অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಹಕಾರ ಸಿಂಧು

ಸಹಕಾರ ಸಿಂಧು

ಪರಿಚಯ

ನಾಗರೀಕ ಸಮಾಜವು ಆರ್ಥಿಕವಾಗಿ ಹಾಗೂ ಸಾಮಾಜಿಕ ಸ್ಥಾನಮಾನದಿಂದ ವಂಚಿತರಾಗಿರುವವರ ಕುರಿತ ಸವಾಲುಗಳನ್ನು ಸಾಮೂಹಿಕ ಪ್ರಯತ್ನಗಳಿಂದ ನಮ್ಮೊಳಗಿನಿಂದ ದೂರ ಮಾಡಬಹುದಾಗಿರುತ್ತದೆ. ಯಾವುದೇ ಸಂಘಟಿತ ವ್ಯವಸ್ಥೆಗಿಂತ ಅವಿರತ ಸಹಕಾರಿ ಅಭಿವೃದ್ಧಿ ಪ್ರಕ್ರಿಯೆ ಮೂಲಕ ವಂಚಿತರಾದವರ ಸಂಘಟನೆ ಮಾಡಿ ಮಾಪನ ಸಂಪನ್ಮೂಲಗಳನ್ನು ಕ್ರೋಢಿಕರಿಸಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿರುತ್ತದೆ. ಈ ಪ್ರಕ್ರಿಯೆಯು ಹೊಂದಿಕೊಳ್ಳವು ಮಾನವ ಸ್ವಭಾವಕ್ಕೆ ಪೂರಕವಾಗಿದ್ದು ಮಹತ್ವದ್ದಾಗಿರುತ್ತದೆ. ರಾಷ್ಟ್ರದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಸಹಕಾರಿ ನಿರ್ವಹಣೆಗೆ ಈ ತತ್ವವು ತಳಹದಿಯಾಗಿದ್ದು, ಸ್ವಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿರುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ಬಡಜನರಲ್ಲಿ ಆರ್ಥಿಕ ಸಾಮರ್ಥ್ಯ ಮತ್ತು ಆತ್ಮ ವಿಶ್ವಾಸವನ್ನು ಮಹತ್ವದ ಪಾತ್ರವನ್ನು ವಹಿಸುತ್ತವೆ..

ಕರ್ನಾಟಕ ಸರ್ಕಾರದಲ್ಲಿ ಸಹಕಾರ ಇಲಾಖೆಯು ಪ್ರಮುಖ ಇಲಾಖೆಗಳಲ್ಲಿ ಒಂದಾಗಿದೆ. ಈ ಇಲಾಖೆಯು ಸಾಮಾಜಿಕ ಮತ್ತು ಆರ್ಥಿಕ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ವಿವಿಧ ಇತರೆ ಇಲಾಖೆಗಳ ಸಂಪೂರ್ಣ ಸಹಕಾರ ಹಾಗೂ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಸಹಕಾರ ಇಲಾಖೆಯು ವಿವಿಧ ಸಹಕಾರ ಸಂಸ್ಥೆಗಳ ಆಡಳಿತ ಮತ್ತು ಕಾರ್ಯವ್ಯವಹಾರವನ್ನು ನೋಡಿಕೊಳ್ಳುತ್ತದೆ. ಜವಳಿ, ರೇಷ್ಮೆ, ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಕ್ಕರೆ ತೋಟಗಾರಿಕೆ, ಕೃಷಿ ಮತ್ತು ನೀರಾವರಿ ಇಲಾಖೆಗಳು, ಸಂಘಗಳ ಕಾರ್ಯನಿರ್ವಹಣೆಗೆ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ ತಾಂತ್ರಿಕ ಮಾರ್ಗದರ್ಶನ ನೀಡುತ್ತವೆ.

ಸಹಕಾರ ಚಳುವಳಿಯ ನೂರು ವರ್ಷಗಳು

ಸಹಕಾರ ಚಳುವಳಿಯು ಭಾರತದಲ್ಲಿ 1904 ರಲ್ಲಿ ಸಹಕಾರ ಸಂಘಗಳ ಕಾಯ್ದೆ 1904 ನ್ನು ಜಾರಿಗೆ ತರುವುದರೊಂದಿಗೆ ಪ್ರಾರಂಭವಾಗಿದ್ದು, ತದನಂತರ ದೀರ್ಘ ಪ್ರಯಾಣದ ನಂತರ ಅದು ಹೆಚ್ಚು ಆಸೆಗಳೊಂದಿಗೆ ಮತ್ತು ನಿರೀಕ್ಷಣೆಗಳೊಂದಿಗೆ ಹೊಸ ಸಹಸ್ರಮಾನಕ್ಕೆ ಕಾಲಿರಿಸಿದೆ.

ಕಳದೆ ಶತಮಾನದಲ್ಲಿ ಎರಡು ಚಳುವಳಿಗಳು ಈ ದೇಶದ ಹೆಚ್ಚಿನ ಸಂಖ್ಯೆಯ ಜನ ಸಮುದಾಯದ ಜೀವನದ ಮೇಲೆ ಅಸಾಧರಣ ಪರಿಣಾಮವನ್ನು ಉಂಟು ಮಾಡಿದೆ. ಸ್ವಾತಂತ್ರ ಚಳುವಳಿಯು ಭಾರತವನ್ನು ಪಾರತಂತ್ರ್ಯದಿಂದ ಮುಕ್ತಗೊಳಿಸಿತು. ಶಕ್ತಿಶಾಲಿ ಆರ್ಥಿಕ ಬೆಳವಣಿಗೆಯ ಫಲವನ್ನು ದೇಶವು ಅನುಭವಿಸದೆ ರಾಜಕೀಯ ಸ್ವಾತಂತ್ರ್ಯಕ್ಕೆ ಯಾವುದೇ ಅರ್ಥವಿರುವುದಿಲ್ಲವೆಂಬುದು ಬೇಗನೆ ಅರಿವಾಯಿತು. ಸ್ವಾತಂತ್ರ್ಯ ಚಳುವಳಿಯು ಜನ ಸಮುದಾಯದ ಚಳುವಳಿಯಾಗಿತ್ತು. ಸಹಕಾರ ಚಳುವಳಿಯೂ ಹಾಗೆಯೇ ಜನಸಮುದಾಯದ ಚಳುವಳಿಯಾಗಿದೆ.

