಾರಿಗಳು



  • ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
  • ಈ ಸಮಿತಿಯು ತಾಲ್ಲೂಕು ಸಮಿತಿ ಹಾಗೂ ಜೀವ ವಿಮಾ ಇಲಾಖೆಗೆ ಕಳುಹಿಸಿದ ಪಟ್ಟಿಯ ಪ್ರತಿಯನ್ನು ಜಿಲ್ಲಾ ಸಮಿತಿಗೆ ಕಳುಹಿಸಬೇಕಾಗುತ್ತದೆ.
  • ತಾಲ್ಲೂಕು ಸಮಿತಿಯು ಶಿಫರಾಸ್ಸು ಮಾಡಿ ಜೀವ ವಿಮಾ ಇಲಾಖೆಗೆ ಕಳುಹಿಸಿದ ಪಟ್ಟಿಯ ಪ್ರತಿಯನ್ನು ಜಿಲ್ಲಾ ಸಮಿತಿಗೆ ಕಳುಹಿಸಬೇಕಾಗುತ್ತದೆ.
  • ಆದರನ್ವಯ ಜಿಲ್ಲಾ ಸಮಿತಿಯು ವಿಮಾ ಕಂತನ್ನು ವಿಮಾದಾರರ ಪರವಾಗಿ ವಿಮಾ ಇಲಾಖೆಗೆ ಜಿಲ್ಲಾಧಿಕಾರಿಗಳು ವಿಮಾಕಂತನ್ನು ಬಿಡುಗಡೆ ಮಾಡುವುದು.
  • ವಿಮಾದಾರರು ಮರಣ ಹೊಂದಿದಲ್ಲಿ ಅಥವಾ ಅಪಘಾತಕ್ಕೆ ಒಳಗಾದಲ್ಲಿ ಅಂತಹ ವಿಮಾ ಕ್ಲೇಮ್ ಗಳನ್ನು ಇತ್ಯರ್ಥಗೊಳಿಸಲು ಜಿಲ್ಲಾ ಮಟ್ಟದ ವೈದ್ಯಕೀಯ ಸಲಹಾ ಸಮಿತಿಯಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು.
  • ವಿಮಾದಾರರು ಅಸ್ವಾಭಾವಿಕ ಮರಣ ಹೊಂದಿದಲ್ಲಿ ಮರಣದ ಕಾರಣಗಳನ್ನು ತಿಳಿಯಲು ಮರಣೋತ್ತರ ಪರೀಕ್ಷೆಪ್ರಮಾಣ ಪತ್ರವನ್ನು ವೈದ್ಯಕೀಯ ಸಲಹಾ ಸಮಿತಿಯಿಂದ ಪಡೆದು ಕೊಳ್ಳವುದು.
  • ವಿಮಾ ಇಲಾಖೆ ವಿಮಾ ಕಂತನ್ನು ಕಾಲ ಕಾಲಕ್ಕೆ ಬಿಡುಗಡೆಮಾಡಲು ಮೊತ್ತವನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಇವರಿಂದ ಪಡೆಯುವುದು.
  • ವಿಮಾದಾರರ ಮಕ್ಕಳಿಗೆ ವಿದ್ಯಾರ್ಥಿ ವೇತನವು ಸರಿಯಾಗಿ ತಲುಪುವಂತೆ ನೋಡಿಕೊಳ್ಳುವುದು.
  • ಈ ಯೋಜನೆ ಅಡಿಯಲ್ಲಿ ಸಾಧಿಸುವ ಪ್ರಗತಿ ಪತ್ರಿಕೆಯನ್ನು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಪ್ರತಿ ತಿಂಗಳ 10ನೇ ತಾರೀಖಿನೊಳಗೆ ಸಲ್ಲಿಸುವುದು.

