ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಆಹಾರದ ಹಕ್ಕು

ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಆರೋಗ್ಯ ಮತ್ತು ಪೌಷ್ಠಿಕತೆಯ ರಕ್ಷಣೆ

  • ಪೌಷ್ಠಿಕತೆಯ ಭದ್ರತೆಯನ್ನು ರಾಷ್ಟ್ರೀಯ ಮಧ್ಯಾಹ್ನ ಊಟದ ಕಾರ್ಯಕ್ರಮ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, (ಐ.ಸಿ.ಡಿ.ಎಸ್.) ಕಿಶೋರಿ ಶಕ್ತಿ ಯೋಜನೆ, ಕಶೋರಿಯರಿಗೆ ಪೌಷ್ಠಿಕ ಆಹಾರ ಯೋಜನೆ, ಮತ್ತು ಪ್ರಧಾನಮಂತ್ರಿ ಗ್ರಾಮೋದಯ ಯೋಜನೆಗಳ ಮುಖಾಂತರ ಒದಗಿಸಲಾಗುತ್ತದೆ. ರಾಷ್ಟ್ರೀಯ ಮಧ್ಯಾಹ್ನ ಊಟದ ಕಾರ್ಯಕ್ರಮವು ಸಾರ್ವತ್ರಿಕ ಯೋಜನೆಯಾಗಿದೆ. ಸಮಗ್ರ ಶಿಶು ಕಲ್ಯಾಣ ಅಭಿವೃದ್ಧಿಯೋಜನೆಯ ಸಾರ್ವತ್ರಿಕತೆಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಸರ್ಕಾರವು ಕಿಶೋರಿ ಶಕ್ತಿಯೋಜನೆಯ ಮುಖಾಂತರ ೧೧-೧೮ ವಯಸ್ಸಿನ ಹುಡುಗಿಯರ ಪೌಷ್ಠಿಕತೆ ಮತ್ತು ಆರೋಗ್ಯ ಸ್ಥಿತಿಯ ಸುಧಾರಣೆಯನ್ನು ತರುವ ಸಲುವಾಗಿ ಸಾರ್ವತ್ರಿಕವಾಗಿಸಿದೆ.
  • ಸರ್ಕಾರವು ರೂ. ೪೮೮೨ ಕೋಟಿ ವೆಚ್ಚದ ರಾಷ್ಟ್ರೀಯ ಆಹಾರ ಭದ್ರತೆ ಧ್ಯೇಯವನ್ನು ಆರಂಭಿಸಿದೆ. ೨೦೦೮-೨೦೦೯ನೇ ಸಾಲಿನಲ್ಲಿ ಸರ್ಕಾರವು ೨೨೫ ಲಕ್ಷ ಟನ್‌ಗಳಷ್ಟು ಗೋಧಿಯನ್ನು ಶೇಖರಿಸಿದ್ದು ಒಂದು ದಾಖಲೆಯಾಗಿದೆ. ಸರ್ಕಾರವು ೨೬೫ ಲಕ್ಷ ಟನ್ ಅಕ್ಕಿಯನ್ನು ಶೇಖರಿಸಿದ್ದು ಇದುವರೆವಿಗೂ ಅಕ್ಕಿ ಸಂಗ್ರಹಣೆಯಲ್ಲಿ ಸಂಭವಿಸದ ದಾಖಲೆಯಾಗಿದೆ. ಸರ್ಕಾರವು ೨೦೦೪-೦೫ನೇ ಸಾಲಿನಲ್ಲಿ ಗೋಧಿ, ನಾಲ್ಕು ವರ್ಷಗಳಲ್ಲಿ ಶೇ ೫೬% ನ್ನು ಯಶಸ್ವಿಯಾಗಿ ಮಾಡಿದೆ. ೨೦೦೮-೦೯ನೇ ಸಾಲಿನಲ್ಲಿ ಒಂದು ಕ್ವಿಂಟಾಲ್‌ಗೆ ರೂ. ೧೦೦೦/- ಕ್ಕೆ ನಿಗದಿಪಡಿಸಿದೆ. ಭತ್ತದ ಒಂದು ಕ್ವಿಂಟಾಲ್ ಉತ್ಪಾದಕರ ಮಾರಾಟದ ಬೆಲೆಯನ್ನು ೨೦೦-೦೫ರಲ್ಲಿ ಇದ್ದ ರೂ ೫೬೦ ರಿಂದ ೨೦೦೮-೦೯ರಲ್ಲಿ ರೂ. ೮೫೦/- ಕ್ಕೆ ಏರಿಸಿದೆ. ಆಹಾರ ಭದ್ರತೆಯನ್ನು ಒದಗಿಸುವ ಸಲುವಾಗಿ ಗೋಧಿ ಸಂಗ್ರಹಣೆ ಮತ್ತು ಸ್ಥಿರ ಗೋಧಿ ಬೆಲೆಯ ಸಲುವಾಗಿ ಸರ್ಕಾರವು ೨೦೦೭-೨೦೦೮ ರಲ್ಲಿ ೧೭.೬೯ ಲಕ್ಷ ಟನ್ ಗೋಧಿಯನ್ನು ಆಮದು ಮಾಡಿಕೊಂಡಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ

ರಾಷ್ಟ್ರೀಯ “ಉದ್ಯೋಗ ಖಾತರಿ ಕಾಯ್ದೆ” ಯು ಆಹಾರ ಆಂದೋಲನದ (ಭಾರತದ ಕಾರ್ಮಿಕ ಚಳುವಳಿ) ಬಹಳ ದಿನಗಳ ಬೇಡಿಕೆಯಾಗಿತ್ತು. ಈ ಬೇಡಿಕೆಯನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎನ್.ಆರ್.ಜಿ.ಎ.೨೦೦೫)ರ ಮುಖಾಂತರ ಭಾಗಶಃ ಸಾಧಿಸಲಾಗಿದೆ. ಈ ಕಾಯ್ದೆಯಡಿ ಯಾವುದೇ ವ್ಯಕ್ತಿಗಳು ಸಾಮಾನ್ಯ ಕೆಲಸವನ್ನು ಮಾಡಲು ಸ್ವಯಂ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೋ, ಅಂತಹ ಕುಟುಂಬಗಳಿಗೆ ವರ್ಷಕ್ಕೆ ೧೦೦ ದಿನಗಳ ಉದ್ಯೋಗವನ್ನು ಸಾರ್ವಜನಿಕ ಕೆಲಸಗಳಿಗಾಗಿ ಮಾಡಿ ಕನಿಷ್ಠ ಕೂಲಿಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ.

ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ೪ ಲಕ್ಷ ನ್ಯಾಯಬೆಲೆ ಅಂಗಡಿಗಳು ರೂ. ೧೫,೦೦೦/- ಕೋಟಿ ಮೌಲ್ಯದ ಆಹಾರ ಸಾಮಗ್ರಿಯನ್ನು ೧೬ ಕೋಟಿ ಕುಟುಂಬಗಳಿಗೆ ವರ್ಷಪೂರ್ತಿ ವಿತರಿಸಲು ಸಹಾಯಕವಾಗುವಂತಹ ಮಾರಾಟ ಜಾಲ ಹೊಂದಿದ್ದು, ಭಾರತದ ಸಾರ್ವಜನಿಕ ವಿತರಣಾ ಸಂಸ್ಥೆಯ ಜಾಲಬಂಧವು ವಿಶ್ವದಲ್ಲಿಯೇ ಬಹು ವ್ಯಾಪಕವಾದ ಮತ್ತು ದೊಡ್ಡದಾಗಿದೆ ಎಂಬ ಹಿರಿಮೆಯನ್ನು ಗಳಿಸಿದೆ.

ಧಾನ್ಯ ಬ್ಯಾಂಕು

  • ನೈಸರ್ಗಿಕ ವಿಪತ್ತು ಮತ್ತು ಕಡಿಮೆ ಉತ್ಪಾದನೆಯ ಕಾಲಗಳಲ್ಲಿ ಪರಿಷ್ಕೃತಗೊಂಡ ಹಾಗೂ ವಿಸ್ತಾರಗೊಂಡ ಧಾನ್ಯ ಬ್ಯಾಂಕುಗಳು ಜನರು ಹೊಟ್ಟೆಗಿಲ್ಲದೆ ಅಥವಾ ಅರೆಹೊಟ್ಟೆ ಇರಬೇಕಾದ ಸಂದರ್ಭಗಳಲ್ಲಿ ಅವರನ್ನು ಕಾಪಾಡುತ್ತದೆ. ಹಿಂದೆ ಈ ಯೋಜನೆಯು ಆಸಕ್ತಿ ಇರುವ ಆದಿವಾಸಿ ಕ್ಷೇತ್ರಗಳಲ್ಲಿ ಮತ್ತು ಪರಿಶಿಷ್ಠ ಪಂಗಡದ ಜನರಿಗೆ ಮಾತ್ರ ಮೀಸಲಾಗಿತ್ತು.
  • ಆದರೆ ಈಗ ಈ ಯೋಜನೆಯು ಭಾರತದ ಬರಗಾಲ ಪ್ರದೇಶ, ಮರುಭೂಮಿ ಪ್ರದೇಶ, ತಲುಪಲು ದುರ್ಭರವಾದಂತಹ ಬೆಟ್ಟ ಪ್ರದೇಶಗಳಲ್ಲಿ ಎಲ್ಲೆಲ್ಲಿ ಆಹಾರಕ್ಕೆ ಅಭಾವವಿದೆಯೋ ಅಲ್ಲಿ ವಾಸಿಸತಕ್ಕಂತಹ ಬಡತನ ರೇಖೆಗಿಂತ ಕೆಳಗೆ ಇರುವ ಜನರನ್ನು ಒಳಗೊಳ್ಳುತ್ತದೆ. ಕಳೆದ ೪ ವರ್ಷಗಳಿಂದ ಧಾನ್ಯ ಬ್ಯಾಂಕುಗಳು ಇರುವ ಹಳ್ಳಿಗಳ ಸಂಖ್ಯೆಯಲ್ಲಿ ೪೮೫೮ ರಿಂದ ೧೮,೧೨೯ ರಷ್ಟು ಹೆಚ್ಚಳವಾಗಿದೆ.

