ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ

ಉದ್ಯೋಗ

೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಭಾರತದಲ್ಲಿ ಉದ್ಯೋಗ ಉತ್ಪಾದನೆ

ಬಡತನದ ನಿರೋಧದ ತಂತ್ರಗಳಲ್ಲಿ ಬಹುವಿಧವಾದ ಬಡತನ ನಿವಾರಣಾ ಮತ್ತು ಉದ್ಯೋಗ ಸೃಷ್ಟಿ ಕಾರ್ಯಕ್ರಮಗಳು  ಹಲವಾರು ವರ್ಷಗಳಿಂದ ಕಾರ್ಯನಿರತವಾಗಿವೆ ಹಾಗೂ ಅವುಗಳನ್ನು ಇನ್ನೂ ಹೆಚ್ಚು ಬಲವರ್ಧಿಸಿ ಹೆಚ್ಚು ಉದ್ಯೋಗ ಉತ್ಪಾದನೆ, ಉತ್ಪಾದಿತ ಆಸ್ತಿಗಳ ಉತ್ಪನ್ನ, ತಾಂತ್ರಿಕ ಮತ್ತು ಉದ್ಯಮ ಶೀಲತಾ ಕೌಶಲ್ಯ ಮತ್ತು ಬಡಜನರ ಆದಾಯ ಹೆಚ್ಚಳ, ಈ ಯೋಜನೆಗಳಡಿಯಲ್ಲಿ ಕೂಲಿ ಉದ್ಯೋಗ, ಸ್ವಯಂ ಉದ್ಯೋಗಗಳನ್ನು ಬಡತನ ರೇಖೆಗೆ ಕೆಳಗಿರುವ ಜನರಿಗೆ ಕಲ್ಪಿಸಲಾಗಿದೆ. ೧೯೯೮-೯೯ ರಿಂದ ವಿವಿಧ ಬಡತನ ನಿವಾರಣಾ ಮತ್ತು ಉದ್ಯೋಗ ಉತ್ಪಾದನಾ ಕಾರ್ಯಕ್ರಮಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

  • ಸ್ವಯಂ ಉದ್ಯೋಗ ಯೋಜನೆ ಮತ್ತು
  • ಕೂಲಿ ಉದ್ಯೋಗ ಯೋಜನೆ

ಉತ್ತಮ ಪರಿಣಾಮವನ್ನು ಬೀರಲು ನಿಧಿ ಮತ್ತು ಸಂಘಟನೆ ಹೆಚ್ಚು ವೈಚಾರಿಕತೆಯಿಂದ ಮಾಡಲಾಗಿದೆ. ಈ ಯೋಜನೆಗಳು ಪ್ರಧಾನವಾಗಿ ಬಡತನ ನಿವಾರಣೆಗೋಸ್ಕರವಾಗಿದ್ದು, ನಿರಂತರ ಉದ್ಯೋಗವನ್ನು ಸೃಷ್ಠಿಸುವುದರಲ್ಲಿ ಸಹಾಯವಾಗಿಲ್ಲ.

