ಹಂಗಾಮು ಮತ್ತು ವೈವಿದ್ಯತೆ
- ವರ್ಷ ವಿಡೀ
- ಬೆಳೆಯನ್ನುಒಳಾಂಗಣದಲ್ಲಿ ಮಾಡಬೇಕಾಗುತ್ತದೆ ಮತ್ತು ಇದಕ್ಕಾಗಿ ಮನೆಯೊಂದು ಅಗತ್ಯ
- ಬಿಳಿ ಒಯಿಷ್ಟರ್ (Co-1) ಮತ್ತು ಬೂದುಒಯಿಷ್ಟರ್(M-2)ತಮಿಳು ನಾಡಿಗೆ ಸೂಕ್ತವಾಗಿವೆ.
ಅಣಬೆ ಮನೆ
- ಹುಲ್ಲು ಛಾವಣಿಯ ಗುಡಿಸಲು 16 ಚದರ ಮೀ. ಇರುವುದುಅಗತ್ಯ.ಅದನ್ನು ಸ್ಪಾನ್ ರನ್ನಿಂಗ್ ಕೋಣೆ ಮತ್ತು ಬೆಳೆಯ ಕೋಣೆ ಎಂದು ವಿಭಾಗಿಸಬೇಕು.
- ಸ್ಪಾನ್ ರನ್ನಿಂಗ್ ಕೋಣೆ : 25-300C ಉಷ್ಣತೆ ಇರಬೇಕು.ಗಾಳಿ ಬಂದು ಹೋಗು ವಂತಿರಬೆಕು. ಬೆಳಕು ಬೇಕಿಲ್ಲ
- ಬೆಳೆಯ ಕೋಣೆ : 23-250C ಉಷ್ಣತೆ ಇರಬೇಕು.ಸಾಪೇಕ್ಷ ತೇವಾಂಶ 75-80% ಇರಬೇಕು ಬೆಳಕು ಮತ್ತು ಗಾಳಿಯವ್ಯವಸ್ಥೆ ಸಾಧಾರಣ ಇರಬೇಕು
(ಡಿಜಿಟಲ್ ಥರ್ಮಾ ಮಿಟರ್ ಮತ್ತು ಹ್ಯುಮಿಡಿಫೈಯರ್ ಮೀಟರುಗಳು ಮಾರುಕಟ್ಟೆಯಲ್ಲ ದೊರಕುತ್ತವೆ)
ಸ್ಪಾನು (ಅಣಬೆ ಬೀಜೊತ್ಪತ್ತಿ)
- ಸೂಕ್ತವಾದ ಕೆಳ ಪದರ ಜೋಳ /ಚೋಲಂ/ ಮೆಕ್ಕೆ ಜೋಳ,ಗೋದಿ, ಮೊದಲಾದ ಧಾನ್ಯಗಳು
- ಸ್ಫಾನು ತಯಾರಿ ಧಾನ್ಯಗಳನ್ನು ಅರ್ಧ ಬೇಯಿಸಿ. ಗಾಳಿಯಲ್ಲಿ ಒಣಗಿಸಿ, 2% ಕ್ಯಾಲ್ಷಿಯಂ ಕಾರ್ಬೊನೇಟ್ಮಿಶ್ರಣ ಮಾಡಿ. ಧಾನ್ಯವನ್ನು ಖಾಲಿ ಗ್ಲೂಕೋಸು ಡ್ರಿಪ್ ಬಾಟಲಿಯಲ್ಲಿ ತುಂಬಿ ಹತ್ತಿಯಿ0ದ ಮುಚ್ಚಿರಿ. ಕುಕ ರ್ ನಲ್ಲಿ 2 ತಾಸು ಪೂತಿನಾಶನ ಮಾಡಿ.
- ಶುದ್ಧವಾದ ಫಂಗಸ್ ಕಲ್ಚರನ್ನು ಸೇರಿಸಿರಿ(ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯಗಲಲ್ಲಿ ಸಿಗುವುದು) ಮತ್ತು ಅದನ್ನು ಕೋನೆಯ ಉಷ್ನತೆಯಲ್ಲಿ 15 ದಿನ ಇನ್ ಕುಬೇಟ್ ಮಾಡಿ. 15-18 ದಿನಗಳ ಸ್ಪಾನುಗಳನ್ನು ಸ್ಪಾನಿಂಗಗೆ ಬಳಸಿ .