ಅಂತ್ಯೋದಯ ಅನ್ನ ಯೋಜನೆ

ಅಂತ್ಯೋದಯ ಅನ್ನಯೋಜನೆಯು ಹೆಚ್ಚುವರಿ ೧ಕೋಟಿ ಕುಟುಂಬಗಳಿಗೆ ವಿಸ್ತಾರಗೊಂಡಿದ್ದು ಶೇ ೬೭% ರಷ್ಟು ಪ್ರತಿನಿಧಿಸಿ ವ್ಯಾಪ್ತಿಹೊಂದಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಶೇ ೫% ಜನರು ಎರಡು ಹೊತ್ತಿನ ಊಟವಿಲ್ಲದೆ ಮಲಗುತ್ತಿದ್ದಾರೆ. ಈ ಜನಸಂಖ್ಯೆಯ ಭಾಗವನ್ನು “ಹಸಿದಿರುವವರು” ಎಂದು ಕರೆಯಬಹುದಾಗಿದೆ. ಇಂತಹ ಜನರನ್ನು ಗುರಿಯಾಗಿಟ್ಟುಕೊಂಡು ಒಂದು ಕೋಟಿ ಅತಿ ಬಡ ಕುಟುಂಬಗಳಿಗೆ ಅನ್ವಯವಾಗುವಂತೆ ಅಂತ್ಯೋದಯ ಅನ್ನಯೋಜನೆಯನ್ನು ಡಿಸೆಂಬರ್ ೨೦೦೦ ರಲ್ಲಿ ಪ್ರಾರಂಭಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆಯು ಪ್ರತಿ ರಾಜ್ಯದಲ್ಲಿ ಬಡತನ ರೇಖೆಗೆ ಕೆಳಗಿರುವ ಒಂದು ಕೋಟಿ ಅತಿ ಬಡಕುಟುಂಬಗಳನ್ನು ಗುರುತಿಸಿ ಅವರನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಆಹಾರ ಧಾನ್ಯಗಳನ್ನು ಸಹಾಯಧನದೊಂದಿಗೆ ದರ ರೂ. ೨/- ರಂತೆ ಕೆ.ಜಿ. ಅಕ್ಕಿ ಮತ್ತು ಗೋಧಿಗೆ ರೂ.೩/- ಕೆ.ಜಿ. ಯಂತೆ ವಿತರಿಸುವ ಉದ್ದೇಶ ಹೊಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಂಚಿಕೆ ವೆಚ್ಚ ಎಂದರೆ (ಸಾರಿಗೆ ವೆಚ್ಚ ಮತ್ತು ವ್ಯಾಪಾರಿ / ಚಿಲ್ಲರೆ ವ್ಯಾಪಾರಿಗಳಿಗೆ ಕೊಡಬೇಕಾದ ಹೆಚ್ಚಿನ ಮೊತ್ತಗಳನ್ನು) ಭರಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ, ಗ್ರಾಹಕರಿಗೆ ಈ ಯೋಜನೆಯಡಿಯಲ್ಲಿ ಸಿಗಬೇಕಾದ ಆಹಾರದ ಸಹಾಯಧನವು ಸಂಪೂರ್ಣವಾಗಿ ದೊರಕುತ್ತಿದೆ.

ಮೂಲ: ಪೋರ್ಟಲ್ ತಂಡ

2.9603960396
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top