ಎರಡೂ ಚಳುವಳಿಗಳಲ್ಲಿ ಪ್ರಮುಖವಾಗಿ ಅಡಕವಾಗಿದ್ದ ಅಂಶಗಳೆಂದರೆ ಭಾರತದ ಕೋಟ್ಯಾಂತರ ಜನಗಳ ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ರೈತರು ಭೂರಹಿತ ಕೃಷಿ ಕಾರ್ಮಿಕರು, ಜನ ಸಮುದಾಯದ ದುರ್ಬಲ ವರ್ಗಗಳು ಅಂದರೆ ಕೈಮಗ್ಗ ನೇಕಾರರು, ಮೀನುಗಾರರು, ಕುಶಲಕರ್ಮಿಗಳು ಇತ್ಯಾದಿ ವರ್ಗದ ಒತ್ತಾಸೆ ಮತ್ತು ಆಕಾಂಕ್ಷೆಗಳೇ ಆಗಿದ್ದವು. ಈ ವರ್ಗಗಳು ಬಡತನದ ಕಷ್ಟ ಕಾರ್ಪಣ್ಯದಿಂದ ನೊಂದವರಾಗಿ ಶತಮಾನಗಳ ಕಾಲ ಆರ್ಥಿಕ ಪ್ರಗತಿಯಿಂದ ಲಭ್ಯವಾಗುವ ಫಲವನ್ನು ಹೊಂದುವಿಕೆಯಿಂದ ವಂಚಿತರಾಗಿದ್ದರು. ಸ್ವಾತಂತ್ರ್ಯ ಚಳುವಳಿಗೆ ಪೂರ್ವದ ಅವಧಿಯು ಬಡಜನರ ಸ್ಥಿತಿಯನ್ನು ಉತ್ತಮಪಡಿಸಲು ನಡೆದ ಜನಪರ ಹೋರಾಟವಾಗಿತ್ತು ಮತ್ತು ಈ ಪ್ರಯತ್ನದಲ್ಲಿ ಸಹಕಾರ ಸಂಸ್ಥೆಗಳು ನಿರ್ಣಾಯಕ ಪಾತ್ರವನ್ನು ವಹಿಸಬೇಕಾಗಿತ್ತು. ಜನ ಸಮುದಾಯದ ಅನೇಕ ವರ್ಗಗಳು ಸಹಕಾರ ಸಂಸ್ಥೆಗಳ ಅಶ್ರಯದ ನೆರಳಿನಡಿಯಲ್ಲಿ ಸಮಾವೇಶಗೊಂಡವು. ಅದು ಹಸಿರು ಕ್ರಾಂತಿಯೇ ಆಗಿರಲಿ (ವ್ಯವಸಾಯ), ಶ್ವೇತ ಕ್ರಾಂತಿಯೇ ಆಗಿರಲಿ (ಹೈನುಗಾರಿಕೆ), ಹಳದಿ (ಕೋಳಿ ಸಾಕಣಿಕೆ) ಮತ್ತು ನೀಲಿ (ಮೀನುಗಾರಿಕೆ) ಕ್ರಾಂತ್ರಿಗಳೇ ಆಗಿರಿಲಿ ಅವುಗಳ ಯಶಸ್ಸು ದೇಶದ ಮೂಲೆ ಮೂಲೆಗಳಲ್ಲಿ ವ್ಯವಸ್ಥಿತವಾಗಿ ಹರಡಿರುವ ಸಹಕಾರ ಜಾಲದ ಮೇಲೆ ಅವಲಂಬಿತವಾಗಿತ್ತು. ರೈತರಿಗೆ ಖಾಸಗಿಯಾಗಿ ಸಾಲ ನೀಡುತ್ತಿದ್ದ ಲೇವಾದೇವಿಗಾರ ಎಂಬ ಪುರಾತನ ಸಂಸ್ಥೆಗಳು ಹಾಗೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಬ್ಯಾಂಕಿಂಗ್ ಸಂಸ್ಥೆಗಳ ಬಲದಿಂದ ಮುಗ್ಗರಿಸಿತು. ನಂತರದಲ್ಲಿ ಸಹಕಾರ ಚಳುವಳಿಯು ಪತ್ತೇತರ ಕ್ಷೇತ್ರದ ಬೆಳವಣಿಗೆಲ್ಲಿ ಕೂಡ ದೊಡ್ಡ ಪ್ರಮಾಣದಲ್ಲಿ ಮುಂದುವರೆಯಿತು.

20 ನೇ ಶತಮಾನದಲ್ಲಿ 5 ನೇ ದಶಕದಿಂದಲೂ ಪ್ರಾರಂಭಿಸಿ ದೇಶವು ಆರ್ಥಿಕ ಅಭಿವೃದ್ದಿಯ ವ್ಯವಸ್ಥಿತ ರೂಪವನ್ನು ಪಡೆದುಕೊಂಡಿತು ಮತ್ತು ಗುರಿಗಳನ್ನು ಸಾಧಿಸುವುದಕ್ಕಾಗಿ ಸಮ್ಮಿಶ್ರ ಅರ್ಥವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿತು. ಒಂದೆಡೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಿಗೆ ನಿರ್ದಿಷ್ಟ ಪಾತ್ರಗಳ ನಿರ್ವಹಣೆಯನ್ನು ವಹಿಸಲಾಯಿತು ಮತ್ತು ಇನ್ನೊಂದೆಡೆ ಇದುವರೆಗೂ ನಿರ್ದಿಷ್ಟವಾದ ಕ್ಷೇತ್ರವೆಂದು ಗುರುತಿಸಲ್ಪಡದೇ ಇದ್ದ ಸಹಕಾರ ಕ್ಷೇತ್ರವು ತನ್ನ ಸ್ವಂತ ಬಲದ ಮೇಲೆ ನಿಲ್ಲಲು ಅರ್ಥವ್ಯವಸ್ಥೆಯಲ್ಲಿ ತನ್ನದೇ ಆದ ನಿರ್ದಿಷ್ಟ ರೂಪವನ್ನು ಗಳಿಸಲು ಸಂಗ್ರಾಮದಲ್ಲಿ ಹೋರಾಟ ನಡೆಸಿತು. ಸಹಕಾರ ಸಂಸ್ಥೆಗಳ ಪ್ರವರ್ಧಮಾನಕ್ಕಾಗಿ ಅವುಗಳ ಅರ್ಥ ವ್ಯವಸ್ಥೆಯಲ್ಲಿ ರಾಜ್ಯವು ಭಾಗವಹಿಸುವುದನ್ನು ಸರ್ಕಾರವು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಖಂಡ ಭಾಗವಾಗಿ ಸೇರ್ಪೆಡೆ ಮಾಡಿತು. ಕೃಷಿ ಅಭಿವೃದ್ಧಿಯು ಸರ್ಕಾರದ ಪ್ರಧಾನ ಕಾರ್ಯದ್ಯಮವಾಯಿತು. ಏರುತ್ತಿರುವ ಕೃಷಿ ಉತ್ಪಾದನೆ ಮತ್ತು ಉತ್ಪಾದನಾ ನಂತರದ ಸೂಕ್ತ ಸೌಲಭ್ಯಗಳನ್ನು ಏರ್ಪಡಿಸಲು ಸಹಕಾರ ಸಂಸ್ಥೆಗಳು ಭಾರಿ ಪ್ರಮಾಣದ ಕಾರ್ಯಕ್ರಮಗಳನ್ನು ಹಾಕಿಕೊಂಡವು. ವಿವಿಧ ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ವಿವಿಧ ಕ್ರೇತ್ರಗಳು ಪತ್ತಿನ ಸಹಕಾರ ಚಳುವಳಿಯ ವಿಸ್ತ್ರುತ ಜಾಲದಿಂದ ಸಹಾಯ ಪಡೆದವು.

