ನಮ್ಮ ರಾಜ್ಯದಲ್ಲಿ ತೋಟದ ಬೆಳೆಗಳ ಕ್ಷೇತ್ರವು ಹೆಚ್ಚುತ್ತಿದೆ. ಬಾಳೆಯಂಥ ಅಲ್ಪಾವಧಿ ವಾಣಿಜ್ಯ ಬೆಳೆಗಳು ಎಲ್ಲೇಡೆ ಕಾಣುತ್ತಿವೆ. ರಸಗೊಬ್ಬರಗಳಿಗೆ ಉತ್ತಮವಾಗಿ ಸ್ಪ೦ದಿಸಿ ಬಂಪರ್ ಇಳುವರಿ ಕೊಡಬಲ್ಲತಳಿಗಳು ರೈತರ ಮನಗೆಲ್ಲುತ್ತಿವೆ.ವರ್ಷವಿಡೀ ಬೆಳೆಯಬಹುದಾದ ಮತ್ತು ನಿರಂತರ ಬೇಡಿಕೆ-ಬಳಕೆ ಇರುವ ಏಕಮಾತ್ರ ಹಣ್ಣು ಈ ಬಾಳೆ.ಇಸ್ಟೆಲ್ಲಾ ಬೆಳೆಯಿದ್ದರೂ ನಮ್ಮ ಗ್ರಾಹಕರಿಗೆ ಸ್ತಳಿಯ ಉತ್ಪಾದನೆ ಸಾಕಾಗದೇ ಸುತ್ತಾಣ ಎಲ್ಲ ರಾಜ್ಯಗಳಿಂದ ಬಾಳೆಹಣ್ಣು ಆಮದಾಗುತ್ತಿದೆ. ಹಣ್ಣುಗಳ ಪಟ್ಟಿಯಲ್ಲಿ ಮಾವಿನ ನಂತರದ ಸ್ಥಾನ ಈ ಬಾಳೆಯದು. ತಾಜಾ ಹಣ್ಣು, ಚಿಪ್ಸು,ಒಣಹಣ್ಣು, ತರಕಾರಿ ಹೀಗೆ ವಿವಿಧ ರೂಪಗಳಲ್ಲಿ ನಮ್ಮ ಆಹಾರದ ಪಟ್ಟಿಯಲ್ಲೂ ಬಾಳೆಗೆ ಅಗ್ರಸ್ಥಾನ.ಇನ್ನು ಗ್ರಾಮೀಣ ಬದುಕಿನಲ್ಲಿ ಕೃಷಿ ಉದೇಶಕ್ಕೆ ಬಾಳೆ ನಾರು, ಊಟಕ್ಕೆ ಬಾಳೆ ಎಲೆ, ಹೈನು ರಾಸುಗಳಿಗೆ ಹಸಿಮೇವಾಗಿಕೂಡ ಈ ಬಾಳೆಗೆ ಪ್ರಾಮುಖ್ಯತೆ ಇದೆ. ಅಡಿಕೆಯ ಚಿಕ್ಕ ಸಸಿಗಳಿಗೆ ನೆರಳು ನೀಡಲು ಬಾಳೆ ಬೆಳೆಸಲಾಗುತ್ತದೆ. ಈ ಸಸ್ಯದ ಉಗಮ ಸ್ಥಾನ ದಕ್ಷಿಣ ಪೂರ್ವ ಏಷ್ಯಾ ಪ್ರದೇಶ. ಹಾಗಾಗಿ ನಮ್ಮ ನಾಗರೀಕತೆಯ ಆರಂಭದ ಕಾಲದಿಂದಲೂ ಈ ಬಾಳೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ ಎನ್ನಬಹುದು.
ಹೆಚ್ಚಿನ ಮಾಹಿತಿಗಾಗಿ : ಬಾಳೆ ಬೆಳೆ
ಮೂಲ : ಶ್ರಮಜೀವಿ
ಕೊನೆಯ ಮಾರ್ಪಾಟು : 3/5/2020
ಭತ್ತದ ಬೆಳೆಗೆ ಬೆಂಕಿರೋಗ, ಕಂದು ಜಿಗಿ ಹುಳುವಿನ ಬಾಧೆ ಕಂಡು...
ಬೆಳೆ ಪ್ರಾತ್ಯಕ್ಷಿಕೆಗೆ ತಾಕುಗಳ ಆಯ್ಕೆ ಇದರ ಬಗ್ಗೆ
ಬೆಳೆ ದೃಢೀಕರಣ ಪ್ರಮಾಣ ಪತ್ರದ ಕುರಿತಾದ ಮಾಹಿತಿ ಇಲ್ಲಿ...
ಬೆಳೆಗಳಲ್ಲಿ ರೋಗ ನಿರ್ವಹಣೆ ಅವಶ್ಯ