ಅಣಬೆಯ ಹಾಸಿಗೆ ತಯಾರಿ
- ಸೂಕ್ತವಾದ ಕೆಳ ಪದರ ನೆಲ್ಲು / ಗೋದಿ ಹುಲ್ಲು , ಕಬ್ಬಿನ ಒಗಡು, ಮೆಕ್ಕೆಜೋಲದ ರವದಿ ಇತ್ಯಾದಿ
- ಕತ್ತರಿಸಿದ ಗೋದಿ ಹುಲ್ಲು ಗಳ 5ಸೆಮಿ ತುಂಡುಗಳನ್ನು5 ತಾಸು ಕುಡಿಯುವ ನೀರಿನಲ್ಲಿ ನೆನಸಿರಿ. ನಂತರ ಒಂದು ತಾಸು ಕುದಿಸಿ. ನೀರನ್ನು ಬಸಿಯಿರಿ ಗಾಳಿಯಲ್ಲಿ ಒಣಗಿಸಿ 65% ತೇವಾಂಶ ವಿರಲಿ ( ಕೈಯಿಂದ ಹಿಂಡಿದಾಗ ನೀರಹನಿ ಬರಬಾರದು)
- ಚೀಲದ ತಯಾರಿ
- 60x30ಸೆಮಿ ಅಳತೆಯ ಪಾಲಿತಿನ್ ಚೀಲ ಬಳಸಿ(ಎರಡು ಕಡೆ ತೆರದಿರಲಿ).
- ಒಂದು ತುದಿಯನ್ನು ಕಟ್ಟಿ ಎರಡು 1 ಸೆಮಿ ವ್ಯಾಸ ದ ರಂದ್ರಗಳನ್ನು ಮಧ್ಯದಲ್ಲಿ ಮಾಡಿ
- ಒಂದು ಮುಷ್ಟಿಯಷ್ಟು ಬೇಯಿಸಿದ ಹುಲ್ಲನ್ನು 5 ಸೆ.ಮಿ ಎತ್ತರಕ್ಕೆ ಹಾಕಿ ಅದರಲ್ಲ 25ಗ್ರಾಂ ಬೀಜವನ್ನು ಹಾಕಿ.
- ಹುಲ್ಲಿನ ಪದರವನ್ನು 25 ಸೆಮಿ. ಎತ್ತರ ಕ್ಕೆ ಹಾಕಿರಿ .ಈ ಪ್ರಕ್ರಿಯೆಯನ್ನು ನಾಲಕ್ಕು ಪದರ ಸ್ಪಾನ್ಮತ್ತು ಐದು ಪದರ ಹುಲ್ಲು ಬರುವಂತೆಹಾಕಿರಿ.
- ಬಾಯಿ ಕಟ್ಟಿ ಮತ್ತು ಬೆಡ್ಡುಗಳನ್ನು ಸ್ಪಾನಿಘ್ ಕೋಣೆಯಲ್ಲಿ ಹಂತಹಂತವಾಗಿ ಜೋಡಿಸಿರಿ.
- 15-20 ದಿನಗಳ ನಂತರ ,ಪಾಲಿತಿನ್ ಚೀಲವನ್ನು ಕತ್ತರಿಸಿ ತೆಗೆಯಿರಿ ಮತ್ತು ಬೆಡ್ ಅನ್ನು ಬೇರೆ ಕೋಣೆಗೆ ವರ್ಗ ಮಾಡಿ.
- ಬೆಡ್ ಅನ್ನು ಒದ್ದೆ ಯಾಗಿಡಲು ಅಗಾಗ ನೀರು ಹಾಕುತ್ತಿರಿ.
ಉತ್ಪನ್ನ
- ಅಣಬೆಯ ಸೂಜಿಮೊನೆ ತಲೆ ಗಳು 3ನೆ ದಿನ ಬೆಡ್ಡಿನ ಲ್ಲಿಂದ ಹೊರಬರುವವು.ಮತ್ತು 3 ದಿನಗಳಲ್ಲಿ ಪಕ್ವ ವಾಗುವವು.
- ಪಕ್ವವಾದ ಅಣಬೆಗಳನ್ನು ಪ್ರತಿ ದಿನ ಅಥವ ದಿನ ಬಿಟ್ಟು ದಿನ ನೀರು ಸ್ಪ್ರೇ ಮಾಡುವ ಮುನ್ನ ಹಾರವೆಸ್ಟ ಮಾಡಿ
- ಎರಡನೆ ಮತ್ತ ಮೂರನೆ ಬೆಳೆಯನ್ನು ಬೆಡ್ಡಿನ ತಳವನ್ನು ಕೆರೆದು ತೆಗೆದ ನಂತರ ಮಾಡಬೇಕು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/13/2020
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.