ಸಾಲ ಮತ್ತು ಸಾಲೇತರ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಅಣಬೆಗಳಂತೆ ಬೆಳೆದಿವೆ. ಸಾಲ ಮತ್ತು ಸಾಲೇತರ ಸಹಕಾರ ಸಂಸ್ಥೆಗಳೆರಡೂ ಸಹ ಪ್ರಾಥಮಿಕ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ವಿವಿಧ ಹಂತದ ವ್ಯವಸ್ಥೆಯನ್ನು ಹೊಂದಿವೆ. ಅದು ಪ್ರಾಥಮಿಕ, ಮಾಧ್ಯಮಿಕ ಮತ್ತು ನಡುವಣ ಹಂತದ ಕ್ಷೇತ್ರದಲ್ಲಿ ಅರ್ಥ ವ್ಯವಸ್ಥೆಯ ಎಲ್ಲಾ ಕಡೆಗಳಲ್ಲೂ ಸಹಕಾರಿ ಸಂಸ್ಥೆಗಳ ಭಾರಿ ಪ್ರಮಾಣದ ಭಿನ್ನ ರೀತಿಯ ಚಟುವಟಿಕೆಗಳನ್ನು ಹೊಂದಿವೆ. ಇಂದು ಭಾರದಲ್ಲಿ ಸಹಕಾರ ಚಳುವಳಿಯು ವಿಶ್ವದಲ್ಲಿಯೇ ದೊಡ್ಡದಾಗಿದೆ. ಬದುಕಿನ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ , ತೋಟಗಾರಿಕೆ ಸಾಲ ಮತ್ತು ಬ್ಯಾಂಕಿಂಗ್ ಗೃಹ ನಿರ್ಮಾಣ, ಕೃಷಿ ಕೈಗಾರಿಕೆ, ಗ್ರಾಮೀಣ ವಿದ್ಯುದೀಕರಣ, ನೀರಾವರಿ, ಜಲಸಂರಕ್ಷಣಿ ಕಾರ್ಮಿಕ, ದುರ್ಬಲವರ್ಗ ಗಳು, ಹೈನುಗಾರಿಕೆ, ಗ್ರಾಹಕ ವರ್ಗ . ಸಾರ್ವಜನಿಕ ವಿತರಣಾ ವ್ಯವಸ್ಥೆ, ಗಿರಿಜನಾಭಿವೃದ್ಧಿ, ಅಂತರರಾಷ್ಟ್ರೀಯ ವ್ಯಾಪರ, ರಫ್ತು, ಕೃಷಿ ವ್ಯಾಪರ, ಮಾನವ ಸಂಪನ್ಮೂಲ ಅಭಿವೃದ್ದಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳನ್ನೆಲ್ಲಾ ಸಹಕಾರ ಚಳುವಳಿಯು ಆವರಿಸಿಕೊಂಡಿದೆ.

ಸಹಕಾರದ ಮೂಲ ತತ್ವಗಳು

  • ಸ್ವ ಇಚ್ಚೆ ಮತ್ತು ಮುಕ್ತ ಸದಸ್ಯತ್ವ :
    ಸಹಕಾರಿ ಸಂಸ್ಥೆಗಳು ಸ್ವ ಇಚ್ಚೆಯಿಂದ ಸ್ಥಾಪಿಸಿದ ಸಂಸ್ಥೆಗಳಾಗಿದ್ದು ಲಿಂಗ ಭೇದ, ಸಾಮಾಜಿಕ ಸಥಾನಮಾನ, ವರ್ಣೀಯ, ರಾಜಕೀಯ, ಅಥವಾ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಅಲ್ಲದೆ, ಜವಾಬ್ಡಾರಿಗಳನ್ನು ನಿರ್ವಹಿಸುವ ಮತ್ತು ತಮ್ಮ ಸಾಮರ್ಥ್ಯ ವನ್ನು ಉಪಯೋಗಿಸಿಕೊಳ್ಳಲು ಇಚ್ಚಿಸುವ ಎಲ್ಲಾ ವ್ಯಕ್ತಿಗಳಿಗೆ ಅದರ ಸದಸ್ಯತ್ವದ ಅವಕಾಶವಿರುತ್ತದೆ.
  • ಪ್ರಜಾಪ್ರಭುತ್ವ ತಳಹದಿಯ ಸದಸ್ಯರ ನಿಯಂತ್ರಣ
    ಸಹಕಾರಿ ಸಂಸ್ಥೆಗಳು ಪ್ರಜಾ ಪ್ರಭುತ್ವ ತಳಹದಿಯ ಮೇಲೆ ಸ್ಥಾಪಿಸಲಾದ ಸಂಸ್ಥೆಗಳಾಗಿದ್ದು ಅದರ ಸದಸ್ಯರ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಸದಸ್ಯರು ಸಂಸ್ಥೆಯ ಕಾರ್ಯನೀತಿಯನ್ನು ರೂಪಿಸುವಲ್ಲಿ ಮತ್ತು ತೀರ್ಮಾನಗಳನ್ನು ಕೈಗೊಳ್ಳವಲ್ಲಿ ಭಾಗವಹಿಸುತ್ತಾರೆ. ಈ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸದಸ್ಯರಿಗೆ ಜವಾಬ್ದಾರರಾಗಿರುತ್ತಾರೆ.
  • ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ:
    ಸಹಕಾರಿ ಸಂಸ್ಥೆಗಳ ಬಂಡವಾಳಕ್ಕೆ ಸದಸ್ಯರು ಸಮಾನವಾಗಿ ಹೂಡಿಕೆ ಮಾಡುವುದಲ್ಲದೆ, ಅದರ ಹೊಣೆಗಾರಿಕೆಯನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಮಾನವಾಗಿ ನಿರ್ವಹಿಸುತ್ತಾರೆ. ಆರ್ಥಿಕ ಚಟುವಟಿಕೆಗಳ ಮೇಲೆ ಬರುವ ಹೆಚ್ಚುವರಿ ಲಾಭಾಂಶವು ಸಹಕಾರಿ ಸಂಸ್ಥೆಗಳ ಒಡೆತನಕ್ಕೆ ಸೇರುತ್ತದೆ. ಉಳಿದಂತೆ ಸದಸ್ಯರ ಹೂಡಿಕೆಗಳನ್ನು ಗೌಣವಾಗಿ ಉಪಯೋಗಿಸಿಕೊಳ್ಳಲಾಗುವುದು.
  • ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ :
    ಸಹಕಾರಿ ಸಂಸ್ಥೆಗಳು ಸ್ವಸಹಾಯಕ್ಕಾಗಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳ ಸದಸ್ಯರಿಂದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಸಹಕಾರಿ ಸಂಸ್ಥೆಗಳು ಇತರೆ ಸಂಸ್ಥೆಗಳೊಂದಿಗೆ, ಸರ್ಕಾರದೊಂದಿಗೆ ಒಪ್ಪಂದ ಮಾಡಿ ಕೊಂಡಾಗ ಅಥವಾ ಹೊರಗಿನಿಂದ ಬಂಡವಾಳವನನ್ನು ಕ್ರೋಢೀಕರಿಸುವಾಗ ಅವುಗಳು ಸದಸ್ಯರು ಪ್ರಜಾಪ್ರಭುತ್ವದ ತಳಹದಿಯ ಹತೋಟಿ ಮತ್ತು ಸ್ವಾಯತ್ತತೆಗೆ ಧಕ್ಕೆ ಬರದಂತೆ ನಿರ್ವಹಿಸಲಾಗುತ್ತದೆ.
  • ಶಿಕ್ಷಣ ತರಬೇತಿ ಮತ್ತು &ಮಾಹಿತಿ
    ಸಹಕಾರಿ ಸಂಸ್ಥೆಗಳ ತಮ್ಮ ಸದಸ್ಯರಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗೆ ಸಂಸ್ಥೆಯ ಅಭಿವೃದ್ದಿ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಶಿಕ್ಷಣ ಮತ್ತು ತರಭೇತಿಯನ್ನು ನೀಡುತ್ತವೆ. ಸಹಕಾರ ತತ್ವಗಳ ಆದರೆ ಉಪಯೋಗದ ಬಗ್ಗೆ ಸಾಮಾನ್ಯ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆ ಮತ್ತು ನಾಯಕರಲ್ಲಿ ಅರಿವನ್ನು ಮೂಡಿಸಲು ಸಹ ಕ್ರಮ ಕೈಗೊಳ್ಳತ್ತದೆ.
  • ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ :
    ಸಹಕಾರಿ ಸಂಸ್ಥೆಗಳ ತಮ್ಮ ಸದಸ್ಯರ ಅಭಿವೃದ್ದಿಗಾಗಿ ಸೇವೆ ಮೂಲಕ ಪರಿಣಾಕಾರಿಯಾಗಿ ಶ್ರಮಿಸುತ್ತಿದ್ದು, ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕಾರಿ ಚಳುವಳಿಯನ್ನು ಬಲಪಡಿಸುತ್ತವೆ.
  • ಸಹಕಾರಿಗಳ ಸಾಮಾಜಿಕ ಕಳಕಳಿ :
    ಸಹಕಾರಿಗಳು ತಮ್ಮ ಸಮುದಾಯಗಳ ಸುಸ್ಥಿರ ಅಭಿವೃದ್ದಿಗಾಗಿ ತಮ್ಮ ಸದಸ್ಯರು ಒಪ್ಪಿರುವ ನೀತಿಗಳನ್ವಯ ಕಾರ್ಯನಿರ್ವಹಿಸುತ್ತವೆ .