ಭಾತದಲ್ಲಿ ಅಸಂಘಟಿತ ಕೆಲಸಗಾರರ ವಲಯ

“ಅಸಂಘಟಿತ ಕೆಲಸಗಾರರು” ಎಂದರೆ ಒಬ್ಬ ವ್ಯಕ್ತಿಯು ಕೂಲಿಗಾಗಿ ಅಥವಾ ಆದಾಯಕ್ಕಾಗಿ, ನೇರವಾಗಿ ಅಥವಾ ಯಾವುದಾದರೂ ಸಂಸ್ಥೆ ಅಥವಾ ಗುತ್ತಿಗೆದಾರರ ಮೂಲಕ ಅಥವಾ ತಾನೇ ಸ್ವತಃ ಕೆಲಸ ಮಾಡುವುದರ ಅಥವಾ ಸ್ವಯಂ ಉದ್ಯೋಗವನ್ನು ಯಾವುದೇ ಕೆಲಸದ ಜಾಗದಲ್ಲಿ ಅಥವಾ ಸ್ವತಃ ಮನೆಯiಲ್ಲಿ, ತನ್ನ ಜಮೀನಿನಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ಕೆಲಸಮಾಡುತ್ತಿದ್ದು ಯಾವುದೇ ಲಾಭವನ್ನು ಇ.ಎಸ್.ಐ.ಸಿ. ಕಾಯ್ದೆ, ಪಿ.ಎಫ್.ಕಾಯ್ದೆ ಎಲ್.ಐ.ಸಿ. ಯ ಯಾವುದೇ ಏಕವ್ಯಕ್ತಿ ವಿಮೆ ಖಾಸಗಿ ವಿಮಾಸಂಸ್ಥೆಯ ವಿಮೆಯ, ಅಥವಾ ಅಧಿಕೃತವಾಗಿ ಕಾಲಾನುಕಾಲಕ್ಕೆ ಯಾವುದೇ ಪ್ರಯೋಜನವನ್ನು ಪಡೆಯುತ್ತಿರುವುದಿಲ್ಲ.

ಉದ್ಯೋಗ ಉತ್ಪನ್ನ - ಸರ್ಕಾರದ ಪ್ರಯತ್ನಗಳು

  • ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯು ಗ್ರಾಮೀಣ ಬಡಜನರಿಗೆ ವರ್ಷಕ್ಕೆ ೧೦೦ ದಿನಗಳ ಉದ್ಯೋಗವನ್ನು ಖಾತರಿಯಾಗಿ ನಿಡುತ್ತದೆ. ಈ ರೀತಿಯ ಸಾಮಾಜಿಕ ಸುರಕ್ಷತೆಯ ಆಯಾಮ ಹೊಂದಿವುದು ವಿಶ್ವದಲ್ಲಿ ಎಲ್ಲಿಯೂ ನಡೆದಿರುವುದಿಲ್ಲ.
  • ಈ ಕಾಯ್ದೆಯಡಿಯಲ್ಲಿ ಪ್ರಥಮ ಹೆಜ್ಜೆಯಲ್ಲಿ ೨೦೦ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಏಪ್ರಿಲ್ ೨೦೦೮ರಿಂದ ದೇಶದ ೬೧೪ ಜಿಲ್ಲೆಗಳಿಗೆ ವಿಸ್ತಿರಿಸಲಾಗಿದೆ.
  • ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ನಿಯೋಗ (ಕೆ.ವಿ.ಐ.ಸಿ)ಯನ್ನು ಸಣ್ಣ ಮತ್ತು ಗ್ರಾಮೀಣ ಕೈಗಾರಿಕೆಗಳಿಂದ ಹೆಚ್ಚಿನ ಉದ್ಯೋಗ ಉತ್ಪನ್ನಕ್ಕಾಗಿ ಪುನರ್‌ರಚಿಸಲಾಗಿದೆ.

ರಾಷ್ಟ್ರೀಯ ಅಸಂಘಟಿತ ಉದ್ಯಮದ ಆಯೋಗ ವಿಭಾಗ

  • ರಾಷ್ಟ್ರೀಯ ಅಸಂಘಟಿತ ಉದ್ಯಮದ ಆಯೋಗ ವಿಭಾಗವನ್ನು ಸಲಹಾ ಸಂಸ್ಥೆ ಮತ್ತು ಜಾಗರೂಕ ಸಮಿತಿಯಾಗಿ ಸ್ಥಾಪಿಸಿದ್ದು ಇದನ್ನು ಅನೌಪಚಾರಿಕ ವಲಯದಲ್ಲಿ ಆಯೋಜಿಸಿದ್ದು, ಸಾಲ, ಕಚ್ಚಾ ಸಾಮಗ್ರಿ, ಕಟ್ಟಡ, ತಾಂತ್ರಿಕತೆ ಮತ್ತು ಮಾರುಕಟ್ಟೆ ವಲಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಇರುವ ಸ್ಪರ್ಧೆಯನ್ನು ಎದುರಿಸಲು ಬೇಕಾಗುವ ಸಂಸ್ಥೆಯ ಚೌಕಟ್ಟನ್ನು ಹೊಂದಿ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.