ತಾಲೂಕು ಸಮಿತಿಯ ಜವಾಬ್ದಾರಿಗಳು

  • ತಾಲೂಕು ಮಟ್ಟದ ಸಮಿತಿಗೆ ಸಂಬಂಧಿಸಿದ ಉಪ ವಿಭಾಗಧಿಕಾರಿಗಳು ಅಧ್ಯಕ್ಷರು ಆಗಿರುತ್ತಾರೆ ಹಾಗೂ ತಹಶೀಲ್ದಾರರು ಸದಸ್ಯ ಕಾರ್ಯದರ್ಶಿಗಳು ಆಗಿರುತ್ತಾರೆ. ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜೀವ ವಿಮಾ ನಿಗಮದ ಪ್ರತಿನಿಧಿಗಳು ಇವರೆಲ್ಲರೂ ಆಮ್ ಆದ್ಮಿ ವಿಮಾ ಯೋಜನೆಯ ಸದಸ್ಯರು ಇರುತ್ತಾರೆ.
  • ತಾಲೂಕು ಮಟ್ಟದ ಸಮಿತಿಯು ತಹಶೀಲ್ದಾರರು ಮಂಡಿಸುವ ಅರ್ಹ ಫಲಾನುಭವಿಗಳ ಪಟ್ಟಿಗೆ ಅನುಮೋದನೆ ನೀಡತಕ್ಕದ್ದು.
  • ಈ ಯೋಜನೆಯಡಿಯ ಫಲಾನುಭವಿ ಮರಣ ಹೊಂದಿದಲ್ಲಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಯಿಂದ ಮರಣ ಪ್ರಮಾಣ ಪತ್ರವನ್ನು ಪಡೆದು ನಾಮ ನಿರ್ದೇಶನ ಪಡೆದವರಿಗೆ ವಿಮಾ ಹಣವನ್ನು ಕೂಡಲೇ ಬಟವಡೆ ಮಾಡಲು ವಿಮಾ ಇಲಾಖೆಗೆ ಕಳುಹಿಸುವುದು.
  • ವಿಮೆದಾರರು ಅಪಘಾತದಿಂದ ಅಂಗವಿಕಲತೆ ಹೊಂದಿದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಸಿ, ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಅಂಗವಿಕಲತೆಯ ಬಗ್ಗೆ ವರದಿಯನ್ನು ತರಸಿಕೊಂಡು ವಿಮಾ ಇಲಾಖೆಗೆ ಕಳುಹಿಸುವುದು.
  • ವಿದ್ಯಾರ್ಥಿಗಳು ಪರಿಕ್ಷೆಯಲ್ಲಿ ಉತ್ತೀರ್ಣ ಆಗದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಟವಡೆಯಾಗದಂತೆ ನೋಡಿಕೊಳ್ಳುವುದು. ವಿಮೆ ಮಾಡಿಸಿದ ಮಕ್ಕಳು ಶಾಲೆಯಲ್ಲಿ ಓದುತ್ತಿರುವ (9 ರಿಂದ 12ನೇ ತರಗತಿಯವರೆಗೆ) ಮಕ್ಕಳಿಗೆ ವಿದ್ಯಾರ್ಥಿವೇತನ ಬಿಡುಗಡೆಯಾಗಿರುವುದನ್ನು ಹಾಗೂ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ತಲುಪಿದ ಬಗ್ಗೆ ಶಿಕ್ಷಣ ಇಲಾಖೆಯವರು ಪ್ರತಿ 3 ತಿಂಗಳಿಗೊಮ್ಮೆ ಖಚಿತ ಪಡಿಸಿಕೊಳ್ಳಬೇಕು.
  • ವಿಮಾದಾರರು ಬುದ್ದಿ ಭ್ರಮಣೆ, ಮಾದಕ ದ್ರವ್ಯ ಸೇವನೆ, ದೊಂಬಿ ಇನ್ನಿತರ ಘರ್ಷಣೆಗಳಲ್ಲಿ ಹಾಗೂ ಯುದ್ಧದಲ್ಲಿ ಅಥವಾ ಆಟದಲ್ಲಿ ಮರಣ ಹೊಂದಿದಲ್ಲಿ ಅಥವಾ ಅಂಗವಿಕಲತೆ ಹೊಂದಿದಲ್ಲಿ ಅಂತಹವರಿಗೆ ವಿಮಾ ಸೌಲಭ್ಯಗಳನ್ನು ನೀಡದಂತೆ ಖಚಿತ ಪಡಿಸಿಕೊಳ್ಳುವುದು.