ಕರ್ನಾಟಕದಲ್ಲಿ ಸಹಕಾರ ಚಳುವಳಿ

  • ನಮ್ಮ ದೇಶದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೋಂದಾಯಿಲ್ಪಟ್ಟಿದೆ. ಶ್ರೀ ಸಿದ್ದನಗೌಡ ಸಣ್ಣರಾಮನಗೌಡ, ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಇವರನ್ನು ನಮ್ಮ ದೇಶದ ಸಹಕಾರ ಚಳುವಳಿಯ ಪ್ರವರ್ತಕರು ಎಂದು ಪರಿಗಣಿಸಲಾಗುತ್ತದೆ.
  • ಸಹಕಾರ ಸಂಘಗಳಿ ಸಂಬಂಧಿಸಿದಂತೆ, ಮೈಸೂರು ಸಹಕಾರ ಸಂಘಗಳ ಕಾಯಿದೆ 1959 ನಮ್ಮ ರಾಜ್ಯದ ಮೊದಲ ಶಾಸನ ಮತ್ತು 25-05-1960 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ..
  • ಕರ್ನಾಟಕ, ಭಾರತದ ಸಹಕಾರ ಚಳುವಳಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ, <ಪ> ಕರ್ನಾಟಕ ಸಹಕಾರವು ಕೃಷಿ ಸಾಲವನ್ನು ಒಂದು ಲಕ್ಷದವರೆಗೆ ಶೇ. 0 ಮತ್ತು ಒಂದು ಲಕ್ಷದಿಂದ 3 ಲಕ್ಷದವರೆಗೆ ಶೇ. 1 ಮತ್ತು 3ಲಕ್ಷದ ಮೇಲ್ಪಟ್ಟು ಶೇ. 3ರ ಬಡ್ಡಿ ದರದಲ್ಲಿ ವಿತರಿಸಲಾಗುತ್ತದೆ.
  • ಸ್ವಸಹಾಯ ಗುಂಪುಗಳು ಸಹಕಾರ ಸಂಘಗಳ ಮುಖಾಂತರ ಶೇ.4ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ, ಸರ್ಕಾರವು ಸಹಕಾರ ಸಂಘಗಳಿಗೆ ಇಂಟರ್ – ಸಬ್ಸಿಡಿಯನ್ನು ನೀಡುತ್ತದೆ.
  • ಮಾರ್ಚ್ 2008 ರಲ್ಲಿ ಭಾರತ ಸರ್ಕಾರವು, ನಬಾರ್ಡ್ ಮತ್ತು ರಾಜ್ಯ ಸರ್ಕಾರದ ಜೊತೆ MOU ಮೂಲಕ ಪ್ರೋ.ವೈದ್ಯನಾಥನ್ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದ ನಂತರ, ಕೃಷಿ ಸಾಲದ ರಚನೆ ಮತ್ತು ಸಹಕಾರ ಸಂಸ್ಥೆಗಳ ವಿಷಯದಲ್ಲಿ ರಾಜ್ಯ ಸರ್ಕಾರದ ಪಾತ್ರವು ನಿಯಂತ್ರಕ, ಮೇಲ್ವಿಚಾರಕ ದಿಂದ ಗೆಳೆಯ, ತತ್ವಜ್ಞಾನಿ ಮತ್ತು ಗೈಡ್ ಆಗಿ ಕಾಯ೵ನಿವ೵ಹಿಸುತ್ತಿದೆ.
  • ರಾಜ್ಯದಲ್ಲಿ ಸಹಕಾರ ವಲಯದ ಬೆಳವಣಿಗೆಯು ಮುಂಬರುವ ವರ್ಷಗಳಲ್ಲಿ ವೃತ್ತಿಪರವಾಗಿ, ಸ್ವತಂತ್ರ ನಿರ್ಧಾರ ತೆಗೆದುಕೊಂಡು ಕಾಯ೵ನಿವ೵ಹಿಸುವ ನಿಟ್ಟಿನಲ್ಲಿ ಭರವಸೆಯನ್ನು ತೋರಿಸುತ್ತಿವೆ.
  • ಸಹಕಾರ ಚಳವಳಿಯ ಕ್ರೆಡಿಟ್, ಮಾರ್ಕೆಟಿಂಗ್, ಗ್ರಾಹಕರು, ರೇಷ್ಮೆ ಇಂಡಸ್ಟ್ರಿ, ಡೈರಿ, ಮೀನುಗಾರಿಕೆ, ತೋಟಗಾರಿಕೆ, ಸಕ್ಕರೆ, ಹೌಸ್ ಬಿಲ್ಡಿಂಗ್, ಗೋದಾಮು ಆಫ್ ಕನ್ಸ್ಟ್ರಕ್ಷನ್ಸ್ ನಂತಹ ಎಲ್ಲಾ ಬೆಳವಣಿಗೆಯ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿವೆ.
  • ಸಹಕಾರ ಸಂಸ್ಥೆಗಳು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕೃಷಿ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ, ದೇಶದ ಸಾಮಾಜಿಕ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಹಕಾರ ಸಂಸ್ಥೆಗಳು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಿವೆ ಮತ್ತು ಜಾಗತೀಕರಣದ ಉದಾರೀಕರಣ, ಬದಲಾಗುತ್ತಿರುವ ಆರ್ಥಿಕ ಪರಿಸರದಲ್ಲಿ ಹೆಚ್ಚು ಸೂಕ್ತ ಎಂಬುದು ನಮ್ಮ ನಂಬಿಕೆ.

