ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಸಮಾಜ ಕಲ್ಯಾಣ / ಸಮಾಜಿಕ ಅರಿವು / ಮಾಟ ಮತ್ತು ಯಕ್ಷಿಣಿ ವಿದ್ಯೆ
ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಾಟ ಮತ್ತು ಯಕ್ಷಿಣಿ ವಿದ್ಯೆ

ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು.

ಮಾಟ ಮತ್ತು ಯಕ್ಷಿಣಿ ವಿದ್ಯೆ - ಸಮಾಜಿಕ ಮತ್ತು ವೈದ್ಯಕೀಯ ದೃಷ್ಟಿಕೋನ

ಮಾಟ ಎಂದರೇನು?

ಮಾಟ ಎಂದರೆ; ದುಷ್ಟ ಬಲಗಳನ್ನು ಹೊಂದಿ, ಪೈಶಾಚಿಕ ಕಾರ್ಯಗಳಿಂದ, ಸಮಾಜಕ್ಕೆ ಹಾನಿಕಾರಿಕವಾದ ಮನೋವೃತ್ತಿಯನ್ನು ಹೊಂದಿರುವುದು ಮತ್ತು ಕೆಲಸಗಳನ್ನು ಮಾಡುವುದು.

ಭಾನಾಮತಿ ಎಂದರೇನು?

ಅಲೌಕಿಕ ಸಾಧನೆಯ ಮೂಲಕ ಇತರರನ್ನು ಹಾನಿಮಾಡಬಹುದು ಎಂಬ ನಂಬಿಕೆ.

ಮಾಟ/ಯಕ್ಷಿಣಿ ವಿದ್ಯೆಗೂ,ಮಂತ್ರವಾದಿಗೂ ಇರುವ ವ್ಯತ್ಯಾಸವೇನು?

ಮಾಟಗಾತಿ ಮಾಟಗಾತಿ ಒಬ್ಬ ಮಹಿಳೆ ಇತರರಿಗೆ ಹಾನಿ ಮಾಡಬಹುದಾದಂತಹ ಅತಿಮಾನಷ ಶಕ್ತಿ ಹೊಂದಿರುತ್ತಾಳೆ.ಮಾಂತ್ರ ಮಾಂತ್ರಿಕ ಕೆಟ್ಟ ಉದ್ದೇಶ ಹೊಂದಿರುವ ದ್ವೇಷ , ಮತ್ಸರಗಳಿಂದ ಕೂಡಿದ ಮಂತ್ರಶಕ್ತಿಯ ಅರಿವು ಇರುವ ವ್ಯಕ್ತಿ

ತೊಂದರೆಗೆ ಈಡಾಗುವ ಸಾಮಾಜಿಕ ವರ್ಗಗಳು

ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು, ಬಡವರು, ಮಹಿಳೆಯರು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗ ಮತ್ತು ಹಿಂದುಳಿದ ಜಾತಿಯವರು.

ಭಾನಾಮತಿಗೆ ಭಯ ಪಡಲು ಕಾರಣಗಳು

 • ಸಾಂಸ್ಕೃತಿಕ ನಂಬಿಕೆಗಳು
 • ಸಾಮಾಜಿಕ ವಾತಾವರಣ
 • ಹಿಂಸೆಗೆ ಮತ್ತು ತುಳಿತಕ್ಕೆ ಒಳಗಾದವರು
 • ಅನಕ್ಷರಸ್ಥರು
 • ಅಜ್ಞಾನಿಗಳು
 • ವೈಧ್ಯಕೀಯ ನೆರವಿನ ಕೊರತೆ
 • ರಾಜಕೀಯ ಮತ್ತು ಸಾಮಾಜಿಕ ಸ್ಪರ್ಧೆ
 • ದಾಂಪತ್ಯ / ವೈಯಕ್ತಿಕ ಸಮಸ್ಯೆಗಳು
 • ಮಾನಸಿಕ ತೊಂದರೆಗಳು
 • ಅಲೌಕಿಕ ಮತ್ತು ದುಷ್ಟಶಕ್ತಿಗಳಲ್ಲಿ ನಂಬಿಕೆ ಇರುವವರು
 • ಅಂಧವಿಶ್ವಾಸಿಗಳು/ಮೂಢ ನಂಬಿಕೆಯುಳ್ಳವರು.