ತಾಲೂಕು ಮಟ್ಟದಲ್ಲಿ ತಹಶೀಲ್ದಾರರ ಜವಾಬ್ದಾರಿ



  • ಗುರುತಿಸಲಾದ 72 ವಿವಿಧ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳನ್ನು ಗುರುತಿಸಿ, ಡಾಟಾ ಶೀಟ್ ತುಂಬಲು ಗ್ರಾಮಲೆಕ್ಕಾಧಿಕಾರಿಗಳಿಗೆ ಕಳುಹಿಸುವುದು.
  • ವಿದ್ಯಾರ್ಥಿವೇತನ ಬಟವಡೆ ಉಸ್ತುವಾರಿಗೆ ಸಂಬಂಧಪಟ್ಟ ವಿದ್ಯಾರ್ಥಿಯ ತಾಯಿ ಹೆಸರಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆ ತೆರೆಯಲು ಕ್ರಮ ತೆಗೆದುಕೊಳ್ಳುವುದು. ಈಗಾಗಲೇ ಖಾತೆ ತೆರೆದಿದ್ದಲ್ಲಿ ಆದೇ ಖಾತೆಗೆ ವಿದ್ಯಾರ್ಥಿ ವೇತನ ಜಮಾ ಮಾಡುವುದು.
  • ತಾಲೂಕು ಸಮಿತಿಗೆ ಸಹಾಯ ಮಾಡಲು ತಹಶೀಲ್ದಾರರು, ಶಿರಸ್ತೆದಾರರು, ಪ್ರದಸ, ಇವರು ಈ ಯೋಜನೆಯ ಅನುಷ್ಟಾನಕ್ಕೆ ಪ್ರಮುಖರಾಗಿರುತ್ತಾರೆ.
  • ಪ್ರತಿಯೊಂದು ತಾಲೂಕು ಕಚೇರಿಯಲ್ಲಿ ಈ ಯೋಜನೆ ಅಡಿಯಲ್ಲಿ ಬರುವ ಫಲಾಬನುಭವಿಗಳ ಪಟ್ಟಿ, ನಾಮನಿರ್ದೇಶನ ಪಡೆದವರ ಮಾಹಿತಿ, ಶಾಲಾ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಮಾಡಲು ಬೇಕಾಗುವ ವಿವರಗಳನ್ನು ಗಣಕ ಯಂತ್ರದಲ್ಲಿ ಆಳವಡಿಸಿ ಡಾಟಾ ಬ್ಯಾಂಕ್ ಪ್ರಾರಂಭಿಸಬೇಕು.
  • ಈ ಯೋಜನೆ ಅಡಿಯಲ್ಲಿ ವಿಮಾದಾರರಿಗೆ ಸಹಾಯ ಮಾಡುವ ಸಲುವಾಗಿ ಹಾಗೂ ವಿಮಾ ಮೊತ್ತವನ್ನು ಪಡೆಯಲು ವಿಳಂಬವಾದಲ್ಲಿ ತಾಲೂಕು ಕಚೇರಿಯಲ್ಲಿ ಒಬ್ಬ ದ್ವಿದಸ ರವರನ್ನು ನೇಮಿಸಿ ಬಂದಂತಹ ದೂರುಗಳನ್ನು ನಿವಾರಣೆ ಮಾಡಲು ಕ್ರಮ ಜರುಗಿಸುವುದು.
  • ಈ ಯೋಜನೆ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಪತ್ರಿಕೆಯನ್ನು ಪ್ರತಿ ತಿಂಗಳು 5ನೇ ತಾರೀಖುನೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.
  • 2. ಮೇ ತಿಂಗಳಿನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಹೆಸರನ್ನು ಸೇರ್ಪಡೆ ಹಾಗೂ ಕಡಿಮೆ ಮಾಡುವ ಕಾರ್ಯವನ್ನು ನಿರ್ವಹಿಸುವುದು.

ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಿಸಬೇಕಾದ ಕರ್ತವ್ಯಗಳು

  • ಮಾರ್ಗಸೂಚಿಯನ್ವಯ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಪಟ್ಟಿ ಮಾಡುವುದು.
  • ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದವರು ಕಳುಹಿಸಿರುವ ಪಟ್ಟಿಯನ್ನು ಪರಿಶೀಲಿಸಿ , ಸದರಿ ಪಟ್ಟಿಯಲ್ಲಿ ಫಲಾನುಭವಿಗಳು ಭೂಮಿಯನ್ನು ಹೊಂದಿದ್ದಲ್ಲಿ ಅಂತಃ ಹೆಸರನ್ನು ಅನರ್ಹರೆಂದು ಪರಿಗಣಿಸಿ ಅಂತಹವರ ಹೆಸರನ್ನು ತೆಗೆದು ಹಾಕಿ ಕೇವಲ ಮಾರ್ಗಸೂಚಿಯನ್ವಯ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿರುವ ಅರ್ಹ ಫಲಾನುಭವಿಗಳ ಹಾದಿಯನ್ನು ಮಾತ್ರ ತಯಾರಿಸುವುದು.
  • ಈ ಯೋಜನೆಯಡಿಯಲ್ಲಿ ವಿಮೆಗೆ ಸಂಬಂಧಿಸಿದಂತೆ ನಿಗದಿಪಡಿಸಿದ ಫಾರಂನಲ್ಲಿ 2 ನಾಮನಿರ್ದೇಶನ ಹೆಂಡತಿ ಹಾಗೂ ಮಕ್ಕಳು ಪಡೆಯುವುದು.
  • ಈ ಯೋಜನೆಯ ಲಾಭ ಪಡೆಯಲು ಕುಟುಂಬದಲ್ಲಿ 14 ವರ್ಷದ ಮೇಲೆ (9ನೇ ತರಗತಿಯಿಂದ 12ನೇ ತರಗತಿಯವರೆಗೆ) ಓದುತ್ತಿರುವ ಮಕ್ಕಳ ಹೆಸರು, ವಯಸ್ಸು, ತರಗತಿ ಹಾಗೂ ಯಾವ ಶಾಲೆಯಲ್ಲಿ ಓದುತ್ತಿರುವ ಬಗ್ಗೆ ಮಾಹಿತಿಯನ್ನು ಡಾಟಾಶೀಟ್ ನಲ್ಲಿ ತುಂಬಿ ತಹಶೀಲ್ದಾರ ಕಚೇರಿಗೆ ಕಳುಹಿಸುವುದು.
  • ಕುಟುಂಬದ ಮುಖ್ಯಸ್ಥರ ವಯಸ್ಸು 59 ವರ್ಷ ಮೀರಿದಲ್ಲಿ ಅಂತಹದವರ ಹೆಸರನ್ನು ಕೈಬಿಟ್ಟು ಮುಖ್ಯಸ್ಥರ ಹೆಂಡತಿ ಅವರ ವಯಸ್ಸು 59 ವರ್ಷ ಮೀರದಿದ್ದಲ್ಲಿ ಅದನ್ನು ಖಾತ್ರಿ ಪಡಿಸಿಕೊಂಡು ಅವರನ್ನು ಅರ್ಹ ಫಲಾನುಭವಿ ಅಂತಾ ಗುರುತಿಸಿ, ವಿಮೆಗೆ ಒಳಪಡಿಸುವುದು.
  • ವಿಮಾದಾರರು/ನಾಮ ನಿರ್ದೇಶನ ಹೊಂದಿದವರು ಮರಣಹೊಂದಿದಲ್ಲಿ ವಿವರಗಳೊಂದಿಗೆ ಮರಣ ಪ್ರಮಾಣ ಪತ್ರವನ್ನು ತಹಶೀಲ್ದಾರರಿಗೆ ಕಳುಹಿಸುವುದು.
  • ಫಲಾನುಭವಿಗಳ ಯಾದಿಯಲ್ಲಿ ಒಂದೇ ಕುಟುಂಬದ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗದಂತೆ ಖಚಿತ ಪಡಿಸಿಕೊಳ್ಳುವುದು.
  • ವಿಮಾದಾರರಿಗೆ ವಿಮ ನಿಗಮ ನೀಡುವ ಹಣವನ್ನು ಸದರಿಯವರ ಬ್ಯಾಂಕ್ /ಉಳಿತಾಯ ಖಾತೆಗೆ ಜಮೆಯಾಗಲು ಉಳಿತಾಯ ಖಾತೆಯ ನಂಬರನ್ನು ಫಾರ್ಮದಲ್ಲಿ ತುಂಬಿ ಸಲ್ಲಿಸುವುದು.
  • ಆಮ್ ಆದ್ಮಿ ಯೋಜನೆಯಡಿ ಫಲಾನುಭವಿಗಳನ್ನು ವಿವರಗಳನ್ನು ಡಾಟಾಶೀಟ್ನಲ್ಲಿ ನಮೂದಿಸುವುದು.
  • ವಿಮಾದಾರರ ನಾಮ ನಿರ್ದೇಶನ ಮಾಡುವಾಗ ಪತಿ/ಪತ್ನಿ/ಮಗ/ಮಗಳು/ಮಗನ, ಹೆಂಡತಿ, ಅವಲಂಬಿತ ತಂದೆ/ತಾಯಿಯ ಹೆಸರಿನಲ್ಲಿ ನಾಮ ನಿರ್ದೇಶನ ಮಾಡಿಸುವುದು.


