ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ತಂಬಾಕು ಬೇಡ

ತಂಬಾಕು ಬೇಡ

ಬಹುಪಾಲು ಜನರಿಗೆ ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಅಪಾಯ ಎಂದು ತಿಳಿದಿದ್ದರೂ, ಅದು ಎಷ್ಟರ ಮಟ್ಟಿಗೆ ಹಾನಿಕರ ಮತ್ತು ಅದರ ಕಾರಣಗಳೇನು? ಎಂಬುದರ ಬಗ್ಗೆ ಮಾಹಿತಿ ಇಲ್ಲ. ತಂಬಾಕು ಸಂಸ್ಥೆಗಳು ಆಕರ್ಷಕ ಪ್ರಚಾರದ ಮುಖಾಂತರ ಗ್ರಾಹಕರಿಗೆ ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮದ ಕಟು ವಾಸ್ತವವನ್ನು ದಿಕ್ಕು ತಪ್ಪಿಸುತ್ತಾರೆ. ತಂಬಾಕು ಸೇವನೆಯಿಂದ ಆಗುವ ಹಾನಿಗಳ ಬಗ್ಗೆ ಚಿತ್ರಗಳ ಸಹಿತ ಇರುವ ಎಚ್ಚರಿಕೆಗಳು ಹೆಚ್ಚು ಪರಿಣಾಮಕಾರಿಯಾಗಿದ್ದು, ತಂಬಾಕು ಸೇವನೆಯನ್ನು ತ್ಯಜಿಸುವ ಅಥವಾ ಕಡಿಮೆ ಮಾಡುವ ಮೂಲಕ ಅದು ಮನೋವೃತ್ತಿಯನ್ನು ಬದಲಾಯಿಸುವ ಪ್ರೇರಣಾ ಶಕ್ತಿಯನ್ನು ಹೊಂದಿದೆ. ಎಚ್ಚರಿಕೆಯ ಚಿತ್ರವು ಓದುಬರಹ ಬರದವರಿಗೂ ಕೂಡ ಮನದಟ್ಟಾಗುವಂತಹದ್ದಾಗಿದೆ.

ಈ ಸಂದೇಶಗಳು ತಂಬಾಕಿನ ಪೊಟ್ಟಣದ ಒಟ್ಟಾರೆ ಆಕರ್ಷಣೆ ಕಡಿಮೆಮಾಡುವುದು .ಅದರಲ್ಲೂ ಹೊಸ ಬಳಕೆದಾರರು, ಯುವಜನಾಂಗ, ಬ್ರಾಂಡು ಮುಂತಾದುವುಗಳಿಗೆ ಮಾರುಹೋಗುವವರಿಗೆ ಈ ಎಚ್ಚರಿಕೆಯು ಕೆಲಸ ಮಾಡುವುದ. ಈ ಎಚ್ಚರಿಕೆಯ ಪರಿಣಾಮವಾಗಿ ನೇಕ ದೇಶಗಳಿಂದ ಕ್ರಮತೆಗೆದು ಕೊಳ್ಳಲು ಬಂದ ಬೇಡಿಕೆಯಿಂದ ಪ್ರಪಂಚದ ತಂಬಾಕು ಸೇವನೆ ವಿರುದ್ಧವಾಗಿ ೨೦೦೯ನೇ ಇಸವಿಯಲ್ಲಿ ಒಂದು ದಿನವನ್ನು “ತಂಬಾಕು ಸೇವನೆ ವಿರುದ್ಧ” ವೆಂದು ಆಂದೋಲನ ಕೈಗೊಳ್ಳಲಾಯಿತು. ಆರೋಗ್ಯವನ್ನು ಕುರಿತ ಎಚ್ಚರಿಕೆಯ ಚಿತ್ರ ಮತ್ತು ಸಂದೇಶಗಳನ್ನೊಳಗೊಂಡ ತಂಬಾಕು ಪೊಟ್ಟಣಗಳು ಎಲ್ಲಾ ಮಾಧ್ಯಮಗಳಿಗಿಂತ ಕಡಿಮೆ ವೆಚ್ಚದಲ್ಲಿ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಟರಿಣಾಮ ಮತ್ತು ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುತ್ತದೆ.

