ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಸಂತಸದ ಬೆಳೆ

ಬೆಳೆದ ಭತ್ತ, ಗೋಧಿಗಳು ನಿತ್ಯದ ಊಟಕ್ಕೆ ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿವೆ.

ನಾವು ಹೈದರಾಬಾದಿನಲ್ಲಿ ನೆಲೆಸಿ ಮೂವತ್ತು ವರ್ಷ ಕಳೆದಿದೆ.  ನಮ್ಮ ಅಗತ್ಯಗಳಿಗೆ ಹೊಂದಿ ಮನೆ ಮಾಡಿಕೊಂಡೆವು. ನನಗೆ ಚಿಕ್ಕ ಜಾಗದಲ್ಲಿ ಗಿಡಮರ ನೆಟ್ಟು ಪೋಷಿಸುವ ಆಸೆಯಿತ್ತು.  ದೊಡ್ಡ ಊರುಗಳಲ್ಲಿ ಸೂಕ್ತ ಮನೆ ಮಾಡಿಕೊಳ್ಳುವುದೇ ತ್ರಾಸ. ಇಂತಹುದರಲ್ಲಿ ಜಾಗದ ಕನಸನ್ನು ಭವಿಷ್ಯಕ್ಕೆಂದು ಮುಚ್ಚಿಟ್ಟೆ!ಕನ್ನಡಿಗ ಮಿತ್ರರೊಬ್ಬರು ತೋಟದ ಮನೆಯ ಗುದ್ದಲಿ ಪೂಜೆಗೆ ಆಹ್ವಾನಿಸಿದರು.  ನನ್ನ ಆಸೆ ಪುನ: ಗರಿ ಕೆದರಿತು.  ತುಂಬ ಹಿಂದೆ ನಮ್ಮ ದ.ಕ. ಜಿಲ್ಲೆಯಲ್ಲಿ ಐದೆಕ್ರೆ ಭೂಮಿ ಖರೀದಿಸಿದ್ದೆವು.  ವರ್ಷಕ್ಕೊಮ್ಮೆಯೂ ಭೇಟಿ ಕೊಡಲಾಗದೆ ಬೇಸರಿಸಿದ್ದೆವು.  ಭೂಮಿ ಮಾಡುವುದಾದರೆ ಹೈದರಾಬಾದಿನಲ್ಲೇ ಎಂದು ನಿರ್ಧರಿಸಿದ್ದೆವು.  ಆಂಧ್ರದಲ್ಲಿ ಭಾರತೀಯ ಪ್ರಜೆಗೆ ಭೂಮಿ ಖರೀದಿಸಲು ಕಾನೂನಿನ ಅಡ್ಡಿಯಿಲ್ಲ.  ನಾವಿಬ್ಬರೂ ಕೃಷಿ ಮಾಡಿದವರಲ್ಲ. ನಮ್ಮ ಹೆತ್ತವರೂ ಕೃಷಿಯನ್ನು ಆಧರಿಸಿದವರಲ್ಲ.  ಆದರೂ ಬಂಧುಗಳ ತೋಟ, ಭೂಮಿ ನೋಡಿ ಬಹುದಿನಗಳ ಕನಸನ್ನು ಬೆಂಬತ್ತಲು ನಿರ್ಧರಿಸಿದೆವು.ನಮ್ಮ ಅದೃಷ್ಟವೋ ಏನೋ, 2011 ರಲ್ಲಿ  ಒಬ್ಬ ದಲ್ಲಾಲಿ ಸಿಕ್ಕಿದ. ಅವನು ತೋರಿಸಿದ 6.4 ಎಕ್ರೆ ಭೂಮಿ ಮೆಚ್ಚುಗೆಯಾಯಿತು. ಹಿತೈಷಿಗಳ ಸಲಹೆ, ಮಾರ್ಗದರ್ಶನ ಪಡೆದು ಖರೀದಿಸಿದೆವು. ಈ ಜಾಗ ಹೈದರಾಬಾದ್ ನಗರದಿಂದ 15 ಕಿ.ಮೀ. ದೂರದ ವಿಕಾರಾಬಾದ್ ಪಟ್ಟಣದ ಸಮೀಪದಲ್ಲಿದೆ.  ಇಲ್ಲಿಂದ ಕರ್ನಾಟಕದ ಬೀದರ್ ಜಿಲ್ಲೆ ಕೇವಲ ಐವತ್ತು ಕಿ.ಮೀ.ಇಲ್ಲಿನ ಸರಕಾರ ಕೃಷಿಭೂಮಿ ಒಡತಿಯರಿಗೆ ಮಾಲಿಕರಿಗೆ ಕೆಲವು ಸವಲತ್ತು ಕೊಡುತ್ತದೆ.  ಹಾಗಾಗಿ ಈ ಜಮೀನನ್ನು ನನ್ನ ಹೆಸರಲ್ಲೇ ನೋಂದಣಿ ಮಾಡಿಸಿದೆವು.  ಇದರ ಸುತ್ತುಮುತ್ತಲೂ ಗುಡ್ಡಬೆಟ್ಟಗಳಿದ್ದು ಹಿಂದೆ ಕಾಡುಪ್ರದೇಶವಾಗಿತ್ತಂತೆ. ಅಲ್ಲಿಗೆ ಅನಂತಗಿರಿ ಎಂದು ಹೆಸರು.  ಅಲ್ಲಿ ಕೇಂದ್ರ ಸರಕಾರ ನೀರಾವರಿಗಾಗಿ ಗುಡ್ಡಬೆಟ್ಟಗಳಿಂದ ಹರಿದಿಳಿಯುವ ನೀರನ್ನು ಹಿಡಿದು ಸರೋವರವಾಗಿಸಿದೆ.  ಈ ‘ಕೋಟ್ ಪಲ್ಲಿ ಪ್ರಾಜೆಕ್ಟ್’ ನಿಂದಾಗಿ ಸುತ್ತಲಿನ ಹಳ್ಳಿಗಳಲ್ಲಿ  ವ್ಯವಸಾಯ ಸಾಧ್ಯವಾಗಿದೆ.ಇಲ್ಲಿನದು ಕೆಂಪು ಮಣ್ಣು.  ಮುರಕಲ್ಲು ಪ್ರದೇಶ.  ನೀರು ಕಮ್ಮಿಯಿರುವ ರೈತರು ಮಳೆಗಾಲದಲ್ಲಿ ಮೆಕ್ಕೆಜೋಳ, ನಂತರ ತೊಗರಿ ಬೇಳೆ, ಕಾಳು ಬೆಳೆಯುತ್ತಾರೆ. ಅಕ್ಕಿ, ಗೋಧಿ, ತರಕಾರಿ ಮಾವಿನ ತೋಟಗಳನ್ನು ಹೊಂದಿದವರೂ ಇದ್ದಾರೆ.