ಸಹಕಾರ ಸಂಘಗಳ ಬೆಳವಣಿಗೆ

ವರ್ಷ

ಸಹಕಾರ ಸಂಘಗಳ ಸಂಖ್ಯೆ

ಸದಸ್ಯರು (Actual)

ಷೇರು ಬಂಡವಾಳ

ದುಡಿಯುವ ಬಂಡವಾಳ

1905-06

5

386

0.11

0.14

1925-26

1603

92,292

35.52

112.38

1950-51

5190

5,01,281

138.74

690.90

1975-76

22713

59,45,009

12,543.00

91,637.00

2000-01

29930

1,61,67,000

1,47,316.00

21,19,867.65

2005-06

32577

2,05,00,000

1,91,700.00

26,47,500.00

2007-08

33394

2,09,00,000

2,69,000.00

27,18,000.00

2008-09

34025

1,87,88,741

2,78,574.89

32,69,321.66

2009-10

34863

1,99,04,730

3,17,136.93

38,24,891.99

2010-11

35502

2,15,33,651

3,47,900.00

41,35,500.00

2011-12

36457

2,63,99,074

3,02,200.00

51,86,400.00

2012-13

37468

2,18,11,687

3,12,900.00

58,69,200.00

ಅಂಕಿ ಅಂಶಗಳ ವಿವರ

ಕ್ರ.ಸಂ

ವಿಷಯ

31-03-2013 ರ ಅಂತ್ಯಕ್ಕೆ

1

ಸಹಕಾರ ಸಂಘಗಳ ಸಂಖ್ಯೆ

37468

 

a) ಕಾರ್ಯನಿರತ ;

33172

b) ಸಮಾಪನೆ

2014

c)ಸ್ಥಗಿತ

2282

2

ಷೇರು ಬಂಡವಾಳ (ರೂ. ಕೋಟಿಗಳಲ್ಲಿ )

3129

 

a) ಸರ್ಕಾರದ ಷೇರು

193

b) ಸದಸ್ಯರ ಷೇರು

2936

3

ಸದಸ್ಯರ ಸಂಖ್ಯೆ

21811687

4

ದುಡಿಯುವ ಬಂಡವಾಳ (ರೂ. ಕೋಟಿಗಳಲ್ಲಿ )

58692

5

ಠೇವಣಿ (ರೂ. ಕೋಟಿಗಳಲ್ಲಿ )

28901

6

ಸಹಕಾರ ಸಂಘಗಳಿಗೆ ಒಳಪಟ್ಟಿರುವ ಗ್ರಾಮಗಳು %

100%

7

ಲಾಭದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ

ನಷ್ಟದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ

21017

 

16451

ಮುನ್ನೋಟ, ಧ್ಯೇಯ, ಇಲಾಖೆಯ ಬದ್ದತೆಗಳು

ದೂರದೃಷ್ಟಿ/ಮುನ್ನೋಟ

ಸದಸ್ಯರು ಸಹಕಾರ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಹಕಾರ ಸಂಘಗಳ ಬೆಳವಣಿಗೆ, ಸ್ವಾವಲಂಬನೆ, ಸ್ವಾಯತ್ತತೆ ಮತ್ತು ಆರ್ಥಿಕವಾಗಿ ಸಬಲತೆ ಹೊಂದುವಂತೆ ಸಂವರ್ಧನೆಗೊಳಿಸುವುದು ಹಾಗೂ ಉತ್ತೇಜಿಸುವುದು.

ಧ್ಯೇಯ/ನಿರ್ದಿಷ್ಟ ಗುರಿ

  • ಪ್ರಾಮಾಣಿಕ ಸಹಕಾರಿ ಸಂಸ್ಥೆಗಳನ್ನು ಸಂಘಟಿಸಲು ಹಾಗೂ ಸಹಕಾರ ಮೂಲ ತತ್ವಗಳನುಸಾರ ಸಂಸ್ಥೆಗಳನ್ನು ಸುಸ್ಥಿತಿಯ ಮಾರ್ಗ ದಲ್ಲಿ ನಡೆಸಲು ಕ್ರಮವಿಡವುದು.
  • ರಾಜ್ಯದಲ್ಲಿನ ಸಹಕಾರ ಚಳುವಳಿಯನ್ನು ಅಭಿವೃದ್ಧಿಪಡಿಸಿ, ಜನರ ಆರ್ಥಿಕ ಹಿತಾಸಕ್ತಿ ಮತ್ತು ಕ್ಷೇಮಾಭಿವೃದ್ಧಿ ಉತ್ತಮಪಡಿಸಲು ಮಾರ್ಗ ದರ್ಶನ ನೀಡುವುದು.
  • ಎಲ್ಲಾ ವಿಧದ ಸಹಕಾರಿ ಸಂಸ್ಥೆಗಳಿಗೆ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗ ದರ್ಶಕನಾಗಿ ಸೇವೆ ಮಾಡುವುದು.

ಇಲಾಖೆಯ ಬದ್ದತೆಗಳು

  • .ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸಲು ವ್ಯಾಪಾರ ಅಭಿವೃದ್ಧಿ ಪಡಿಸಲು ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಅಳವಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ರೈತರಿಗೆ ಸುಲಭವಾಗಿ ಸಾಲ ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸುವುದು.
  • ಎಲ್ಲಾ ಗ್ರಾಮೀಣ ಸಹಕಾರಿ ಸಂಸ್ಥೆಗಳ ಎಲ್ಲಾ ಸದಸ್ಯರುಗಳಿಗೆ ಆರೋಗ್ಯ ರಕ್ಷಣಿ ಯೋಜನೆಯನ್ನು ವಿಸ್ತರಿಸುವುದು.
  • ಸಹಕಾರ ಚಳುವ:ಳಿಯಲ್ಲಿ ಮಹಿಳೆಯರು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ದವರು ಸಕ್ರಿಯವಾಗಿ ಪಾಲ್ಗೊಳ್ಳಲು ಉತ್ತೇಜಿಸುವುದು.
  • ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘಗಳಿಗೆ ಪೂರಕವಾಗುವಂತೆ ಸಮಗ್ರ ಅಭಿವೃದ್ದಿಯ ಮೂಲಕ ಮೂಲಭೂತ ಸೌಕರ್ಯಗಳು ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು.
  • ಕಾರ್ಯ ಸಮರ್ಥ ತೆ ಸುಧಾರಿಸಲು ಕಛೇರಿ ನಿರ್ವಹಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು.

ಶಾಸನಾತ್ಮಕ ಮತ್ತು ನ್ಯಾಯಾಂಗದ ಪ್ರಕಾರ್ಯಗಳು

  • ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960.
  • ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
  • ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ನಿಯಮಗಳು 1966.
  • 1982 ರ ಚೀಟಿ ನಿಧಿಗಳ ಅಧಿನಿಯಮ ಮತ್ತು ಚೀಟಿನಿಧಿಗಳ(ಕರ್ನಾಟಕ) ನಿಯಮಾವಳಿ 1983.
  • ಕರ್ನಾಟಕ ಋಣ ಪರಿಹಾರ ಅಧಿನಿಯಮ 1980.
  • ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಅಧಿನಿಯಮ 1980.
  • ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಮತ್ತು ಮಿಸಲೇನಿಯಸ್ ಪ್ರಾವಿಷನ್ಸ್ ಕಾಯಿದೆ 1974.
  • ಕರ್ನಾಟಕ ಸೌಹಾರ್ಧ ಸಹಕಾರಿ ಅಧಿನಿಯಮ 1997 ಮತ್ತು ಕರ್ನಾಟಕ ಸೌಹರ್ಧ ಸಹಕಾರಿ ನಿಯಮಗಳ 2004.
  • ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004.
  • ಬಹು ರಾಜ್ಯಗಳ ಸಹಕಾರ ಕಾಯ್ದೆ ( ಭಾಗಶಃ).

