ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಗೆಂದಾಳಿಯ ಸಾಧಕ

‘ಗೆಂದಾಳಿ ಮರ ವರುಷದಲ್ಲಿ ಇನ್ನೂರು ಎಳನೀರು ಕೊಡುವುದು ಖಚಿತ. ಊರ ತಳಿ ಕೊಡುವುದು ಕೇವಲ ನೂರು’ ಎನ್ನುತ್ತಾರೆ.

ಮಂಗಳೂರು ತಾಲೂಕು ಕೋಟೆಕಾರು-ಕೊಂಡಾಣ ಚಂದ್ರಶೇಖರ ಗಟ್ಟಿ (40) ಹಿಂದೆ ಐಟಿ ಉದ್ಯೋಗಿ. ಈಗ ಕೃಷಿಕ. ಬೊಗಸೆಯಲ್ಲಿ ಕಾಂಚಾಣ ಸದ್ದು ಮಾಡುತ್ತಿರುವಾಗಲೇ ಮಣ್ಣಿನ ಸಹವಾಸಕ್ಕೆ ಬಂದರು. ತಂದೆ ನಾರಾಯಣ ಗಟ್ಟಿ ಮಗನ ಯೋಚನೆಗಳಿಗೆ ಬೆಂಬಲ ನೀಡಿದರು. ಸ್ವಾತಂತ್ರ್ಯ ಕೊಟ್ಟರು. ಜವ್ವನವಿರುಗಾಲೇ ಜವಾಬ್ದಾರಿ ನೀಡಿ ಮಗನನ್ನು ಪೂರ್ಣ ಪ್ರಮಾಣದ ಕೃಷಿಕನನ್ನಾಗಿ ಬೆಳೆಸಿದರು. 1996. ಚಂದ್ರಶೇಖರರಿಗೆ ತೆಂಗಿನ ತೋಟ ಮಾಡುವಾಸೆ. ಮನೆಯ ಸನಿಹದ ಎರಡೆಕ್ರೆ ಇಳಿಜಾರು ಜಾಗ ಪ್ರಯೋಗಕ್ಕೆ ಸಜ್ಜಾಯಿತು. ಅಪ್ಪನ ನಿರ್ದೇಶನ. ಅಜ್ಜ ಸುಂದರ ಗಟ್ಟಿಯವರ ಮಾರ್ಗದರ್ಶನ. ತೆಂಗು ಕೃಷಿಯ ಅನುಭವವಿಲ್ಲ. ಧೈರ್ಯವೇ ಬಂಡವಾಳ. ಇನ್ನೂರು ಸಸಿ ನೆಟ್ಟರು. ಗೊಬ್ಬರ ಕೊಟ್ಟು ಆರೈಕೆ ಮಾಡಿದರು. ಮೂರೇ ವರುಷದಲ್ಲಿ ಇಳುವರಿ ಕೈಗೆ. ಆದ ಸಂತೋಷ ಅಪರಿಮಿತ. “ಕೊಚ್ಚಿಯಲ್ಲಿ ಕೆಲಸದಲ್ಲಿದ್ದಾಗ ಸಿಕ್ಕಿದ ಸಂಬಳ ವನ್ನೆಲ್ಲಾ ತೋಟದ ಕೆಲಸಕ್ಕೆ ಉಪಯೋಗಿಸಿದ್ದೆ. ಕಾಲಕ್ರಮದಲ್ಲಿ ದಿನಪೂರ್ತಿ ತೋಟದಲ್ಲಿದ್ದರೆ ಮಾತ್ರ ಯಶಸ್ಸಾಗಬಹುದೆಂದು ಅರಿವಾಯಿತು. ಆಗಲೇ ಬಿಳಿ ಕಾಲರ್ ಕೆಲಸ ರೋಸಿ ಹೋಗಿತ್ತು. ವಿದಾಯ ಹೇಳಿ ಹತ್ತು ವರುಷವಾಯಿತು” ಎನ್ನುತ್ತಾರೆ. ಚಾವಕ್ಕಾಡ್ ಆರೆಂಜ್, ಮಲಯನ್ ಯೆಲ್ಲೋ ಆರೆಂಜ್ (ಗೆಂದಾಳಿ) ತಳಿಗಳ ನೂರು ಗಿಡಗಳು, ಡಿ x ಟಿ ತಳಿಯ ನೂರು ಗಿಡಗಳು; ಅಡಿಕೆ ತೋಟದ ಮಧ್ಯೆ, ಸರಹದ್ದಿನಲ್ಲಿ ಸ್ಥಳೀಯ ತಳಿಗಳ ನೂರೈವತ್ತು ಮರಗಳಿವೆ. ಮೊದಲ ಮೂರು ತಳಿಯದ್ದು ಎಳನೀರಿಗಾಗಿ. ಕೃಷಿ ಅನುಭವಕ್ಕಾಗಿ ಕನ್ನಾಡು, ಕೇರಳದ ತೆಂಗು ಕೃಷಿಕರ ತೋಟ ಸಂದರ್ಶಿಸಿದರು. ಸರಕಾರಿ ಇಲಾಖೆಗಳ ಅಧಿಕಾರಿ, ವಿಜ್ಞಾನಿಗಳೊಂದಿಗೆ ಸಂಪರ್ಕ ಇಟ್ಟುಕೊಂಡರು. ಕೃಷಿಯ ಸೂಕ್ಷ್ಮಗಳನ್ನು ಅಧ್ಯಯನ ಮಾಡುತ್ತಾ ಹೋದರು. ವಿವಿಧ ತಳಿಗಳ ಬೆಳೆ ವಿಧಾನವನ್ನು ಅಭ್ಯಸಿಸಿದರು. ಕರಾವಳಿಗೆ ಹೊಂದುವ, ಉತ್ತಮ ಇಳುವರಿ ನೀಡುವ ತಳಿಗಳನ್ನು ಆಯ್ಕೆ ಮಾಡಿ ಮಗುವಿನಂತೆ ಬೆಳೆಸಿದರು.

ಮೂಲ : ಶ್ರಮಜೀವಿ

2.93939393939
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top