ನಾವು ಕೃಷಿಗೆ ಹೊಸಬರು ತಾನೇ? ತಿಳಿದವರ ಸಲಹೆಗಳನ್ನು ಪಡೆಯುತ್ತಾ ಮುಂದುವರಿದೆವು. ನಾವು ಮೊದಲ ಬಾರಿಗೆ ಈ ಜಮೀನು ನೋಡಿದ್ದು 2011ರ ಎಪ್ರಿಲ್ ತಿಂಗಳಲ್ಲಿ.  ಅಲ್ಲಿದ್ದ ಹಳೆ ಕೆರೆಯಿಂದಾಗಿ ಭೂಮಿಯಲ್ಲಿ ನೀರಿದೆ ಎಂದು ಗಮನಿಸಿದ್ದೆವು.  ಜಮೀನಿನ ಹಿಂದಿನ ಮಾಲಿಕರಿಗೆ ಕೆರೆಗೆ ತಳದಿಂದ ಗೋಡೆ ಕಟ್ಟಲು ಆರ್ಥಿಕ ಮುಗ್ಗಟ್ಟಾಗಿ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರು.  ಸಣ್ಣ ಮನೆಯ ತಯಾರಿ ಪಂಚಾಂಗದ ಹಂತದಲ್ಲೇ ನಿಂತಿತ್ತು.

ಮೂಲ : ಶ್ರಮಜೀವಿ

3.05
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top