ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / 14ನೇ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಪ್ರಧಾನಂತ್ರಿಯವರ ಪ್ರಾಸ್ತಾವಿಕ ಹೇಳಿಕೆ
ಹಂಚಿಕೊಳ್ಳಿ

14ನೇ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಪ್ರಧಾನಂತ್ರಿಯವರ ಪ್ರಾಸ್ತಾವಿಕ ಹೇಳಿಕೆ

14ನೇ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಪ್ರಧಾನಂತ್ರಿಯವರ ಪ್ರಾಸ್ತಾವಿಕ ಹೇಳಿಕೆ

ಘನತೆವೆತ್ತ ಪ್ರಧಾನಮಂತ್ರಿ ತಾಂಗಲ್ವೋನ್ ಸಿಸೌಲಿತ್ ಅವರೇ,

ಘನತೆವೆತ್ತರೇ,

ಇದು ನನ್ನ ಮೂರನೇ ಭಾರತ- ಆಸಿಯಾನ್ ಶೃಂಗಸಭೆಯಾಗಿದೆ. ಹಲವು ವರ್ಷಗಳಿಂದ ನಾವು ಆಸಿಯಾನ್ ಜೊತೆಯಲ್ಲಿ ಹೊಂದಿರುವ ಆತ್ಮೀಯ ಬಾಂಧವ್ಯವನ್ನು ನವೀಕರಿಸಲು ನಾನು ಸಂತೋಷಭರಿತನಾಗಿದ್ದೇನೆ. ಅದ್ಭುತವಾದ ಸಿದ್ಧತೆಗಳಿಗಾಗಿ ಮತ್ತು ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ನಾನು ಧನ್ಯವಾದಗಳನ್ನು ಅರ್ಪಿಸಲು ಇಚ್ಛಿಸುತ್ತೇನೆ. ಸುಂದರವಾದ ಪಾರಂಪರಿಕ ನಗರಿ ವಿಯೆಂಟಿಯಾನ್ ಭೇಟಿ ನನಗೆ, ಈ ನಗರ ಭಾರತದೊಂದಿಗೆ ಹೊಂದಿರುವ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟನ್ನು ನೆನಪಿಸುತ್ತದೆ. ಆಸಿಯಾನ್- ಭಾರತ ಬಾಂಧವ್ಯಕ್ಕೆ ದೇಶದ ಸಂಚಾಲಕನಾಗಿ ವಿಯಟ್ನಾಂನ ಸಮರ್ಥ ನಾಯಕತ್ವಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ.

ಘನತೆವೆತ್ತರೇ

ಆಸಿಯಾನ್ ಜೊತೆಗಿನ ನಮ್ಮ ಕಾರ್ಯಕ್ರಮಗಳು ಪಾರಂಪರಿಕ ನಾಗರಿಕತೆಯ ಹಂಚಿಕೊಂಡ ಆಧಾರದ ಭದ್ರ ಬುನಾದಿಯಷ್ಟೇ ಅಲ್ಲ. ಅದು ನಮ್ಮ ಸಮಾನ ಕಾರ್ಯತಂತ್ರಾತ್ಮಕ ಆದ್ಯತೆಗಳಿಂದ ಸಾಗಿದ್ದು, ನಮ್ಮ ಸಮಾಜವನ್ನು ಕಾಪಾಡುತ್ತಿದೆ ಮತ್ತು ವಲಯದಲ್ಲಿ ಪ್ರಗತಿ, ಸ್ಥಿರತೆ ಮತ್ತು ಶಾಂತಿಯನ್ನು ತರುತ್ತಿದೆ. ಆಸಿಯಾನ್ ಭಾರತದ ಪೂರ್ವದತ್ತ ಕ್ರಮ ನೀತಿಯ ಕೇಂದ್ರವಾಗಿದೆ. ಮತ್ತು ನಮ್ಮ ಬಾಂಧವ್ಯಗಳು ವಲಯದಲ್ಲಿ ಸಮತೋಲನ ಮತ್ತು ಸೌಹಾರ್ದದ ಮೂಲವಾಗಿದೆ.

ಮೂಲ : ಪ್ರೆಸ್ ಇನ್ಫರ್ಮೇಷನ್ ಬ್ಯೂರೊ

Back to top