ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ನೀತಿ ಮತ್ತು ಯೋಜನೆಗಳು / ಹೆಚ್ಚಿನ ಊಟ ಮತ್ತು ವಸತಿ ವೆಚ್ಚಗಳ ಸಹಾಯ
ಹಂಚಿಕೊಳ್ಳಿ

ಹೆಚ್ಚಿನ ಊಟ ಮತ್ತು ವಸತಿ ವೆಚ್ಚಗಳ ಸಹಾಯ

ಹೆಚ್ಚಿನ ಊಟ ಮತ್ತು ವಸತಿ ವೆಚ್ಚಗಳ ಸಹಾಯ

ಎಸ್.ಎಸ್.ಎಲ್.ಸಿ. ನಂತರ ತಮ್ಮ ವ್ಯಾಸಂಗವನ್ನು ಮುಂದುವರೆಸಲು ಸಾಧ್ಯವಾಗದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಅಂಗೀಕೃತ ಮತ್ತು ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಹೆಚ್ಚುವರಿ ಭೋಜನ ಮತ್ತು ವಸತಿ ವೆಚ್ಚ ರಾಜ್ಯ ಸರ್ಕಾರದಲ್ಲಿರುವ ಅಂಗೀಕೃತ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಇರುವಂತಹ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು, ಭಾರತ ಸರ್ಕಾರದ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದು, ಭಾರತ ಸರ್ಕಾರ ನಿಗದಿಪಡಿಸಿರುವ ವಿದ್ಯಾರ್ಥಿವೇತನ ದರಕ್ಕಿಂತಲೂ ಆಯಾಯ ನಿಲಯದ ವಿದ್ಯಾರ್ಥಿಗಳಿಗೆ ಹೆಚ್ಚಿನ ದರದಲ್ಲಿ ಖರ್ಚು ಮಾಡಿದ್ದಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಊಟ ವಸತಿ ವೆಚ್ಚಕ್ಕಾಗಿ ಹಣವನ್ನು ನೀಡಬೇಕಾಗುತ್ತದೆ.

ಭಾರತ ಸರ್ಕಾರದ ಆದೇಶ ಸಂಖ್ಯೆ/11017/01/2008-SCD-V ದಿನಾಂಕ: 31-12-2010ರ ಪತ್ರದಲ್ಲಿ ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ದರಗಳನ್ನು ಪರಿಷ್ಕರಿಸಿ, ದಿನಾಂಕ: 01-04-2003 ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿರುತ್ತದೆ. (ಈ ಆದೇಶದ ಪ್ರಕಾರ ಅಂದರೆ ವೈದ್ಯಕೀಯ ಮತ್ತು ತಾಂತ್ರಿಕ ವ್ಯವಸಾಯ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕೋರ್ಸ್‍ಗಳ ಗ್ರೂಪ್‍ಗೆ ಸೇರಿದ್ದು, ಇವುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯಗಳಲ್ಲಿ ವಾಸವಾಗಿರುವವರಿಗೆ ಮಾಹೆಯಾನ ರೂ. 1200/- ಗಳನ್ನು ನಿಗದಿಪಡಿಸಲಾಗಿದೆ.) ಆದರೆ ಇನ್ನಿತರ ಗ್ರೂಪ್ II III Iಗಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ವರ್ಗದ ವಿದ್ಯಾರ್ಥಿಗಳು, ವಿದ್ಯಾರ್ಥಿ ನಿಲಯ ವಾಸಿಗಳು ಆಗಿದ್ದು, ಅವರುಗಳಿಗೆ ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಮಂಜೂರಾತಿಯನ್ನು ಕಳೆದು ಭೋಜನಾ ವೆಚ್ಚಕ್ಕೆ ಸಮವಾಗಿ ವ್ಯತ್ಯಾಸದ ಹಣವನ್ನು ಮಂಜೂರು ಮಾಡಲಾಗುತ್ತದೆ. ಈ ಬಗ್ಗೆ ಮಂಜೂರಾದ ಹಣವನ್ನು ಸಂಬಂಧಪಟ್ಟ ವಿದ್ಯಾರ್ಥಿಗಳ ಕಾಲೇಜು ಹಾಸ್ಟೆಲ್ಲಿನ ಲೆಕ್ಕಕ್ಕೆ ಜಮಾ ಮಾಡಲಾಗುವುದು.
ತಾಲೂಕು ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1/2/ ಜಿಲ್ಲಾಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ/ಉಪ ನಿರ್ದೇಶಕರು ವಿದ್ಯಾರ್ಥಿನಿಲಯಗಳನ್ನು ತಪಾಸಣೆ ಕೈಗೊಳ್ಳುವರು.
ರಾಜ್ಯ ಸರ್ಕಾರದಲ್ಲಿನ ಅಂಗೀಕೃತ ಕಾಲೇಜು ವಿದ್ಯಾರ್ಥಿ ನಿಲಯಗಳಲ್ಲಿ ಇರುವಂತಹ ಪ.ಜಾತಿಯ ವಿದ್ಯಾರ್ಥಿಗಳು ಪಡೆಯುತ್ತಿರುವ ವಿವಿಧ ದರಗಳಿಗೆ ಅನುಗುಣವಾಗಿ ವ್ಯತ್ಯಾಸದ ದರವನ್ನು ಭಾರತ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಹೆಚ್ಚುವರಿ ಭೋಜನಾ ವೆಚ್ಚಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ಖರ್ಚು ಮಾಡಲಾಗುತ್ತದೆ.

ಮೂಲ : ಸಮಾಜ ಕಲ್ಯಾಣ ಇಲಾಖೆ,ಮಂಗಳೂರು

2.95238095238
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top