ಇಲಾಖೆಯ ಆಡಳಿತಾತ್ಮಕ ರಚನೆ

ಸರ್ಕಾರದ ಮಟ್ಟದಲ್ಲಿ ಸಹಕಾರ ಇಲಾಖೆಯು ಇಂದು ಸಚಿವಾಲಯವನ್ನು ಹೊಂದಿದ್ದು ರಾಜ್ಯ ಪ್ರಾಂತ, ಜಿಲ್ಲೆ ಉಪ ವಿಭಾಗ ಮತ್ತು ತಾಲ್ಲೂಕು ಮಟ್ಟಗಳನ್ನು ಒಳಗೊಂಡ ಐದು ಹಂತದ ಕ್ಷೇತ್ರ ಇಲಾಖೆಯನ್ನು ಒಳಗೊಂಡಿದೆ . ಸಹಕಾರ ಇಲಾಖೆಯ ಕ್ಷೇತ್ರಾಧಿಕಾರಿಗಳು ಪ್ರಾಂತೀಯ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಹಕಾರ ಸಂಘಗಳ ವ್ಯವಹಾರಗಳನ್ನು ನಿಯಂತ್ರಿಸುವುದಷ್ಟೇ ಅಲ್ಲದೆ ಇಲಾಖೆಯ ಕಾರ್ಯಕ್ರಮಗಳನ್ನು ಮತ್ತು ಯೋಕನೆಗಳನ್ನು ಕಾರ್ಯಗೊಳಿಸುತ್ತಾರೆ.

ಸಹಕಾರ ಇಲಾಖೆಯು ಕ್ಯಾಬಿನೆಟ್ ದರ್ಜೆಯ ಸಚಿವರ ನೇತೃತ್ವದಲ್ಲಿದೆ.

ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನೆ ಇಲಾಖೆ, ಕೃಷಿ ಮಾರಾಟ ಇಲಾಖೆ ಮತ್ತು ಉಗ್ರಾಣ ನಿಗಮದ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ .ಸಹಕಾರ ಇಲಾಖೆಯು ಸಚಿವಾಲಯ ಮಟ್ಟದಲ್ಲಿ ಸಹಕಾರ ವಲಯಕ್ಕಾಗಿ ನೀತಿ ರಚನೆ, ಯೋಜನೆ ಆಯವ್ಯಯ ಮತ್ತಿತರ ಪೂರಕ ಸೇವೆಗಳಿಗೆ ಜವಾಬ್ದಾರಿಯಾಗಿರುತ್ತದೆ .ಇದು ನಿಯಮಗಳನ್ನು ನಿಗದಿಪಡಿಸುತ್ತದೆ ಮತ್ತು ಸಹಕಾರಿ ಸಂಸ್ಥೆಗಳ ಬಲಸಂವರ್ಧನೆಗಾಗಿ ಸ್ಥೂಲ ಮಾರ್ಗಸೂತ್ರಗಳನ್ನು ನೀಡುತ್ತದೆ ಹಾಗೂ ಸಹಕಾರ ಸಂಸ್ಥೆಗಳ ಬೆಳವಣಿಗೆಯನ್ನು ಬಲಪಡಿಸುತ್ತದೆ. ಇದು ಯೋಜನೆ , ಹಣಕಾಸು ಮತ್ತಿತರ ಇಲಾಖೆಗಳೊಂದಿಗೆ ಮತ್ತು ಭಾರತ ಸರ್ಕಾರದೊಂದಿಗೆ ಸಂಪರ್ಕ ಹೊಂದಿರುತ್ತದೆ. ಕರ್ನಾಟಕ ಸಹಕಾರ ಸಂಘಗಳ ಕಾಯಿದೆ ಮತ್ತು ನಿಯಮಗಳಡಿಯಲ್ಲಿ ಇದು ಮೇಲ್ಮನವಿ ಪ್ರಾಧಿಕಾರ ಆಗಿರುತ್ತದೆ. ಈ ಇಲಾಖೆಗಳ ಅಧಿಕಾರಿಗಳ ಸಂಬಂಧದಲ್ಲಿ ಸರ್ಕಾರವು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ ಸಹ ಆಗಿರುತ್ತದೆ.

ರಾಜ್ಯ ಕೇಂದ್ರ ಸ್ಥಾನ

ಸಹಕಾರ ಸಂಘಗಳ ನಿಬಂಧಕರು ಸಹಕಾರ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ .  ಅವರು ಲೇವಾದೇವಿಗಾರರ ಮತ್ತು ಗಿರಿವಿದಾರರ ಮಹಾ ರಿಜಿಸ್ಟ್ರಾರರಾಗಿದ್ದಾರೆ ಅಲ್ಲದೇ ಚೀಟಿ ವ್ಯವಹಾರಗಳ ನಿಬಂದಕರರಾಗಿದ್ದಾರೆ .  ಅವರು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959, ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961, ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ಚೀಟಿ ನಿಧಿಗಳ ಅಧಿನಿಯಮ 1982ರ ಅಡಿಯಲ್ಲಿ ಶಾಸನಬದ್ದ ಅಧಿಕಾರಗಳನ್ನು ಚಲಾಯಿಸುತ್ತಾರೆ ದಿನಾಂಕ 07-05-2008 ರಿಂದ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಅಡಿಯಲ್ಲಿ ಮಹಾರಿಜಿಸ್ಟಾರರಾಗಿರುತ್ತಾರೆ . ಸಹಕಾರ ಸಂಘಗಳ ರಿಜಿಸ್ಟ್ರಾರರು ಅಪೆಕ್ಸ್ ಬ್ಯಾಂಕ್ , ಕರ್ನಾಟಕ ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮುಂತಾದವುಗಳ ಆಡಳಿತ ಸಮಿತಿಯಲ್ಲಿ ಸರ್ಕಾರಿ ನಾಮಿನಿಯಾಗಿರುತ್ತಾರೆ.