ಭಾನಾಮತಿಯನ್ನು ನಂಬಲು ಕಾರಣಗಳು

 • ಬಡತನ - ೮೦%
 • ಅನಕ್ಷರತೆ - ೮೦%
 • ಪಯಣಕ್ಕೆ ಅನಾನುಕೂಲ - ೯೦%
 • ಅನಾರೋಗ್ಯ - ೮೦%
 • ಹಿಂಸೆಗೊಳಗಾಗುವುದು ಮತ್ತು ತುಳಿತಕ್ಕೆಒಳಗಾಗುವುದು - ೭೦%
 • ಮೂಢನಂಬಬಿಕೆ ಮತ್ತು ಮಂತ್ರ ಮಾಟದಲ್ಲಿ ನಂಬಿಕೆ ಇರುವವರು- ೯೫%

ಮಾಟಗಾತಿ ಅಥವಾ ಮಾಂತ್ರಿಕರನ್ನು ಹೇಗೆ ಶಂಕಿಸುವುದು?

 • ಅಸಹಜ ಮತ್ತು ವಿಚಿತ್ರ ವರ್ತನೆಯುಳ್ಳವರು
 • ಹಳ್ಳಿಗೆ ಅಪರಿಚಿತರು
 • ಸಾಮಾಜಿಕ ವೈಷಮ್ಯ
 • ಬೇರೆಯವರಿಗೆ ಅರ್ಥವಾಗದ ರೀತಿಯಲ್ಲಿ ಮಂತ್ರಪಠಿಸುವುದು.

ಸಂದೇಹಾಸ್ಪದ ವ್ಯಕ್ತಿಯು ಚಿತ್ರಹಿಂಸೆ ಕೊಡುವ ವಿಧಾನಗಳು

 • ದಂಡ ಹಾಕುವುದು - ವ್ಯಕ್ತಿಯ/ಕುಟುಂಬದ ಮೇಲೆ.
 • ಹೊಡೆಯುವುದು
 • ಹಲ್ಲುಗಳನ್ನು ಕೀಳುವುದು
 • ಕಿವಿ ಮತ್ತು ನಾಲಿಗೆಯನ್ನು ಕತ್ತರಿಸುವುದು
 • ಕೈಕಾಲು ಕತ್ತರಿಸುವುದು
 • ವಿರೂಪಗೊಳಿಸುವುದು
 • ಸಾಮಾಜಿಕ ಬಹಿಷ್ಕಾರ ಹಾಕುವುದು
 • ಮನೆ ಅಥವಾ ಜಮೀನು ತೆರವುಗೊಳಿಸುವಂತೆ ಒತ್ತಾಯಿಸುವುದು.
 • ಹಳ್ಳಿಯಿಂದ ಓಡಿಸುವುದು
 • ಆಸ್ತಿಯನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಳ್ಳುವುದು
 • ತಪ್ಪು/ಸುಳ್ಳು ಆಪಾದನೆ ಹೊರಿಸುವುದು.
 • ನೆಂಟರಿಗೆ ಚಿತ್ರಹಿಂಸೆ ಕೊಡುವುದು.
 • ಜೀವಂತ ಸುಡುವುದು.
 • ಮಾನಸಿಕವಾಗಿ ಚಿತ್ರಹಿಂಸೆ ಕೊಡುವುದು.