ಗ್ರಾಮ ಲೆಕ್ಕಾಧಿಕಾರಿಗಳ ಕೆಲಸವನ್ನು ಸಂಬಂಧಪಟ್ಟ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರರ ಕಚೇರಿಯಲ್ಲಿ ಈ ಯೋಜನೆ ಕೆಲಸ ನಿರ್ವಹಿಸಲು ನಿಯೋಜಿಸಿದ ಶಿರಸ್ತೆದಾರರು ಮೇಲ್ವಿಚಾರಣೆ ಮಾಡುವುದು. ಏನಾದರೂ ಹೆಚ್ಚಿನ ಮಾಹಿತಿ ಅವಶ್ಯವೆನಿಸಿದಲ್ಲಿ ಸಂಬಂಧಿಸಿದ ತಹಶೀಲ್ದಾರ ಅಥವಾ ತಾಲೂಕು ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸುವುದು.

ಆಮ್ ಆದ್ಮಿ ಬೀಮಾ ಯೋಜನೆಯಡಿ ವಿಮಾ ಮೊತ್ತವನ್ನು ಇತ್ಯರ್ಥಪಡಿಸುವ ಕಾರ್ಯವಿಧಾನಗಳು

 

ಆಮ್ ಆದ್ಮಿ ಬೀಮಾ ಯೋಜನೆಯಡಿ, ಫಲಾನುಭವಿಗಳು ಮರಣ ಹೊಂದಿದ ಪಕ್ಷದಲ್ಲಿ ಅಥವಾ ಅಂಗವೈಕಲ್ಯತೆ ಉಂಟಾದ ಪಕ್ಷದಲ್ಲಿ ನಾಮ ನಿರ್ದೇಶಿತರು ಹಾಗೂ ವಿಮಾದಾರರಿಗೆ ವಿಮಾ ಮೊತ್ತವನ್ನು ಇತ್ಯರ್ಥಪಡಿಸಲು ಕೆಳಕಂಡಂತಹ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
  • ಆಮ್ ಆದ್ಮಿ ಬೀಮಾ ಯೋಜನೆಯಡಿ, ವಿಮಾ ಸೌಲಭ್ಯ ಪಡೆದ ವ್ಯಕ್ತಿಯು ಮರಣ ಹೊಂದಿದಲ್ಲಿ ಸಂಬಂಧಪಟ್ಟ ನಾಮನಿರ್ದೇಶಿತರು ಅಥವಾ ಅಂಗವೈಕಲ್ಯತೆ ಗ್ರಾಮಲೆಕ್ಕಾಧಿಕಾರಿಗಳ ಮೂಲಕ ಕೆಳಕಂಡ ದಾಖಲಾತಿಗಳೊಡನೆ ಮರಣ ಹೊಂದಿದ ಅಥವಾ ಅಂಗವೈಕಲ್ಯತೆ ಉಂಟಾದ ಆರು ತಿಂಗಳೊಳಗೆ ಅರ್ಜಿ ಸಲ್ಲಿಸುವುದು.