ಧೂಮಪಾನದಿಂದಾಗುವ ದುಷ್ಟರಿಣಾಮಗಳು

  • ಹೆಚ್.ಐ.ವಿ/ಏಡ್ಸ್, ಮಲೇರಿಯಾ, ಕ್ಷಯ ರೋಗಗಳಿಂದುಂಟಾಗುವ ಮರಣ ಪ್ರಮಾಣಕ್ಕಿಂತ ತಂಬಾಕು ಸೇವನೆಯಿಂದ ಉಂಟಾಗುವ ಅನಾರೋಗ್ಯದ ಕಾರಣವಾಗಿ ಬರುವ ಮರಣವು ಮುಂಚೂಣಿಯಲ್ಲಿದೆ. ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯ ಕಾರಣಗಳಿಂದ ಮರಣಕ್ಕೆ ತುತ್ತಾಗುತ್ತಾರೆ. ಇದು ಕಾನೂನು ಬದ್ಧ ಗ್ರಾಹಕರ ಉತ್ಪನ್ನ. ಅದನ್ನು ಉತ್ಪಾದಕರು ನೀಡಿದ ಸೂಚನೆಯಂತೆ ಬಳಸಿದರೂ ಸಾವು ತರುವ ಏಕಮಾತ್ರ ವಸ್ತುವಾಗಿದೆ. ಧೂಮಪಾನ ಮಾಡುವ ಎಲ್ಲ ಜನರಲ್ಲಿ ಅರ್ಧದಷ್ಟು ಜನರು ತಂಬಾಕಿಗೆ ಸಂಬಂಧಿಸಿದ ರೋಗಗಳಿಂದ ಸಾಯುವರು.
  • ಧೂಮಪಾನಿಗಳೊಡನೆ ಇರುವವುರು ಕೂಡಾ ಬಿಟ್ಟ ಹೊಗೆ ಸೇವಿಸುವುದರಿಂದ ಅವರ ಆರೋಗ್ಯ ಹಾನಿಗೊಳಗಾಗುವುದು.
  • ತಂಬಾಕು ಸಂಸ್ಥೆಗಳು ಪ್ರತಿವರ್ಷ ಹೊಸ ಧೂಮಪಾನಿಗಳನ್ನು ಸೃಷ್ಠಿಸಲು ಮತ್ತು ಹಾಲಿ ಇರುವ ಧೂಮಪಾನಿಗಳನ್ನು ತ್ಯಜಿಸದೇ ಇರುವಂತೆ ನೋಡಿಕೊಳ್ಳುವುದಕ್ಕಾಗಿ ೧೦ ಲಕ್ಷ ಡಾಲರ್‌ಗಳಷ್ಟು ಹಣವನ್ನು ಖರ್ಚುಮಾಡುತ್ತದೆ. ತಂಬಾಕು ಕೈಗಾರಿಕೆಯು ಪ್ರಚಾರ, ಪ್ರಾಯೋಜಿತ ಆಂದೋಲನ, ಎಚ್ಚರಿಕೆಯಿಂದ ಹಾಗೂ ಕುಶಲತೆಯಿಂದ ಮಾಡಿದ ಪೊಟ್ಟಣದ ಆಕೃತಿಯಿಂದ ತಂಬಾಕು ಉತ್ಪನ್ನಗಳ ಸೇವನೆಯಿಂದಾಗುವ ಮಾರಕ ಪರಿಣಾಮಗಳಿಂದ ಗ್ರಾಹಕರನ್ನು ಮನಸ್ಸನ್ನು ತಿರುಗಿಸುತ್ತದೆ.