ತಾಂತ್ರಿಕತೆ ಉತ್ತಮಗೊಳಿಸುವಿಕೆ ಮತ್ತು ಹತ್ತಿ ತಾಂತ್ರಿಕತೆ ಮಂಡಲಿ

  • ತೆರಿಗೆ ಮುಕ್ತತೆಯನ್ನು ಈ ಕಟ್ಟಿನಲ್ಲಿ ಕೊಡಲಾಗಿದೆ. ಕರದ ರಚನೆಯನ್ನು ಬೆಳವಣಿಗೆ ಸಾಧಿಸಲು ಮತ್ತು ಮೌಲ್ಯವನ್ನು ಹೆಚ್ಚಿಸುವ ಸಲುವಾಗಿ ಹೊಂದುವಂತೆ ವಿಧಿಸಲಾಗಿದೆ. ಹತ್ತಿ ತಾಂತ್ರಿಕತೆ ನಿಧಿ ಯೋಜನೆ ಮಂಡಲಿಯನ್ನು ಕೈಗಾರಿಕೆಯನ್ನು ಆಧುನೀಕರಿಸುವಂತೆ ಮತ್ತು ಉತ್ತಮ ಗುಣಮಟ್ಟದ ಕಚ್ಛಾ ಸಾಮಗ್ರಿಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುವಂತೆ ವೃದ್ಧಿಸಲಾಗಿದೆ.

ರಾಷ್ಟ್ರೀಯ ಸೆಣಬು ಸಮಿತಿ ಸೆಣಬಿಗೆ ಕನಿಷ್ಠ ಬೆಂಬಲ ದರವನ್ನು ೨೦೦೪-೦೫ರಲ್ಲಿ ರೂ. ೮೯೦/- ಒಂದು ಕ್ವಿಂಟಾಲ್‌ಗೆ ಇದ್ದ ಬೆಲೆಚಿiನ್ನು ೨೦೦೮-೦೯ನೇ ಸಾಲಿನಲ್ಲಿ ರೂ. ೧೨೫೦/- ಕ್ಕೆ ಹೆಚ್ಚಿಸಲಾಗಿದೆ. ಯಥೋಚಿತ ಬೇಡಿಕೆಯನ್ನು ನಿಶ್ಚಿತಗೊಳಿಸಲು ಸಕ್ಕರೆ ಮತ್ತು ಆಹಾರಧಾನ್ಯಗಳಿಗೆ ಕಡ್ಡಾಯ ಮಾಡಲಾಗಿದೆ. ವ್ಯಾಪಕವಾದ ರಾಷ್ಟ್ರೀಯ ಸೆಣಬು ಕಾರ‍್ಯನೀತಿಯನ್ನು ಮೊತ್ತಮೊದಲ ಬಾರಿಗೆ ಪ್ರಚಾರ ಮಾಡಲಾಗಿದ್ದು, ಇದು ಸೆಣಬು ಬೆಳೆಗಾರರನ್ನು ರಕ್ಷಿಸಲು ಮತ್ತು ಸೆಣಬು ಉತ್ಪನ್ನಕ್ಕೆ ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ. ಸೆಣಬು ತಾಂತ್ರಿಕತೆಯ ಧ್ಯೇಯ ಮತ್ತು ಪ್ರಚಾರವನ್ನು ಸೆಣಬು ವಿಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಆರಂಭಿಸಲಾಗಿದೆ. ರಾಷ್ಟ್ರೀಯ ಸೆಣಬು ಸಮಿತಿಯ ಸ್ಥಾಪನೆಯು ಸೆಣಬು ವಲಯದಲ್ಲಿ ವಿವಿಧ ಸಂಘಟನೆಗಳ ಮೂಲಕ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹಾಯವಾಗಿದೆ.

ಮೂಲ: ಪೋರ್ಟಲ್ ತಂಡ

3.0
ihswargoud b h Dec 30, 2016 12:50 PM

Nhiarudgi

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top