ವಲಯ ಜಿಲ್ಲೆ ಮತ್ತು ಉಪವಿಭಾಗೀಯ ಮಟ್ಟ

ನಿಬಂಧಕರ ಅಧಿಕಾರಗಳನ್ನು 4 ಪ್ರಾಂತೀಯ ವಲಯ ಸಹಕಾರ ಸಂಘಗಳ ಜಂಟಿ ನಿಬಂದಕರಿಗೆ, 32 ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಹಾಗೂ 51 ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ, ಸಹಕಾರ ಸಂಸ್ಥೆಗಳ ನೋಂದಾಯಿತ ಕಾರ್ಯವ್ಯಾಪ್ತಿಯನ್ನು ಆಧರಿಸಿ ನಿಯೋಜಿಸಲಾಗಿರುತ್ತದೆ. ಈ ಅಧಿಕಾರಿಗಳು ಅವರಿಗೆ ನಿಯೋಜಿಸಲ್ಪಟ್ಟ ಅಧಿಕಾರಗಳಿಗನುಸಾರ ಸಹಕಾರಿ ಸಂಸ್ಥೆಗಳ ಮೇಲೆ ಶಾಸನಾತ್ಮಕ ಮತ್ತು ಆಡಳಿತಾತ್ಮಕ ನಿಯಂತ್ರಣವನ್ನು ಚಲಾಯಿಸುತ್ತಾರೆ. ಹಾಗೂ ಅದಕ್ಕುನಸಾರ ಸಹಕಾರ ಸಂಘಗಳ ನೋಂದಣಿ, ವಿಲೀನ, ಸಮಾಪನೆ ಮಾಡುತ್ತಾರೆ. ಅವುಗಳ ಬೈಲಾಗಳ ತಿದ್ದುಪಡಿ ಮಾಡುತ್ತಾರೆ. ಅರೆ ನ್ಯಾಯಿಕ ಪ್ರಾಧಿಕಾರಗಳು ಇತ್ಯಾದಿಯಂತೆ ಸಹಕಾರಿ ಸಂಸ್ಥೆಗಳ ಕಾರ್ಯ ವ್ಯವಹಾರವನ್ನು ಪರಿವೀಕ್ಷಣಿ ಮಾಡುತ್ತಾರೆ ಮತ್ತು ಇತರೆ ಎಲ್ಲಾ ಶಾಸನಬದ್ದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಜಿಲ್ಲಾ ಪಂಚಾಯಿತಿಗಳ ಯೋಜನಾ ಕಾರ್ಯಕ್ರಮದ ಅನುಷ್ಟಾನಕ್ಕೆ ಸಂಬಂದಿಸಿದಂತೆ ಜಿಲ್ಲಾ ಉಪನಿಬಂಧಕರು ಜಿಲ್ಲಾ ಪಂಚಾಯಿತಿಗಳ ನೇರ ನಿಯಂತ್ರಣದಡಿಯಲ್ಲಿ ಸಹ ಕಾರ್ಯ ನಿರ್ವಹಿಸುತ್ತಾರೆ. ಉಪ ವಿಭಾಗೀಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ರಾಜ್ಯ ಯೋಜನಾ ಕ್ರಾರ್ಯಕ್ರಮಗಳ ಮತ್ತು ಜಿಲ್ಲಾ ಪಂಚಾಯತ್ ಯೋಜನೆ ಕಾರ್ಯಕ್ರಮಗಳ ಅನುಷ್ಟಾನಕ್ಕಾಗಿ ಅವರು ತಾಲ್ಲೂಕು ಪಂಚಾಯಿತಿಗಳ ನೇರ ನಿಯಂತ್ರಣದಲ್ಲಿ ಕೆಲಸ ಮಾಡುತ್ತಾರೆ. ಸಹಾಯಕ ನಿಬಂಧಕರಿಗೆ ನೆರವಾಗಲು 159 ಸಹಕಾರಿ ಅಭಿವೃದ್ದಿ ಅಧಿಕಾರಿಗಳು ಮತ್ತು 122 ಸಹಕಾರಿ ನಿರೀಕ್ಷಕರು ಇದ್ದಾರೆ.

ಕೇಂದ್ರ ಕಛೇರಿ

ಕೇಂದ್ರ ಕಛೇರಿಯ ಬೆಂಗಳೂರು ನಗರ ಜಿಲ್ಲೆಯಲ್ಲಿ ಸ್ಥಾಪನೆಯಾಗಿದೆ ಮತ್ತು ಇವರ ರಚನೆಯನ್ನು ವಿವಿಧ ಬಗೆಯ ಸಹಕಾರ ಸಂಘಗಳ ಕ್ರಿಯಾತ್ಮಕ ಮತ್ತು ಕ್ಷೀತ್ರಗಳ ಅನುಸಾರ ಮಾಡಲಾಗಿದೆ. ಈ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅವರು ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಆಗಿತುತ್ತಾರೆ . 4 ಅಪರ ನಿಬಂಧಕರು , 4 ಜಂಟಿ ನಿಬಂಧಕರು , 2 ಉಪ ನಿಬಂಧಕರು 1 ಸಹಾಯಕ ಸಂಖ್ಯಾಕಿಕ ನಿರ್ದೇಶಕರು , ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಸಿಬ್ಬಂದಿ ವರ್ಗದವರು ಇವರ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ..

ಕೇಂದ್ರ ಕಛೇರಿಯು ಈ ಕಳಕಂಡ ಶಾಖೆಗಳನ್ನು ಹೊಂದಿದೆ. : -

  • ಪತ್ತು .
  • ಬಳಕೆ ಮತ್ತು ಮಾರಾಟ .
  • ವಸತಿ ಮತ್ತು ಇತರೆ .
  • ಕೈಗಾರಿಕೆ   ಹೈನುಗಾರಿಕೆ .
  • ಆಡಳಿತ ಮತ್ತು ಅಭಿವೃದ್ದಿ .
  • ಪಟ್ಟಣ ಬ್ಯಾಂಕ್ .
  • ವಿಚಾರಣೆ ಮತ್ತು ಪರಿವೀಕ್ಷಣೆ .
  • ಸಮಗ್ರ ಸಹಕಾರ ಅಭಿವೃದ್ದಿ ಯೋಜನೆ .

ಮೊದಲ ನಾಲ್ಕು ಶಾಖೆಗಳಿಗೆ ಅಪರ ನಿಬಂಧಕರು ಮತ್ತು ಇತರೆ ಶಾಖೆಗಳಿಗೆ ಜಂಟಿ ನಿಬಂಧಕರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ

ಕಛೇರಿಗಳು

ಪ್ರಾಂತೀಯ ಕಛೇರಿ
ಇಲಾಖೆಯ ಆದಾಯ ವಿಭಾಗಗಾಳಾಗಿ ನಾಲ್ಕು ಪ್ರಾಂತೀಯ ಕಛೇರಿಗಳು ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಗುಲಬರ್ಗಾ ನಗರಗಳಲ್ಲಿ ಸ್ಥಾಪಿತವಾಗಿದ್ದು ಕಾರ್ಯನಿರ್ವಹಿಸುತ್ತಿವೆ . ಪ್ರತಿ ಕಛೇರಿಯಲ್ಲಿ ಸಹಕಾರ ಸಂಘಗಳ ಜಂಟಿ ನಿಬಂಧಕರು ಮುಖ್ಯಸ್ಥರಾಗಿ ಮತ್ತು ಅವರಿಗೆ ನೀಡಿರುವ ಪ್ರತ್ಯಾಯೋಜನೆಯನುಸಾರ ಕಾರ್ಯನಿರ್ವಹಿಸುತ್ತಾರೆ ಮತ್ತು ಇವರು ನೇರವಾಗಿ ನಿಬಂಧಕರಿಗೆ ವರದಿ ಸಲ್ಲಿಸುತ್ತಾರೆ.