ಭಾನಾಮತಿ ತನಿಖೆ

"ಪ್ರೊ. ನರಸಿಂಹಯ್ಯ ಭಾನಾಮತಿ ತನಿಖೆ ಸಮಿತಿ ಭಾನಾಮತಿಯ ಬಗ್ಗೆ ತನಿಖೆ ನಡೆಸಲು ಕರ್ನಾಟಕ ವಿಧಾನ ಪರಿಷತ್ತು ಒಂದು ಸಮಿತಿಯನ್ನು ರಚಿಸಿತು. ಡಾ|| ಹೆಚ್. ನರಸಿಂಹಯ್ಯ, ವಿಧಾನ ಪರಿಷತ್ತಿನ ಸದಸ್ಯರಾದವರು, ಈ ತಂಡದ ಮುಖಂಡತ್ವ ವಹಿಸಿದರು. ಈ ತನಿಖೆಯಿಂದ ಹೊರಬಿದ್ದ ವಿಷಯಗಳೇನೆಂದರೆ; ಭಾನಾಮತಿ, ಮಾಟ/ಯಕ್ಷಿಣಿ ವಿದ್ಯೆ ಎಂಬುದು ಅಸ್ತಿತ್ವದಲ್ಲಿಯೇ ಇಲ್ಲ. ಜನರಲ್ಲಿ ಭಯ ಭೀತಿಯನ್ನು ಮೂಡಿಸಿ ಅದನ್ನೇ ಸತತವಾಗಿ ಮುಂದುವರೆಸಲು ಕೆಲವು ಹಿತಾಸಕ್ತಿಗಳು ವದಂತಿಗಳನ್ನು ಹುಟ್ಟಿಸಿ ಜನರ ಜೀವನದ ಜತೆ ವಿಧ್ವಂಸಕ ಕ್ರಿಯೆಯನ್ನು ನಡೆಸುವುದಾಗಿದೆ ಎಂದು ತಿಳಿಸಿಕೊಟ್ಟಿತು.

ಈ ಸಾಮಾಜಿಕ ಪಿಡುಗಿನಿಂದ ಪಾರಾಗಲು ಸಮಿತಿಯು ಮಾಡಿದ ಶಿಫಾರಸುಗಳು

 • ಭಾನಾಮತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು.
 • ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೌಕರ್ಯಗಳನ್ನು ಸುಧಾರಿಸುವುದು.
 • ಸಂಚಾರಿ ವೈದ್ಯಕೀಯ ತಂಡಗಳು.
 • ಭಾನಾಮತಿ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಅವರಿಗೆ ತತ್‌ಕ್ಷಣ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಮತ್ತು ಭಾನಾಮತಿಯ ವಿರುದ್ಧ ಶಿಕ್ಷಣ ಕೊಡಿಸುವುದು.
 • ಮಂಡಲ ಕೇಂದ್ರಸ್ಥಾನಗಳಲ್ಲಿ ಮನಶಾಸ್ತ್ರಜ್ಞ ಮತ್ತು ಮನೋರೋಗ/ವೈದ್ಯಕೀಯ ಚಿಕಿತ್ಸಕರನ್ನು ಮತ್ತು ಸಮಾಜ ಕಾರ್ಯಕರ್ತರನ್ನು ನೇಮಿಸುವುದು.
 • ಸಾಮಾಜಿಕ ಮತ್ತು ಆರ್ಥಿಕ ಏಳಿಗೆ ಮತ್ತು ಬಡತನ ನಿವಾರಣಾ ಕ್ರಮಗಳನ್ನು ತೆಗೆದುಕೊಳ್ಳುವುದು.
 • ಗ್ರಾಮೀಣ ಪ್ರದೇಶದಲ್ಲಿ ವಿದ್ಯುನ್ಮಾನ ಮತ್ತು ಸಾರಿಗೆ ಸಂವಹನಗಳನ್ನು ಸುಧಾರಿಸುವುದು.
 • ಸರ್ಕಾರೇತರ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು.
 • ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಶಾಖೆಗಳನ್ನು ತೆರೆಯುವುದು.
 • ಔಪಚಾರಿಕ ಮತ್ತು ಅನೌಪಚಾರಿಕ ಶಿಕ್ಷಣ
 • ಭಾನಾಮತಿಯ ವಿರುದ್ಧ ಪಾಠಗಳನ್ನು ಶಾಲಾ ಪಠ್ಯಕ್ರಮಗಳಲ್ಲಿ ಅಳವಡಿಸುವುದು.
 • ಭಾನಾಮತಿಯ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವುದು.
 • ಭಾನಾಮತಿ ಪ್ರಕರಣಗಳನ್ನು ವಿಚಾರಣೆಗೆ ಅರ್ಹವಾದ (ಕೋರ್ಟಿನ ಗಮನಕ್ಕೆ) ತರಬಹುದಾದ ಅಪರಾಧವನ್ನಾಗಿ ಪರಿಗಣಿಸುವುದು.
 • ಅಪರಾಧಿಗಳಿಗೆ ಕಠಿಣ ಶಿಕ್ಷೆ.
 • ಮಾಧ್ಯಮಗಳ ಪಾತ್ರ (ಮುದ್ರಿತ ಮತ್ತು ವಿದ್ಯುನ್ಮಾನ)
 • ಭಾನಾಮತಿ ನಂಬಿಕೆಯನ್ನು ಹೆಚ್ಚಿಸುವ ದೂರದರ್ಶನ ಧಾರಾವಾಹಿ ಮತ್ತು ಸಿನಿಮಾ ಕಾರ್ಯಕ್ರಮಗಳನ್ನು ನಿಷೇಧಿಸುವುದು.
 • ವಿಜ್ಞಾನ ಯಾತ್ರೆ / ಇಂದ್ರಜಾಲ ಪ್ರದರ್ಶನಗಳನ್ನು ಉತ್ತೇಜಿಸುವುದು.
 • ಯುವಕರು ಮತ್ತು ಮಹಿಳೆಯರನ್ನು ಸಂಘಟಿಸುವುದು.
 • ಸಾಂಸ್ಕೃತಿಕ ಕಾರ್ಯಕ್ರಮಗಳು
 • ಭಾನಾಮತಿಗೆ ಒಳಗಾದ ಬಲಿಪಶುಗಳನ್ನು ರಕ್ಷಿಸುವುದು.

ಸರ್ಕಾರದ ಪಾತ್ರ

 • ಅಂಧವಿಶ್ವಾಸವನ್ನು ತೊಲಗಿಸುವುದು
 • ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು.
 • ವೈಧ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವುದು.
 • ಭಾನಾಮತಿ ನಿಷೇಧ ಕಾರ್ಯಕ್ರಮಗಳ ಪರವಾಗಿ ಪಾತ್ರವನ್ನು ನಿರ್ವಹಿಸುವುದು
 • ರಾಜಕೀಯ ಇಚ್ಛಾಶಕ್ತಿ.

ಮೂಲ: ಪೋರ್ಟಲ್ ತಂಡ

2.9619047619
savitha May 09, 2017 08:33 AM

Sir nammane owner mane suralli red dhaara tagadu aarishina kumkuma idanna tandittidru

ನಾಗರಾಜ 9945927508 Dec 23, 2016 12:27 AM

ಅಯ್ಯೋ ಬಿಡಿ ಸಾರ್ ನಮ್ ಹಳ್ಳಿಯಲ್ಲೂ ಇಂತ ನಂಬಿಕೆಗಳು ,ಆಚರಣೆಗಳು ಸಾಕಷ್ಟಿವೆ,ಏನ್ಮಾಡೋದು ಹಳ್ಳಿ ಜನರಿಗೆ ವಿಜ್ಞಾನದ ಬಗ್ಗೆ ಆಸಕ್ತಿಯೂ ಅದರ ಬಗ್ಗೆ ನಂಬಿಕೇನೂ ಇಲ್ಲ ಎಲ್ಲಾ ಬರಿ ಮೂಡನಂಬಿಕೇನೆ ಇದರಿಂದಾಗಿನೆ ನಮ್ಮ ದೇಶದಲ್ಲಿ ಪ್ರಕೃತಿ ಸಂಪತ್ತು ಎಷ್ಟೆ ಹೇರಳವಾಗಿದ್ದರೂ ನಮ್ಮ ದೇಶ ಆರ್ಥಿಕವಾಗಿ ಪ್ರಭಲವಾಗ್ತಾ ಇಲ್ಲ ವಿದೇಶಗಳ ಜನ ನೋಡಿ ಎಷ್ಟು ಆರಾಮ ಅವರು ಬಳಸುವಂತ ಮಿಷನರಿ ವಸ್ತುಗಳು ಎಂತವು ಅಬ್ಬಬ್ಬಾ ಎಲ್ಲಾ ವಿಚಿತ್ರ ನಮ್ಮ ದೇಶದ ಜನ ಬಡತನದಲ್ಲಿ ಹುಟ್ಟಿ ಬಿಸಿಲು,ಮಳೆ ,ಚಳಿ ಎನ್ನದೆ ದುಡಿದು ಮೂಡನಂಬಿಕೆಯಿಂದ ಅನೇಕ ಅವೈಜ್ಞಾನಿಕ ಕಲ್ಪನೆಗಳಲ್ಲಿ ತೇಲಾಡಿ ಜೀವನಪರ್ಯಂತ ಕಷ್ಟಕಾರ್ಪಣ್ಯಗಳನ್ನು ಎದುರಿಸುತ್ತಾ ದುಶ್ಚಟಗಳಿಗೆ ಬಲಿಯಾಗಿ ಬಡವರಾಗಿಯೇ ಸಾಯ್ತಾರೆ ಇದಕ್ಕೆಲ್ಲಾ ನನಗೆ ಗೊತ್ತಿರುವಂತಕೆಲವು ಪರಿಹಾರಗಳಿವೆ ಅದನ್ನು ಇನ್ನೊಂದ್ಸಲ ಹಂಚಿಕೊಳ್ಳೋಣ ನನ್ನ ಪ್ರತಿಕ್ರಿಯೆ ನಿಮಗೆ ಸಮಂಜಸ ಎನಿಸಿದರೆ ನಿಮ್ಮ ಅನಿಸಿಕೆಗಳನ್ನು ನನ್ನ ಮೊಬೈಲ್ ನಂಬರನ್ನು ಸಂಪರ್ಕಿಸಿ ನನ್ನ ಇಮೇಲ್ ಅಡ್ರೆಸ್ ಕೊಡುತ್ತೆನೆ ಒಟ್ನಲ್ಲಿ ನಮ್ಮ ದೇಶ ಆರ್ಥಿಕವಾಗಿ ಸುಧಾರಿಸಿದರೆ ಅಷ್ಟೆ ಸಾಕು.

ಚೇತನ್ ಬಸಪ್ಪ May 02, 2016 11:22 PM

ಸರ್ ಮಾಟ ಮಂತ್ರ ಇವೆಲ್ಲ ಪುರಣಗಳಿಂದನು ನಡ್ಕೊಂಡ್ ಬಂದಿದೆ ಜೊತೆಗೆ ಪ್ರಯೋಗ ಕೂಡ ನಡೀತಾ ಇದೆ ಹಿಗಿದ್ಮೇಲೆ ಹೆಂಗೆ ನೀವು ಅಸ್ತಿತ್ವ ದಲ್ಲಿ ಇಲ್ಲ ಅಂತಿರಾ, example ನಮ್ಮ ಮನೇಲೆ ಸಹ 2 3 ವರ್ಷಗಳಿಂದ ಅಪ್ಪ ಅಮ್ಮ ನನ್ ತಮ್ಮ ಹಿಂಗೆ ಜಗಳ ಮಾತ್ರ ನಡೀತಿತ್ತು, ಆದ್ರೆ ಇತ್ತೀಚೆಗೆ ಯಾಕೋ ಗೊತ್ತಾಗ್ತಿಲ್ಲ ಮನೇಲಿ ನಾನು ಅಪ್ಪ ಅಮ್ಮ, ನನ್ ತಮ್ಮ ಅವರ ಪತ್ನಿ ಮಗು ಹೊರಗ ಇದಾರೆ ಆದ್ರೂ ಸಕತ್ ಜಗಳ ಅಪ್ಪ ಮಕ್ಳುಗೆ ಜಗಳ, ಅಪ್ಪ ಅಮ್ಮಗೆ ಜಗಳ ಕಾರಣನೆ ಇರೋದಿಲ್ಲ ಸುಮ್ನೆ ಸುಮ್ನೆ ಜಗಳ ಮಾತಿಲ್ಲ ಕತೆ ಇಲ್ಲ ಯಾವ ಮಟ್ಟ ತಲ್ಪಿದೆ ಮನೇಲಿ ಜಗಳ ಅಂದ್ರೆ ಎಳೋಕೆ ಅಸಾಧ್ಯ ಅನ್ನಿಸ್ತಿದೆ 1 ಮನೆಲೆ 3 ಸಂಸಾರ ಅಪ್ಪ 1 ಸಂಸಾರ ಮನೆ ಒಳಗೆನೆ ನಾನು ಅಮ್ಮ 1 ಅಡುಗೆ, ತಮ್ಮ ಅವರ ಪತ್ನಿ ಸಪರೆಟ್ ಹೊರಗಡೆ ಇದಾರೆ ಅವರದು ಜೀವನ ಬರಿ ಜಗಳ ಜಿವನಾನೆ ಬೇಡ ಅನ್ಸೋಗಿದೆ ಮನೆಯೊಂದು 3 ಸಂಸಾರ ಆಗೋಗಿದೆ 25 ವರ್ಷದಿಂದ ಇಲ್ದಿರೊ ಜಗಳ ಈವಾಗ ಏನಿದು ಕಾರಣನೆ ಇಲ್ಲ ಸೈಂಟಿಫಿಕ್ ಆಗಿ ತಿಂಕ್ ಮಾಡಿದ್ರೆ ಸ್ವಲ್ಪ ಆರ್ಥಿಕ ತೊಂದ್ರೆ, ಇಲ್ಲ ಬುದ್ದಿ ಇಲ್ಲ ಇವ್ರುಗೆ ಹಿಂಗ ಆಡ್ತಾರೆ ಅನ್ಬಹುದು ಆದ್ರೆ ಬುದ್ದಿ ಇಲ್ದೆ ಕಾರಣನೆ ಇಲ್ದೆ 3 3 ದಿವ್ಸಕ್ಕೂ ಜಗಳ ಅಗತ್ತ ಏಳಿ, ನಾನ್ ಮನೆ ಬಿಟ್ಟು 4 ತಿಂಗಳು ಅಯ್ತು ಆದ್ರೂ ಅಪ್ಪಗೆ ನೆನಪಿಲ್ಲ ಯಾಕ ಹಿಂಗೆ ನಾನ್ ಮನೆ ಇಂದ ಹೊರಗಡೆ ಸಕ್ಕತಾಗ ಖುಷಿ ಇಂದ ಇರ್ತೀನಿ ಆದ್ರೆ ಮನೆಗೆ ಹೋದ್ರೆ ಸಾಕು ಏನೋ 1 ತರ ಕೋಪ, ಮನಸು ಸಾಮಾದನಾನೆ ಇರೋದಿಲ್ಲ ಹೆಂಗ್ ಹೆಂಗೋ ಆಗತ್ತೆ ಮನಸು ಎಸ್ಟೊತ್ಗೆ ಮನೆ ಇಂದ ಹೊರಗ ಹೂಗತಿನೂ ಅನ್ಸತ್ತೆ, ಆದ್ಯಾತ್ಮಿಕ ಆಗಿ ಯೋಚ್ನೆ ಮಾಡಿದಾಗ ಇಷ್ಟ ಶಕ್ತಿ ಇಂದ ಒಳ್ಳೆದಾಗತ್ತೆ ಅಂದ್ರೆ ದುಷ್ಟ ಶಕ್ತಿ ಇಂದ ಕೆಟ್ಟುದ್ ಅಗಲ್ವಾ ಸ್ವಲ್ಪ ಬಿಡಿಸಿ ಏಳಿ ಸರ್ ಸಕತ್ ನೊಂದೊಗಿದ್ವಿ ಮಾನಸಿಕ ವಾಗಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top