  • ಹೆಚ್ಚು ಹೆಚ್ಚು ದೇಶಗಳ ತಂಬಾಕು ಪೊಟ್ಟಣಗಳು ಚಿತ್ರದ ಮೂಲಕ ತಂಬಾಕಿನ ಅಪಾಯಗಳ ಬಗ್ಗೆ ತೋರಿಸುತ್ತವೆ. ಡಬ್ಲ್ಯೂ ಹೆಚ್. ಓ (WHO) ವಿಶ್ವ ಆರೋಗ್ಯ ಸಂಸ್ಥೆಯ ರಚಿತವಾದ ಚೌಕಟ್ಟಿನಲ್ಲಿ ತಂಬಾಕು ನಿಯಂತ್ರಣದ ಬಗ್ಗೆ ತೀಳಿಸಿದಂತೆ ಮಾಡುತ್ತಿವೆ. ಇವರು ಎಂಪವರ್ ಎಂಬ ತಾಂತ್ರಿಕತೆಯ ನೆರವಿನೊಂದಿಗೆ ಪೊಟ್ಟಣವನ್ನು ತಯಾರಿಸಿ, ವಿಶ್ವ ಆರೋಗ್ಯಸಂಸ್ಥೆಯ ಅಂತರಾಷ್ಟ್ರೀಯ ಸಭೆಯ ಬದ್ಧತೆಯನ್ನು ಪೂರೈಸುತ್ತಿವೆ.
  • ಆರೋಗ್ಯದ ಬಗ್ಗೆ ಇರುವ ಪರಿಣಾಮಕಾರಿಯಾದ ಎಚ್ಚರಿಕೆಗಳು, ವಿಶೇಷವಾಗಿ ಚಿತ್ರವನ್ನು ಒಳಗೊಂಡಂತಹವು, ಇನ್ನೂ ಧೂಮಪಾನ ವ್ಯಸನಿಗಳಾಗದವರನ್ನು ತಂಬಾಕು ಸೇವನೆ ಮಾಡದಂತೆ, ಅಥವಾ ತಂಬಾಕು ಸೇವನೆಗೆ ಈಗಾಗಲೇ ತೊಡಗಿಕೊಂಡಿರುವವರನ್ನು ಪೂರ್ಣವಾಗಿ ತ್ಯಜಿಸಲು ಅಥವಾ ಕಡಿಮೆ ಮಾಡಲು ಪ್ರೇರೇಪಣೆ ನೀಡುತ್ತವೆ. ಆದಾಗ್ಯೂ ದೇಶದಲ್ಲಿ ಹತ್ತು ಜನರಲ್ಲಿ ಒಂಭತ್ತು ಜನರಿಗೆ ತಂಬಾಕು ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ಚಿತ್ರದ ಮೂಲಕ ಎಚ್ಚರಿಕೆಯನ್ನು ತಂಬಾಕು ಪೊಟ್ಟಣದ ಮೇಲೆ ಮುದ್ರಿಸುವ ಅವಶ್ಯಕತೆ ಇರುವುದಿಲ್ಲ್ಲ
  • ನಿಕೋಟಿನ್ ಎಂಬುದು ಅತ್ಯಧಿಕವಾಗಿ ದುರಬ್ಯಾಸಕ್ಕೆ ಈಡು ಮಾಡುವಂತಹ ವಸ್ತು. ತಂಬಾಕು ದುರಭ್ಯಾಸವನ್ನು ಕಡಿಮೆ ಮಾಡಲು, ನಿಜವಾದ ತೊಂದರೆಗಳ ಬಗ್ಗೆ ಅರಿವು ಮೂಡಿಸಲು ಧೀರ್ಘ ಸಮಯ ತೆಗೆದುಕೊಳ್ಳುತ್ತವೆ. ತಂಬಾಕು ಪೊಟ್ಟಣದ ಮೇಲೆ ಮೂಡಿಸುವ ಎಚ್ಚರಿಕೆಯ ಸಂದೇಶಗಳು, ಅತ್ಯಂತ ಕಡಿಮೆ ಖರ್ಚಿನ, ಸರಳವಾದ ಮತ್ತು ಪರಿಣಾಮಕಾರಿಯಾದ ತಂತ್ರವಾಗಿದೆ.

ಮೂಲ: ಪೋರ್ಟಲ್ ತಂಡ

2.94505494505
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top