  • ಸಹಜ ಮರಣ ಉಂಟಾದ ಪಕ್ಷದಲ್ಲಿ
  • ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  • ದೃಢೀಕರಿಸಿದ ಮೊಲ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು.
  • ಆಮ್ ಆದ್ಮಿ ಬೀಮಾ ಯೋಜನೆಯಡಿ ನೀಡಿರುವ ಗುರುತಿನ ಚೀಟಿಯನ್ನು ಲಗತ್ತಿಸುವುದು.

  • ಅಪಘಾತದಿಂದ ಮರಣ ಉಂಟಾದ ಪಕ್ಷದಲ್ಲಿ
  • ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  • ದೃಢೀಕರಿಸಿದ ಮೂಲ ಮರಣ ಪ್ರಮಾಣ ಪತ್ರವನ್ನು ಲಗತ್ತಿಸುವುದು.
  • ಪೋಲಿಸರಿಂದ ಪಡೆದ ಪ್ರಥಮ ಪರಿಶೀಲನ ವರದಿ (FIR).
  • ಆಮ್ ಆದ್ಮಿ ಬೀಮಾ ಯೋಜನೆಯಡಿ ನೀಡಿರುವ ಗುರುತಿನ ಚೀಟಿಯನ್ನು ಲಗತ್ತಿಸುವುದು.

  • ಶಾಶ್ವತ/ಭಾಗಶಃ ಅಂಗವಿಕಲತೆ ಉಂಟಾದ ಪಕ್ಷದಲ್ಲಿ
  • ವಿಮಾ ಮೊತ್ತ ಪಡೆಯಲು ಇರುವ ನಿಗದಿತ ಅರ್ಜಿಯಲ್ಲಿ ಎಲ್ಲಾ ಕಾಲಂಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು.
  • ಅಪಘಾತ ಹೊಂದಿದ ಬಗ್ಗೆ ದಾಖಲಾತಿಗಳು (ಪೋಲಿಸ್ ವರದಿ)
  • ಸರ್ಕಾರಿ ಶಸ್ತ್ರ ಚಿಕಿತ್ಸಾ ತಜ್ಞರು ಅಥವಾ ಸರ್ಕಾರಿ ಮುಳೆ ತಜ್ಞರಿಂದ ಶಾಶ್ವತ/ಭಾಗಶಃ ಅಂಗವಿಕಲತೆಯು ಅಪಘಾತದಿಂದಲೇ ಸಂಭವಿಸಿರುವ ಬಗ್ಗೆ ಮತ್ತು ಯೋಜನೆಯಡಿ ಕೆಳಕಂಡಂತೆ ಸೂಚಿಸಿರುವ ಅಂಗಗಳನ್ನು ಕಳೆದುಕೊಂಡಿರುವ ಬಗ್ಗೆ ದೃಢೀಕರಣ ಪತ್ರ ಪಡೆಯುವುದು.