ಜಿಲ್ಲಾ ಕಛೇರಿ

ರಾಜ್ಯದ 32 ಜಿಲ್ಲೆಯಲ್ಲಿರುವ ಜಿಲ್ಲಾ ಕಛೇರಿಯ ಮುಖ್ಯಸ್ಥ್ರರಾಗಿ ಸಹಕಾರ ಸಂಘಗಳ ಉಪ ನಿಬಂಧಕರು ಕಾರ್ಯನಿರ್ವಹಿಸುತ್ತಾರೆ ಮತ್ತು ಇವರು ನೇರವಾಗಿ ಸಂಬಂಧಪಟ್ಟ ಪ್ರಾಂತೀಯ ಜಂಟಿ ನಿಬಂಧಕರಿಗೆ ವರದಿ ಮಾಡುತ್ತಾರೆ.

ಉಪ ವಿಭಾಗೀಯ ಕಛೇರಿ

ರಾಜ್ಯದಲ್ಲಿ 51 ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಗಳಿದ್ದು , ಸಹಕಾರ ಸಂಘಗಳ ಸಹಾಯಕ ನಿಬಂಧಕರು ಇವುಗಳ ಮುಖ್ಯಸ್ಥ್ರರಾಗಿರುತ್ತಾರೆ ಮತ್ತು ಅವರಿಗೆ ನೀಡಿರುವ ಪ್ರತ್ಯಾಯೋಜನೆಯನುಸಾರ ಕಾರ್ಯನಿರ್ವಹಿಸುತ್ತಾರೆ ಮತ್ತು ಇವರು ನೇರವಾಗಿ ಸಂಬಂಧಪಟ್ಟ ಉಪ ನಿಬಂಧಕರಿಗೆ ವರದಿ ಸಲ್ಲಿಸುತ್ತಾರೆ.

ತಾಲ್ಲೂಕು ಕಛೇರಿ

ಹೆಚ್ಚುತ್ತಿರುವ ಕೆಲಸದ ಹೊರೆ ಮತ್ತು ಇಲಾಖೆಯ ವಿವಿಧ ಜವಾಬ್ದಾರಿಗಳನ್ನು ಪರಿಗಣಿಸಿ ತ್ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಕಛೇರಿಯನ್ನು ಸ್ಥಾಪಿಸಿರುತ್ತಾರೆ ಮತ್ತು ಪ್ರತಿ ತಾಲ್ಲೂಕು ಕಛೇರಿಯ ಮುಖ್ಯಸ್ಥರಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಕಾರ್ಯನಿರ್ವಹಿಸುತ್ತಾರೆ.

ಆಡಳಿತಾತ್ಮಕ ರಚನೆ

ಉನ್ನತೀಕರಣ ನಿಧಿ

ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಉನ್ನತೀಕರಣ ನಿಧಿ :
  • ಆಯವ್ಯಯ ಅವಕಾಶ:             ರೂ. 5.00 ಲಕ್ಷಗಳು
  • ಆರ್ಥಿಕ ಸಹಾಯದ ವಿಧ:      ಸಹಾಯಧನ
  • ಯೋಜನೆಯ ಉದ್ದೇಶ:
  • ಸಹಕಾರ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ವಿವಿಧ ತರಬೇತಿಗಳನ್ನು ನೀಡುವುದರ ಮೂಲಕ ಇಲಾಖೆಯ ಸಿಬ್ಬಂದಿ ವರ್ಗದವರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು.
  • ಅಂದಾಜು ಫಲಿತಾಂಶ:
  • ಅಧಿಕಾರಿ/ಸಿಬ್ಬಂದಿಗಳಿಗೆ ತಮ್ಮ ಗುಣಮಟ್ಟದ ಪರಿಣಾಮಕಾರಿಯಾದ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ತರಬೇತಿ ನೀಡುವುದರಿಂದ ಅವರ ಕಾರ್ಯ ದಕ್ಷತೆಯಲ್ಲಿ ಸುಧಾರಣೆ ಉಂಟಾಗುತ್ತದೆ. ಅಧಿಕಾರಿ/ಸಿಬ್ಬಂದಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಾಯವಾಗುತ್ತದೆ.
  • ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಉನ್ನತೀಕರಣ ನಿಧಿ :Top ಆಯವ್ಯಯ ಅವಕಾಶ:             ರೂ. 5.00 ಲಕ್ಷಗಳುಆರ್ಥಿಕ ಸಹಾಯದ ವಿಧ:      ಸಹಾಯಧನ
  • ಯೋಜನೆಯ ಉದ್ದೇಶ:
  • ಸಹಕಾರ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ವಿವಿಧ ತರಬೇತಿಗಳನ್ನು ನೀಡುವುದರ ಮೂಲಕ ಇಲಾಖೆಯ ಸಿಬ್ಬಂದಿ ವರ್ಗದವರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು.
  • ಅಂದಾಜು ಫಲಿತಾಂಶ:
  • ಅಧಿಕಾರಿ/ಸಿಬ್ಬಂದಿಗಳಿಗೆ ತಮ್ಮ ಗುಣಮಟ್ಟದ ಪರಿಣಾಮಕಾರಿಯಾದ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ತರಬೇತಿ ನೀಡುವುದರಿಂದ ಅವರ ಕಾರ್ಯ ದಕ್ಷತೆಯಲ್ಲಿ ಸುಧಾರಣೆ ಉಂಟಾಗುತ್ತದೆ. ಅಧಿಕಾರಿ/ಸಿಬ್ಬಂದಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಾಯವಾಗುತ್ತದೆ.
  • ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಉನ್ನತೀಕರಣ ನಿಧಿ :ಆಯವ್ಯಯ ಅವಕಾಶ:             ರೂ. 5.00 ಲಕ್ಷಗಳುಆರ್ಥಿಕ ಸಹಾಯದ ವಿಧ:      ಸಹಾಯಧನಯೋಜನೆಯ ಉದ್ದೇಶ:ಸಹಕಾರ ಇಲಾಖೆಯ ಅಧಿಕಾರಿ ಮತ್ತು ನೌಕರರಿಗೆ ವಿವಿಧ ತರಬೇತಿಗಳನ್ನು ನೀಡುವುದರ ಮೂಲಕ ಇಲಾಖೆಯ ಸಿಬ್ಬಂದಿ ವರ್ಗದವರ ಕಾರ್ಯದಕ್ಷತೆಯನ್ನು ಹೆಚ್ಚಿಸುವುದು.ಅಂದಾಜು ಫಲಿತಾಂಶ:ಅಧಿಕಾರಿ/ಸಿಬ್ಬಂದಿಗಳಿಗೆ ತಮ್ಮ ಗುಣಮಟ್ಟದ ಪರಿಣಾಮಕಾರಿಯಾದ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ತರಬೇತಿ ನೀಡುವುದರಿಂದ ಅವರ ಕಾರ್ಯ ದಕ್ಷತೆಯಲ್ಲಿ ಸುಧಾರಣೆ ಉಂಟಾಗುತ್ತದೆ. ಅಧಿಕಾರಿ/ಸಿಬ್ಬಂದಿಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತು ಇಲಾಖಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸಂಬಂಧಿಸಿದ ಸಹಕಾರಿ ಸಂಸ್ಥೆಗಳಿಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಹಾಯವಾಗುತ್ತದೆ.

 

ಕೊನೆಯ ಮಾರ್ಪಾಟು : 7/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate