ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಸತಿ

ಮಾನವನ ಬದುಕಿಗೆ ಮನೆಯು ಒಂದು ಮೂಲಭೂತವಾದ ಅಗತ್ಯವಾಗಿದೆ.

ಗ್ರಾಮೀಣ ವಸತಿ ಯೋಜನೆ

ಮಾನವನ ಬದುಕಿಗೆ ಮನೆಯು ಒಂದು ಮೂಲಭೂತವಾದ ಅಗತ್ಯವಾಗಿದೆ. ವಸತಿಯನ್ನು ಹೊಂದುವುದು ಗ್ರಾಮೀಣ ಬಡಜನರಿಗೆ ಮರ್ಯಾದೆ ಬದುಕುವುದಕ್ಕೆ ಒಂದು ಮುಖ್ಯವಾದ ಅಡಿಪಾಯವಾಗಿದ್ದು, ವಸತಿಹೀನರು ಎಂಬ ವಿಷಣ್ಣತೆಯನ್ನು ತೊಲಗಿಸಿ ಸುರಕ್ಷಿತ ವ್ಯಕ್ತಿತ್ವವನ್ನು ದೊರಕಿಸಿಕೊಡುತ್ತದೆ. ವಸತಿಯ ಕೊರತೆಯನ್ನು ನೀಗಿಸುವುದು ದೇಶದಿಂದ ಬಡತನವನ್ನು ತೊಲಗಿಸುವ ಒಂದು ಮುಖ್ಯವಾದ ತಂತ್ರವಾಗಿದೆ.

ಇಂದಿರಾ ಆವಾಸ್ ಯೋಜನೆ

 • ೨೦೦೧ನೇ ಜನಗಣತಿಯು ೧೪೮ ಲಕ್ಷ ಗ್ರಾಮೀಣ ವಸತಿಗಳ ಕೊರತೆಯನ್ನು ಸೂಚಿಸಿದೆ. ಭಾರತ ನಿರ್ಮಾಣ ಯೋಜನೆಯು ಈ ಅಗತ್ಯತೆಯನ್ನು ಗುರುತಿಸಿ ಆದ್ಯತೆಯನ್ನು ನೀಡಿದೆ.
 • ೨೦೦೫-೨೦೦೬ ರಿಂದ ಮೊದಲ್ಗೊಂಡು ದೇಶದಲ್ಲಿ ೬೦ ಲಕ್ಷ ಮನೆಗಳನ್ನು ಕಟ್ಟುವುದೆಂದು ಆಲೋಚಿಸಿದೆ.

ಗ್ರಾಮೀಣ ವಸತಿ ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ ಸಚಿವ ಶಾಖೆಯ ಇಂದಿರಾ ಆವಾಸ್ ಯೋಜನೆಯಡಿಯ ಮೂಲಕ ಜಾರಿಗೊಳಿಸಲಾಗುತ್ತದೆ.

 • ಇದು ಕೇಂದ್ರದ ಅನುದಾನ ಯೋಜನೆ. ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ೭೫:೨೫ರ ಅನುಪಾತದಲ್ಲಿ ಹಂಚಿಕೊಳ್ಳುತ್ತವೆ.
 • ಹಣಕಾಸು ಸಂಪನ್ಮೂಲವನ್ನು ಹಂಚಲು ಕೆಳಕಂಡ ಅಂಶಗಳನ್ನು ಅಳತೆಗೋಲಾಗಿ ಅನುಸರಿಸಲಾಗುತ್ತದೆ.
 • ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು
 • ಅತಿ ಹೆಚ್ಚಿನ ಪ್ರಮಾಣದಲ್ಲಿ ವಸತಿಹೀನರಿರುವ ರಾಜ್ಯಗಳಿಗೆ ಒತ್ತುಕೊಡಲಾಗುತ್ತದೆ.
 • ಶೇ ೭೫% ಪ್ರಾಮುಖ್ಯತೆಯನ್ನು ವಸತಿ ಕೊರತೆಗೆ ಶೇ ೨೫% ರಷ್ಟು ಪ್ರಾಮುಖ್ಯತೆಯನ್ನು ಬಡತನದ ಅನುಪಾತವನ್ನು ಆಧರಿಸಿ ಯೋಜನಾ ನಿಯೋಗವು ರಾಜ್ಯಕ್ಕೆ ಹಂಚುವಂತೆ ನಿರ್ದೇಶಿಸಿದೆ.
 • ಶೇ ೭೫% ರಷ್ಟು ಪ್ರಾಮುಖ್ಯತೆಯನ್ನು ವಸತಿ ಕೊರತೆ ಶೇ ೨೫% ಪ್ರಾಮುಖ್ಯತೆಯನ್ನು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಜನತೆಗಾಗಿ ನೀಡಬೇಕಾಗುತ್ತದೆ.
 • ಸಾಮಾನ್ಯ ಪ್ರದೇಶಗಳಲ್ಲಿ ಒಂದು ಮನೆಗೆ ರೂ. 45,000/- ಗಳವರೆಗೆ ಬೆಟ್ಟ ಪ್ರದೇಶದಲ್ಲಿ ರೂ. 48,500/- ಗಳವರೆವಿಗೆ ಅನುದಾನ ಹಣ ದೊರೆಯುತ್ತದೆ. ನಿಧಿಯನ್ನು ಡಿ.ಆರ್.ಡಿ.ಎ. ಮುಖಾಂತರ ಎರಡು ಕಂತುಗಳಲ್ಲಿ ಪಾವತಿಸಲಾಗುತ್ತದೆ.
 • ಈ ಯೋಜನೆಯು ವಿಶೇಷವಾಗಿ ಗ್ರಾಮೀಣ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳನ್ನು ಗುರಿಯಾಗಿಟ್ಟುಕೊಂಡಿದೆ.
 • ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಮುಖ್ಯವಾಗಿ ಶೇ ೬೦% ಫಲಾನುಭವಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.
 • ಈ ಅನುದಾನ ಹಣದಲ್ಲಿ ಒಂದು ಶೌಚಾಲಯ ಮತ್ತು ಹೊಗೆ ರಹಿತ ಒಲೆಂiiನ್ನು ಸೇರ್ಪಡೆ ಮಾಡಲಾಗಿದೆ.
 • ಈ ಯೋಜನೆಯ ಪ್ರಕಾರ ಮನೆಯ ಹಂಚಿಕೆಯನ್ನು ಕುಟುಂಬದ ಮಹಿಳೆಗೆ ಕೊಡುವುದು ಆದ್ಯತೆ.
 • ಈ ಯೋಜನೆಯಲ್ಲಿ ದೈಹಿಕ ಅಂಗವಿಕಲರು, ಮಾನಸಿಕ ಅಸ್ವಸ್ಥರು, ಸೇನೆಯಿಂದ ನಿವೃತ್ತರಾದವರು, ವಿಧವೆಯರು, ಜೀತಮುಕ್ತರಾದ ಕೂಲಿಯವರಿಗೆ ಮೀಸಲಾಗಿರುತ್ತದೆ.

ಮೂಲ: ಪೋರ್ಟಲ್ ತಂಡ

3.03125
Dhakshyanamma May 15, 2017 09:24 PM

ವಸತಿ ಬೇಕು ಇದರ ಬಗ್ಗೆ ಹಿರಿಯೂರು ತಾಲೂಕು ಚಿತ್ರ್ದುರ್ಗ ಜೆಲ್ಲೆ ಧರ್ಮಪುರ ಹೋಬಳಿ ಖಂಡೇನಹಳ್ಳಿ ಗ್ರಮ್ಪಚಹಿತಿ ಬಿ.ಕೆ.ಹಟ್ಟಿ

janaprayatna Apr 17, 2017 02:56 PM

ವಸತಿ ಪ್ಲ್ಯಾನುಭವಿಗಳು ಉದ್ಯೋಗಖಾತರಿ ಯಾಯೋಜನೆಯಲ್ಲಿ ೯೦ ದಿನಗಳ ವೆತೆನ ಪದೇ bahudu

janaprayatna Sep 20, 2016 08:33 PM

olleya mahiti channagide

shiva Sep 18, 2016 05:06 PM

ಒಳ್ಳೆ ಯೋಜನೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top