ಕಣ್ಣುಗಳು ಮತ್ತು ಕೈ/ಕಾಲುಗಳು

  • ತಹಸೀಲ್ದಾರರು ವಿಮಾ ಸೌಲಬ್ಯವನ್ನು ಇತ್ಯರ್ಥಗೊಳಿಸಲು ಬಂದ ಅರ್ಜಿಗಳನ್ನು ಹದಿನೈದು ದಿನದೊಳಗೆ ಸಂಬಂಧಪಟ್ಟ ಭಾರತೀಯ ಜೀವನ ಬೀಮಾ ನಿಗಮದ ಶಾಖೆಗೆ ತಲುಪಿಸತಕ್ಕದ್ದು.
  • ಭಾರತೀಯ ಜೀವನ ಬೀಮಾ ನಿಗಮವು ಅರ್ಜಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಕೋರಿಕೆಯು ಸಮಂಜಸವೆನಿಸಿದರೆ ನಾಮ ನಿರ್ದೇಶಿತರಿಗೆ ಅಥವಾ ಅಂಗವೈಕಲ್ಯ ಉಂಟಾದ ವ್ಯಕ್ತಿಗೆ ಚೆಕ್ ರೂಪದಲ್ಲಿ ಪರಿಹಾರದ ಮೊತ್ತವನ್ನು ಸಂಬಂಧಪಟ್ಟ ತಹಸೀಲ್ದಾರರ ಮುಖಾಂತರ ನೀಡುವುದು.
  • ವಿಮಾ ಸೌಲಭ್ಯವನ್ನು ಇತ್ಯರ್ಥಗೊಳಿಸಿದ ನಂತರ, ಅಂತಹ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಸೂಕ್ತ ಕ್ರಮ ಕೈಗೊಳ್ಳುವುದು.
  • ವಿಮಾ ಪರಿಹಾರ ನೀಡುವ ಭಾರತೀಯ ಜೀವನ ವಿಮಾ ನಿಗಮದ ತೀರ್ಮಾನವೇ ಅಂತಿಮವಾಗಿರುತ್ತದೆ.
  • ವಿಮಾ ಪರಿಹಾರದ ಕೋರಿಕೆಯನ್ನು ಕೆಳಕಂಡ ಕಾರಣಗಳಿಂದ ತಿರಸ್ಕರಿಸಬಹುದಾಗಿರುತ್ತದೆ.

  • ವಿಮಾ ಸೌಲಭ್ಯ ಹೊಂದಿದ ಮೃತ ವ್ಯಕ್ತಿಯು 60 ವರ್ಷಕ್ಕಿಂತ ಮೇಲ್ಪಟ್ಟವರು ದಾಖಲತಿಗಳಿಂದ ಎಂದು ತಿಳಿದು ಬಂದಲ್ಲಿ.
  • ಮೇಲೆ ತಿಳಿಸಿದ ದಾಖಲಾತಿಗಳನ್ನು ನೀಡದಿದ್ದ ಪಕ್ಷದಲ್ಲಿ.
  • ಅರ್ಜಿಯನ್ನು ಮರಣ ಹೊಂದಿದ ಅಥವಾ ಅಪಘಾತಗೊಳಪಟ್ಟ ದಿನಾಂಕದಿಂದ ನಿಗದಿತ ದಿನಾಂಕದೊಳಗೆ ಸಲ್ಲಿಸದೆ ಇದ್ದ ಪಕ್ಷದಲ್ಲಿ.

ಆಮ್ ಆದ್ಮಿ ಬೀಮಾ ಯೋಜನೆಯಡಿ ಗುರುತಿಸಲಾಗಿರುವ ಫಲಾನುಭವಿಗಳ ಯಾದಿಯನ್ನು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳು ನಿರ್ವಹಿಸುತ್ತಾರೆ.
ಆಮ್ ಆದ್ಮಿ ಯೋಜನೆಯಡಿ ವಿಮಾ ಸೌಲಭ್ಯವನ್ನು ಪಡೆಯುವುದರ ಬಗ್ಗೆ ವಿವರಗಳನ್ನು ತಾಲ್ಲೂಕು ಕಛೇರಿಗಳಲ್ಲಿ, ಶಾಶ್ವತ ಫಲಕಗಳನ್ನು ಬರೆಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರದರ್ಶಿಸಲಾಗುತ್ತದೆ ಹಾಗೂ ವಿಮಾ ಸೌಲಭ್ಯದ ಬಗ್ಗೆ ಸಾಕಷ್ಟು ನೀಡಲು ತಿಳಿಸಲಾಗಿದೆ.


ಮೂಲ : ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate